/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ
ಇರಲಿದೆ.
ಮೇಷ ರಾಶಿ
- ಅನ್ಯಾಯದ ವಿರುದ್ಧ ಹೋರಾಟ ಮಾಡಲು ಮುಂದಾಗುತ್ತೀರಿ
- ಸಾರ್ವಜನಿಕ ಮತ್ತು ಸಾಮಾಜಿಕವಾಗಿ ಗುರುತಿಸಿಕೊಳ್ಳುವ ದಿನ
- ನಂಬಿಕೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಳ್ಳೆಯದು
- ಯಾರೊಂದಿಗೂ ರಾಜಿಯಾಗುವ ಪ್ರಮೇಯವಿರುವುದಿಲ್ಲ
- ಮಾತು ಮಿತವಾಗಿರಲಿ, ಜಗಳ-ದ್ವೇಷ ಉಂಟಾಗಬಹುದು
- ಪ್ರಜಾಪತಿ, ಯಮಸಹಿತ ಶನಿಯನ್ನು ಆರಾಧಿಸಿ
ವೃಷಭ
- ಶ್ರಮಪಟ್ಟು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನ
- ಗಣ್ಯರ ಭೇಟಿಯಿಂದ ಸಂತಸವಾಗುತ್ತದೆ
- ವಿದ್ಯಾರ್ಥಿಗಳಿಗೆ ಪ್ರಗತಿ ಸಿಗುವ ದಿನ
- ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡುವ ವಾತಾವರಣ ಏರ್ಪಡುತ್ತದೆ
- ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ
ಮಿಥುನ
- ನೀವು ಮಾಡಬೇಕಾದ ಜವಾಬ್ದಾರಿ ಕೆಲಸಗಳನ್ನು ಬೇಗ ಮಾಡಿ ಮುಗಿಸುತ್ತೀರಿ ಆದರೆ ಎಚ್ಚರಿಕೆ ಇರಲಿ
- ಸ್ನೇಹಿತರ, ಕುಟುಂಬ ಸದಸ್ಯರ ಆಗಮನ
- ವ್ಯಾಯಾಮದ ಕಡೆ ಹೆಚ್ಚು ಗಮನಹರಿಸಿ
- ನಿಮ್ಮ ಮಾತಿನ ಬಗ್ಗೆ ಹೆಚ್ಚು ಗಮನವಿರಲಿ
- ಶ್ರೀ ಕೃಷ್ಣನನ್ನು ಆರಾಧಿಸಿ
ಕಟಕ
- ವಿದ್ಯಾರ್ಥಿಗಳಿಗೆ ಪುಸ್ತಕ, ಶೈಕ್ಷಣಿಕ ವಿಷಯಕ್ಕೆ ಬೇಕಾದ ಮಾಹಿತಿ ದೊರಕಬಹುದು
- ಕೈಹಿಡಿದ ಕೆಲಸ ಸಂಪೂರ್ಣ ಮಾಡಿ
- ವಿದ್ಯಾರ್ಥಿಗಳಿಗೆ ಹೆಚ್ಚಿನ ಗೊಂದಲವಿರುತ್ತದೆ
- ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ
- ಆದಾಯ ಕಡಿಮೆ, ಖರ್ಚು ಜಾಸ್ತಿ
- ನಿಮಗೆ ಹಲ್ಲು ನೋವು ಕಾಡಬಹುದು
- ಶ್ರೀ ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಹೊಸ ವಿಚಾರಗಳಲ್ಲಿ ಆಸಕ್ತಿ ಬೆಳೆಯಬಹುದು
- ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ
- ವ್ಯಾಪಾರಿಗಳು ಮೃದುವಾದ ಮಾತಿನಿಂದ ಗ್ರಾಹಕರನ್ನು ಆಕರ್ಷಿಸಬೇಕು
- ವ್ಯಾಪಾರಸ್ಥರಿಗೆ ನಿರೀಕ್ಷೆಗೂ ಮೀರಿ ಲಾಭವಿದೆ
- ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯ ಓದಲು ಮೀಸಲಿಡಬೇಕು
- ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹಿನ್ನಡೆ ಸಾಧ್ಯತೆ
- ಕುಲದೇವತಾ ಆರಾಧನೆ ಮಾಡಿ
ಕನ್ಯಾ
- ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹಿನ್ನಡೆಯಾಗಬಹುದು
- ದಾಯಾದಿಗಳಿಂದ ತೊಂದರೆ, ಅವಮಾನ ಸಾಧ್ಯತೆ
- ಇಂದು ಶತ್ರುಗಳ ನಾಶ ಆಗಲಿದೆ
- ಕುಟುಂಬದಲ್ಲಿ ಹಿರಿಯ ಬೆಂಬಲ ಸಿಗುತ್ತದೆ
- ಪದವೀಧರರಿಗೆ ನೌಕರಿಯ ಸಿಹಿ ಸುದ್ದಿ ಸಿಗಲಿದೆ
- ಈ ದಿನ ಸಾಮಾನ್ಯವಾದ ಸಂತೋಷಕ್ಕೂ ಧಕ್ಕೆ ಬರಬಹುದು
- ಸಣ್ಣ ಸಣ್ಣ ವಿಷಯಗಳು ದೊಡ್ಡದಾಗಿ ತೊಂದರೆಯೇ ಹೆಚ್ಚಾಗಬಹುದು
- ಸರ್ಪರಾಜನನ್ನು ಪ್ರಾರ್ಥಿಸಿ
ತುಲಾ
- ರೇಷ್ಮೆ ಉದ್ದಿಮೆದಾರರಿಗೆ, ವ್ಯಾಪಾರಿಗಳಿಗೆ ಲಾಭವಿದೆ
- ಬಹಳ ದಿನಗಳಿಂದ ಪ್ರಯತ್ನ ಮಾಡುತ್ತಿರುವ ಕೆಲಸಗಳಿಗೆ ಇಂದು ಯಶಸ್ಸು
- ನಿಮ್ಮ ಖರ್ಚಿನ ಬಗ್ಗೆ ಹೆಚ್ಚು ಗಮನಕೊಡಿ
- ಇಂದು ಕೌಟುಂಬಿಕ ಸಮಸ್ಯೆಗಳು ಉಲ್ಬಣವಾಗಬಹುದು
- ಆರೋಗ್ಯದ ಸಮಸ್ಯೆ ಕಾಡುವ ಸಾಧ್ಯತೆ ಇದೆ
- ಸಾಲ ಭಾದೆಯಿಂದ ಮುಕ್ತಿ ಸಿಗಬಹುದು
- ಸಂತೋಷೀ ಮಾತಾ ದೇವಿಯನ್ನು ಆರಾಧಿಸಿ
ವೃಶ್ಚಿಕ
- ಇಂದು ಪಾಲುದಾರರಿಗೆ ಉತ್ತಮ ಲಾಭದ ದಿನ
- ವಿವಾಹ ಅಪೇಕ್ಷೆಗಳಿಗೆ ಶುಭ ದಿನ
- ವಿಶ್ರಾಂತಿಯ ಅಗತ್ಯವಿರುತ್ತದೆ
- ಜವಾಬ್ದಾರಿ ಹೆಚ್ಚಿರುವ ಕೆಲಸವನ್ನು ಮರೆಯುವ ಸಾಧ್ಯತೆ ಇದೆ
- ಮೇಲಾಧಿಕಾರಿಯ ನಿವೃತ್ತಿಯ ವಿಚಾರ ತಿಳಿದು ಬೇಸರವಾಗಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಇಂದು ಭೂ ಸಂಬಂಧಿ ವಿಚಾರಗಳಲ್ಲಿ ಲಾಭ
- ಒತ್ತಡದ ಕೆಲಸದ ಮಧ್ಯ ಬಿಡುವು ಮಾಡಿಕೊಂಡು ಧ್ಯಾನ ಮಾಡಿ
- ಬಿಡುವಿಲ್ಲದ ಸಮಯದಲ್ಲೂ ಸಮಾಜ ಸೇವೆ ಮಾಡಿ ಗೌರವ ಸಂಪಾದನೆ ಮಾಡಿ
- ಸ್ಥಿರಾಸ್ತಿಯ ಬಗ್ಗೆ ಚಿಂತಿಸುವಿರಿ
- ನಿಮ್ಮ ಜವಾಬ್ದಾರಿ ಕೆಲಸಗಳಲ್ಲಿ ಹೆಚ್ಚು ಗಮನಹರಿಸಿ, ತಾತ್ಸಾರ ಬೇಡ
- ಚಂದ್ರನನ್ನು ವಿಶೇಷವಾಗಿ ಪ್ರಾರ್ಥಿಸಿ
ಮಕರ
- ಇಂದು ಸರ್ಕಾರಿ ಕೆಲಸಗಳಲ್ಲಿ ವಿಳಂಬ ಸಾಧ್ಯತೆ
- ಇಂದು ದಾನ-ಧರ್ಮ ವಿಚಾರ ಬಗ್ಗೆ ಮನಸ್ಸಿನಲ್ಲಿ ಗೊಂದಲ ಬೇಡ
- ಕಟ್ಟಡ ಸಾಮಾಗ್ರಿ ಮಾರಾಟಗಾರರಿಗೆ ಹಿನ್ನಡೆ ದಿನ
- ಕೋರ್ಟ್ ಕಚೇರಿಯಲ್ಲಿನ ಕೇಸ್ ಇತ್ಯರ್ಥ ಆಗಲಿದೆ
- ಭೂಸಂಬಂಧಿ ವಿಷಯಕ್ಕೆ ಜಗಳ ಆಗಬಹುದು
- ಶನೈಶ್ಚರನನ್ನು ಪ್ರಾರ್ಥಿಸಿ
ಕುಂಭ
- ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನಲಾಭ
- ಸ್ನೇಹಿತರು, ಸಂಬಂಧಿಗಳ ಮನೆಯ ಮಂಗಳ ಕಾರ್ಯಗಳಲ್ಲಿ ಭಾಗಿ
- ಇಂದು ಮಾನಸಿಕ ಭಯ ನಿವಾರಣೆ ಸಾಧ್ಯತೆ
- ಇಂದು ಚಂಚಲ ಮನಸ್ಸು, ಯಾವುದೇ ಕಾರಣಕ್ಕೂ ಸುಳ್ಳು ಮಾತನಾಡಬೇಡಿ
- ವಾಹನ ಮಾರಾಟ ಮಾಡುವವರಿಗೆ ಅಧಿಕ ಲಾಭ
- ಶ್ರೀ ರಾಮಚಂದ್ರನನ್ನು ಪ್ರಾರ್ಥಿಸಿ
ಮೀನ
- ಕೃಷಿ ಉಪಕರಣ ಮಾರಾಟ ಮಾಡುವವರಿಗೆ ಹಿನ್ನಡೆ
- ಇಂದು ನಿಮ್ಮ ಆತ್ಮಿಯರ, ಪ್ರೀಯರ ಭೇಟಿ ಮಾಡುತ್ತೀರಿ
- ದಾನ-ಧರ್ಮದ ಬಗ್ಗೆ ವಿರುದ್ಧವಾದ ಮಾತುಗಳು ಬೇಡ
- ಪ್ರೀತಿ- ಪ್ರೇಮ ವಿಚಾರದಲ್ಲಿ ಮನಸ್ಸಿಗೆ ನೆಮ್ಮದಿ
- ಇಂದು ತೆರಿಗೆ ಸಂಬಂಧಿ ತಜ್ಞರಿಗೆ ಹೆಚ್ಚಿನ ಲಾಭದ ದಿನ
- ಕುಲದೇವತೆ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ