ಈ ರಾಶಿಯವರಿಗೆ ಇಂದು ಎಚ್ಚರಿಕೆ.. ಪ್ರೇಮಿಗಳ ಮಧ್ಯೆ ಬಿರುಕು; ಇಲ್ಲಿದೆ ನಿಮ್ಮ ಭವಿಷ್ಯ..!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಕೊನೆಗೆ ಕಾನೂನಿನ ಮೊರೆ ಹೋಗುವ ಸಾಧ್ಯತೆಗಳು ಇದೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೆ ಗೌರವ ದೊರೆಯುವ ದಿನ
  • ನಿಮಗೆ ಶಾಶ್ವತವಾದ ಗೌರವ ಅನ್ನೋ ಭಾವನೆ ಬರುವ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ದೊಡ್ಡವರ, ತಂದೆಯವರ ಮಾರ್ಗದರ್ಶನ ಉತ್ತಮವಾಗಿ ದೊರೆಯುತ್ತದೆ
  • ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎಚ್ಚರಿಕೆ
  • ಇದು ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುವಂತದ್ದು
  • ವಿದ್ಯಾರ್ಥಿಗಳು ಕೆಲಸದಲ್ಲಿ ತುಂಬಾ ಆತುರವಾಗಿ ಮುಂದುವರೆಯುವುದರಿಂದ ಯಶಸ್ಸಿಗೆ ಅಡ್ಡಿ ಉಂಟಾಗಬಹುದು
  • ಜನರು ನಿಮ್ಮ ದೌರ್ಬಲ್ಯಗಳನ್ನು ಅಸ್ತ್ರವನ್ನಾಗಿಟ್ಟುಕೊಂಡು ನಿಮಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ
  • ಇಂದು ಸ್ತ್ರೀಯರಿಗೆ ಅನುಕೂಲಕರವಾದ ದಿನ
  • ಈ ದಿನ ಖರೀದಿಗೆ ಹೆಚ್ಚು ಅವಕಾಶಗಳಿವೆ
  • ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರಿಕೆ
  • ಮನೆ ದೇವರನ್ನು ಪ್ರಾರ್ಥಿಸಿ

ವೃಷಭ

publive-image

  • ಈ ರಾಶಿಯ ನೌಕರರಿಗೆ ಕಿರಿ ಕಿರಿ ಉಂಟಾಗುವ ದಿನ
  • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಗೊಳ್ಳುವ ಸಾಧ್ಯತೆ
  • ಮಾನಸಿಕ ಸಮಾಧಾನ ಮುಖ್ಯವಾಗಿರುತ್ತದೆ
  • ಅಕ್ಕ ಪಕ್ಕದವರ ಜೊತೆ ಜಗಳ ಮಾಡಬೇಡಿ
  • ಇಂದು ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಯಶಸ್ಸು ನಿಮ್ಮದಾಗಿರುತ್ತದೆ
  • ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು ಅವರನ್ನು ಗೌರವಿಸಿ
  • ಇಂದು ನಿಮಗೆ ತುಂಬಾ ತಾಳ್ಮೆ ಇರಬೇಕು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ಮಿಥುನ

publive-image

  • ಕುಟುಂಬದಲ್ಲಿ ಮೊದಲಿನಿಂದಲೂ ನಡೆಸಿಕೊಂಡು ಬಂದಿರುವ ವ್ಯಾಪಾರ, ವ್ಯವಹಾರದಲ್ಲಿ ಲಾಭ ದೊರಕುವ ದಿನ
  • ಬೇರೆಯವರು ಏನೇನೋ ಮಾತಾಡಿಕೊಳ್ಳುತ್ತಾರೆಂದು ನಿಮ್ಮ ಕೆಲಸಕ್ಕೆ ಅಡ್ಡಿ ಮಾಡಿಕೊಳ್ಳಬೇಡಿ
  • ಹೊಸ ವ್ಯಾಪಾರ ಪ್ರಾರಂಭಿಸುವ ಮುಂಚೆ ಯೋಚಿಸಿ ನಿರ್ಧಾರ ಮಾಡಿ
  • ನಿಧಾನವಾಗಿ ಯೋಚನೆ ಮಾಡಿ ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ
  • ಇದರಿಂದ ನಿಮ್ಮ ಮನಸ್ಸಿಗೆ ಆನಂದವಾಗುತ್ತದೆ
  • ಭೂ ವ್ಯವಹಾರ ಮಾಡುವವರಿಗೆ ಸಾಯಂಕಾಲ ಶುಭವಾಗಲಿದೆ
  • ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳ ಮಾಡಿಕೊಳ್ಳಬೇಡಿ
  • ದುರ್ಗಾದೇವಿಯನ್ನು ಆರಾಧಿಸಿ

ಕಟಕ

publive-image

  • ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದವರನ್ನು ದ್ವೇಷಿಸಬೇಡಿ
  • ಅವರಿಂದ ಅಂತರವನ್ನು ಕಾಯ್ದುಕೊಳ್ಳಿ
  • ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಾರ್ತೆ
  • ತುಂಬಾ ಅಗತ್ಯವಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆ ಮಾಡಿ
  • ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚಿಸಲಿದೆ
  • ಕೆಲಸದ ಸ್ಥಳದಲ್ಲಿ ನಿಮಗೆ ಸಣ್ಣ ಪುಟ್ಟ ಅಡ್ಡಿಯಾದ್ರೂ ಆತಂಕ ಪಡಬೇಕಾಗಿರುವುದಿಲ್ಲ
  • ಈ ದಿನ ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸುವವರು ಮಧ್ಯಾಹ್ನದ ನಂತರ ಮಾಡಿಸಿ
  • ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ

ಸಿಂಹ

publive-image

  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ರಕ್ತದೊತ್ತಡ ಸಮಸ್ಯೆಯಿರುವವರು ಜಾಗ್ರತೆಯಿಂದಿರಿ
  • ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಅಡಚಣೆಯಾಗಬಹುದು
  • ನಿಧಾನವಾಗಿ ಯೋಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
  • ವ್ಯಾವಹಾರಿಕವಾಗಿ, ಉದ್ಯೋಗಿಕವಾಗಿ ಸ್ವಲ್ಪ ನಷ್ಟವನ್ನು ಅನುಭವಿಸುವ ದಿನ
  • ಆಲಸ್ಯ ತೋರಿಸಬಾರದು, ನಿಮ್ಮ ಕೆಲಸಕ್ಕೆ ಸಂಬಂಧಿಸಿದ ನಿಮ್ಮ ಅಹವಾಲನ್ನು ಸ್ವೀಕರಿಸಿ
  • ನಿಮ್ಮ ಕೆಲಸಕ್ಕೆ ಭರವಸೆ ನೀಡುವ ಕೆಲಸಗಳು ನಡೆಯುತ್ತದೆ
  • ಕೆಲಸದಲ್ಲಿ ಉತ್ತೇಜನ ಬರುತ್ತದೆ ಹಾಗೆ ಮುಂದುವರೆಸಿಕೊಂಡು ಶುಭಫಲವನ್ನು ನಿರೀಕ್ಷಿಸುತ್ತೀರಿ
  • ಪಾರ್ವತಿ ದೇವಿಯನ್ನು ಆರಾಧಿಸಿ

ಕನ್ಯಾ

publive-image

  • ಈ ರಾಶಿಯವರಿಗೆ ತಲೆನೋವು ಮಾನಸಿಕ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ
  • ಪ್ರೇಮಿಗಳ ಮಧ್ಯೆ ಬಿರುಕು ಉಂಟಾಗುವ ದಿನ
  • ಪ್ರೀತಿಸಿ ಮದುವೆಯಾದ ದಂಪತಿಗಳ ಒಂದೇ ನಕ್ಷತ್ರ ಆಗಿದ್ರೆ ಜಗಳವನ್ನು ಮಾಡಿಕೊಳ್ಳುವ ಸಾಧ್ಯತೆ
  • ಕೊನೆಗೆ ಕಾನೂನಿನ ಮೊರೆ ಹೋಗುವ ಸಾಧ್ಯತೆಗಳು ಇದೆ
  • ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಇದೊಂದು ಸದಾವಕಾಶ
  • ವೈವಾಹಿಕ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು
  • ವಾದ-ವಿವಾದಗಳಿಗೆ ಅಥವಾ ಜಗಳಕ್ಕೆ ಪರಿಹಾರವಲ್ಲ
  • ಶಾಂತವಾಗಿ ನಿಮ್ಮ ಮನಸ್ಸು ಒಳ್ಳೆಯ ಮಾರ್ಗದತ್ತ ಮುಂದುವರೆಯಲಿ
  • ವೃದ್ಧ ದಂಪತಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಅವರ ಆಶೀರ್ವಾದ ಪಡೆಯಿರಿ
  • ವಿಷ್ಟು ಸಹಸ್ರನಾಮ ಶ್ರವಣ ಮಾಡಿ

ತುಲಾ

publive-image

  • ರಾಜಕೀಯ ವಿಚಾರದಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ತುಂಬಾ ಪ್ರೋತ್ಸಾಹ ಸಿಗುತ್ತದೆ
  • ಹಣದ ಅನುಕೂಲ ಆಗುವ ಸಾಧ್ಯತೆಗಳಿವೆ
  • ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಾ ಉನ್ನತ ವ್ಯಾಸಂಗ ಮಾಡಲು ಅವಕಾಶವಾಗುತ್ತದೆ
  • ಪದವೀಧರ ವಿದ್ಯಾರ್ಥಿಗಳಿಗೆ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆ
  • ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಸರಿಯಾದ ನಾಯಕರ ಮಾರ್ಗದರ್ಶನ ಪಡೆದು
  • ಮುಂದುವರೆದರೆ ಒಳಿತು
  • ಯಾವುದರ ದುರುಪಯೋಗವನ್ನು ಮಾಡಿಕೊಳ್ಳದೆ ಶುಭ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ
  • ನದಿ ತೀರದಲ್ಲಿರುವ ದೇವಿಯನ್ನು ಪ್ರಾರ್ಥಿಸಿ

ವೃಶ್ಚಿಕ

publive-image

  • ನಿಮ್ಮ ಪರವಾಗಿ ಬೇರೆಯವರು ಮಾತನಾಡಿದ್ರೆ ಕುಟುಂಬದ ಸದಸ್ಯರು ಸಿಟ್ಟಿನಿಂದ ವಿರೋಧ ವ್ಯಕ್ತಪಡಿಸುತ್ತಾರೆ
  • ವಿದೇಶ ಪ್ರಯಾಣಕ್ಕೆ ಪ್ರಯತ್ನಿಸುವವರಿಗೆ ಈ ದಿನ ಶುಭವಾಗಲಿದೆ
  • ಹಣದ ಕೊರತೆಯಾಗಬಹುದು ಸರಿಯಾದ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ
  • ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬಾರದು
  • ಅವಕಾಶವನ್ನು ಮುಂದಿಟ್ಟುಕೊಂಡು ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಇಂಜಿನಿಯರ್ಸ್​ ಮತ್ತು ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಶುಭಪ್ರದವಾದ ದಿನ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೆ ಗೌರವ ದೊರೆಯುವ ದಿನ
  • ಅದೃಷ್ಟಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬಂದ ಅನುಭವವಾಗುತ್ತದೆ
  • ತಾಯಿಯ ಕಡೆಯಿಂದ ಉತ್ತಮ ಬೆಂಬಲ ಮತ್ತು ಧನ ಸಹಾಯವಾಗುತ್ತದೆ
  • ನಿಮಗಿರುವ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿ ಅದಕ್ಕೆ ಗೌರವ ಲಭಿಸುತ್ತೆ
  • ಕಾರ್ಯಕ್ಷೇತ್ರದಲ್ಲಿ ಹಿರಿಯ ಆಧಿಕಾರಿಗಳ ಸಂಪೂರ್ಣ ಬೆಂಬಲ ಸಿಗುತ್ತದೆ
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಓದಬೇಕೆಂಬ ಹಂಬಲವಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮಗಿರುವ ಬದ್ಧತೆ ಮತ್ತು ಗೌರವವನ್ನು ಹೆಚ್ಚಿಸುವ ದಿನ
  • ಆರ್ಥಿಕವಾಗಿ ನಿಮಗೆ ಅನುಕೂಲವಿದೆ
  • ನೀವು ಎಲ್ಲ ಕೆಲಸಗಳನ್ನು ಮಾಡಲು ಸ್ಫೂರ್ತಿದಾಯಕವಾಗಿರುತ್ತದೆ
  • ಹಣಕ್ಕಿಂತ ಹೆಚ್ಚಾಗಿ ನಿಮ್ಮ ಕಾರ್ಯವೈಖರಿಯನ್ನು ಜನಮೆಚ್ಚಿ ಅಭಿನಂದಿಸುತ್ತಾರೆ
  • ನಿಮಗೆ ಶಾಶ್ವತವಾದ ಗೌರವ ಅನ್ನೋ ಭಾವನೆ ಬರುವ ದಿನ
  • ನಿಮ್ಮ ಮನಸ್ಸು ತುಂಬಾ ಮಾಧುರ್ಯ ಹೊಂದುವ ದಿನ
  • ಅದರಲ್ಲಿಯೂ ನಿಮ್ಮನ್ನು ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಜನಪ್ರಿಯತೆ ಗಳಿಸಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  •  ಸಹೋದರರ ಅಥವಾ ಬಂಧುಗಳ ಜೊತೆ ಹಳೆ ವಿಷಯಕ್ಕೆ ಜಗಳ ಮಾಡಿಕೊಂಡು ಮನಸ್ತಾಪ ಆಗುವ ಸಾಧ್ಯತೆ
  • ಕುಟುಂಬದ ಹೊರಗಿನ ವಿಚಾರದಲ್ಲಿ ಬೇರೆಯವರ ಸಲಹೆ ಪಡೆಯುವ ಅವಕಾಶವಿರುತ್ತದೆ
  • ಅದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
  • ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಿ
  • ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ವೈದ್ಯರ ಸಲಹೆ ಪಡೆಯಿರಿ
  • ಧ್ಯಾನ, ಯೋಗ, ವ್ಯಾಯಾಮ ಇತ್ಯಾಧಿಗಳಿಗೆ ಹೆಚ್ಚಿನ ಸಮಯವನ್ನು ಕೊಡಬೇಕು
  • ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಸಿಗುವ ದಿನ
  • ಮಹಾಕಾಳಿಯನ್ನು ಪ್ರಾರ್ಥಿಸಿ

ಮೀನ 

publive-image

  • ಮನೆಯಲ್ಲಿ ಹಲವು ವಿಷಯಗಳಿಗೆ ಭಿನ್ನಾಭಿಪ್ರಾಯಗಳಿರುತ್ತವೆ
  • ನಿಮ್ಮ ವೃತ್ತಿ ದೃಷ್ಟಿಯಿಂದ ಜನರಿಗೆ, ಸಮಾಜಕ್ಕೆ ಒಳ್ಳೆಯದು ಮಾಡಲು ಇದೊಂದು ಸದಾವಕಾಶ
  • ಜನರು ನಿಮ್ಮ ಕಡೆ ಆಕರ್ಷಣೆಗೆ ಒಳಗಾಗುತ್ತಾರೆ
  • ಆಹಾರದ ವೃತ್ಯಯದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳು ಕಾಣಬಹುದು ಜಾಗ್ರತೆ
  • ನಿಮ್ಮದೆ ಸ್ಥಳದಲ್ಲಿ ಹಾಗೂ ವಿದೇಶದಲ್ಲಿ ಕೆಲಸಕ್ಕೆ ಹೋಗುವ ಅವಕಾಶಗಳಿವೆ
  • ನಿಮ್ಮ ಪ್ರತಿಭೆ, ವಿಚಾರವಂತಿಕೆ ಪ್ರಕಾಶಪಡಿಸಲು ಸಹಾಯ ಸಿಗುತ್ತದೆ
  • ಸ್ನೇಹಿತರು ಬಂಧುಗಳು ನಿಮಗೆ ಪ್ರೀತಿ ವಿಶ್ವಾಸವನ್ನು ತೋರಿಸುತ್ತಾರೆ
  • ಎಲ್ಲಾ ದೃಷ್ಟಿಯಿಂದ ನಿಮಗೆ ಶುಭದಿನ
  • ಗುರು ಹಿರಿಯರನ್ನು ಗೌರವಿಸಿ, ಆಶೀರ್ವಾದ ಪಡೆಯಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment