newsfirstkannada.com

Rain Alert: ಸಿಲಿಕಾನ್​ ಸಿಟಿ ಜನರೇ ಎಚ್ಚರ.. ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

Share :

Published June 2, 2024 at 7:03am

    ವೀಕೆಂಡ್​ ಮೂಡ್​ನಲ್ಲಿದ್ದ ಸಿಟಿ ಮಂದಿಗೆ ಮೇಘರಾಜನ ಶಾಕ್

    ಸದ್ದಿಲ್ಲದೆ ಮತ್ತೆ ಎಂಟ್ರಿ ಕೊಟ್ಟ ಮಳೆ ಅಬ್ಬರಕ್ಕೆ ಸಾಕಷ್ಟು ಅವಾಂತರ

    ಜೂನ್​ 1 ರಿಂದ 5ರವರೆಗೆ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ!

ಬೆಂಗಳೂರು: ವೀಕೆಂಡ್​ ಮೂಡ್​ನಲ್ಲಿದ್ದ ಸಿಟಿ ಮಂದಿಗೆ ಮೇಘರಾಜ ಶಾಕ್​ ಕೊಟ್ಟಿದ್ದಾನೆ. ಸದ್ದಿಲ್ಲದೆ ಎಂಟ್ರಿ ಕೊಟ್ಟ ವರುಣ ಅಬ್ಬರಿಸಿ ಅವಾಂತರಕ್ಕೆ ಕಾರಣವಾಗಿದ್ದಾನೆ. ಮಳೆ ಕಂಡು ಹಲವರು ಖುಷ್​ ಆದ್ರೆ ಇನ್ನೂ ಕೆಲವರು ಸುಸ್ತಾಗಿದ್ದಾರೆ.  ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತವರಣದಲ್ಲಿದ್ದ ಸಿಲಿಕಾನ್​ ಸಿಟಿಯಲ್ಲಿ ಸಂಜೆಯಾಗುತ್ತಿದ್ದಂತೆ ಮಳೆರಾಯ ಅಬ್ಬರಿಸಿದ್ದಾನೆ.

ವರುಣನ ಆರ್ಭಟಕ್ಕೆ ಎಲೆಕ್ಟ್ರಾನಿಕ್​ ಸಿಟಿಯ ಹಲವೆಡೆ ರಸ್ತೆಗಳು ಅಕ್ಷರಶಃ ಕೆರೆಯಂತಾಗಿದೆ. ಇತ್ತ ಕನಕನಗರ ಹಾಗೂ ಯಲಚೇನಹಳ್ಳಿಯಲ್ಲೂ ಭಾರೀ ಮಳೆಯಾಗಿದ್ದು, ಮಳೆ ನೀರು ಅಕ್ಷರಶಃ ನದಿಯಂತೆ ಉಕ್ಕಿ ಹರಿದಿದೆ. ಮಳೆ ನೀರೆಲ್ಲಾ ಮನೆಗಳಿಗೆ ನುಗ್ಗಿದ್ದು, ಇಲ್ಲಿನ ಜನ ಬೀದಿಗಳಿದು ಆಕ್ರೋಶ ಹೊರಹಾಕಿದ್ದಾರೆ. 15 ವರ್ಷಗಳಿಂದ ಇದೇ ಸಮಸ್ಯೆ, 2/3 ಅಡಿ ಮೋರಿಗೆ 10 ಅಡಿ ಮೋರಿಯಷ್ಟ್ ನೀರು ಬರುತ್ತೆ. ಬೇರೆ ಏರಿಯಾ ನೀರೆಲ್ಲಾ ಇಲ್ಲಿಗೆ ಬರುತ್ತೆ ಅಂತ ಕಿಡಿಕಾರಿದ್ದಾರೆ.

ಕೋಣನಕುಂಟೆ ಕ್ರಾಸ್​ನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಆಲಿಕಲ್ಲನ್ನ ಕಂಡು ಸ್ಥಳೀಯರು ಫುಲ್​ ಖುಷ್​ ಆಗಿದ್ದಾರೆ. ಇಳಿಜಾರಿನ ಪ್ರದೇಶದಲ್ಲಿ ಮಳೆ ನೀರು ಉಕ್ಕಿ ಹರಿದಿದ್ದು ಮನೆಗಳಿಗೆಲ್ಲಾ ನೀರು ನುಗ್ಗಿದೆ. ಅರ್ಧ ಗಂಟೆ ಸುರಿದ ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಹೆಬ್ಬಾಳ ಅಂಡರ್​ ಪಾಸ್​ ಮಳೆ ನೀರಿನಲ್ಲಿ ಮುಳುಗಿದೆ. ಇದ್ರಿಂದ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ವಾಹನಸವಾರರು ಪರದಾಡಿದ್ದಾರೆ. ಸರ್ಜಾಪುರ ರೋಡ್​ ಹಾಗೂ ಟೆಲಿಕಾಂ ಲೇಔಟ್​ನಲ್ಲೂ ಭಾರೀ ಮಳೆಯಾಗಿದ್ದು ರಸ್ತೆಯೆಲ್ಲಾ ಸಂಪೂರ್ಣ ಮುಳುಗಡೆಯಾಗಿದೆ. ಕೆರಯಂತಾದ ರಸ್ತೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಹೊಸ ಕೆರೆಯ ಉದ್ಭವ ಅಂತ ವ್ಯಂಗ್ಯ ಮಾಡಲಾಗ್ತಿದೆ.

ಕೆಂಗೇರಿ ಹಾಗೂ ಮಹದೇವಪುರದಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳೆಲ್ಲಾ ಜಲಾವೃತಗೊಂಡಿದೆ. ರಸ್ತೆ ಬ್ಲಾಕ್​ ಆಗಿ ಸವಾರರು ಪರದಾಡಿದ್ದಾರೆ. ಇನ್ನು ಇಂದಿನಿಂದ ರಾಜಧಾನಿಗೆ ಮುಂಗಾರು ಪ್ರವೇಶ ಮಾಡ್ತಿದ್ದು, ಮುಂದಿನ ಐದು ದಿನಗಳ‌ ಕಾಲ ಭಾರಿ‌ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ಹಾಸನದಲ್ಲಿ 3 ಸೆಂ.ಮೀ, ಶಿರಹಟ್ಟಿ ಹಾಗೂ ಗದಗದಲ್ಲಿ 1 ಸೆಂ.ಮೀ ಮಳೆಯಾಗಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಹಾಗೂ ಕೇರಳ ಕರಾವಳಿ ಪ್ರದೇಶದಲ್ಲಿ ಸರ್ಕ್ಯುಲೇಶನ್​ 5.8 ಮತ್ತು 7.6 ಎತ್ತರದಲ್ಲಿ ಇದೆ. ಮುಂದಿನ 2-3 ದಿನಗಳಲ್ಲಿ ನೈಋತ್ಯ ಮಾನ್ಸೂನ್ ಕರ್ನಾಟಕವನ್ನು ಪ್ರವೇಶಿಸಲಿದೆ. ರಾಜ್ಯದಲ್ಲಿ ಜೂನ್​ 1 ರಿಂದ 5ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಳೆಯ ಜೊತೆಗೆ ಬಿರುಗಾಳಿಯೂ ಪ್ರತಿ ಗಂಟೆಗೆ 40ರಿಂದ 50 ಕಿಲೋ. ಮೀಟರ್​ ಬೀಸುವ ಸಾಧ್ಯತೆ ಇದೆ. 

ಸಿ.ಎಸ್​.ಪಾಟೀಲ್​, ಹವಾಮಾನ ಇಲಾಖೆ ನಿರ್ದೇಶಕ

ಕಳೆದ ವರ್ಷ ಜೂನ್ 15ರಿಂದ ಮುಂಗಾರು ಪ್ರವೇಶವಾಗಿತ್ತು, ಆದ್ರೆ ಈ ವರ್ಷ 15 ದಿನಗಳಿಗೂ ಮೊದಲೇ ಮುಂಗಾರು ಪ್ರವೇಶವಾಗುತ್ತಿದೆ. ಸದ್ಯ ಅರ್ಧಗಂಟೆ ಮಳೆಯಾದ್ರೆ ಇಷ್ಟೆಲ್ಲಾ ಅವಾಂತರಗಳಾದ್ರೆ, ಮುಂದಿನ ದಿನಗಳಲ್ಲಿ ಹೇಗೆ ಅಂತ ಜನರ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain Alert: ಸಿಲಿಕಾನ್​ ಸಿಟಿ ಜನರೇ ಎಚ್ಚರ.. ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

https://newsfirstlive.com/wp-content/uploads/2024/05/Heavy-Rains-Karnataka.jpg

Load More