/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಹುಣ್ಣಿಮೆ ತಿಥಿ, ಜ್ಯೇಷ್ಠಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ
ಮೇಷ ರಾಶಿ
- ಆಹಾರದ ವ್ಯತ್ಯಯಗಳಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
- ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಬರುವ ಸೂಚನೆಗಳಿವೆ
- ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ
- ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಪಡಿಕೊಳ್ಳಲು ಕಾಯ್ತಾ ಇರ್ತಾರೆ ಜಾಗ್ರತೆಯನ್ನು ವಹಿಸಿ
- ಸ್ತ್ರೀಯರಿಗೆ ಅನುಕೂಲವಾಗುವ ದಿನ
- ಖರೀದಿಗೆ ಹೆಚ್ಚು ಅವಕಾಶಗಳಿವೆ
- ಮೋಸ ಹೋಗುವುದು ಬೇಡ
- ಮನೆ ದೇವರನ್ನು ಪ್ರಾರ್ಥನೆ ಮಾಡಿ
ವೃಷಭ
- ನೌಕರರಿಗೆ, ವೃತ್ತಿಪರರಿಗೆ ಕಿರಿಕಿರಿ ಆಗಬಹುದು
- ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಗೊಳ್ಳುವ ಸಾಧ್ಯತೆಯಿದೆ
- ಮಾನಸಿಕ ಸಮಾಧಾನ ಮುಖ್ಯವಾಗುತ್ತದೆ
- ಅಕ್ಕಪಕ್ಕದವರ ಜೊತೆ, ಸ್ನೇಹಿತರ ಜೊತೆ ಜಗಳ ಬೇಡ
- ಹಿರಿಯರು, ಮೇಲಾಧಿಕಾರಿಗಳು, ಶಿಕ್ಷಕರು, ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು
- ದೊಡ್ಡವರನ್ನು ಗೌರವಿಸಿ
- ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯಿಂದ ನಿಮ್ಮ ಕಾರ್ಯವನ್ನು ನಿಭಾಯಿಸಿ
- ಯಾವುದೇ ಕೆಲಸವನ್ನು ತುಂಬಾ ಆತುರವಾಗಿ ಮಾಡಬೇಡಿ ಯಶಸ್ಸಿಗೆ ಅಡ್ಡಿ ಆಗಬಹುದು
- ನಿಧಾನವಾಗಿ ಯೋಚಿಸಿ ಇರುವ ಸಮಯವನ್ನು ಉಪಯೋಗಿಸಿ ಕೆಲಸ ಮಾಡಿ
- ನಿಮ್ಮ ಸಮಯವನ್ನು ಒಳ್ಳೆಯ ಕಾರ್ಯಗಳಿಗೆ ಸದುಪಯೋಗ ಮಾಡಿಕೊಳ್ಳಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಮನೆಯಲ್ಲಿ ಮೊದಲಿನಿಂದ ನಡೆದುಕೊಂಡು ಬಂದಿರುವ ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸಬಹುದು
- ಬೇರೆಯವರು ಏನೋ ಮಾತನಾಡಿಕೊಳ್ಳುತ್ತಾರೆ ಅನ್ನೊ ಉದ್ದೇಶದಿಂದ ನಿಮ್ಮ ವ್ಯಾಪಾರವನ್ನು ಕೈ ಬಿಡಬೇಡಿ
- ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗಲಿದೆ
- ಇಂದು ಪ್ರೇಮಿಗಳಿಗೆ ಶುಭದಿನ
- ನೀವು ಹೊಸದಾಗಿ ವ್ಯವಹಾರ ಆರಂಭ ಮಾಡಬೇಕೆಂದರೆ ಆಗು ಹೋಗುಗಳನ್ನು ಗಮನಿಸಿ ವ್ಯವಹರಿಸಿ
- ಭೂ ವ್ಯವಹಾರ ಮಾಡುವವರಿಗೆ ಸಾಯಂಕಾಲದ ನಂತರದ ವ್ಯವಹಾರ ಶುಭವಾಗಲಿದೆ
- ಮನೆಯಲ್ಲಿ, ವ್ಯವಹಾರದ ಸ್ಥಳದಲ್ಲಿ ಜಗಳ ಬೇಡ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ
- ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದವರನ್ನು ದ್ವೇಷಿಸಬೇಡಿ
- ಕೇವಲ ಅಂತರವನ್ನು ಕಾಯ್ದುಕೊಳ್ಳಿ
- ತುಂಬಾ ಅಗತ್ಯವಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆ ಮಾಡಿ
- ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ದಿಯನ್ನು ಹೆಚ್ಚಿಸಲಿವೆ
- ಕೆಲಸದ ಸ್ಥಳದಲ್ಲಿ ನಿಮಗೆ ಸಣ್ಣಪುಟ್ಟ ಅಡ್ಡಿಯಾದರೂ ಆತಂಕ ಪಡಬೇಕಾಗಿಲ್ಲ
- ಈ ದಿನ ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸುವವರು ಮಧ್ಯಾಹ್ನದ ನಂತರ ಮಾಡಿಸಿ ಶುಭವಿದೆ
- ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ
ಸಿಂಹ
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ರಕ್ತದೊತ್ತಡ ಸಮಸ್ತೆಯಿರುವವರು ಜಾಗ್ರತೆಯಿಂದಿರಿ
- ಸರ್ಕಾರಿ ಕೆಲಸಗಳಲ್ಲಿ ಅಡಚಣೆಯಿರುತ್ತದೆ
- ಉದ್ಯೋಗ ಹಾಗೂ ವ್ಯವಹಾರದಲ್ಲಿ ಅನಿರೀಕ್ಷಿತ ನಷ್ಟ ಸಾಧ್ಯತೆ
- ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಾರ್ತೆ
- ಈ ದಿನ ಆಲಸ್ಯ ತೋರಿಸಬಾರದು
- ನಿಮ್ಮ ಕೆಲಸಕ್ಕೆ ಸಂಬಂಧಿಸಿದವರು ನಿಮ್ಮ ಅಹವಾಲನ್ನು ಸ್ವೀಕರಿಸಿ ನಿಮಗೆ ಭರವಸೆ ನೀಡುವ ಸಾಧ್ಯತೆಗಳಿವೆ
- ನಿಮ್ಮ ಮನಸ್ಸಿಗೆ ಆನಂದವಾಗಬಹುದು
- ಈ ದಿನ ಕೆಲಸದಲ್ಲಿ ಉತ್ತೇಜನ ಬರುತ್ತದೆ ಹಾಗೆ ಮುಂದುವರೆಸಿ ಶುಭ ಫಲವಿದೆ
- ಪಾರ್ವತಿ ದೇವಿಯನ್ನು ಆರಾಧಿಸಿ
ಕನ್ಯಾ
- ತಲೆನೋವು ಮಾನಸಿಕ ಉದ್ವೇಗಕ್ಕೆ ಒಳಗಾಗುವ ದಿನ
- ಪ್ರೇಮಿಗಳ ಮಧ್ಯೆ ಬಿರುಕು ಉಂಟಾಗಬಹುದು
- ಪ್ರೀತಿಸಿ ಮದುವೆಯಾದ ಒಂದೇ ನಕ್ಷತ್ರ ಒಂದೇ ರಾಶಿಯವರು ಪರಸ್ಪರ ಜಗಳ ಮಾಡಬಹುದು
- ಕೊನೆಗೆ ಕಾನೂನಿನ ಮೊರೆ ಹೋಗುವ ಸಾಧ್ಯತೆಗಳು ಇರುತ್ತವೆ
- ವೈವಾಹಿಕ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು
- ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬೇಡಿ
- ತಾಳ್ಮೆ ಇರಲಿ ವಾದ-ವಿವಾದಗಳು ಅಥವಾ ಜಗಳವೇ ಇದಕ್ಕೆ ಪರಿಹಾರವಲ್ಲ
- ನಿಧಾನವಾಗಿ ಯೋಚಿಸಿ ಸಮಸ್ಯೆಗಳನ್ನು ಶಾಂತವಾಗಿ ಬಗೆಹರಿಸಿಕೊಳ್ಳಲು ಅವಕಾಶಗಳಿವೆ
- ವೃದ್ಧ ದಂಪತಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ
ತುಲಾ
- ರಾಜಕೀಯ ವಿಚಾರದಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ತುಂಬಾ ಪ್ರೋತ್ಸಾಹ ಸಿಗಲಿದೆ
- ಹಣದ ಅನುಕೂಲವಾಗುವ ಸಾಧ್ಯತೆಗಳಿವೆ
- ರಾಜಕೀಯ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಿರುವ ಈ ರಾಶಿಯವರು ಸರಿಯಾದ ನಾಯಕರ ಮಾರ್ಗದರ್ಶನ ಪಡೆದು ಮುಂದುವರೆಯ ಬೇಕಾಗುತ್ತದೆ
- ಮನೆಯಲ್ಲಿ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಇರುತ್ತವೆ
- ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಒಂದು ಅವಕಾಶ
- ಅದೃಷ್ಟ ಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬಂದ ಅನುಭವವಾಗುತ್ತದೆ
- ಯಾವುದರ ದುರುಪಯೋಗವನ್ನು ಮಾಡಿಕೊಳ್ಳದೆ ಕಾರ್ಯತತ್ಪರರಾಗಿರಿ
- ನದಿ ತೀರದಲ್ಲಿರುವ ದೇವಿಯನ್ನು ಆರಾಧಿಸಿ
ವೃಶ್ಚಿಕ
- ವಿದೇಶ ಪ್ರಯಾಣಕ್ಕೆ ಪ್ರಯತ್ನಿಸುವವರಿಗೆ ಈ ದಿನ ಶುಭವಾಗಲಿದೆ
- ಇಂದು ಹಣದ ಕೊರತೆ ಆಗಬಹುದು
- ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ
- ಪದವೀಧರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗುವ ಸಾಧ್ಯತೆ
- ಇಲ್ಲಿಯೇ ಕೆಲಸಕ್ಕೆ ಅವಕಾಶಗಳಿರುತ್ತವೆ
- ವಿದೇಶಕ್ಕೆ ಹೋಗುವ ಸಾಧ್ಯತೆ, ಏನು ಮಾಡಲಿ ಎಂಬ ಚಿಂತೆ ಕಾಡಬಹುದು
- ಅವಕಾಶವನ್ನು ಮುಂದಿಟ್ಟುಕೊಂಡು ಯೋಚಿಸಿ ಫಲವಿಲ್ಲ ಸರಿಯಾದ ನಿರ್ಧಾರ ಮಾಡಿ
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ಧನಸ್ಸು
- ಇಂಜಿನಿಯರ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಪ್ರದವಾದ ದಿನ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೆ ಗೌರವ ದೊರೆಯುವ ದಿನ
- ತಾಯಿಯ ಕಡೆಯಿಂದ ಉತ್ತಮ ಬೆಂಬಲ ಧನ ಸಹಾಯವಾಗುವುದು
- ನಿಮಗಿರುವ ಬುದ್ಧಿವಂತಿಕೆಯನ್ನು ತೋರಿಸಿ ಶುಭ ಫಲವಿದೆ
- ಕಾರ್ಯಕರ್ತರಲ್ಲಿ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಬಹುದು
- ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತ ಉನ್ನತ ವ್ಯಾಸಂಗಕ್ಕೆ ಯೋಜನೆ ಹಾಕಿಕೊಂಡು ಮುಂದುವರಿಯುವ ಸಾಧ್ಯತೆಗಳಿವೆ
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಬಡ ವಿದ್ಯಾರ್ಥಿಗಳ ಸಹಾಯವನ್ನು ಮಾಡಿ
ಮಕರ
- ನಿಮ್ಮ ಪ್ರಾಮಾಣಿಕತೆ ಮತ್ತು ಕೆಲಸ ಕಾರ್ಯಗಳಲ್ಲಿ ನಿಮಗಿರುವ ಬದ್ಧತೆ ನಿಮ್ಮ ಗೌರವವನ್ನು ಹೆಚ್ಚಿಸುವ ದಿನ
- ಆರ್ಥಿಕವಾಗಿ ನಿಮಗೆ ಅನುಕೂಲವಿದೆ
- ಹಣಕ್ಕಿಂತ ನಿಮ್ಮ ಕಾರ್ಯವೈಖರಿಯನ್ನು ಜನ ಮೆಚ್ಚಿ ಅಭಿನಂದಿಸುವುದೇ ನಿಮಗೆ ಹೆಚ್ಚೆನಿಸುತ್ತದೆ
- ನಿಜವಾಗಿ ಇದು ಶಾಶ್ವತವಾದುದು
- ಮಾತು-ಮನಸು ತುಂಬಾ ಮಾಧುರ್ಯವಾಗಿರುವ ದಿನ
- ಜನರು ನಿಮ್ಮ ಆಕರ್ಷಣೆಗೆ ಒಳಗಾಗುತ್ತಾರೆ
- ನಿಮ್ಮ ವೃತ್ತಿ, ನೌಕರಿ ದೃಷ್ಟಿಯಿಂದ ಜನರಿಗೆ, ಸಮಾಜಕ್ಕೆ ಒಳಿತು ಮಾಡಲು ಇದೊಂದು ಸದಾವಕಾಶ
- ನಿಮ್ಮನ್ನು ತೊಡಗಿಸಿಕೊಂಡು ಇನ್ನು ಹೆಚ್ಚಿನ ಜನಪ್ರಿಯತೆಗೆ ಪಾತ್ರರಾಗಿ
- ಗುರು ಹಿರಿಯರನ್ನು ಗೌರವಿಸಿ ಆಶೀರ್ವಾದ ಪಡೆಯಿರಿ
ಕುಂಭ
- ನಿಮ್ಮ ಮನಸ್ಥಿತಿ ಸರಿ ಇರದ ಕಾರಣ ಯಾವುದೋ ಹಳೆಯ ವಿಷಯಕ್ಕೆ ಸಹೋದರ,ಬಂಧುಗಳ ಮಧ್ಯೆ ಕಲಹಕ್ಕೆ ಅವಕಾಶಗಳಿವೆ
- ಮನೆಯ ವಿಚಾರದಲ್ಲಿ ಹೊರಗಿನ ಸಲಹೆ ಅನಗತ್ಯ ಅನಿಸುತ್ತದೆ
- ನಿಮ್ಮ ಪರವಾಗಿ ಬೇರೆಯವರು ಮಾತನಾಡಿದರೆ ಅವರಿಗೆ ಅವಮಾನದ ಸಾಧ್ಯತೆಗಳು ಹೆಚ್ಚು
- ಅದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
- ಇಂದು ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಿ
- ನಿಮ್ಮ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಕಂಡರೆ ತಾತ್ಸಾರ ಮಾಡಬೇಡಿ
- ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು
- ನಿಮ್ಮ ಮನಸ್ಸು ಪರಿವರ್ತನೆಗೆ ಕಾಯುತ್ತಿರುತ್ತದೆ
- ಮಹಾಕಾಳಿಯನ್ನು ಪ್ರಾರ್ಥಿಸಿ
ಮೀನ
- ತಂದೆಯವರ, ದೊಡ್ಡವರ ಸೂಕ್ತ ಮಾರ್ಗದರ್ಶನ ನಿಮಗೆ ಲಭ್ಯವಾಗುತ್ತದೆ
- ನಿಮ್ಮ ಪ್ರತಿಭೆ-ವಿಚಾರವಂತಿಕೆ ಪ್ರಕಾಶ ಪಡಿಸಲು ಸದಾವಕಾಶ
- ಸ್ನೇಹಿತರು ಬಂಧುಗಳ ಪ್ರೀತಿ ವಿಶ್ವಾಸ ನಿಮಗೆ ಸ್ಫೂರ್ತಿದಾಯಕಗಳು
- ಧ್ಯಾನ, ಯೋಗ, ವ್ಯಾಯಾಮಗಳಿಗೆ ಹೆಚ್ಚಿನ ಮನಸ್ಸಿರುತ್ತದೆ
- ಎಲ್ಲಾ ದೃಷ್ಟಿಯಿಂದ ಶುಭ ದಿವಸ
- ಸಮಾಜಕ್ಕೆ ಅನುಕೂಲವಾಗುವ ಉತ್ತಮ ಕೆಲಸ ಮಾಡಿ ಶುಭವಾಗಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ