ಈ ರಾಶಿಯವರು ಹಣ ಕಳೆದುಕೊಳ್ಳಬಹುದು, ಅವಿವಾಹಿತರಿಗೆ ಸಿಹಿ ಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಹಣದ ಸಮಸ್ಯೆ, ಉದ್ಯೋಗ ಸಮಸ್ಯೆ, ಆರೋಗ್ಯವೂ ಕೂಡ ಕೈ ಕೊಡಬಹುದು
  • ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ
  • ಕುಟುಂಬದ ವಾತಾವರಣ, ವ್ಯಾಪಾರ, ವ್ಯವಹಾರ ಚೆನ್ನಾಗಿಯೇ ಕಾಣುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಮನಸ್ಸಿನಲ್ಲಿ ಹೊಸ ಹೊಸ ಆಲೋಚನೆಗಳು ಬರಬಹುದು
  • ಹಣದ ಸಮಸ್ಯೆ, ಉದ್ಯೋಗ ಸಮಸ್ಯೆ, ಆರೋಗ್ಯವೂ ಕೂಡ ಕೈ ಕೊಡಬಹುದು
  • ಅತಿಯಾದ ಆತ್ಮವಿಶ್ವಾಸ ನಿಮಗೆ ತೊಂದರೆಯಾಗಬಹುದು
  • ನಿರುದ್ಯೋಗಿಗಳಿಗೆ ತುಂಬಾ ಬೇಸರವಾಗುವ ದಿನ
  • ಉನ್ನತ ಹುದ್ದೆಯಲ್ಲಿರುವವರಿಗೂ ನಿರಾಶೆಯಾಗಬಹುದು
  • ಪ್ರೇಮಿಗಳಿಗೆ ಹಿನ್ನಡೆ, ಉದ್ವಿಗ್ನತೆ ಕಾಡಬಹುದು
  • ಮನೆಯಲ್ಲಿ ಪರಸ್ಪರ ವಿವಾದಗಳು ಉಂಟಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ವೃಷಭ

publive-image

  • ಅಪರಿಚಿತರ ಭಯ ಕಾಡಬಹುದು, ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
  • ನೌಕರರಿಗೆ , ವಿದ್ಯಾರ್ಥಿಗಳಿಗೆ ತಾಳ್ಮೆ ಪರೀಕ್ಷಿಸುವ ದಿನ
  • ಅತಿ ಮುಖ್ಯವಾದ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು
  • ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನಿಮ್ಮನ್ನು ಪ್ರಶಂಸಿಸುತ್ತಾರೆ
  • ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ
  • ದಾಂಪತ್ಯ ಜೀವನ ಸುಖಮಯವಾಗಿರುತ್ತದೆ, ವಿನಾಕಾರಣ ಮಾತು ಬೇಡ
  • ಶಿಂಶುಮಾರ ಮಂತ್ರವನ್ನು ಜಪ ಮಾಡಿಸಿ

ಮಿಥುನ

publive-image

  • ವಿರೋಧಿಗಳು ನಿಮ್ಮೆಲ್ಲಾ ಸಂತೋಷವನ್ನು ಹಾಳು ಮಾಡಬಹುದು
  • ವ್ಯಾಪಾರ ವಿಸ್ತರಿಸಲು ಕೈ ಹಾಕಿ ನಷ್ಟವಾಗಬಹುದು
  • ಕಾರ್ಯಕ್ಷೇತ್ರದಲ್ಲಿ ಕೆಲವು ಅರಿವಿಲ್ಲದ ಸಮಸ್ಯೆಗಳುಂಟಾಗಬಹುದು
  • ಕುಟುಂಬದ ವಾತಾವರಣ, ವ್ಯಾಪಾರ, ವ್ಯವಹಾರ ಚೆನ್ನಾಗಿಯೇ ಕಾಣುತ್ತದೆ
  • ಮನೆಯಲ್ಲಿ ಕೆಲಸಗಾರರಿದ್ದರೆ ಸ್ವಲ್ಪ ಜಾಗ್ರತೆವಹಿಸಿ
  • ಕೈ ಹಾಕಿದ ಕೆಲಸಗಳು ಪೂರ್ಣವಾಗುವ ಸೂಚನೆಯಿರುತ್ತದೆ
  • ಕಾಮಧೇನು ಮಂತ್ರವನ್ನು ಜಪಿಸಿ

ಕಟಕ

publive-image

  • ವಿದೇಶ ಪ್ರಯಾಣಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಈ ದಿನ ಶುಭವಿದೆ
  • ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
  • ನಿಮ್ಮ ಧೈರ್ಯ ಹಾಗೂ ಭಾವನೆಗಳಿಗೆ ಭಂಗ ಬರಬಹುದು ಎಚ್ಚರಿಕೆಯಿರಲಿ
  • ಸ್ನೇಹಿತರೊಂದಿಗೆ ಸೇರಿ ಹೊಸ ಯೋಜನೆ ರೂಪಿಸಲು ಅವಕಾಶವಿದೆ
  • ಹಣ ಮತ್ತು ದ್ರವ್ಯ ಕಳೆದುಕೊಳ್ಳುವ ಸಾಧ್ಯತೆಗಳಿವೆ
  • ಚಿಕ್ಕ ಮಕ್ಕಳಿಗೆ ಸಮಸ್ಯೆಯಾಗಬಹುದು ಜಾಗ್ರತೆವಹಿಸಿ
  • ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿ

ಸಿಂಹ

publive-image

  • ಕೌಶಲ್ಯದ ಕೆಲಸ ನಿಮಗೆ ಸಹಾಯವಾಗುವಂತೆ ಮಾಡಬಹುದು
  • ಒಂದೇ ಸಮಯದಲ್ಲಿ 2-3 ಕೆಲಸಗಳಾಗುವ ಸಾಧ್ಯತೆಗಳಿವೆ
  • ಮನೋರಂಜನೆಯನ್ನು ಅನುಭವಿಸುವ ಮೂಲಕ ಸಂತೋಷರಾಗಿರುತ್ತೀರಿ
  • ಮಾಟ -ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
  • ಸಾಧನೆ, ಪ್ರಗತಿಯ ಬಗ್ಗೆ ಅಹಂಭಾವ ಬೇಡ
  • ಸಮಾಜ ಕಾರ್ಯ, ಜನಸೇವೆಯಲ್ಲಿ ಉತ್ಸುಕರಾಗಿರುತ್ತೀರಿ
  • ದುರ್ಗಾದೇವಿಯನ್ನು ಆರಾಧನೆ ಮಾಡಿ

ಕನ್ಯಾ

publive-image

  • ಸಾಂಸಾರಿಕವಾಗಿ ಮಕ್ಕಳ ವಿಚಾರವಾಗಿದ್ದ ಚಿಂತೆ ದೂರವಾಗಬಹುದು
  • ಕೆಲಸದಲ್ಲಿ ಬಡ್ತಿ ಅಥವಾ ಹಣ ಕೈ ಸೇರುತ್ತದೆ
  • ಇಂದು ಅವಿವಾಹಿತರಿಗೆ ಸಿಹಿ ಸುದ್ದಿ
  • ವಿನಾಕಾರಣ ವಾದ - ವಿವಾದಗಳು ಬೇಡ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ, ವೈದ್ಯರಿಗೆ ಶುಭಫಲವಿದೆ
  • ನಿಮ್ಮ ಜವಾಬ್ದಾರಿಯುತ ಕೆಲಸಗಳು ಸಕಾಲದಲ್ಲಿ ಮುಗಿಯಬಹುದು
  • ಪ್ರತ್ಯಂಗಿರಾ ಹೋಮ ಮಾಡಿಸಿ

ತುಲಾ

publive-image

  • ನಿಮಗಿರುವ ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನು ಸೋಲಿಸುತ್ತೀರಿ
  • ಪ್ರೇಮಿಗಳಿಗೆ ಆಶುಭ, ಹೆಚ್ಚು ಧೈರ್ಯ ಬೇಡ ಭವಿಷ್ಯಕ್ಕೆ ತೊಂದರೆಯಾಗಬಹುದು
  • ಇಂದು ಜಗಳ ಬೇಡ ಮಾತಿನಿಂದ ನೀವು ಹೇಳಬೇಕಾದ್ದನ್ನು ಹೇಳಿ ಪರಿಹರಿಸಿಕೊಳ್ಳಿ
  • ನಿಮ್ಮ ತತ್ತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಬೇಡ
  • ಬದಲಾವಣೆಯ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ
  • ಮದುವೆಗೆ ನಿಶ್ಚಯದ ಸೂಚನೆಗಳಿವೆ
  • ಸ್ವಲ್ಪ ಆಸಕ್ತಿಯನ್ನು ಗಟ್ಟಿಮಾಡಿಕೊಳ್ಳಬೇಕು
  • ಸುದರ್ಶನನನ್ನು ಪ್ರಾರ್ಥಿಸಿ

ವೃಶ್ಚಿಕ

publive-image

  • ಹವಾಮಾನ ವೈಪರೀತ್ಯ ಶೀತಸಂಬಂಧಿ ತೊಂದರೆ ಕುಟುಂಬದಲ್ಲಿ ಕಾಣಿಸಬಹುದು
  • ನಯವಂಚಕರಿಂದ ದೂರವಿರಬೇಕಾಗುತ್ತದೆ
  • ಮೇಲಾಧಿಕಾರಿಗಳ ಜೊತೆ, ಕುಟುಂಬದ ಹಿರಿಯರ ಜೊತೆ ವಾದಿಸಬಾರದು
  • ನಿಮ್ಮ ಸ್ಥಾನ, ಸಂಬಂಧಗಳ ತಿಳುವಳಿಕೆ ನಿಮಗಿರಬೇಕಾಗುತ್ತದೆ
  • ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನಹರಿಸಿ
  • ಕೋಪಬೇಡ, ಕೆಲಹೊತ್ತು ವಾತಾವರಣ ಚೆನ್ನಾಗಿರುವುದಿಲ್ಲ
  • ಜವಾಬ್ದಾರಿಯ ಬಗ್ಗೆ ನಿಗಾವಹಿಸಬೇಕಾದ್ದು ನಿಮಗೆ ಅನಿವಾರ್ಯವಾಗುತ್ತದೆ
  • ಕುಲದೇವತಾ ಆರಾಧನೆ ಮಾಡಿ

ಧನಸ್ಸು

publive-image

  • ಹಳೆಯ ನಷ್ಟಕ್ಕೆ , ಅವಮಾನಕ್ಕೆ ಇಂದು ಪ್ರತೀಕಾರದ ಸಮಯವಾಗಿರುತ್ತದೆ
  • ಬೇರೆಯವರಿಗೆ ಸಾಲದ ರೂಪದಲ್ಲಿ ಹಣ ಪದಾರ್ಥ ನೀಡಬಾರದು
  • ನಿಮ್ಮ ಸಾಮರ್ಥ್ಯ ನೋಡಿ ಜವಾಬ್ದಾರಿಯುತ ಕೆಲಸ ನಿಮ್ಮ ಹೆಗಲೇರಲಿದೆ
  • ಆದಾಯದ ಮೂಲ ನೋಡಿ. ಖರ್ಚಿಗೆ ಮುಂದಾಗಬೇಕು
  • ಇಂದು ದುಬಾರಿ ವಸ್ತುಗಳ ಖರೀದಿ ಬೇಡ
  • ಧಾರ್ಮಿಕ ಮುಖಂಡರಿಗೆ ಹಿನ್ನಡೆ ಅವಮಾನ ಇರುತ್ತದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ಮಕರ

publive-image

  • ಹಣಕಾಸಿನ ಸಮಸ್ಯೆಯಿಂದ ಕೆಲವು ಕೆಲಸಗಳು ಸ್ಥಗಿತವಾಗಬಹುದು
  • ಕುಟುಂಬ ಸದಸ್ಯರ ಸ್ವಭಾವದಿಂದ ನಿಮಗೆ ಬೇಸರವಾಗಬಹುದು
  • ಈ ದಿನ ದುಂದುವೆಚ್ಚ ಬೇಡ
  • ಪೂರ್ವಿಕರ ಆಸ್ತಿ ವಿಚಾರಗಳಲ್ಲಿ ಒಂದು ತಿರುವು ಬರಬಹುದು
  • ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು
  • ಸಹೋದರರ ವೈಮನಸ್ಸು ಇರಬಹುದು. ತಾಳ್ಮೆಯಿರಲಿ
  • ಸಾಲಿಗ್ರಾಮ ಮಹಾವಿಷ್ಣುವನ್ನು ಆರಾಧನೆ ಮಾಡಿ

ಕುಂಭ

publive-image

  • ಈ ದಿನ ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು
  • ಪುಸಕ್ತ ಪ್ರೇಮಿಗಳಿಗೆ, ವ್ಯಾಪಾರಸ್ಥರಿಗೆ ಶುಭವಿದೆ
  • ವಿದ್ಯಾರ್ಥಿಗಳಿಗೆ ಗಂಭೀರ ವಿಷಯಗಳನ್ನು ಅಧ್ಯಯನ ಮಾಡಲು ಆಸಕ್ತಿ ಬರಬಹುದು
  • ಬೇರೆಯವರ ನಿರ್ಲಕ್ಷದಿಂದ ನಿಮ್ಮ ಕೆಲಸಕ್ಕೆ ಹಿನ್ನಡೆಯಾಗಬಹುದು
  • ಇಂದು ಆರ್ಥಿಕ ಸಮಸ್ಯೆ ಕಾಡಬಹುದು
  • ಸಾಯಂಕಾಲ ಸ್ವಲ್ಪ ಮಾನಸಿಕ ಒತ್ತಡ ಕಡಿಮೆಯಾಗಿ, ನೆಮ್ಮದಿ ಸಿಗಲಿದೆ
  • ಸ್ರಷ್ಟಾ ಮಂತ್ರ ಜಪದಿಂದ ಶುಭವಿದೆ

ಮೀನ 

publive-image

  • ತಾಯಿಯ ಆಶೀರ್ವಾದೊಂದಿಗೆ ಈ ದಿನದ ಕೆಲಸವನ್ನು ಆರಂಭಿಸಿ
  • ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರಬಹುದು
  • ಖರ್ಚನ್ನು ಗಮನಿಸಿ, ಆದಾಯಕ್ಕೆ ಹೊಂದಿಕೆಯಾಗುವಂತೆ ಮಾಡಿ
  • ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ
  • ಇಂದು ಕೆಂಪುವಸ್ತ್ರ ಧರಿಸಿ ಶುಭವಾಗಲಿದೆ
  • ಅಧಿಕಾರದ ಭಯದಿಂದ ಸ್ಥಾನ ಚ್ಯುತಿಯಾಗಬಹುದು
  • ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸಗಳಿಸಿ
  • ಇಷ್ಟದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment