ಉದ್ಯೋಗದಲ್ಲಿ ಕಿರಿಕಿರಿ, ಯಾರ ಮೇಲೆಯೂ ಅತಿಯಾದ ನಂಬಿಕೆ ಬೇಡ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಅಲಂಕಾರಿಕ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಬಹುದು
  • ಮಕ್ಕಳಿಗಾಗಿ ಖರ್ಚು ಅದರಿಂದ ಅಸಮಾಧಾನವಾಗಬಹುದು
  • ನಿಮ್ಮ ಗುಪ್ತಾಲೋಚನೆಗಳು ಹೇಗೋ ಬಹಿರಂಗವಾಗುತ್ತವೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ವ್ಯಾಪಾರ, ವ್ಯವಹಾರದಲ್ಲಿ ಲಾಭದ ದಿನ
  • ಅಲಂಕಾರಿಕ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಬಹುದು
  • ಮಕ್ಕಳಿಗಾಗಿ ಖರ್ಚು ಅದರಿಂದ ಅಸಮಾಧಾನವಾಗಬಹುದು
  • ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬಹುದು
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ವೃಷಭ

publive-image

  • ನಿಮ್ಮ ಗುಪ್ತಾಲೋಚನೆಗಳು ಹೇಗೋ ಬಹಿರಂಗವಾಗುತ್ತವೆ
  • ವಾಹನಕ್ಕಾಗಿ ಹಣ ಖರ್ಚಾಗಬಹುದು
  • ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
  • ಹೃದ್ರೋಗಿಗಳಿಗೆ ಸಮಸ್ಯೆಯಿದೆ ಎಚ್ಚರಿಕೆ ಇರಲಿ
  • ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಖಚಿತಪಡಿಸಬೇಕಾಗುತ್ತದೆ
  • ಇಂದು ನಿಮ್ಮ ಏಕಾಗ್ರತೆ ಮುಖ್ಯವಾಗಿ ಕೆಲಸ ಮಾಡುತ್ತದೆ
  • ಗಣಪತಿಗೆ ಗರಿಕೆ ಅರ್ಪಿಸಿ ಪ್ರಾರ್ಥನೆ ಮಾಡಿ

ಮಿಥುನ

publive-image

  • ಬುದ್ಧಿವಂತಿಕೆಯಿಂದ ನಿಮ್ಮ ಕೆಲಸಗಳಾಗುತ್ತವೆ
  • ಮನೆಯವರು ನಿಮ್ಮಿಂದ ಸಂತೋಷ ಪಡಬಹುದು
  • ಭಿನ್ನಾಭಿಪ್ರಾಯ ಇರುವವರನ್ನು ದೂರ ಮಾಡುತ್ತೀರಿ
  • ಕುಟುಂಬದ ಸಂತೋಷ, ಶಾಂತಿ ನಿಮಗೆ ಸಮಾಧಾನ ನೀಡುತ್ತದೆ
  • ಮಹಿಳೆಯರು ಖರೀದಿಯಲ್ಲಿ ಮಗ್ನರಾಗಿರಬಹುದು
  • ಮನೆಗೆ ಬೆಲೆಬಾಳುವ ವಸ್ತು ಬರಬಹುದು
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ನಿಮ್ಮ ಅಭಿಪ್ರಾಯದಿಂದ ಬೇರೆಯವರಿಗೆ ತೊಂದರೆಯಾಗಬಹುದು
  • ಈ ದಿನ ನೀವು ಕೆಲಸದಲ್ಲಿ ತೊಂದರೆ ಮಾಡಿಕೊಳ್ಳುತ್ತೀರಿ
  • ಹಣದ ಲೆಕ್ಕಾಚಾರದಿಂದ ನಿಷ್ಠೂರರಾಗಬಹುದು
  • ನಿದ್ದೆ ಇಲ್ಲದೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು
  • ನಿಮ್ಮ ವಾದ ನಿಮಗೆ ಸರಿ ಎನಿಸಬಹುದು ಆದರೆ ಒಳ್ಳೆಯದಲ್ಲ
  • ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಹಣದ ಓಡಾಟ ಮನಸ್ಸನ್ನು ವಿಚಲಿತಗೊಳಿಸಬಹುದು
  • ಶಿಸ್ತಿನ ಕೊರತೆ ಕೆಲಸಕ್ಕೆ ಅಡ್ಡಿ ಉಂಟು ಮಾಡಬಹುದು
  • ಸಾಯಂಕಾಲ ಮನೆಯಲ್ಲಿ ಜಗಳದ ಸೂಚನೆಯಿದೆ
  • ನಿಮ್ಮ ಸಲಹೆ ಮಾತು ಯಾರಿಗೂ ಅರ್ಥವಾಗುವುದಿಲ್ಲ
  • ಸಂತೋಷಕ್ಕಾಗಿ ಪ್ರಯತ್ನಿಸುತ್ತೀರಿ ಆದರೆ ವಿಫಲರಾಗಬಹುದು
  • ಜವಾಬ್ದಾರಿಯಿಂದ ವರ್ತಿಸಬೇಕಾದ ದಿನ
  • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ನಿಮ್ಮ ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ಸಿಗಲಿದೆ
  • ಹೊಸ ವ್ಯಾಪಾರದ ಆಸೆ ಇರುವವರಿಗೆ ಶುಭವಿದೆ
  • ಕೆಲಸದ ಒತ್ತಡದಿಂದ ಸಂಸಾರದ ಬಗ್ಗೆ ನಿರ್ಲಕ್ಷ್ಯ ಮಾಡಬಹುದು
  • ಆದಾಯ ಹೆಚ್ಚು, ಅತಿಯಾಸೆ ಗರಿಗೆದರಬಹುದು
  • ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿ
  • ಯೋಚಿಸಿ ನಿರ್ಧಾರಗಳನ್ನು ಮಾಡಿ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಅತಿಯಾದ ನಂಬಿಕೆಯಿಂದ, ಸಾಮರ್ಥ್ಯದಿಂದ ಹಿನ್ನಡೆ ಉಂಟಾಗಬಹುದು
  • ಕುಟುಂಬದ ಸಹಕಾರದಲ್ಲಿ ನ್ಯೂನತೆ ಕಾಣಬಹುದು
  • ತಾತ್ವಿಕ ವಿಚಾರಗಳಲ್ಲಿ ಆಸಕ್ತಿ, ಚರ್ಚೆಯಿಂದ ಜಯವಿದೆ
  • ಗುರಿ, ಉದ್ದೇಶಗಳ ಬಗ್ಗೆ ಜಾಗೃತವಾಗಿರಿ
  • ಜೀವನದಲ್ಲಿ ಉತ್ತಮ ಅಭ್ಯಾಸಗಳಿರಲಿ
  • ಬೇರೆಯವರು ನಿಮ್ಮನ್ನ ಗಮನಿಸುತ್ತಾರೆ, ನೀವು ಗಮನಿಸಿ
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಮನೆಯ ಗುಟ್ಟು ಹೊರಹಾಕುತ್ತೀರಿ ಅವಮಾನವಾಗಬಹುದು
  • ವ್ಯಾಪಾರ ಸಂಬಂಧ ಚರ್ಚಿಸಬಹುದು
  • ಸಾಯಂಕಾಲ ಶುಭ ಸಮಾಚಾರದಿಂದ ನೆಮ್ಮದಿ
  • ಸಾಲದ ಅವಶ್ಯಕತೆ ಇರುತ್ತದೆ, ಅನುಕೂಲವಾಗಬಹುದು
  • ಕೋಪದಿಂದ ಸಂಬಂಧಗಳು ಕಡಿತವಾಗಬಹುದು
  • ಪ್ರಸಿದ್ಧ ವ್ಯಕ್ತಿಯ ವಿಚಾರ ತಿಳಿಯಬಹುದು
  • ಚಂಡಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಹೊಸ ವಿಚಾರದಿಂದ ಉಲ್ಲಾಸಗೊಳ್ಳುತ್ತೀರಿ
  • ನಿಮ್ಮ ವೃತ್ತಿಗನುಗುಣವಾದವರ ಪರಿಚಯದಿಂದ ತೃಪ್ತಿ
  • ಪ್ರಾಕೃತಿಕವಾದ ಔಷಧಿಯಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ
  • ರಕ್ತದೊತ್ತಡ ಇರುವವರಿಗೆ ತೊಂದರೆಯಿದೆ ಎಚ್ಚರಿಕೆ ಇರಲಿ
  • ಮಕ್ಕಳಲ್ಲಿ ಭಿನ್ನಾಭಿಪ್ರಾಯ, ನಿಮಗೆ ಬೇಸರವಾಗಬಹುದು
  • ಇಂದು ಹಣದ ಕೊರತೆ ಇಲ್ಲ ಆದರೆ ಸಮಸ್ಯೆಗಳು ಕಾಡಬಹುದು
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಹಣದ ಮೂಲ ತಿಳಿಯುತ್ತದೆ, ಲಾಭವಿದೆ
  • ಆಸ್ತಿ ಖರೀದಿ, ಮಾರಾಟದಿಂದ ಹಣ ಬರಬಹುದು
  • ರುಚಿಕರವಾದ ಆಹಾರ ಸೇವನೆಯಿಂದ ಸಂತೋಷವಾಗಬಹುದು
  • ಧಾರ್ಮಿಕ ವಿಚಾರಗಳಲ್ಲಿ ಕ್ರಿಯಾಶೀಲರಾಗುತ್ತೀರಿ
  • ಕಾನೂನು ವಿಚಾರದಲ್ಲಿ ಜಯವಿದೆ
  • ಸ್ವಂತ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಬೇಸರಪಡಬಹುದು
  • ಲಕ್ಷ್ಮೀದೇವಿಯನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ವ್ಯವಹಾರಿಕವಾದ ಸಂಶೋಧನೆ ಇರಲಿ ನಷ್ಟದಿಂದ ಪಾರಾಗಬಹುದು
  • ಜೀವನ ಶೈಲಿಯ ಬದಲಾವಣೆ ಬೇರೆಯವರಿಗೆ ಸಮಾಧಾನ
  • ಹೊಸ ವಿಚಾರ ತಲೆಯಲ್ಲಿ ಬಂದು ಚರ್ಚಿಸಬಹುದು
  • ರಾಜಕೀಯ ವಿಚಾರದಲ್ಲಿ ಬೇಸರ ಅದರಿಂದ ಕೋಪ
  • ಕಾರ್ಯಕ್ಷೇತ್ರದ ವಿವಾದ ಕೊನೆಗೊಳ್ಳಬಹುದು
  • ಸಮಯದ ಸದುಪಯೋಗ ಪಡೆಯಿರಿ
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಇಂದು ಏನಾದರೂ ಖರೀದಿಸುವಂತಿದ್ದರೆ ಮನೆಯವರ ಸಲಹೆ ಅಗತ್ಯ
  • ಈ ದಿನ ಅತಿಯಾದ ಒತ್ತಡ ಸರಿಯಲ್ಲ
  • ಸರ್ಕಾರಿ ಕೆಲಸಕ್ಕೆ ಜಗಳ ಮಾಡಬಹುದು ತಾಳ್ಮೆ ಇರಲಿ
  • ಕಾನೂನು ವಿಚಾರಗಳಲ್ಲಿ ಗೊಂದಲ ಉಂಟಾಗುವುದು
  • ನಿಮ್ಮ ವಿಚಾರ ಅಥವಾ ತಿಳುವಳಿಕೆಯಿಂದ ಹಲವು ಮಾಹಿತಿ ಲಭ್ಯವಾಗಬಹುದು
  • ಹಳೆಯ ವ್ಯವಹಾರದಿಂದ ಇಂದು ಬೇಸರವಾಗಬಹುದು
  • ನವಗ್ರಹ ಸ್ತೋತ್ರ ಪಠಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment