ಆಸ್ತಿ, ಕಾರು, ಒಡವೆ ಖರೀದಿಗೆ ಒಳ್ಳೆಯ ದಿನ, ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ.. ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನೀವು ನೀವಾಗಿರಬೇಕೆ ಹೊರತು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ
  • ಕಾನೂನಾತ್ಮಕವಾದ ವಿಷಯಗಳು ಎದುರಾದರೆ ಈ ದಿನ ಸುಮ್ಮನಿರುವುದು ಒಳಿತು
  • ಮನೆಯ ನವೀಕರಣ ಮತ್ತು ಆಭರಣ ಖರೀದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನೀವು ನೀವಾಗಿರಬೇಕೆ ಹೊರತು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ
  • ಆರೋಗ್ಯದ ದೃಷ್ಟಿಯಿಂದ ಮೂಳೆ, ನರಕ್ಕೆ ಸಂಬಂಧಿಸಿದ ತೊಂದರೆ ಕಾಡಬಹುದು ತಾತ್ಸಾರ ಬೇಡ
  • ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ವ್ಯವಹಾರ ನಡೆಯುವುದರಿಂದ ಯಶಸ್ಸು
  • ಇಂದು ಎರಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಲು ಪ್ರಯತ್ನಿಸಬೇಡಿ ಸೋಲಾಗಬಹುದು
  • ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾಗುವ ಕೆಲವು ಸಾಮಗ್ರಿಗಳನ್ನು ಹೆಚ್ಚು ಹಣಕೊಟ್ಟು ಖರೀದಿಸಬಹುದು
  • ದುರ್ಗಾದೀಪ ನಮಸ್ಕಾರ ಮಾಡಿ

ವೃಷಭ

publive-image

  • ಕಾನೂನಾತ್ಮಕವಾದ ವಿಷಯಗಳು ಎದುರಾದರೆ ಈ ದಿನ ಸುಮ್ಮನಿರುವುದು ಒಳಿತು
  • ಆರೋಗ್ಯವಾಗಿದ್ದವರು ಸೂರ್ಯ ನಮಸ್ಕಾರ ಮಾಡಿ
  • ಆಸ್ತಿ ಖರೀದಿ ಅಥವಾ ಮಾರಾಟದಿಂದ ಲಾಭವಾಗಬಹುದು
  • ನಿಮ್ಮ ಜೀವನದಲ್ಲಿ ಸತ್ಯ ಸಾಧನೆ ಮತ್ತು ಸತ್ಯ ಶೋಧನೆ ಮುಖ್ಯವಾಗುತ್ತದೆ
  • ರಮಣ ಮಹರ್ಷಿಗಳು, ರಾಮ ಕೃಷ್ಣ ಪರಮಹಂಸರ ಜೀವನ ಚರಿತ್ರೆ ಓದಿ
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಮನೆಯ ನವೀಕರಣ ಮತ್ತು ಆಭರಣ ಖರೀದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ಸಾಧ್ಯತೆ
  • ಆತುರಾತುರದಿಂದ ಏನಾದರೂ ಮಾಡಿದರೆ ತಪ್ಪಾಗಿ ತೊಂದರೆಯಾಗುವ ಸಾಧ್ಯತೆಗಳಿವೆ
  • ಬೇರೆಯವರನ್ನು ನೋಡಿ ಹಣ ಹೂಡಿಕೆ ಮಾಡಲು ಮುಂದಾಗಿ ನಷ್ಟ ಸಾಧ್ಯತೆ
  • ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗೆ ಮುಂದಾಗಿರಿ
  • ರಕ್ತದೊತ್ತಡ ಇರುವವರು ತಮ್ಮ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
  • ಜನರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
  • ದೇವಿಯನ್ನು ಆರಾಧಿಸಿ

ಕಟಕ

publive-image

  • ಹೃದ್ರೋಗಕ್ಕೆ ಒಳಗಾಗಿರುವವರು ತುಂಬಾ ಜಾಗ್ರತೆವಹಿಸಿ, ಆರೋಗ್ಯದ ಬಗ್ಗೆ ತಾತ್ಸಾರ ಬೇಡ
  • ವ್ಯವಹಾರದಲ್ಲಿ ನಿಮ್ಮ ಬುದ್ಧಿವಂತಿಕೆಯಿಂದ ಕೆಲಸಗಳಾಗುತ್ತವೆ
  • ಹಳೇ ಆರೋಗ್ಯ, ನೋವಿರುವವರಿಗೆ ತೊಂದರೆ ಸಾಧ್ಯತೆ
  • ಉತ್ತಮ ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಇದೆ ಎಚ್ಚರ
  • ಏನನ್ನಾದರು ಖರೀದಿಸಲು ಇಚ್ಛೆ ಇದ್ದರೆ ನಿಮ್ಮ ಜೊತೆ ಸರಿಯಾದವರನ್ನು ಕರೆದುಕೊಂಡು ಹೋಗಿ
  • ಅಂಬಾಭವಾನಿಯನ್ನು ಆರಾಧಿಸಿ

ಸಿಂಹ

publive-image

  • ನಿಮ್ಮ ಆಲಸ್ಯದಿಂದ ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆ ಮುಂದೂಡಬಹುದು
  • ಕೆಲಸವನ್ನು ನಾಳೆಗೆ ಮುಂದೂಡಿದರೆ ನಷ್ಟ ಸಾಧ್ಯತೆ
  • ಉದ್ಯೋಗದಲ್ಲಿ ನಿಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಹೆಚ್ಚಾಗಬಹುದು
  • ನೌಕರಿಯ ಭದ್ರತೆಯ ಬಗ್ಗೆ ಸಮಾಧಾನವಿರುತ್ತದೆ
  • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ

ಕನ್ಯಾ

publive-image

  • ಇಂದು ವಿದ್ಯಾರ್ಥಿಗಳು ಆಲಸ್ಯ ಮಾಡಬೇಡಿ
  • ಕೆಲವರಿಗೆ ಇಂದು ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಡಬಹುದು ಎಚ್ಚರ
  • ಇಂದು ಮಕ್ಕಳಿಗೆ ಸಿಹಿ ತಿಂಡಿ ಕೊಡಿಸಿ
  • ನಿಮ್ಮ ವರ್ತನೆ, ಸ್ವಭಾವ ಕುಟುಂಬ ಮತ್ತು ಬಂಧುಗಳಿಗೆ ಇಷ್ಟವಾಗುವುದಿಲ್ಲ
  • ಅನಾರೋಗ್ಯಪೀಡಿತರಾಗಿದ್ದರೆ ಸೂರ್ಯ ನಮಸ್ಕಾರ ಮಾಡಬೇಡಿ
  • ಸೂರ್ಯನನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ದುಬಾರಿ ವಸ್ತುಗಳ ಬಗ್ಗೆ ಚರ್ಚೆ ಮಾಡಿ ಅನಾವಶ್ಯಕ ಕಾಲಾಹರಣವಾಗಬಹುದು
  • ಹಿರಿಯರ, ಸಾಧು-ಸಂತರ ಮಾರ್ಗದರ್ಶನ ಪಡೆದು ನಿಮ್ಮ ಸ್ವಭಾವವನ್ನು ಬದಲಿಸಿಕೊಂಡರೆ ಒಳ್ಳೆಯದು
  • ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಕೆಲಸಗಳನ್ನು ಪೂರೈಸುತ್ತೀರಿ
  • ಕುಟುಂಬದಲ್ಲಿ ಉತ್ತಮ ವಾತಾವರಣ ಇರುತ್ತದೆ
  • ನವಗ್ರಹರನ್ನು ಪ್ರಾರ್ಥಿಸಿ

ವೃಶ್ಚಿಕ

publive-image

  • ಆರೋಗ್ಯದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡರು ತಕ್ಷಣ ವೈದ್ಯರ ಭೇಟಿ ಮಾಡಿ
  • ಮಕ್ಕಳಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ಆಪತ್ತಿನಲ್ಲಿರುವ ನಿಮ್ಮನ್ನು ಜನ ಕಾಪಾಡಬಹುದು
  • ನಿಮ್ಮ ಜೊತೆ ಭಿನ್ನಾಭಿಪ್ರಾಯ ಹೊಂದಿದವರು ಇಂದು ಸುಮ್ಮನಾಗುತ್ತಾರೆ
  • ನಿಮ್ಮ ವರ್ತನೆ, ಸ್ವಭಾವ ಬದಲಿಸಿಕೊಂಡರೆ ಪ್ರೀತಿ, ಅಭಿಮಾನ ಸಿಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು 

publive-image

  • ನಿಮ್ಮ ಬಗ್ಗೆ ಜನರ ಬೆಂಬಲ, ಪ್ರೀತಿ ಕಂಡು ನಿಮಗೆ ಅಚ್ಚರಿಯಾಗಬಹುದು
  • ಉದ್ಯೋಗದಲ್ಲಿ ತಂತ್ರಗಾರಿಕೆ ಬದಲಾಯಿಸುವುದರಿಂದ ಹಿನ್ನಡೆ ಸಾಧ್ಯತೆ
  • ನಿಮ್ಮ ಅಶಿಸ್ತಿನಿಂದ ಹಣ ಕೊಡುವುದನ್ನ ಕಡಿಮೆ ಮಾಡಬಹುದು
  • ವಿದ್ಯಾರ್ಥಿಗಳಿಗೆ ಪಾಕೆಟ್ ಮನಿ ನಿಂತು ಹೋಗುವ ಸಾಧ್ಯತೆ
  • ನಿಮ್ಮ ನೌಕರಿಯ ಬಗ್ಗೆ ಹೆಚ್ಚು ಗಮನ ನೀಡದೆ ಇದ್ದರೆ ತೊಂದರೆ ಸಾಧ್ಯತೆ
  • ಲಕ್ಷ್ಮಿನಾರಾಯಣನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಸರಿಯಾಗಿ ಚಿಂತನೆ ಮಾಡಿ
  • ಗೃಹ ನಿರ್ವಹಣೆ ಮಾಡುವವರು ಶಿಸ್ತಿನ ಜೀವನ ನಡೆಸಬೇಕು
  • ನಿಮ್ಮ ಕೆಲಸದ ಒತ್ತಡದಿಂದ ಕುಟುಂಬ ಸದಸ್ಯರನ್ನು ನಿರ್ಲಕ್ಷ್ಯ ಮಾಡಬೇಡಿ
  • ಇಂದು ನಿರೀಕ್ಷೆ ಮೀರಿದ ಆದಾಯದ ದಿನ ಸಾಧ್ಯತೆ
  • ಭವಾನಿ ದೇವಿಯನ್ನು ಪ್ರಾರ್ಥಿಸಿ

ಕುಂಭ

publive-image

  • ಇಂದು ಬರಿ ಮಾತಿನ ಭರವಸೆ ಮಾತ್ರ ನೀಡಿದರೆ ಅವಮಾನ ಸಾಧ್ಯತೆ
  • ನೀವು ಯಾವ ಕೆಲಸವನ್ನ ಸಮರ್ಪಕವಾಗಿ ನಿಭಾಯಿಸಬಲ್ಲಿರೋ ಅಂತ ಕೆಲಸ ಮಾತ್ರ ಮಾಡಿ
  • ನಿಮಗಿರುವ ಜನ ಬೆಂಬಲ, ಶಕ್ತಿ ಸಾಮರ್ಥ್ಯದ ಬಗ್ಗೆ ಇಂದು ಜನರೇ ಮನದಟ್ಟು ಮಾಡಬಹುದು
  • ಸರಿಯಾದ ಮಾನಸಿಕ ಸಿದ್ಧತೆ ಇಲ್ಲದೆ ಪ್ರಯಾಣ ಮುಂದೂಡಿ ನಷ್ಟ ಸಾಧ್ಯತೆ
  • ಮೃತ್ಯುಂಜಯನನ್ನು ಪ್ರಾರ್ಥಿಸಿ

ಮೀನ 

publive-image

  • ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಸಿಗುವ ಸಾಧ್ಯತೆ
  • ಅಪರಿಚಿತ ವ್ಯಕ್ತಿಗಳ ಜೊತೆ ಮಾತನಾಡುವಾಗ ಹಲ್ಲೆಗೆ ಒಳಗಾಗುವ ಸಾಧ್ಯತೆ ಇದೆ
  • ಇಂದು ಮಾನಸಿಕ ಅತೃಪ್ತಿ ಕಾಡಬಹುದು
  • ಕೆಲಸದ ನಿಮಿತ್ತವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು
  • ನಿಮ್ಮ ಶಿಸ್ತುಬದ್ಧ ಜೀವನದ ಕೊರತೆಯಿಂದ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಗುವ ಸಾಧ್ಯತೆ, ಗಮನವಿರಲಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment