ಖಾಸಗಿ ಉದ್ಯೋಗಿಗಳಿಗೆ ಶುಭವಿದೆ, ಪ್ರಯಾಣ ಮಾಡುವಾಗ ಜಾಗರೂಕರಾಗಿರಿ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನಿಮ್ಮ ಕೆಲವು ಸಣ್ಣ ಪುಟ್ಟ ಕೆಲಸಗಳಿಗೂ ಬೇರೆಯವರನ್ನು ಅವಲಂಬಿಸುತ್ತೀರಿ
  • ಬೆಳಗ್ಗೆ ಎದ್ದ ತಕ್ಷಣ ಮನಸ್ಸಿಗೆ ಹರ್ಷ,ಆನಂದ ಕೆಲಸಗಳಲ್ಲಿ ಉತ್ಸಾಹ ಇರುವ ದಿನ
  • ನಿಮ್ಮ ಸ್ವಭಾವದಿಂದ ಸ್ವರ್ಧಾತ್ಮಕವಾದ ಜೀವನದಲ್ಲಿ ಹಿನ್ನಡೆಯಾಗುವ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಸರಿಯಾದ ವಿಶ್ರಾಂತಿಯ ಅಗತ್ಯವಿರುತ್ತದೆ, ಮಾನಸಿಕವಾದ ಸುಸ್ತು ಕಾಡಬಹುದು
  • ನಿಮ್ಮ ಕೆಲವು ಸಣ್ಣ ಪುಟ್ಟ ಕೆಲಸಗಳಿಗೂ ಬೇರೆಯವರನ್ನು ಅವಲಂಬಿಸುತ್ತೀರಿ
  • ನಿದ್ದೆಯ ಅಭಾವದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯ ಕಾಣಬಹುದು
  • ಕಾರ್ಯಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಲು ಹೋಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ
  • ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯುವ ಸೂಚನೆಗಳಿವೆ
  • ಬೆಳಗ್ಗೆ ಎದ್ದ ತಕ್ಷಣ ಮನಸ್ಸಿಗೆ ಹರ್ಷ,ಆನಂದ ಕೆಲಸಗಳಲ್ಲಿ ಉತ್ಸಾಹ ಇರುವ ದಿನ
  • ಬಹಳ ದಿನದಿಂದ ಮದುವೆಗೆ ಕಾಯುತ್ತಿದ್ದ ಪ್ರೇಮಿಗಳಿಗೆ ಶುಭದಿನ
  • ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡಿಸಿ

ವೃಷಭ

publive-image

  • ಹಿರಿಯರು ಮತ್ತು ಮಕ್ಕಳಿಗೆ ಮಾನಸಿಕವಾಗಿ ಸಮಾಧಾನ ಇಲ್ಲದೆ ಇರುವ ದಿನ
  • ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಒಂದು ಹಂತ ಮೇಲೆಕ್ಕೇರುವ ದಿನ
  • ಮಾತಿನ ಭರದಲ್ಲಿ ಅನಗತ್ಯ ವಿಚಾರಗಳಲ್ಲಿ ಸಿಲುಕಿಕೊಳ್ಳಬಹುದು
  • ಇಂದು ವ್ಯಾಪಾರ, ವ್ಯವಹಾರಕ್ಕಾಗಿ ಸಾಲ ಮಾಡುವ ಸಾಧ್ಯತೆಯಿದೆ
  • ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗುತ್ತದೆ
  • ನಿಮ್ಮ ಸ್ವಭಾವದಿಂದ ಸ್ವರ್ಧಾತ್ಮಕವಾದ ಜೀವನದಲ್ಲಿ ಹಿನ್ನಡೆಯಾಗುವ ಸಾಧ್ಯತೆ
  • ಗಣಪತಿಯ ಆರಾಧನೆ ಮಾಡಿ

ಮಿಥುನ

publive-image

  • ಮನಸ್ಸು ವಿಕಾರ ಆಗದೆ ಒಂದೇ ರೀತಿಯಲ್ಲಿರಬೇಕು
  • ಖಾಸಗಿ ಉದ್ಯೋಗ ಮಾಡುವವರಿಗೆ ನೌಕರಿಯ ಭಯವಿದೆ ಆದರೆ ಯಾವುದೇ ತೊಂದರೆಯಿಲ್ಲ
  • ನಿಮ್ಮ ಮಾತಿನ ಬಗ್ಗೆ ಹಿಡಿತವಿರಲಿ
  • ಹಗುರವಾಗಿ ಮಾತನಾಡುವುದರಿಂದ ನಿಮ್ಮ ಗೌರವ ಕಡಿಮೆಯಾಗುವ ಸೂಚನೆ ಇದೆ
  • ಹೊಸ ಕೆಲಸ, ಹೊಸ ಜೀವನವನ್ನು ಪ್ರಾರಂಭ ಮಾಡಲು ಶುಭದಿನ
  • ಪ್ರಯಾಣ ಮಾಡುವಾಗ ಜಾಗ್ರತೆಯಿರಲಿ, ತೊಂದರೆಯ ಸೂಚನೆಗಳಿವೆ
  • ಗುರು ದಕ್ಷಿಣ ಮೂರ್ತಿಯನ್ನು ಆರಾಧಿಸಿ

ಕಟಕ

publive-image

  • ನೌಕರಿಯ ಕ್ಷೇತ್ರದಲ್ಲಿ ಮಾತನಾಡುವಾಗ ಮನೆಯ ಮಕ್ಕಳ ವಿವಾಹದ ವಿಚಾರ ಬರಬಹುದು
  • ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ
  • ಸ್ನೇಹಿತರು, ಬಂಧುಗಳು ನಿಮ್ಮ ಜೊತೆ ಸಂತೋಷ ಹಂಚಿಕೊಳ್ಳಲು ಇರ್ತಾರೆ
  • ಅಕ್ಕಪಕ್ಕದವರ ಜೊತೆ ಜಗಳದ ಸಾಧ್ಯತೆಯಿದೆ ಜಾಗ್ರತೆವಹಿಸಿ
  • ಅಹಂಕಾರ ಬೇಡ, ಹೊಂದಿಕೊಂಡು ಹೋಗುವುದು ಬಹಳ ಮುಖ್ಯ
  • ರುದ್ರಮಂತ್ರವನ್ನು ಶ್ರವಣಮಾಡಿ

ಸಿಂಹ

publive-image

  • ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚಿನ ಕೋಪ ಬರುತ್ತದೆ
  • ಮಕ್ಕಳಿಗೆ ಬಹಳ ಸಂತೋಷದ ದಿನ
  • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
  • ಮನೆಯ ಸದಸ್ಯರೆಲ್ಲರ ಜೊತೆಯಲ್ಲಿ ಬಿಡುವಿಲ್ಲದ ಮಾತು ನಡೆಯುತ್ತದೆ
  • ಸ್ಪರ್ಧತ್ಮಾಕ ಪರೀಕ್ಷೆಗಳ ವಿಚಾರದಲ್ಲಿ ಸ್ವಲ್ಪ ಗೊಂದಲವಿರುತ್ತದೆ
  • ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಿ ಕಾಣಬಹುದು
  • ಚೌಡೇಶ್ವರಿಯನ್ನು ಆರಾಧಿಸಿ

ಕನ್ಯಾ

publive-image

  • ಅನಗತ್ಯ ಖರ್ಚು ಚಿಂತೆಗೀಡು ಮಾಡುತ್ತದೆ
  • ವಿದ್ಯಾರ್ಥಿಗಳಿಗೆ ಅನಾರೋಗ್ಯದ ಬೇಸರ ಉಂಟಾಗಬಹುದು
  • ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಣವನ್ನು ಹೂಡಿಕೆ ಮಾಡಲು ಸಕಾಲ
  • ಹೊರಗೆ ತಿರುಗುವ ಮನಸ್ಸು ಹೆಚ್ಚಾಗಿ ಕಾಣುತ್ತದೆ
  • ಸಹೋದ್ಯೋಗಿಗಳಿಗೆ ಶುಭವಾರ್ತೆ ಸಿಗಲಿದೆ
  • ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಿನ್ನಡೆ ಆಗುವ ಸಾಧ್ಯತೆ
  • ನಿಮಗಿಂತ ಕಿರಿಯರು ಉತ್ತಮ ಪದವಿ ಪಡೆದು ಯಶ್ವಸಿಗಳಾಗುತ್ತಾರೆ
  • ಇದು ನಿಮ್ಮ ಅಸಮಾಧಾನಕ್ಕೆ ಕಾರಣ ಆಗುತ್ತದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

publive-image

  • ಹಿಂದೆ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರೆ ಇಂದು ಅದನ್ನು ಸರಿದೂಗಿಸಿಕೊಳ್ಳುವ ಅವಕಾಶವಿದೆ
  • ಹಳೆಯ ವಿಚಾರಗಳು ಮುನ್ನಲೆಗೆ ಬರುವಂತ ಸೂಚನೆಗಳಿವೆ
  • ಅಲಂಕಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ
  • ಇಡೀ ವರ್ಷದ ಎಲ್ಲಾ ಕೆಲಸಗಳ ಬಗ್ಗೆ ಯೋಜನೆಯನ್ನು ಈ ದಿನ ಮಾಡುವಂತಹುದು
  • ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಗಮನಿಸಿ, ತಾತ್ಸಾರ ಮಾಡಬೇಡಿ
  • ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾಗಬಹುದು
  • ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಸರಳವಾಗಿ ಆಚರಿಸಿಕೊಳ್ಳಿ
  • ಗೋಮಾತೆಯನ್ನು ಪೂಜಿಸಿ

ವೃಶ್ಚಿಕ

publive-image

  • ಸಾಯಂಕಾಲದ ವೇಳೆಗೆ ಸ್ತ್ರೀಯರಿಗೆ ಎದೆನೋವು ಕಾಣಿಸಬಹುದು ಎಚ್ಚರಿಕೆ
  • ಒಳ್ಳೆಯ ಕಾರ್ಯಕ್ಕೆ ಸಮಯವನ್ನು ಉಪಯೋಗಿಸಿಕೊಳ್ಳಬೇಕು
  • ಸುಲಭವಾಗಿ ಸಾಲ ದೊರಕಬಹುದು ಆದರೆ ಮುಂದೆ ತೊಂದರೆಯಾಗುವ ಸಾಧ್ಯತೆ ಹೆಚ್ಚು
  • ಇತರರಿಗೆ ಉಪಕಾರ ಮಾಡಲು ಹೋಗಿ ತೊಂದರೆ ಅನುಭವಿಸಬಹುದು
  • ಸಹೋದ್ಯೋಗಿಗಳ ಸಹಾಯ ಪಡೆದು ನಿಮ್ಮ ಕೆಲಸ ಪೂರ್ಣ ಮಾಡಿ
  • ಸದ್ಗುರುಗಳನ್ನು ಪ್ರಾರ್ಥಿಸಿ

ಧನಸ್ಸು

publive-image

  • ಬೇರೆಯವರ ವ್ಯವಹಾರದಲ್ಲಿ ನೀವು ಹಸ್ತಕ್ಷೇಪ ಮಾಡಬೇಡಿ
  • ಕಲಿಯುವ ಹಂಬಲವಿರುವವರು ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಿದೆ
  • ಇಂದು ಮನಸ್ಸು ನಿರ್ಮಲವಾಗಿರುತ್ತದೆ, ಭವಿಷ್ಯದ ಬಗ್ಗೆ ಸರಿಯಾದ ತೀರ್ಮಾನಕ್ಕೆ ಯೋಗ್ಯದಿನ
  • ಕೋಪ ಹೆಚ್ಚಾಗಿ ಕಾಣುತ್ತದೆ, ಕೋಪನ್ನು ಯಾರ ಮೇಲೂ ತೀರಿಸಿಕೊಳ್ಳಬಾರದು
  • ಅಕ್ಕ-ತಂಗಿಯರು ಆಸ್ತಿಯ ವಿಚಾರವಾಗಿ ತಕರಾರು ಮಾಡಬಹುದು
  • ಋಣಮೋಚನ ಅಂಗಾರಕ ಸ್ತೋತ್ರ ಪಠಿಸಿ

ಮಕರ

publive-image

  • ಅನಗತ್ಯ ಖರ್ಚುಗಳಿಂದ ಸ್ವಲ್ಪ ತೊಂದರೆಯಾಗಬಹುದು
  • ಮಕ್ಕಳಿಂದ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ
  • ಕುಟುಂಬದ ಸ್ನೇಹಿತರು ಹಾಗೂ ಬಂಧುಗಳು ನಿಮ್ಮನ್ನು ಟೀಕಿಸಬಹುದು
  • ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುವುದಿಲ್ಲ
  • ಕೆಲಸದಲ್ಲಿ ದೊಡ್ಡ ಜವಾಬ್ದಾರಿಯಿಂದ ಬೇಸರವಾಗಬಹುದು, ಆದರೆ ಅನಿವಾರ್ಯವಾಗಿರುತ್ತದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ಆಹಾರ ವಿಚಾರದಲ್ಲಿ ಗಮನವಿರಲಿ, ಹೊಟ್ಟೆಗೆ ಸಂಬಂಧಿಸಿದ ತೊಂದರೆಯಿಂದ ಒದ್ದಾಡಬಹುದು
  • ನವದಂಪತಿಗಳಿಗೆ ಶುಭವಾದ ದಿನ
  • ಅಲಂಕಾರ ವಸ್ತುಗಳ ಖರೀದಿಗೆ ಮುಂದಾಗಬಹುದು
  • ವಿದ್ಯಾರ್ಥಿಗಳಿಗೆ ಮುಖ್ಯವಾದ ತಿರುವು ಶುಭವನ್ನು ಕೊಡುತ್ತದೆ
  • ಉತ್ತಮವಾದ ಆಹಾರ, ಮನಸ್ಸಿಗೆ ಸಂತೋಷ ಸಿಗುವ ದಿನ
  • ಐಶ್ವರ್ಯ ಲಕ್ಷ್ಮಿಯನ್ನು ಆರಾಧಿಸಿ

ಮೀನ 

publive-image

  • ನೌಕರಿಯಲ್ಲಿರುವ ಮಹಿಳೆಯರಿಗೆ ಶುಭಫಲ
  • ಉತ್ತಮರ ಸಂಗ ಆಲೋಚನೆ ಮಾಡಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು
  • ಮನೆಯ ಹಿರಿಯರ ಆಶೀರ್ವಾದ, ಪ್ರೀತಿ, ವಿಶ್ವಾಸ ದೊರೆಯುವ ದಿನ
  • ಆರ್ಥಿಕ ಸಮಸ್ಯೆಯನ್ನು ಎದುರಿಸಲು ಪರಿಪೂರ್ಣವಾದ ಶಕ್ತಿಯಿರುತ್ತದೆ
  • ಇಂದು ಎಲ್ಲಾ ಕೆಲಸಗಳಲ್ಲಿ ನಿಮ್ಮ ನಿರ್ಧಾರ ಸ್ಪಷ್ಟವಾಗಿರಲಿ
  • ಅಗ್ನಿ ದೇವತಾ ಶಕ್ತಿಯನ್ನು ಉಪಾಸನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment