/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಧನಿಷ್ಠ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಮೇಷ ರಾಶಿ
- ಇವತ್ತಿನ ದಿನ ಬಹಳ ಉತ್ತಮವಾಗಿರುತ್ತದೆ
- ವಿರೋಧಿಗಳಿಂದ ಮಾನಸಿಕ ತಳಮಳ ಉಂಟಾಗಬಹುದು
- ಇಂದು ಸಾಮಾಜಿಕ ವಲಯದಲ್ಲಿ ಹೆಸರು ಮಾಡುವ ಯೋಗವಿದೆ
- ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡಬಹುದು ಎಚ್ಚರಿಕೆ ಇರಲಿ
- ಅಗತ್ಯವಿರುವವರಿಗೆ ಬಂಧುಗಳಿಂದ ಸಹಾಯ ಸಿಗುತ್ತದೆ
- ಹಲವಾರು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಕ್ಕೆ ಹೊಸ ರೂಪ ಬರುತ್ತದೆ
- ದುರ್ಗಾದೇವಿಯ 32 ನಾಮಾವಳಿ ಪಠಿಸಿ
ವೃಷಭ
- ಇಂದು ಅಂದುಕೊಂಡ ಕೆಲಸ ಆಗಬೇಕಾದರೆ ಕಷ್ಟವಿದೆ
- ನಿಮ್ಮ ಕೋಪವನ್ನು ನಿಯಂತ್ರಿಸಿ, ದಾರಿಯಲ್ಲಿ ಜಗಳವಾಗುವ ಸಾಧ್ಯತೆ ಇದೆ
- ಕುಟುಂಬ ಸದಸ್ಯರ ಜೊತೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು
- ನಿಮ್ಮ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಬರಬಹುದು
- ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವ ಅವಕಾಶವಿದೆ
- ಭದ್ರಕಾಳಿಯ ಆರಾಧನೆ ಮಾಡಿ
ಮಿಥುನ
- ಇಂದು ನಿಮ್ಮನ್ನು ನೀವು ಹೆಚ್ಚು ಸಮರ್ಥನೆ ಮಾಡಿಕೊಳ್ಳುವುದು ಒಳ್ಳೆಯದಲ್ಲ
- ಗಂಭೀರ ಚಿಂತನೆ ಹಾಗೂ ತಾಳ್ಮೆಯಿಂದ ಮಾಡಿದ ಕೆಲಸಗಳು ಪರಿಪೂರ್ಣವಾಗುವ ಯೋಗ
- ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
- ಸ್ನೇಹಿತರು, ಬಂಧುಗಳು, ಗಣ್ಯರು ನಿಮಗೆ ಅನುಕೂಲ ಮಾಡಲು ಚಿಂತನೆ ಮಾಡ್ತಾರೆ
- ಗಣಪತಿ ಆರಾಧನೆ ಮಾಡಿ
ಕಟಕ
- ಹಣ ಖರ್ಚು ಮಾಡಲು ಮನಸ್ಸಿರುವುದಿಲ್ಲ, ಆದರೂ ಹಣ ಖರ್ಚಾಗುತ್ತದೆ
- ಇಂದು ಆದಾಯಕ್ಕಿಂತ ಖರ್ಚು ಹೆಚ್ಚು
- ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಯೋಗವಿದೆ
- ಇಂದು ಕಷ್ಟಕರವಾದ ಕೆಲಸಗಳು ಸ್ನೇಹಿತರ ಸಹಾಯದಿಂದ ಸುಗಮವಾಗಿ ನೆರವೇರುತ್ತವೆ
- ದೇವಿಯ ಆರಾಧನೆ ಮಾಡಿ ಮೊಸರನ್ನವನ್ನ ಅರ್ಪಿಸಿ
ಸಿಂಹ
- ಇಂದು ಮಿಶ್ರಫಲ ಕೊಡುವ ದಿನ
- ಸಾಮಾಜಿಕವಾಗಿ ನಿಮ್ಮ ಆಸೆಗಳು ಈಡೇರುತ್ತವೆ
- ವಿವಾದಾತ್ಮಕ ಹೇಳಿಕೆಗಳಿಂದ ಅವಮಾನಿತರಾಗುತ್ತೀರಿ
- ಚಿತ್ತಚಾಂಚಲ್ಯ ಬಿಟ್ಟು ನಿಮ್ಮ ಕೆಲಸಗಳ ಕಡೆಗೆ ಗಮನ ಕೊಡಿ
- ದುರ್ಗಾ ಸಪ್ತಶತಿ ಪಾರಾಯಣ ಮಾಡಿ
ಕನ್ಯಾ
- ಇಂದು ಯಾವುದೇ ರೀತಿಯ ಸಾಲ ಮಾಡುವುದು ಬೇಡ
- ಸಮಾಜದ ಗಣ್ಯರ ಪ್ರೋತ್ಸಾಹ ಮಾರ್ಗದರ್ಶನ ದೊರಕುತ್ತದೆ
- ನಿಮ್ಮ ಎಲ್ಲಾ ಕಾರ್ಯಗಳನ್ನು ಧೈರ್ಯ, ದಕ್ಷತೆ ಮತ್ತು ಪ್ರಾಮಾಣಿಕತೆಗಳಿಂದ ಮಾಡಿ
- ಕಚೇರಿಯ ಕೆಲಸಗಳಿದ್ದರೆ ಮಧ್ಯಾಹ್ನದ ಒಳಗೆ ಪೂರೈಸಿಕೊಳ್ಳಿ
- ಹಣದ ವಿಚಾರ ಬಂದಾಗ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ
- ಶ್ರೀ ಲಕ್ಷ್ಮೀ ಆರಾಧನೆ, ಜೇನಿನ ಅಭಿಷೇಕ ಮಾಡಿಸಿ
ತುಲಾ
- ನಿಮ್ಮ ಮತ್ತು ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಸಾಧ್ಯತೆ ಇದೆ
- ಅದರಲ್ಲೂ ವಾಹನ ವಿಚಾರಕ್ಕೆ ಮನಸ್ತಾಪ, ಜಗಳವಾಗಬಹುದು
- ಇವತ್ತು ದಿನದ ಆರಂಭ ಚೆನ್ನಾಗಿರುತ್ತದೆ
- ಇಂದು ಎಲ್ಲರೊಂದಿಗೆ ಬಹಳ ತಾಳ್ಮೆಯಿಂದ ಮಾತನಾಡಿ
- ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಏರ್ಪಡುವ ಸಾಧ್ಯತೆ ಇದೆ
- ಧರ್ಮ ಪರವಾಗಿರುವ ಒಂದು ಕಥೆಯನ್ನು ಪಠಣೆ ಮಾಡಿ ಶುಭವಾಗುತ್ತದೆ
ವೃಶ್ಚಿಕ
- ಕುಟುಂಬದ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಸಾಧ್ಯತೆ
- ನಂತರ ಬೇಸರ ಉಂಟಾಗುವ ಸಾಧ್ಯತೆ ಇದೆ
- ಇಂದು ಕುಟುಂಬ ಮತ್ತು ಸ್ನೇಹಿತರಿಗಾಗಿ ಹಣ ಖರ್ಚಾಗುತ್ತದೆ
- ನೆರೆಹೊರೆಯವರೊಂದಿಗೆ ಸಣ್ಣ ಕಾರಣಗಳಿಗೆ ಜಗಳ ಸಾಧ್ಯತೆ
- ದೇವಿಯ ಆರಾಧನೆ ಮಾಡಿ, ಕೆಂಪು ಪುಷ್ಪವನ್ನು ಸಮರ್ಪಿಸಿ
ಧನಸ್ಸು
- ಇಂಜಿನಿಯರಿಂಗ್ ಹಾಗೂ ಸಿ.ಎ. ವಿದ್ಯಾರ್ಥಿಗಳಿಗೆ ಶುಭ ದಿನ
- ಇಂದು ಮಕ್ಕಳು, ಮೊಮ್ಮಕ್ಕಳಿಗಾಗಿ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ
- ಮನೆಯಿಂದ ಹೊರಗೆ ಆನಂದದ ಸಮಯವನ್ನು ಕಳೆಯುತ್ತೀರಿ
- ಇಂದು ರಸ್ತೆ ಬದಿಯ ಆಹಾರ ಸೇವನೆ ಮಾಡಬೇಡಿ
- ವನದುರ್ಗಾದೇವಿ ಆರಾಧನೆ ಹಾಗೂ ದೇವಿಗೆ ಸಿಹಿಪೊಂಗಲ್ ನೈವೇದ್ಯ ಮಾಡಿ
ಮಕರ
- ಅನಾರೋಗ್ಯ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ
- ಓದಿನ ಕೊನೆಯ ಹಂತಕ್ಕೆ ಬಂದಿರುವವರಿಗೆ ಉದ್ಯೋಗದ ಅವಕಾಶ ಸಿಗುತ್ತದೆ
- ನಿಮ್ಮಿಂದ ಸಾಲ ಪಡೆದಿದ್ದವರು ಈ ದಿವಸ ಹಣವನ್ನು ಹಿಂದಿರುಗಿಸುವ ಸಾಧ್ಯತೆ
- ಸರಸ್ವತಿ ಆರಾಧನೆ ಮಾಡಿ ಪಾರಿಜಾತ ಹೂ ಅರ್ಪಿಸಿ
ಕುಂಭ
- ಒಟ್ಟಾರೆ ಒಬ್ಬಂಟಿಯಾಗಿ ಕುಳಿತು ತೀರಾ ಸಂಕಟ ಪಡುತ್ತೀರಿ
- ಯಾವುದನ್ನೂ ಸರಿಯಾದ ಸಮಯಕ್ಕೆ ಮಾಡುವುದಕ್ಕೆ ಮನಸ್ಸಿರುವುದಿಲ್ಲ
- ಸಂಜೆ ಸಮಯಕ್ಕೆ ಸ್ನೇಹಿತರು, ಅತಿಥಿಗಳು ಮನೆಗೆ ಬರಬಹುದು ಅವರ ಉಪಚಾರದಲ್ಲಿ ಕಾಲ ಹೋಗುತ್ತದೆ
- ಸಾಂತ್ವನ ಹೇಳುವವರೂ ಇರುವುದಿಲ್ಲ
- ವಿಕಲ ಚೇತನರಿಗೆ ಸಹಾಯ ಮಾಡಿ
- ಅನ್ನಪೂರ್ಣೇಶ್ವರೀ ಆರಾಧನೆ ಮಾಡಿ
ಮೀನ
- ತುಂಬಾ ಪರಿಶ್ರಮದಿಂದ ಕಟ್ಟಿಕೊಂಡ ಆಸೆಗಳು ನುಚ್ಚು ನೂರಾಗುತ್ತವೆ
- ಮಧ್ಯರಾತ್ರಿವರೆಗೂ ಮಾತುಕತೆ ಸಂತೋಷವನ್ನು ಹಂಚಿಕೊಳ್ಳುತ್ತೀರಿ
- ಇಂದು ಮನಸ್ಸು ನಿಮ್ಮ ಮಾತನ್ನು ಕೇಳುವುದಿಲ್ಲ
- ಇಂದು ನಿಮ್ಮದೇ ಲೋಕದಲ್ಲಿ ವಿಹರಿಸುತ್ತೀರಿ
- ಹಾಗೇ ನೀವು ಯಾರ ಮಾತನ್ನು ಕೇಳುವುದಿಲ್ಲ
- ವೆಂಕಟರಮಣನನ್ನು ಆರಾಧಿಸಿ, ವಿಷ್ಣು ಸಹಸ್ರನಾಮ ಕೇಳಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ