ವಾಹನ ಚಾಲನೆಯಿಂದ ತೊಂದರೆ, ಕೈಗಾರಿಕಾ ಉದ್ಯಮಿಗಳಿಗೆ ಸಂತಸದ ದಿನ; ಭವಿಷ್ಯ ಈ ದಿನ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನೌಕರಿಯಲ್ಲಿ ಕಾಡುತ್ತಿದ್ದ ಅಭದ್ರತೆ ನಿಮ್ಮಿಂದ ದೂರವಾಗಬಹುದು
  • ಧಾರ್ಮಿಕ ಮುಖಂಡರಿಗೆ ಹಿನ್ನಡೆ, ಅವಮಾನ ಹೆಚ್ಚಾಗುವ ಸಾಧ್ಯತೆ
  • ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಶುಭಸೂಚನೆ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಸಮಾಜದ ಹಿತಕ್ಕಾಗಿ ವೈಜ್ಞಾನಿಕವಾದ ಸಂಶೋಧನೆ ಮಾಡುವವರಿಗೆ ಶುಭಫಲವಿದೆ
  • ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯ ಅವಕಾಶವಿದೆ
  • ಮಹಿಳಾ ಅಧಿಕಾರಿಗಳಿಗೆ ಅನಿರೀಕ್ಷಿತ ಸಹಾಯ, ಅನುಕೂಲ ಕಂಡು ಬರುವುದು
  • ನೌಕರಿಯಲ್ಲಿ ಕಾಡುತ್ತಿದ್ದ ಅಭದ್ರತೆ ನಿಮ್ಮಿಂದ ದೂರವಾಗಬಹುದು
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಶ್ರದ್ಧೆ ಇರಲಿ
  • ಪ್ರಾಮಾಣಿಕ ಪ್ರಯತ್ನಕ್ಕೆ ಸದಾಕಾಲ ಜಯವಿದೆ
  • ಬಲವಂತವಾಗಿ ಯಾರನ್ನು ಕೂಡ ಏನೂ ಕೇಳಬಾರದು
  • ನಿಮಗೆ ಸಲ್ಲಬೇಕಾದದ್ದು ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ
  • ಮನೆದೇವರನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಸಾಂಸಾರಿಕವಾಗಿರುವ ಜಂಜಾಟಗಳನ್ನು ಧೈರ್ಯವಾಗಿ ಎದುರಿಸಿ ಮುನ್ನುಗುತ್ತೀರಿ ಅದರಲ್ಲಿ ಸಫಲತೆ ಕಾಣುತ್ತೀರಿ
  • ನೌಕರಿಯ ವಿಚಾರದಲ್ಲಿ ಬೇರೆಯವರ ಕೈಕೆಳಗೆ ಕೆಲಸ ಮಾಡುವುದು ನಿಮ್ಮ ಮನಸ್ಸಿಗೆ ಬೇಸರ ಉಂಟು ಮಾಡಲಿದೆ
  • ಬುದ್ಧಿಗೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಆಂತರಿಕ ನೋವು ಕಾಡುತ್ತದೆ
  • ಮನೋರಂಜನಾ ಕಲಾವಿದರಿಗೆ ಹೆಚ್ಚು ಬೇಡಿಕೆ ಇರುವ ದಿನ
  • ಧಾರ್ಮಿಕ ಮುಖಂಡರಿಗೆ ಹಿನ್ನಡೆ, ಅವಮಾನ ಹೆಚ್ಚಾಗುವ ಸಾಧ್ಯತೆ
  • ಕಾರ್ಯ ನಿಮಿತ್ತ ಹೆಚ್ಚು ಓಡಾಟ, ಆಯಾಸವಾದರೂ ಮನಸ್ಸಿಗೆ ತೃಪ್ತಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ಮಿಥುನ

publive-image

  • ಈ ರಾಶಿಯ ವಕೀಲರಿಗೆ ಲಾಭದ ದಿನ
  • ನಿಮ್ಮ ಕಿರಿಯರಿಗೆ ಆತ್ಮಸ್ಥೈರ್ಯ ಹಾಗೆ ಈ ಕಾರ್ಯದ ಬಗ್ಗೆ ಇರುವ ಗೌರವ ಹೆಚ್ಚಾಗಲಿದೆ
  • ಸಾಮಾಜಿಕ ಚರ್ಚೆಗಳಲ್ಲಿ ಭಾಗಿಗಳಾಗುತ್ತೀರಿ
  • ಉದ್ಯೋಗ ನಿಮಿತ್ತ ಪ್ರಯಾಣವನ್ನು ಮಾಡಬೇಕಾಗಬಹುದು
  • ಮಂದಗತಿಯಲ್ಲಿ ನಡೆಯುವ ಕೆಲಸಗಳನ್ನು ಕೈಬಿಡುವ ನಿರ್ಧಾರ ಮಾಡುತ್ತೀರಿ
  • ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಶುಭಸೂಚನೆ ಇದೆ
  • ಅಷ್ಟಲಕ್ಷ್ಮಿಯನ್ನು ಪ್ರಾರ್ಥಿಸಿ

ಕಟಕ

publive-image

  • ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತೀರಿ ಆದರೆ ಗೌರವ ಸಿಗಲಿಲ್ಲವೆಂದು ಮನಸ್ಸಿಗೆ ಬೇಸರವಾಗುತ್ತದೆ
  • ಕಾರ್ಯಕ್ರಮದಿಂದ ವಾಪಸ್ಸು ಬರುವ ಆಲೋಚನೆಗಳನ್ನು ಮಾಡುವ ಸಾಧ್ಯತೆಗಳಿವೆ
  • ಮಹಿಳೆಯರು ಹಟ ಸಾಧಿಸುವ ಸಂದರ್ಭ, ಸಣ್ಣ ಜಗಳ ಆಗುವ ಸಾಧ್ಯತೆ ಇದೆ
  • ಕುಟುಂಬ ನಿರ್ವಹಣೆಯ ಬಗ್ಗೆ ಯಶಸ್ಸಿನ ಮಾತು ಕೇಳಿ ಬರುತ್ತದೆ
  • ಕಲಹದಿಂದಲೇ ಮನಸ್ಸಿಗೆ ಸಾಧಿಸಿದ ಸಮಾಧಾನ ದೊರಕುವುದು
  • ಎಲ್ಲರೊಂದಿಗೆ ಹೆಚ್ಚಾಗಿ ಬೆರೆತರೆ ನಿಮ್ಮ ಕಾರ್ಯಗಳಿಗೆ ಶುಭವಿರುತ್ತದೆ
  • ಸರಸ್ವತಿಯನ್ನು ಆರಾಧಿಸಿ

ಸಿಂಹ

publive-image

  • ಕೃಷಿಕರಿಗೆ ಸಣ್ಣ ಪ್ರಮಾಣದ ಲಾಭ ಸಿಗಬಹುದು
  • ಹಿಂದೆ ಆದಂತಹ ನಷ್ಟವನ್ನು ಸರಿದೂಗಿಸಲು ಆಗದೆ ಇರೋದ್ರಿಂದ ಮನಸ್ಸಿಗೆ ಬೇಸರವಾಗುತ್ತದೆ
  • ಹಣದ ವ್ಯವಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಹಿನ್ನಡೆಯಾಗುತ್ತದೆ
  • ಮಿತ್ರರಿಂದ ನಿರೀಕ್ಷಿತ ಸಹಾಯ ದೊರಕದೆ ಅವರ ಬಗ್ಗೆ ತುಂಬಾ ಬೇಸರ ಉಂಟಾಗಲಿದೆ
  • ಹಿಂದೆ ಮಾಡಿದ ತಪ್ಪಿನ ಫಲವನ್ನು ಈ ದಿನ ಅನುಭವಿಸಬೇಕಾಗಬಹುದು
  • ಯಂತ್ರೋಪಕರಣ, ವಾಹನಗಳನ್ನು ಮಾರಾಟ ಮಾಡುವವರಿಗೆ ಶುಭವಿದೆ
  • ಕೆಲಸದ ಒತ್ತಡ ಹೆಚ್ಚಾಗಬಹುದು ಮತ್ತು ಪೋಷಕರ ಬಗ್ಗೆ ಗಮನ ಹರಿಸಿ

ಕನ್ಯಾ

publive-image

  • ಪದಾರ್ಥಗಳನ್ನು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುವವರಿಗೆ ಲಾಭ ಇರುವುದಿಲ್ಲ
  • ಉದ್ಯೋಗಕಾಂಕ್ಷಿಗಳಿಗೆ ಶುಭವಿದ್ದರೂ ಅನೇಕ ವಿಧವಾದ ತೊಡಕುಗಳು ಎದುರಾಗಬಹುದು
  • ಹೆಣ್ಣು ಮಕ್ಕಳಿಗೆ ವಾಹನದಿಂದ, ವಾಹನ ಚಾಲನೆಯಿಂದ ತೊಂದರೆಯಾಗುವ ಸಾಧ್ಯತೆ ಎಚ್ಚರಿಕೆ
  • ವಿದ್ಯಾರ್ಥಿಗಳಿಗೆ ಆಕಸ್ಮಿಕ ಅವಕಾಶಗಳು ಲಾಭಗಳು ಸಿಗಬಹುದು
  • ಹಲವು ದಿನದ ಸಮಸ್ಯೆಗಳಿಗೆ ಇಂದು ಪರಿಹಾರ ಮಾರ್ಗ ಸಿಗಬಹುದು
  • ಉತ್ತಮ ಅವಕಾಶಗಳು ಸದ್ವಿನಿಯೋಗವಾಗಲಿ
  • ಪಾಂಡುರಂಗನನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಕೈಗಾರಿಕಾ ಉದ್ಯಮಿಗಳಿಗೆ ಸಂತಸದ ದಿನ
  • ಮಹಿಳಾ ಪ್ರತಿಭೆಗಳಿಗೆ ವಿಶೇಷವಾದ ಯಶಸ್ಸು ಸಮಾಧಾನ ತರುತ್ತದೆ
  • ನಿತ್ಯ ಜೀವನ,ವ್ಯವಹಾರಗಳನ್ನು ಮರೆತು ಸಾಧನೆಗೆ ಮುಂದಾಗಬಹುದು
  • ಸ್ವಂತ ನಿರ್ಧಾರಗಳು ಮಾತ್ರ ಕೆಲಸಕ್ಕೆ ಬರುವಂತಹದ್ದು
  • ನಿಮ್ಮ ಜೀವನದ ಮಹತ್ತರ ಕನಸಿನ ಸಹಕಾರಕ್ಕೆ ತುಂಬಾ ಪರಿಶ್ರಮಬೇಕು
  • ಬೇರೆಯವರ ಬೆಂಬಲ ನಿಮಗೆ ಸ್ಫೂರ್ತಿಯಾಗತ್ತೆ, ಗುರಿಯತ್ತ ಪಯಣ ಬೆಳೆಸಬೇಕಾಗುತ್ತದೆ
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

publive-image

  • ನಿರಂತರ ಪ್ರಯತ್ನ ಅತಿ ಉತ್ಸಾಹದಿಂದ ಜೀವನದಲ್ಲಿ ಹೊಸ ತಿರುವು ಕಾಣಬಹುದು
  • ಬಂಧುಗಳ ಭಿನ್ನಾಭಿಪ್ರಾಯ ದೂರವಾಗಬಹುದು
  • ಲೇವಾದೇವಿ ಬಡ್ಡಿ ವ್ಯವಹಾರ ಮಾಡುವವರಿಗೆ ನಷ್ಟವಾಗುವ ಸಾಧ್ಯತೆ
  • ತಮ್ಮ ವ್ಯವಹಾರ ಮುಂದುವರಿಸಲು ಹಾಗೆ ರೂಢಿಸಿಕೊಳ್ಳಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ
  • ಧಾರ್ಮಿಕ ಮಾರ್ಗದರ್ಶನದಿಂದ ಸ್ವಲ್ಪ ನೆಮ್ಮದಿ ಸಿಗಬಹುದು
  • ಎಲ್ಲಾ ದೃಷ್ಟಿಯಿಂದ ಗಮನಿಸಿದಾಗ ಹೋರಾಟದ ಜೀವನ ಅಂತ ಹೇಳಬೇಕಾಗುತ್ತದೆ
  • ಮಹಾ ಗಣಪತಿಯನ್ನು ಆರಾಧಿಸಿ

ಧನಸ್ಸು

publive-image

  • ಗೃಹ ನಿರ್ಮಾಣದ ಆಲೋಚನೆ ಇರುವವರಿಗೆ ಉತ್ತಮವಾದ ದಿನ
  • ಮಕ್ಕಳಿಂದ ಸಹಾಯ, ಸಹಕಾರ ದೊರಕುತ್ತದೆ
  • ಸಂಗೀತಾ ಅಭ್ಯಾಸಿಗಳಿಗೆ ಸಂಗೀತ ತಜ್ಞರಿಗೆ ಯಶಸ್ಸು ಸಿಗುವ ದಿನ
  • ಪುರಸ್ಕಾರ, ಮರ್ಯಾದೆಗಳು ನಿಮ್ಮ ಮಡಿಲಿಗೆ ಬಂದು ಬೀಳುವ ದಿನ
  • ತಾತ್ಕಾಲಿಕ ಹುದ್ದೆಗಳಲ್ಲಿರುವವರಿಗೆ ತಕ್ಷಣ ಬದಲಾವಣೆ ಸೂಚನೆ ಬರಬಹುದು
  • ಯಾವುದೇ ಗೌರವಯುತ ಕೆಲಸಗಳ ಮೇಲೆ ತಾತ್ಸಾರಭಾವ ತೋರಿಸಬಾರದು
  • ಹಿರಿಯ ಅಧಿಕಾರಿಗಳಿಂದ ತಿರಸ್ಕಾರ ಆಗಬಹುದು ಅದಕ್ಕೆ ಬೇಸರ ಮಾಡಿಕೊಳ್ಳಬೇಡಿ
  • ಇಷ್ಟ ದೇವತೆಯನ್ನು ಪ್ರಾರ್ಥಿಸಿ

ಮಕರ

publive-image

  • ವಾದ-ವಿವಾದಗಳನ್ನು ನೀವೆ ಸೃಷ್ಠಿ ಮಾಡಿಕೊಂಡು ಜಯಶೀಲರಾಗುವಂತೆ ಮಾಡಿಕೊಳ್ಳುತ್ತೀರಿ
  • ಸಾಮಾಜಿಕ ಸೇವೆಗಳಲ್ಲಿ ನೆಪ ಮಾತ್ರಕ್ಕೆ ಭಾಗಿಯಾಗುತ್ತೀರಿ
  • ಕುಟುಂಬದ ವಾತಾವರಣವು ಸಮಾಧಾನಕರವಾಗಿರುವುದಿಲ್ಲ
  • ಅನಾರೋಗ್ಯ ಪೀಡಿತರಿಗೆ ಭಯ ಹೆಚ್ಚಾಗಲಿದೆ ಜಾಗ್ರತೆ ಇರಲಿ
  • ಕೆಲಸ ಮಾತು ಯಾವುದರಲ್ಲೂ ಸ್ವಾತಂತ್ರ್ಯವಿರದೆ ಹಿಂಸೆ ಪಡಬೇಕಾಗುತ್ತದೆ
  • ಸರ್ಕಾರಿ ಕೆಲಸದವರಿಗೆ ಅನುಕೂಲಕರ ದಿನ
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ಅನಿರೀಕ್ಷಿತ ಧನಾಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ
  • ಕಲಾವಿದರಿಗೆ ಅಲ್ಪ ಗೌರವ ಸಿಗುವುದರಿಂದ ಅಸಮಾಧಾನವಿರುತ್ತದೆ
  • ಕುಟುಂಬದ ಉನ್ನತಿ ಬಗ್ಗೆ ಚಿಂತನೆ ನಡೆಸುತ್ತೀರಿ
  • ಮೇಲ್ದರ್ಜೆಗೆ ಇನ್ನೂ ಏರಬೇಕು ಅನ್ನೋ ಭಾವವಿದ್ದಾಗ ಅದಕ್ಕೆ ಪ್ರಯತ್ನ ನಡೆಯುತ್ತಿರುತ್ತದೆ
  • ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತೀರಿ
  • ಮೇಲ್ದರ್ಜೆಯ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಇದು ಸದಾವಕಾಶ
  • ಬಂಧುಗಳಿಂದ ಸಲಹೆ ಸಹಕಾರ ದೊರೆಯುತ್ತದೆ
  • ಸಾಧಕರಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ
  • ಸೋದರ ಮಾವನ ಆರೋಗ್ಯದಲ್ಲಿ ವ್ಯತ್ಯಾಸವಾಗಬಹದು ಗಮನಿಸಿ
  • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದಾದ ದಿನ
  • ಸಾಮಾಜಿಕ ಬದುಕಿನಲ್ಲಿ ಗೌರವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ
  • ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ ಇರುತ್ತದೆ
  • ವಿದ್ಯಾಭ್ಯಾಸದಲ್ಲಿ ಪ್ರಗತಿ ಹಾಗೂ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
  • ಬಟ್ಟೆ ವ್ಯಾಪಾರಿಗಳಿಗೆ ಆದಾಯದ ಮೂಲ ಹೆಚ್ಚಾಗಬಹುದು
  • ಮನೋವ್ಯಾಧಿಗೆ ಮದ್ದಿಲ್ಲ ಅನ್ನೋ ಹಾಗೆ ಮಾನಸಿಕವಾಗಿ ಕುಂಠಿತವಾಗುವ ಶರೀರ ಯಾವುದೇ ರೀತಿ ಬದಲಾವಣೆ ಹೊಂದುವುದಿಲ್ಲ
  • ಋಣಾತ್ಮಕವಾದ ಚಿಂತನೆಗಳೆ ಹೆಚ್ಚಾಗಿ ಬರುತ್ತಿರುತ್ತದೆ
  • ಮಾತಿನಿಂದ ಕಲಹ ಉಂಟಾಗಬಹುದು
  • ದೇವಿಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment