/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಹಿರಿಯರ ಆಶೀರ್ವಾದ, ಮಾರ್ಗದರ್ಶನ ಪಡೆಯುತ್ತೀರಿ
- ಇವತ್ತು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು
- ಇಂದು ನಿಮ್ಮ ಜವಾಬ್ದಾರಿಗಳಿಗೆ ಬದ್ಧರಾಗಿರಬೇಕು
- ಈ ದಿನ ಮನೆಗೆ ದಿಢೀರಂತ ಅತಿಥಿಗಳ ಆಗಮನ ಸಾಧ್ಯತೆ
- ಮೇಲಾಧಿಕಾರಿಗಳಿಂದ ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ
- ಸ್ವಂತ ಕೆಲಸಗಳಿದ್ದರೆ ಅದನ್ನು ಮಾಡಿಕೊಳ್ಳಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಸರ್ಕಾರಿ ಕೆಲಸಗಳಲ್ಲಿ ಅಡಚಣೆಯಾಗಬಹುದು
- ಹವಾಮಾನ ಬದಲಾವಣೆಯಿಂದ ತಲೆನೋವು, ಆಲಸ್ಯ ಉಂಟಾಗಬಹುದು
- ಪ್ರೇಮಿಗಳು ಉತ್ಸುಕರಾಗಿರುವ ದಿನ
- ಈ ರಾಶಿಯವರಿಗೆ ಕೋಪ ಹೆಚ್ಚಿರುವ ಸಾಧ್ಯತೆ
- ಪ್ರಮುಖ ಉಪಕರಣ ಅಥವಾ ವಾಹನಕ್ಕೆ ಹಾನಿ ಸಂಭವ
- ವಿದ್ಯಾರ್ಥಿಗಳು ಬಲವಂತವಾಗಿ ಅಭ್ಯಾಸ ಮಾಡಬೇಕಾದ ದಿನ
- ಸರಸ್ವತಿಯ ಪ್ರಾರ್ಥನೆ ಮಾಡಿ
ಮಿಥುನ
- ಇಂದು ಕುಟುಂಬದ ಸದಸ್ಯರೊಂದಿಗೆ ಸಂತೋಷದ ಸಮಯ
- ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತೀರಿ
- ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ
- ಅಧ್ಯಯನ, ಧ್ಯಾನಕ್ಕೆ ಶರೀರ ಅನುಮತಿ ಕೊಡುವುದಿಲ್ಲ
- ತಮ್ಮ ಕೋಪವನ್ನು ಸ್ನೇಹಿತರು, ಮನೆಯವರ ಮೇಲೆ ತೀರಸಬಾರದು
- ಮೃತ್ಯುಂಜಯನನ್ನು ಪ್ರಾರ್ಥಿಸುವುದು ಒಳ್ಳೆಯದು
ಕಟಕ
- ಇಂದು ಹೊಸ ಸ್ನೇಹಿತರು ಸಿಗಬಹುದು
- ಮಾನಸಿಕ ಬೇಸರ, ಅಸಮಾಧಾನ ಸಾಧ್ಯತೆ
- ಹಣಕಾಸಿನ ವ್ಯವಹಾರವಿದ್ದರೆ ಮಧ್ಯಾಹ್ನದ ನಂತರ ಮಾಡಬಹುದು
- ತುಂಬಾ ಅಗತ್ಯವಿದ್ದರೆ ರಾಹುಕಾಲದ ನಂತರ ಪ್ರಯಾಣ ಮಾಡಿ
- ದುರ್ಗಾದೇವಿಯ ಪಾರ್ಥನೆ ಮಾಡಿ
ಸಿಂಹ
- ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಸ್ವಲ್ಪ ಮಟ್ಟಿಗೆ ಕಡಿಮೆ
- ವ್ಯವಹಾರದ ದೃಷ್ಟಿಯಿಂದ ಈ ದಿನ ಚೆನ್ನಾಗಿಲ್ಲ
- ವ್ಯಾಪಾರ-ವ್ಯವಹಾರ ಮಾಡುವವರಿಗೆ ಲಾಭದ ದಿನ
- ಸಂಗಾತಿಯೊಂದಿಗೆ ಉತ್ತಮ ನಡುವಳಿಕೆಯಿಂದ ಇರಬೇಕು
- ಬಹಳ ಯೋಚನೆ ಮಾಡಿ ಅನಾನುಕೂಲವಾಗುವ ಸಾಧ್ಯತೆ ಇದೆ
- ಸಮಾಜದಲ್ಲಿ ಗೌರವ, ಪ್ರಶಸ್ತಿಗಳು ದೊರೆಯುವ ದಿನ
- ಶ್ರೀ ಲಕ್ಷ್ಮಿನಾರಾಯಣನನ್ನು ಪಾರ್ಥನೆ ಮಾಡಿ
ಕನ್ಯಾ
- ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಾಧನೆಗೆ ಅವಕಾಶವಿದೆ
- ಹಳೆಯ ಆಸೆಗಳು ಇಂದು ಈಡೇರುತ್ತವೆ
- ಹೊಸ ಕೆಲಸಗಳನ್ನು ಆರಂಭಿಸಲು ಬಹಳ ಉತ್ತಮ ದಿನ
- ಸಂಕಲ್ಪ, ಹರಕೆ ತೀರಿಸುವುದಕ್ಕೆ ತೊಂದರೆಯಾಗುವ ಸಾಧ್ಯತೆ
- ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು
- ನಿಮ್ಮ ಕುಲದೇವತೆ ಆರಾಧನೆ ಮಾಡಿ
ತುಲಾ
- ಧಾರ್ಮಿಕ ಕಾರ್ಯಗಳ ಬಗ್ಗೆ ಸಂಕಲ್ಪ ಮಾಡುವ ಮುನ್ನ ಹೆಚ್ಚು ಎಚ್ಚರವಹಿಸಿ
- ಜನರು ನಿಮ್ಮ ಮಾತನ್ನು ತಪ್ಪಾಗಿ ತಿಳಿಯುವ ಸಾಧ್ಯತೆ ಇದ್ದು ಮಿತವಾಗಿ ಮಾತನಾಡಿ
- ಸಂಬಂಧಿಕರು, ಸ್ನೇಹಿತರು ಹಣವನ್ನು ಅಥವಾ ವಸ್ತುವನ್ನು ಸಾಲವಾಗಿ ಕೇಳಬಹುದು
- ಪ್ರಯಾಣದ ವಿಚಾರವಿದ್ದರೆ ನಾಳೆಗೆ ಮುಂದೂಡುವುದು ಒಳ್ಳೆಯದು
- ವ್ಯಾಪಾರ-ವ್ಯವಹಾರಗಳಲ್ಲಿ ತುಂಬಾ ಅನುಕೂಲವಾಗುವ ದಿನ
- ಕಾರ್ತವೀರಾರ್ಜುನನ್ನು ಪಾರ್ಥನೆ ಮಾಡಿ
ವೃಶ್ಚಿಕ
- ಶರೀರ ಭಾಗದಲ್ಲಿ ಇದಕ್ಕಿದ್ದಂತೆ ನೋವು ಕಾಣಿಸಬಹುದು
- ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡ ಶಿಸ್ತನ್ನು ಬೇರೆಯವರ ಮೇಲೆ ಹೇರಬೇಡಿ
- ಹಳೆಯ ಸಾಲ ಅಥವಾ ಬಾಕಿಯಿರುವ ಸಾಲದಿಂದ ತೊಂದರೆ ಅವಮಾನ ಸಾಧ್ಯತೆ
- ಇಂದು ಯಾರಿಗೂ ಯಾವುದೇ ಭರವಸೆ ನೀಡಬೇಡಿ
- ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
- ವಿಶೇಷವಾಗಿ ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಸ್ಥಿರಾಸ್ತಿಯನ್ನು ಖರೀದಿಸುವ ಯೋಚನೆ ಬರುತ್ತದೆ
- ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಸಂದರ್ಭ ಬರುತ್ತದೆ
- ಪಿತ್ರಾರ್ಜಿತ ಆಸ್ತಿಯಿಂದ ಹಣ ಬರುವ ಸಾಧ್ಯತೆ
- ಇವತ್ತು ದೂರದ ಪ್ರಯಾಣ ಮುಂದೂಡುವುದು ಒಳ್ಳೆಯದು
- ಇಂದು ನಿಮ್ಮ ಮಾತು, ನಡೆನುಡಿ ಬಹಳ ವಿನಯದಿಂದ ಇರಲಿ
- ವರಾಹ ಸ್ವಾಮಿಯನ್ನು ಪಾರ್ಥನೆ ಮಾಡಿ
ಮಕರ
- ಕಾರ್ಯಕ್ಷೇತ್ರ, ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮನ್ನು ಅಲ್ಪರನ್ನಾಗಿ ಕಾಣಬಹುದು
- ಇಂದು ತುಂಬಾ ಆಲಸ್ಯ ಕಾಡುವ ದಿನ
- ಮುಖ್ಯ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ತೋರುವ ಸಾಧ್ಯತೆ
- ಮಕ್ಕಳಿಂದ, ಚಿಕ್ಕವರಿಂದ ಬೆಂಬಲ ಪ್ರೋತ್ಸಾಹ ಸಿಗುತ್ತದೆ
- ವ್ಯಾಪಾರದಾರರಿಗೆ ಇಂದು ಹೆಚ್ಚು ಲಾಭವಿದೆ
- ಆದರೆ ಅವರು ನಿಮ್ಮನ್ನು ಮರೆಯುವ ಸಾಧ್ಯತೆ ಹೆಚ್ಚು
- ಶ್ರೀ ಲಕ್ಷ್ಮೀ ದೇವಿಯನ್ನು ಪಾರ್ಥನೆ ಮಾಡಿ
ಕುಂಭ
- ನಿಮಗಿರುವ ಅನುಕೂಲವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ
- ನಿಮ್ಮ ಮನಸ್ಸಿನ ಚಂಚಲತೆ ನಿಗ್ರಹಮಾಡಿ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಇಂದು ಅವಕಾಶ, ಅನುಕೂಲ ಕೈ ತಪ್ಪುವ ಸಾಧ್ಯತೆ ಹೆಚ್ಚು
- ಕೆಲಸದ ಒತ್ತಡದಿಂದ ನಿಮಗೆ ನಿರಾಶೆಯಾಗಬಹುದು
- ಕುಲದೇವತೆ ಹಾಗೂ ಗುರುವನ್ನು ಸ್ಮರಣೆ ಮಾಡಿ
ಮೀನ
- ನಿಮ್ಮ ಮನೆಯವರಿಗೆ ನಿಮ್ಮ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಹೆಚ್ಚು
- ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗಬಹುದು ತಾಳ್ಮೆಯಿರಲಿ
- ನಿಮ್ಮಿಂದ ಬೇರೆಯವರಿಗೆ ಸಹಾಯವಾಗುತ್ತದೆ
- ಎಣ್ಣೆಯಿಂದ ಕರಿದ ಪದಾರ್ಥಗಳನ್ನು ಸಿದ್ಧ ಆಹಾರಗಳನ್ನು ತ್ಯಜಿಸುವುದು ಒಳಿತು
- ಅವಕಾಶ ಮಾಡಿಕೊಂಡು ಧ್ಯಾನ-ಯೋಗ ಮಾಡಿ ಆಲಸ್ಯ ಬೇಡ
- ನಿಮ್ಮ ಕುಲದೇವರನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ