/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ಅನುರಾಧಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಗುರಿ ಸಾಧಿಸುವ ಮೂಲಕ ಮನಸ್ಸಿಗೆ ಸಂತೋಷ ಸಿಗುತ್ತದೆ
 - ವ್ಯಾಪಾರ, ವ್ಯವಹಾರದಲ್ಲಿ ಆರ್ಥಿಕವಾಗಿ ಹೆಚ್ಚು ಲಾಭದ ದಿನ
 - ಎಲ್ಲ ಕೆಲಸ ಕಾರ್ಯಗಳಲ್ಲಿ ಉತ್ಸಾಹ, ಬಿಡುವಿಲ್ಲದ ಕಾರ್ಯಗೌರವ
 - ಹಿರಿಯರು ಮತ್ತು ಸಹೋದರರು ಮಾತಿನ ವೈಮನಸ್ಯ ಬೆಳಸಿಕೊಳ್ಳಬಹುದು
 - ಸಮಾಜದಲ್ಲಿ ಹಲವರಿಗೆ ನಿಮ್ಮ ಕಾರ್ಯದಕ್ಷತೆ ಬಗ್ಗೆ ಉತ್ತಮ ಅಭಿಪ್ರಾಯವಿರುತ್ತದೆ
 - ನಿಮ್ಮ ಖುಷಿಗಾಗಿ ಹೆಚ್ಚು ಹಣ ಖರ್ಚು ಮಾಡುವ ದಿನ
 - ಕುಲದೇವರನ್ನು ಪ್ರಾರ್ಥನೆ ಮಾಡಿ
 
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಯಾಣದಿಂದ ಲಾಭ ಸಾಧ್ಯತೆ ಆದರೆ ದೂರದ ಪ್ರಯಾಣ ಬೇಡ
 - ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದಯುತ ಮನೋಭಾವವಿರುತ್ತದೆ
 - ನಿಮ್ಮ ತತ್ವ ಸಿದ್ಧಾಂತಗಳಿಂದ ಬೇರೆಯವರು ಪ್ರಭಾವಿತರಾಗುವ ಸಾಧ್ಯತೆ
 - ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಾಣುವ ದಿನ
 - ಆಸ್ತಿ ವಿವಾದಗಳು ಏನೇ ಇದ್ದರು ಈದಿನ ಬಗೆಹರಿಯುತ್ತವೆ
 - ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಅಗ್ನಿಯಿಂದ ತೊಂದರೆಯಾಗುವ ಸಾಧ್ಯತೆ ಎಚ್ಚರ
 - ಜಾತವೇದಾಗ್ನಿಯನ್ನು ಪ್ರಾರ್ಥನೆ ಮಾಡಿ
 
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾಪಾರ-ವ್ಯವಹಾರ, ನೌಕರಿ ಮತ್ತು ವಿದ್ಯಾರ್ಥಿ ವರ್ಗದವರು ಹೆಚ್ಚು ಶ್ರಮ ಪಡಬೇಕಾದ ದಿನ
 - ಖರ್ಚು ಹೆಚ್ಚಾಗಿ ಕೆಲವು ದುಷ್ಪರಿಣಾಮಗಳು ನಿಮ್ಮ ಮೇಲೆ ಬೀರುವ ಸಾಧ್ಯತೆಯಿದೆ
 - ಸ್ವಲ್ಪ ಮಟ್ಟಿಗೆ ನಿಮ್ಮ ದುರಾಸೆಯನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು
 - ಸಂಬಂಧಿಕರ, ಸ್ನೇಹಿತರ ಸಂಬಂಧ ಚೆನ್ನಾಗಿದ್ದರು ಬೆಂಬಲ ದೊರೆಯುವುದು ಕಷ್ಟ ಸಾಧ್ಯ
 - ಪ್ರೇಮಿಗಳಿಗೆ ಉತ್ತಮ ದಿನ, ಪ್ರೇಮ ವಿಚಾರ ಕುಟುಂಬಕ್ಕೆ ತಿಳಿಸಲು ಉತ್ತಮ ದಿನ
 - ನಿಮ್ಮ ಸಹೋದರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಜಾಗ್ರತೆ
 - ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
 
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮಗಿರುವ ಗೌರವ ಸ್ಥಾನ ದುರುಪಯೋಗವಾಗುವ ಸಾಧ್ಯತೆ
 - ಯಾವುದಾದರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಕೆ ಸಾಧ್ಯತೆ
 - ಬೆಲೆಬಾಳುವ ಪದಾರ್ಥಗಳು ನಷ್ಟವಾಗಬಹುದು
 - ಮಾತೆಯರೊಂದಿಗೆ ಸಭ್ಯವಾಗಿ ವರ್ತಿಸಿ ಇಲ್ಲದಿದ್ದರೆ ಅವಮಾನ ಸಾಧ್ಯತೆ
 - ದೀರ್ಘಕಾಲದ ಅನಾರೋಗ್ಯದ ಸೂಚನೆಯಿದೆ, ವೈದ್ಯರ ಸಲಹೆ ಪಡೆಯಿರಿ
 - ಭಗವತಿಯನ್ನು ನೀಲಿ ಹೂಗಳಿಂದ ಅರ್ಚಿಸಿ ಪ್ರಾರ್ಥನೆ ಮಾಡಿ
 
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಅಶುಭ ವಾರ್ತೆಗಳನ್ನು ಕೇಳಬಹುದು
 - ಮನಸ್ಸಿಗೆ ಮತ್ತು ವ್ಯವಹಾರದಲ್ಲಿ ಬಹಳ ಬೇಸರವಾಗುವ ದಿನ
 - ನಿಮ್ಮ ಎಲ್ಲ ಕೆಲಸ, ಕಾರ್ಯಗಳು ಬಹಳ ನಿಧಾನವಾಗಿ ಸಾಗುತ್ತವೆ
 - ಸ್ನೇಹಿತರ ಸಂಬಂಧಗಳು ಹೆಚ್ಚಾಗಬಹುದು ಅವರ ಜೊತೆ ಬಹಳ ಜಾಗರೂಕರಾಗಿ ವರ್ತಿಸಿ
 - ಸಾಯಂಕಾಲಕ್ಕೆ ಹೊಸ ಸಂಬಂಧದಲ್ಲಿ ಮಾನಸಿಕ ಬೇಸರ ಕಾಣಬಹುದು
 - ಶಾಂತಿಪ್ರದ ದೇವಿಯನ್ನು ಆರಾಧಿಸಿ - ಕಪ್ಪು ಬಟ್ಟೆ ಧರಿಸಬೇಡಿ
 
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಹೊಸ ವಿಚಾರಕ್ಕಾಗಿ ಹಣವನ್ನು ಕೂಡಿಡುವ ಆಲೋಚನೆ ನಿಮ್ಮ ಮನಸ್ಸಿಗೆ ಬರುತ್ತದೆ
 - ವಿರೋಧಿಗಳು ನಿಮ್ಮನ್ನು ಸೋಲಿಸಲು ಬಹಳ ಕಾತುರವಾಗಿ ಕಾಯ್ತಾ ಇರುತ್ತಾರೆ ಜಾಗ್ರತೆ
 - ಗಮನವಿಲ್ಲದೆ ಮಾಡಿರುವ ಕೆಲಸಗಳಿಂದ ತಪ್ಪಿಗೆ ಸಿಲುಕುವ ಸಾಧ್ಯತೆಗಳಿವೆ
 - ಇಂದು ಆಕಾಶಮಾರ್ಗದಲ್ಲಿ ಹೋಗುವ ಪ್ರಯಾಣಕ್ಕೆ ಶುಭವಲ್ಲ
 - ಸೋದರ ಮಾವನಿಗೆ ತೊಂದರೆ ಕಾಣಬಹುದು ಜಾಗ್ರತೆವಹಿಸಿ
 - ವೈರೋಚಿನೀ ಶಕ್ತಿಯನ್ನು ಪ್ರಾರ್ಥನೆ ಮಾಡಿ
 
ತುಲಾ/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ನೌಕರಿಯ ಚಿಂತೆ ಕಾಡಬಹುದು
 - ಇಂದು ಅಜೀರ್ಣ ಸಮಸ್ಯೆ ಅಥವಾ ಹೊಟ್ಟೆ ನೋವು ಕಾಣಬಹುದು
 - ನಿಮ್ಮ ಕೆಟ್ಟ ಅಭ್ಯಾಸಗಳಿದ್ದರೆ ನಿಧಾನವಾಗಿ ಬಿಡುವುದು ಒಳಿತು
 - ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ
 - ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿ
 - ವಾಹನ ಚಾಲನೆ ಅಥವಾ ದೂರದುರಿಗೆ ಪ್ರಯಾಣ ಬೇಡ
 - ವಾಯುವ್ಯಾಸ್ತ ಮಂತ್ರ ಶ್ರವಣ ಮಾಡಿ
 
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸದ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ
 - ಆಡಳಿತ ವರ್ಗ ಮತ್ತು ಪ್ರಬಲ ವ್ಯಕ್ತಿಗಳ ಮನಸ್ಸಿಗೆ ಬೇಸರ ಉಂಟಾಗಬಹುದು
 - ಜೊತೆಯಲ್ಲಿ ಕೆಲಸ ಮಾಡುವವರ ಸಹಕಾರ ದೊರೆಯುತ್ತದೆ
 - ಆಹಾರದ ಬಗ್ಗೆ ಗಮನವಿರಲಿ, ಶೀತ ಸಂಬಂಧಿ ತೊಂದರೆ ಕಾಣಬಹುದು
 - ಕೋಪ ಅನರ್ಥಕ್ಕೆ ಕಾರಣವಾಗುತ್ತೆ ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡಿ
 - ಸ್ನೇಹಿತರೊಂದಿಗೆ ಜಗಳ ಆಗುವ ಸಂದರ್ಭವಿದೆ
 - ನಾರಾಯಣೇ ದುರ್ಗಾ ಶಕ್ತಿಯನ್ನು ಪ್ರಾರ್ಥನೆ ಮಾಡಿ
 
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸರ್ಕಾರಿ ನೌಕರರಿಗೆ ಸಿಹಿಸುದ್ದಿ
 - ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಈ ದಿನ ಜಯ ಸಿಗಲಿದೆ
 - ಪರಿಶ್ರಮಕ್ಕೆ ತಕ್ಕ ಪ್ರತಿಫಲ ವಸ್ತು ರೂಪದಲ್ಲಿ ಉಡುಗೊರೆ ಸಿಗಬಹುದು
 - ಹಳದಿ ಬಟ್ಟೆಯನ್ನು ಧರಿಸಿ ಪ್ರಯಾಣ ಮಾಡಿ ಶುಭವಿದೆ
 - ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
 - ಅಲುಪ್ತ ಶಕ್ತಿಯನ್ನು ಪ್ರಾರ್ಥನೆ ಮಾಡಿ
 
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರು ಮತ್ತು ಸಂಬಂಧಿಕರ ಮಧ್ಯೆ ಜಗಳ ಉಂಟಾಗುವ ಸಾಧ್ಯತೆ
 - ರಾಜಕಾರಣಿಗಳಿಗೆ ಹಿನ್ನಡೆಯಾಗುವ ದಿನವಾಗಿದೆ
 - ಮನಸ್ಸಿನ ಉದ್ವೇಗ ನಿಮ್ಮೆಲ್ಲಾ ಕೆಲಸಗಳನ್ನು ಹಾಳು ಮಾಡಬಹುದು
 - ಮಹಿಳೆಯರಿಗೆ ಸಿಹಿ ಸುದ್ದಿ ಸಿಗುವ ದಿನವಾಗಿದೆ
 - ಮರಣದ ವಾರ್ತೆ ಕೇಳಿ ಮನಸ್ಸಿನ ಮೇಲೆ ಪ್ರಭಾವ ಬೀರುವಂತದಾಗಿರುತ್ತದೆ
 - ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಿ
 
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯ ವ್ಯಕ್ತಿಗಳಿಗೆ ಶುಭವಾಗುವ ದಿನವೆಂದು ಹೇಳಬಹುದು
 - ಕುಂಭರಾಶಿಯ ಶಿಕ್ಷಕರಿಗೆ ಅಪವಾದ ಬರುವಂತಹ ದಿನ
 - ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು ತಾಳ್ಮೆ ಇರಲಿ
 - ರಸ್ತೆ ಬದಿಯ ವ್ಯಾಪಾರಿಗಳಿಗೆ ಲಾಭವಿದೆ, ಹಣವನ್ನು ಜಾಗ್ರತೆಯಿಂದ ಇಟ್ಟುಕೊಳ್ಳಿ
 - ಮನೆಯ ಹೊರಗೆ ಮತ್ತು ಒಳಗೆ ನೆಮ್ಮದಿ ಕಡಿಮೆಯಿರುವ ದಿನವಾಗಿದೆ
 - ಮಹಾಶೂಲಿನಿಯನ್ನು ಪ್ರಾರ್ಥನೆ ಮಾಡಿ
 
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಮಾನಸಿಕ ಬೇಸರ, ಸಮಸ್ಯೆ ಉದ್ಧವವಾಗುವ ದಿನ
 - ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಇರುವಂತಹ ದಿನ
 - ಶಕ್ತಿ ಮೀರಿ ಕೆಲಸ ಮಾಡಬೇಕಾದ ಅಗತ್ಯತೆ ಕಾಣುತ್ತದೆ
 - ಕುಟುಂಬದಲ್ಲಿ ವಾಗ್ವಾದ ನಡೆಯುತ್ತದೆ, ಬೇಸರ ಉಂಟಾಗಬಹುದು
 - ಮಾತಿನ ಸರಮಾಲೆಯಿಂದ ನಿಮ್ಮ ನಂಬಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತೀರಿ
 - ಮಾತಿನ ಬಗ್ಗೆ ನಿಗಾ ಇದ್ದರೆ ಒಳ್ಳೆಯದು
 - ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
 - ಮಕ್ಕಳನ್ನು ಬಯಸುವವರಿಗೆ ಉತ್ತಮವಾದ ದಿನ
 - ಪಂಚಮುಖಿ ಆಂಜನೇಯನನ್ನು ಪ್ರಾರ್ಥನೆ ಮಾಡಿ
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us