ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲು ಸಿದ್ಧವಾದ ಮಹಾನಟಿ ಶೋ
ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಲು ರೆಡಿಯಾದ ರಿಯಾಲಿಟಿ ಶೋ
ನಾಲ್ಕೈದು ತಿಂಗಳಿಂದ ಮಹಾನಟಿ ಶೋ ಬಗ್ಗೆಯೇ ಎಲ್ಲೆಲ್ಲೂ ಚರ್ಚೆ
ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಲು ಜೀ ವಾಹಿನಿಯಲ್ಲಿ ಬರ್ತಿದೆ ಹೊಚ್ಚ ಹೊಸ ರಿಯಾಲಿಟಿ ಶೋ. ಅದುವೇ ಮಹಾನಟಿ. ನಾಲ್ಕೈದು ತಿಂಗಳಿಂದ ಮಹಾನಟಿ ಶೋ ಬಗ್ಗೆ ಕಿರುತೆರೆಯಲ್ಲಿ ಆಗಾಗ ಹಲವಾರು ಮಾಹಿತಿಗಳು ಕೇಳಿ ಬರುತ್ತಿವೆ. ಈಗ ಅದಕ್ಕೆಲ್ಲಾ ಒಂದು ಪುಲ್ ಸ್ಟಾಪ್ ಸಿಕ್ಕಿದೆ.
ಇದನ್ನೂ ಓದಿ: ರೌಡಿಶೀಟರ್ ದಿನೇಶ್ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಸಿನಿಮೀಯ ರೀತಿ ಸ್ಕೆಚ್ ಹಾಕಿ ಮುಗಿಸಿದ ಹಂತಕರು!
ಇಡೀ ಕರ್ನಾಟಕದಾದ್ಯಂತ ಆಡಿಷನ್ ಮಾಡಿ ಮಹಾನಟಿ ರಿಯಾಲಿಟಿ ಶೋಗೆ ಹಲವಾರು ಸ್ಪರ್ಧಿಗಳನ್ನ ಆಯ್ಕೆ ಮಾಡಿ ತರಲಾಗಿದೆ. ಮಹಾನಟಿ ರಿಯಾಲಿಟಿ ಶೋಗೆ ಜಡ್ಜಸ್ಗಳ ಹೆಸರು ರಿವೀಲ್ ಆಗಿದೆ. ಯೆಸ್, ದೊಡ್ಡ ಮಟ್ಟದಲ್ಲಿ ಮಹಾನಟಿ ಶೋಗೆ ತಯಾರಿ ನಡೆಸುತ್ತಿದೆ ಜೀ ವಾಹಿನಿ. ಮಹಾನಟಿ ಶೋಗೆ ಕನ್ನಡ ಚಲನಚಿತ್ರರಂಗದ ಖ್ಯಾತ ನಟಿ ಪ್ರೇಮಾ, ಖ್ಯಾತ ನಟ, ಹ್ಯಾಂಡಸಮ್ ಹಂಕ್ ರಮೇಶ್ ಅರವಿಂದ್, ಇವರಿಬ್ಬರ ಜೊತೆಗೆ ಸಿನಿರಂಗದ ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟಿ ನಿಶ್ವಿಕಾ ನಾಯ್ಡು ಈ ನಾಲ್ಕು ಜನರು ಕೂಡ ಮಹಾನಟಿ ಶೋನಾ ಜಡ್ಜಸ್ ಸೀಟ್ಗಳನ್ನ ಅಲಂಕರಿಸಲಿದ್ದಾರೆ.
ಈ ಕಾರ್ಯಕ್ರಮದ ಆ್ಯಂಕರ್ ಅನುಶ್ರೀ ಅವರು ಎನ್ನುವ ಮಾತುಗಳು ಕೇಳಿ ಬರ್ತಿವೆ. ಸದ್ಯ ಜಡ್ಜ್ಸ್ಗಳ ಪ್ರೋಮೋ ಆಗಲಿ ಆ್ಯಂಕರ್ ಇರುವಂತ ಪ್ರೋಮೋ ಆಗಿ ಬಂದಿಲ್ಲ. ಆದ್ರೆ, ಮತ್ತೊಂದು ವಿಭಿನ್ನ ಪ್ರೋಮೋದಲ್ಲಿ ತರುಣ್ ಸುಧೀರ್ ಕಾಣಿಸಿಕೊಂಡಿದ್ದು, ವೀಕ್ಷಕರಿಗೆ ಕುತೂಹಲ ಮೂಡಿಸ್ತಿದೆ. ಒಟ್ಟಿನಲ್ಲಿ ಮಹಾನಟಿ ರಿಯಾಲಿಟಿ ಶೋಯಿಂದ ಸಿಕ್ಕಾಪಟ್ಟೆ ಎಕ್ಸ್ಪೆಕ್ಟೇಷನ್ ಇಟ್ಟುಕೊಂಡಿದ್ದು, ಪ್ರಸಾರವಾಗೋ ದಿನಾಂಕ ಕೂಡ ನಿಗದಿ ಮಾಡಿದ್ದಾರೆ. ಇದೇ ಶನಿವಾರ ಮಹಾನಟಿ ಶೋ ಪ್ರಸಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ