ಇಂದು ಚೀಟಿ ವ್ಯವಹಾರ, ಸಾಲದ ವಹಿವಾಟು ಬೇಡ, ದೂರದ ಪ್ರಯಾಣ ಮಾಡ್ಬೇಡಿ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಮನೆಯಲ್ಲಿ ಶಿಸ್ತಿನ ವಾತಾವರಣ ಕಾಪಾಡಿಕೊಳ್ಳುವುದು ಬಹಳ ಮುಖ್ಯ
  • ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ
  • ಹೊರಗೆ ಸೇವಿಸಿದ ಆಹಾರದಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಮನೆಯಲ್ಲಿ ಶಿಸ್ತಿನ ವಾತಾವರಣವನ್ನ ಕಾಪಾಡಿಕೊಳ್ಳುವುದು ಬಹಳ ಮುಖ್ಯ
  • ಮಾನಸಿಕವಾಗಿ ವ್ಯತ್ಯಯಗಳು ಉಂಟಾಗುವ ದಿನವಾಗಿದೆ
  • ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ
  • ನಿಮ್ಮ ಕುಟುಂಬದ ಕಡೆ ಗಮನ ಕೊಡಿ
  • ಇಂದು ವಿದ್ಯಾರ್ಥಿಗಳು ಓದುವ ಕಡೆ ಗಮನ ಹರಿಸಬೇಕು
  • ಕುಟುಂಬ ಸದಸ್ಯರ ಕಡೆ ಗಮನ ಕೊಡದೆ ಅವರ ಕೆಂಗಣ್ಣಿಗೆ ಗುರಿಯಾಗಬಹುದು
  • ಮನಸ್ಸು ಏಕಾಗ್ರತೆಯಿಂದ ಕೆಲಸ ಮಾಡಿದರೆ ಒಳಿತು
  • ಆರೋಗ್ಯದ ಬಗ್ಗೆ ಅತಿ ಹೆಚ್ಚು ಜಾಗ್ರತೆವಹಿಸಿ

ವೃಷಭ

publive-image

  • ಕೆಲಸದ ಒತ್ತಡ, ಮಾನಸಿಕ ಒತ್ತಡ, ದೈಹಿಕ ತೊಂದರೆ ಕಾಡುವ ದಿನವಾಗಿದೆ
  • ಇಂದು ಹಣ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ
  • ಬೇರೆಯವರ ಸಮಸ್ಯೆ ಪರಿಹರಿಸುವಲ್ಲಿ ಮಗ್ನರಾಗಿರುತ್ತೀರ
  • ಈ ದಿನ ಒಂದೇ ರೀತಿ ಇರಲು ಪ್ರಯತ್ನಿಸಿ
  • ಇಂದು ನಿಮಗೆ ಸಮಾಧಾನ, ಬೇಸರದಿಂದ ಕೂಡಿರುತ್ತೆ
  • ಹೊರಗೆ ಸೇವಿಸಿದ ಆಹಾರದಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ
  • ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ
  • ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
  • ಗಣಪತಿಯನ್ನು ಆರಾಧಿಸಿ

ಮಿಥುನ

publive-image

  • ಸಂಬಂಧಿಕರಲ್ಲಿ ಸೈದ್ಧಾಂತಿಕವಾದ ವಿಚಾರಕ್ಕೆ ನಿಷ್ಠೂರವನ್ನು ಮಾಡಿಕೊಳ್ಳಬೇಡಿ
  • ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹೇರಿ ಅಪಹಾಸ್ಯಕ್ಕೆ ಈಡಾಗಬಹುದು ಎಚ್ಚರ
  • ಮನೆಯಲ್ಲಿ ಹೆಂಡತಿ, ಮಕ್ಕಳು ದೂಷಣೆ ಮಾಡುವ ಸಾಧ್ಯತೆ ಇದೆ
  • ಈ ದಿನ ನೀವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದಕ್ಕೆ ಪ್ರಯತ್ನಿಸುತ್ತೀರಿ
  • ಅತಿಯಾದ ಕೆಲಸದ ಒತ್ತಡದಿಂದ ಆಯಾಸವಾಗಬಹುದು
  • ಈ ದಿನ ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಿ
  • ಸಮಯದ ಬಗ್ಗೆ ತಾತ್ಸಾರ ಇರುವವರು ಅವಕಾಶವಂಚಿತರಾಗುವ ಸಾಧ್ಯತೆ ಇದೆ
  • ಸದ್ಗುರು ಶ್ರೀಧರ ಸ್ವಾಮಿಗಳನ್ನು ಪ್ರಾರ್ಥಿಸಿ

ಕಟಕ

publive-image

  • ವಿದ್ಯಾರ್ಥಿಗಳು ಪರಸ್ಪರ ಜಗಳಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ
  • ಇಂದು ನೀವು ನಿಮ್ಮ ಕೆಲಸದಲ್ಲಿ ಒಂಟಿಯಾಗಬಹುದು
  • ಈ ದಿನ ಮನಸ್ಸನ್ನು ಹಗುರ ಮಾಡಿಕೊಂಡರೆ ಒಳಿತು
  • ಮಕ್ಕಳಿಗೆ ಮೊದಲು ಯಾವುದು ಸರಿ ತಪ್ಪು ಅನ್ನೋ ತಿಳುವಳಿಕೆ ನೀಡಿ
  • ಸಾಲದ ವಹಿವಾಟು ಈ ದಿನ ಬೇಡ
  • ಚೀಟಿ ವ್ಯವಹಾರ ಮಾಡುವವರು ಜಾಗ್ರತೆ ವಹಿಸಿ
  • ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಿ
  • ಶಿವನನ್ನು ಆರಾಧಿಸಿ

ಸಿಂಹ

publive-image

  • ವ್ಯಾಪಾರ- ವ್ಯವಹಾರಗಳಲ್ಲಿ, ಹಣಕಾಸಿನ ವಿಚಾರದಲ್ಲಿ ಶುಭ ದಿನವಾಗಿದೆ
  • ಇಂದು ಆಭರಣಗಳ ಖರೀದಿಯಿಂದ ಕುಟುಂಬದವರು ಸಂತೋಷವಾಗಿರುವ ದಿನ
  • ಕಳಂಕರಹಿತವಾದ ಕೆಲಸಕ್ಕೆ ಇವರ ಮಾರ್ಗದರ್ಶನ ಪಡೆದುಕೊಳ್ಳುವುದರಿಂದ ಒಳಿತಾಗುತ್ತದೆ
  • ಸ್ವಲ್ಪ ಸಮಯ ಧ್ಯಾನ ಮಾಡುವುದರಿಂದ ಸಂತೋಷವಾಗಿರುತ್ತೀರಿ
  • ಉತ್ತಮರಾದವರು, ಶ್ರೇಷ್ಠರಾದವರು, ಸಾಧನೆ ಮಾಡಿರುವ ವ್ಯಕ್ತಿಗಳ ಸಂಪರ್ಕ ಆಗಲಿದೆ
  • ಕುಲದೇವರನ್ನು ಸ್ಮರಿಸಿ

ಕನ್ಯಾ

publive-image

  • ಅವಿವಾಹಿತರಿಗೆ ಇಂದು ಶುಭಸೂಚನೆ ಪ್ರಯತ್ನಿಸಿ
  • ದೂಷಿಸುವರನ್ನ ಹೊಗಳುವುದರಿಂದ ಕುಟುಂಬ ಸದಸ್ಯರ ಕೆಂಗಣ್ಣಿಗೆ ಗುರಿಯಾಗುತ್ತೀರಿ
  • ಬಹಳ ದಿನದ ಆಸೆಯೊಂದು ಈ ದಿನ ನೆರವೇರುವ ಸಾಧ್ಯತೆ ಇದೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಾಗಿದೆ
  • ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ವರ್ತನೆಯಿಂದ ಮನಸ್ಸಿಗೆ ನೋವಾಗಬಹುದು
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಕುಟುಂಬದವರು ಬೇರೆಯವರಿಂದ ನಿಮಗೆ ತಿಳುವಳಿಕೆ ಹೇಳಿಸುವ ಪ್ರಯತ್ನವಾಗಿರುತ್ತದೆ
  • ಸಾಯಂಕಾಲದ ವೇಳೆಗೆ ಕಹಿಸುದ್ಧಿಯಿಂದ ಮನಸ್ಸಿಗೆ ಬೇಸರವಾಗುವ ದಿನ
  • ಈ ರಾಶಿಯ ಸ್ತ್ರೀಯರು ಹೆಚ್ಚು ಹಣ ನೀಡಿ ದುಬಾರಿ ಪದಾರ್ಥಗಳನ್ನು ಖರೀದಿಸುವ ದಿನವಾಗಿದೆ
  • ನೀವು ನಿಮ್ಮ ಕಾರ್ಯ ಬೇರೆಯವರಿಗೆ ವಹಿಸುವುದರಿಂದ ನೀವು ನಷ್ಟವನ್ನು ಹೊಂದುವ ದಿನವಾಗಿರುತ್ತದೆ
  • ಈ ನಷ್ಟದಿಂದ ನೀವು ದಂಡ ಕಟ್ಟಬೇಕಾಗಬಹುದು
  • ವಿಶೇಷವಾಗಿ ಚಾಲಕರಿಗೆ ಶುಭದಿನ
  • ಸ್ತ್ರೀಯರು ಚಾಲಕರಾಗಿದ್ದರೆ ಅವರಿಗೆ ವಿಶೇಷ ಗೌರವ ಸಿಗುವ ದಿನವಾಗಿದೆ
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ವೃಶ್ಚಿಕ

publive-image

  • ಕೈಯಲ್ಲಿ ಹೆಚ್ಚು ಹಣ ಓಡಾಡುವ ದಿನವಾಗಿದೆ
  • ಬೇರೆಯವರಿಗೆ ಒಳ್ಳೆಯದನ್ನ ಮಾಡಬೇಕೆಂಬ ಮನಸ್ಥಿತಿ ಉಂಟಾಗುತ್ತದೆ
  • ಎಲ್ಲರನ್ನೂ ನೀವು ಸಂತೋಷ ಪಡಿಸುತ್ತೀರಿ ಅದಕ್ಕೆ ಉತ್ತಮವಾದ ಪ್ರಶಂಸೆ ಸಿಗುತ್ತದೆ
  • ನಿಮ್ಮ ತಂದೆ-ತಾಯಿಯನ್ನು ಗೌರವ, ಸಂತೋಷದಿಂದ ನೋಡಿಕೊಳ್ಳಿ
  • ನಿಮ್ಮ ಯೋಜನೆಗಳಿಂದ ಬೇರೆಯವರಿಗೆ ಉಪಕಾರವಾದರೆ ನಿಮಗೆ ನಷ್ಟವಾಗುವ ಸಂಭವವಿದೆ
  • ಸಾಯಿ ಬಾಬಾರನ್ನು ಪ್ರಾರ್ಥಿಸಿ

ಧನಸ್ಸು 

publive-image

  • ಮನೆಯವರ ಒತ್ತಡಕ್ಕೆ ಮಣಿದು ಹೊಸ ವಾಹನ ಖರೀದಿಸಲು ಮುಂದಾಗಬಹುದು
  • ಇಂದು ರಾಜಕೀಯ ವ್ಯಕ್ತಿಗಳಿಗೆ ಶುಭದಿನ
  • ಕುಟುಂಬದವರಿಗೆ, ಸಂಬಂಧಿಕರಿಗೆ, ನಿಮ್ಮ ಜೊತೆ ಕೆಲಸ ಮಾಡುವವರಿಗೆ ವಿಶೇಷವಾದ ಉಡುಗೊರೆ ಕೊಡುತ್ತೀರಿ
  • ಅವಿವಾಹಿತರಿಗೆ ನೀವು ಮದುವೆಯನ್ನು ಮಾಡಿಸುವ ಭರವಸೆಯನ್ನು ನೀಡುತ್ತೀರಿ
  • ಇದೇ ಯೋಚನೆಯಲ್ಲಿ ದಿನಕಳೆಯುವ ಸ್ಥಿತಿ ಉಂಟಾಗಬಹುದು
  • ಶ್ರೀಕೃಷ್ಣನನ್ನು ಪ್ರಾರ್ಥಿಸಿ

ಮಕರ

publive-image

  • ಹೆಚ್ಚಿನ ವಿಚಾರ ಸಂಗ್ರಹಕ್ಕಾಗಿ ಅಧ್ಯಯನದ ಕಡೆಗೆ ಹೆಚ್ಚು ಗಮನ ಸಾಧ್ಯತೆ
  • ಇಂದು ಹುಳಿ ಪದಾರ್ಥ ಸೇವಿಸಬೇಡಿ ಆರೋಗ್ಯದ ಕಡೆ ಗಮನವಿರಲಿ
  • ತಂದೆ-ತಾಯಿ ಸಂತೋಷವಾಗಿದ್ದರೆ ನಿಮ್ಮ ಕಾರ್ಯ ಸದಾ ಯಶಸ್ಸಿನದಾಗಿರುತ್ತದೆ
  • ಇದರಿಂದ ನಿಮಗೂ, ಕುಟುಂಬದವರಿಗೂ ಸಂತೋಷವಾಗುವ ದಿನ
  • ನಿಮ್ಮ ಕರ್ತವ್ಯ ನಮ್ಮ ಧರ್ಮದ ಬಗ್ಗೆ ನ್ಯಾಯವನ್ನು ಒದಗಿಸುವ ನಡವಳಿಕೆ ಇರುತ್ತದೆ
  • ಶ್ರೀಲಕ್ಷ್ಮಿಯನ್ನು ಪ್ರಾರ್ಥಿಸಿ

ಕುಂಭ

publive-image

  • ಶಾಶ್ವತವಾದ, ಗೌರವವನ್ನ, ಅಂತಸ್ತನ್ನು ಹೆಚ್ಚಿಸುವ ಕೆಲಸ ಇದರಿಂದಾಗುತ್ತದೆ
  • ಮನೆಯ ಸದಸ್ಯರ ಮೇಲೆ ಸ್ನೇಹಿತರಿಗೆ,ಸಂಬಂಧಿಕರಿಗೆ ಒಳ್ಳೆಯ ಅಭಿಪ್ರಾಯವಿರುವುದಿಲ್ಲ
  • ಸಾಯಂಕಾಲದ ವೇಳೆಗೆ ಎದೆನೋವು ಕಾಣಿಸಿಕೊಳ್ಳಬಹುದು ಜಾಗ್ರತೆವಹಿಸಿ
  • ನಿಮ್ಮ ಪ್ರಾಮಾಣಿಕ ಹಾಗೂ ಶಿಸ್ತುಬದ್ಧ ಕೆಲಸವನ್ನು ಗಮನಿಸಿ, ಮೇಲಾಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಬಹುದು
  • ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವಂತಹ ದಿನವಾಗಿದೆ
  • ತಂದೆ-ತಾಯಿಯನ್ನು ಪ್ರಾರ್ಥಿಸಿ

ಮೀನ 

publive-image

  • ಹೊಟ್ಟೆಗೆ ಸಂಬಂಧಪಟ್ಟ ಅನಾರೋಗ್ಯ ಈ ದಿನ ಹೆಚ್ಚಾಗಿ ಕಾಡತ್ತೆ ಗಮನಹರಿಸಿ
  • ನಿಮಗೆ ನಂಬಿಕೆ ಇರುವ ವ್ಯಕ್ತಿಯೊಂದಿಗೆ ಮಾತ್ರ ವಿಷಯವನ್ನ ಚರ್ಚಿಸಿ
  • ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಿಂದ ಒತ್ತಡ, ಆತಂಕ ನಿಮ್ಮನ್ನು ಕಾಡಬಹುದು
  • ನೀವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ವಹಿಸಬೇಡಿ
  • ವಿದ್ಯಾರ್ಥಿಗಳಿಗೆ ತುಂಬಾ ಒತ್ತಡದ ದಿನವಾಗಿರುತ್ತದೆ
  • ಮದುವೆ ವಿಚಾರದಿಂದ ನಿಮ್ಮ ಮನಸ್ಸಲ್ಲಿ ಗೊಂದಲಗಳು ಉಂಟಾಗುವ ದಿನ
  • ಮಾರುತಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment