/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಚಿತ್ತಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಹಳ ಮಂಗಳಕರವಾದ ದಿನ
- ವೃತ್ತಿ ಅಥವಾ ಉದ್ಯೋಗದಲ್ಲಿ ಸಮಾಧಾನವಿಲ್ಲದಿದ್ದರೆ ಬದಲಿಸುವ ಚಿಂತನೆ ಮಾಡಬಹುದು
- ಸ್ನೇಹಿತರು ಅಥವಾ ಬಂಧುಗಳೊಂದಿಗೆ ಎಲ್ಲ ವಿಷಯ ಚರ್ಚಿಸಲು ಅವಕಾಶವಿದೆ
- ಬದಲಾವಣೆಯಿಂದ ಶುಭ ಫಲ ಕಾಣಬಹುದು
- ಹಣದ ಅನುಕೂಲವಿರುವ ದಿನ
- ಮನೆಯಲ್ಲಿ ವಿರುದ್ಧ ಮಾತು ಅಥವಾ ಸಲಹೆಗಳು ಬರಬಹುದು
- ನವಗ್ರಹರ ಪ್ರಾರ್ಥನೆ ಮಾಡಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರ ಅಥವಾ ವ್ಯವಹಾರದಲ್ಲಿ ರಾಜಿ ಬೇಡ ನಷ್ಟವಿದೆ
- ಮನೆಯವರ ಸಲಹೆ ಈ ದಿನ ಅನುಪಯುಕ್ತವಾಗಬಹುದು
- ಜನರಿಂದ ಸವಾಲುಗಳು ಎದುರಾದರೂ ಎಲ್ಲವನ್ನ ನಿಭಾಯಿಸುತ್ತೀರಿ
- ಸರಿಯಾದ ಯೋಜನೆಯಿಲ್ಲದೆ ಕೆಲಸದಲ್ಲಿ ಅಸಮಾಧಾನ ಉಂಟಾಗಬಹುದು
- ಶ್ರಮ ಹೆಚ್ಚು ಆದರೆ ತೃಪ್ತಿ ಕಡಿಮೆ ಇರುತ್ತದೆ
- ಹಣದ ಲಾಭದಿಂದ ಮಾತ್ರ ಸಂತೋಷವಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶ ಪ್ರಯಾಣ ಮಾಡುವವರು ನಿಮ್ಮ ಸಹಾಯ ಕೇಳಬಹುದು
- ಹಳೆಯ ಕೆಲಸದ ಪ್ರಶಂಸೆ ಸಿಗಬಹುದು
- ನಿಮ್ಮ ಮನೆಯ ಬಗ್ಗೆ ತುಂಬಾ ಕಾಳಜಿವಹಿಸುತ್ತೀರಿ
- ನಿಮಗೆ ಬಡ್ತಿ ಸಿಗುವ ಸೂಚನೆಗಳು ಇವೆ
- ಪ್ರೀತಿ, ಪ್ರೇಮ ವಿಚಾರದಲ್ಲಿ ಜಾಗ್ರತೆವಹಿಸಿ ದ್ರೋಹವಾಗಬಹುದು
- ಶಿಕ್ಷಣದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿದೆ
- ಗಣಪತಿ ಪ್ರಾರ್ಥನೆ ಮಾಡಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಠಿಣ ಪರಿಶ್ರಮದ ಮನಸಿದ್ದಾಗ ಯಾವುದೇ ರಾಜಿ ಬೇಡ
- ಏಕಾಂಗಿಯಾಗಿ ಹೋರಾಟ ಮಾಡಬಹುದು ಆದರೆ ತಾಳ್ಮೆಯಿರಲಿ
- ಶಾಂತಿ ಪ್ರಿಯರಾಗಿದ್ದರೆ ಯಶಸ್ಸಿದೆ
- ನಿಮ್ಮ ವರ್ತನೆ ಬದಲಾದರೆ ಜಯವಿದೆ
- ಮನೆಯ ಗೊಂದಲಗಳಿಗೆ ತೆರೆ ಬೀಳಬಹುದು
- ನಕಾರಾತ್ಮಕ ಸಲಹೆ ಕೊಡುವ ಜನರಿಂದ ದೂರವಿರಿ
- ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ದೊಡ್ಡ ದೊಡ್ಡ ಚಿಂತನೆಗಳಿಗೆ ಪುಷ್ಟಿ ಸಿಗಬಹುದು
- ದೊಡ್ಡ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ಸಿಗುತ್ತದೆ
- ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು
- ಇಂದು ಅದೃಷ್ಟದ ಬೆಂಬಲ ಸಿಗುತ್ತದೆ
- ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಸಂತೋಷವಾಗಿ ಕಳೆಯಬಹುದು
- ಉಪಯೋಗವಾಗುವ ಕೆಲಸದ ಬಗ್ಗೆ ಚಿಂತಿಸಿ
- ಈಶ್ವರನ ಆರಾಧನೆ ಮಾಡಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರ್ಕಾರದ ಕೆಲಸಗಳಿಂದ ಸಮಾಧಾನ ಸಿಗಬಹುದು
- ವಿರೋಧಿಗಳು ನಿಮ್ಮ ವಿಚಾರಕ್ಕೆ ಬರುವುದಿಲ್ಲ
- ಇಂದು ವ್ಯಾಪಾರದಲ್ಲಿ ಲಾಭವಿದೆ
- ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಾಗಬಹುದು
- ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಮಾಡಿದರೆ ಶುಭವಿದೆ
- ಕುಟುಂಬದಲ್ಲಿ ಮಾತಿನ ಸಮತೋಲನವನ್ನ ಕಾಪಾಡಿಕೊಳ್ಳಿ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ತುಲಾ/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಹಣದ ಲಾಭವಿದೆ
- ಅಧಿಕವಾಗಿ ಖರ್ಚಾಗುವ ದಿನ ಜಾಗ್ರತೆ
- ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಕೊರತೆ ಉಂಟಾಗಬಹುದು
- ವೃತ್ತಿ ಅಥವಾ ಕಾರ್ಯಕ್ಷೇತ್ರದಲ್ಲಿ ಅನುಕೂಲವಿದೆ
- ಮಧ್ಯಾಹ್ನದ ನಂತರ ಯಶಸ್ಸಿನ ಸಮಯ
- ಇಂದು ಒಟ್ಟಾರೆ ಒಳ್ಳೆಯ ದಿನ ಸದ್ಬಳಕೆಯಾಗಲಿ
- ದೇವಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯವಾದ ಹಣ ಹೂಡಿಕೆ ಬೇಡ ಹಣಕ್ಕಾಗಿ ತೊಂದರೆಯಾಗಬಹುದು
- ಯಾರನ್ನು ಅಂಧರಾಗಿ ನಂಬಬಾರದು
- ಮಾನಸಿಕ ಆಯಾಸ ಕಾಣಬಹುದು
- ಕುಟುಂಬದಲ್ಲಿ ಹಲವು ಮಾಹಿತಿ, ಸಲಹೆ ದೊರೆಯುತ್ತವೆ ಅನುಕೂಲವಿದೆ
- ಜೊತೆಯವರು ಗೊತ್ತಿಲ್ಲದೆ ಮೋಸ ಮಾಡಬಹುದು
- ನಿಮ್ಮ ಹಣದ ಬಗ್ಗೆ ಜಾಗ್ರತೆವಹಿಸಿ
- ಲಕ್ಷ್ಮೀನಾರಾಯಣರನ್ನು ಪ್ರಾರ್ಥನೆ ಮಾಡಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಇಂದು ಸಹೋದ್ಯೋಗಿಗಳಿಂದ ಕಿರುಕುಳ ಉಂಟಾಗಬಹುದು
- ಅವಿದ್ಯಾವಂತರ ಜೊತೆಗಿನ ವ್ಯವಹಾರದಲ್ಲಿ ಜಗಳವಾಗಬಹುದು
- ಕಠಿಣ ಪರಿಶ್ರಮದ ನಂತರವೂ ಬೇಸರವಾಗಬಹುದು
- ಆಡಂಬರದ ವಸ್ತು ಖರೀದಿಯಿಂದ ಸಂತೋಷ ಆದರೆ ಖರ್ಚಿನ ಚಿಂತೆ ಕಾಡುತ್ತದೆ
- ಹೊಸ ವಿಚಾರಕ್ಕೆ ಆತುರ ಮಾಡಬೇಡಿ
- ಅನಾರೋಗ್ಯಕ್ಕೆ ಹಣ ಖರ್ಚಾಗಬಹುದು
- ನರಸಿಂಹನನ್ನು ಪ್ರಾರ್ಥನೆ ಮಾಡಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರ್ಕಾರಿ ಅಧಿಕಾರಿಗಳಿಂದ ಉತ್ತಮ ಸಲಹೆ ಸಿಗಬಹುದು
- ಕುಟುಂಬದ ವ್ಯಾಜ್ಯ ತಾರಕಕ್ಕೇರಬಹುದು
- ವಿದ್ಯಾರ್ಥಿಗಳಿಗೆ, ಸಣ್ಣ ಮಕ್ಕಳಿಗೆ ತೊಂದರೆ ಇದೆ ಎಚ್ಚರ
- ವ್ಯಾಪಾರದ ಉದ್ದೇಶವನ್ನು ಗೌಪ್ಯವಾಗಿಡಿ
- ಗಂಭೀರವಾದ ವಿಚಾರಗಳಿಂದ ಹೊರಬರಬೇಕು
- ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ದೂರ ಮಾಡಿ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮನ್ನ ನೀವು ರಕ್ಷಣೆ, ಪೋಷಣೆ ಮಾಡಿಕೊಳ್ಳುವುದರಲ್ಲಿ ಕಾಲ ಕಳೆಯಬಹುದು
- ನಿಮ್ಮ ಕೆಲಸ ನೀವು ಅಂದುಕೊಂಡಂತೆ ನಡೆಯಬಹುದು
- ರಾಜಕೀಯ ವಿಚಾರ ಚರ್ಚೆಗೆಬಂದು ಕೋಪ, ನಿರಾಸೆ ಉಂಟಾಗಬಹುದು
- ಅನಗತ್ಯವಾದ ಜನರ ಸಂಪರ್ಕದಿಂದ ಬೇಜಾರಾಗಬಹುದು
- ಇಂದು ಹಣ, ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- ಎಲ್ಲವೂ ಇದೆ ಆದರೆ ನೆಮ್ಮದಿ ಇಲ್ಲ
- ಕುಲದೇವತಾ ಆರಾಧನೆ ಮಾಡಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಯುವ ಪೀಳಿಗೆಗೆ ಸಂತೋಷ ಕೊಡುವ ತಂತ್ರಜ್ಞಾನಕ್ಕೆ ನಿಮ್ಮ ಒಲವು ಹೆಚ್ಚಾಗಬಹುದು
- ಸ್ವಂತ ಉದ್ಯೋಗದ ಚಿಂತನೆ, ನಿರ್ಧಾರ ಮಾಡಬಹುದು
- ಬಂಧುಗಳಲ್ಲೊಬ್ಬರ ಸಹಾಯ, ಸಹಕಾರ ಉದ್ಯೋಗಕ್ಕೆ ತುಂಬಾ ಅನುಕೂಲ ಮಾಡಬಹುದು
- ಇಂದು ಬೇರೆಯವರನ್ನ ಬೇಗ ಆಕರ್ಷಣೆ ಮಾಡುವ ದಿನ
- ಪಾಲುದಾರಿಕೆಯಲ್ಲಿ ಮಾಡುವ ಕೆಲಸದಿಂದ ಅನುಕೂಲವಾಗಬಹುದು
- ಸಂಪಾದನೆ, ಹೆಸರು ಮಾಡಲು ಉತ್ತಮ ಅವಕಾಶವಿದೆ
- ಗ್ರಾಮದೇವತೆಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us