/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಕುಟುಂಬದ ಸದಸ್ಯರು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ
- ಈ ದಿನ ಹಿರಿಯರ ಆಶೀರ್ವಾದ ಸಿಗಲಿದೆ
- ಸಾಲಕ್ಕೆ ಹಣ ಬೇಕೆಂದರೆ ತಕ್ಷಣ ಸಿಗುವ ಸಾಧ್ಯತೆ ಇದೆ
- ಕೆಲಸದಲ್ಲಿನ ನಿಮ್ಮ ಗುಣಗಳನ್ನು ಜನರು ಒಪ್ಪಿ ಹೆಚ್ಚು ಗೌರವಿಸುವ ಸಾಧ್ಯತೆ
- ಸಾಮಾಜಿಕವಾಗಿ ಮತ್ತು ಮಾಧ್ಯಮಗಳಲ್ಲಿ ಹೆಚ್ಚು ಗೌರವ ಸಿಗುತ್ತದೆ
- ಈ ದಿನ ನಿಮಗೆ ಎಲ್ಲ ರೀತಿಯಲ್ಲಿ ಶುಭದಿನ
- ಅಮೃತೇಶ್ವರನನ್ನು ಪ್ರಾರ್ಥನೆ ಮಾಡಿ
ವೃಷಭ
- ಹೊಸ ಕೆಲಸಗಳನ್ನು ಆರಂಭ ಮಾಡುವುದಕ್ಕೆ ಉತ್ತಮವಾದ ದಿನ
- ನಿಮಗೆ ಸ್ನೇಹಿತರು, ಹಿತೈಷಿಗಳಿಂದ ಉತ್ತಮವಾದ ಸ್ಪಂದನೆ ಸಿಗುತ್ತದೆ
- ಸಂಘ-ಸಂಸ್ಥೆ ಅಥವಾ ಟ್ರಸ್ಟ್ ಪ್ರಾರಂಭಿಸಲು ಇಂದು ಉತ್ತಮವಾದ ಸಮಯ
- ನಿಮ್ಮ ವ್ಯವಹಾರ, ಉದ್ಯೋಗಗಳಲ್ಲಿ ಉತ್ತಮ ಫಲ ಸಿಗುವ ದಿನ
- ನಿಮ್ಮ ಕುಲದೇವತೆ ಆರಾಧನೆ ಮಾಡಿ
ಮಿಥುನ
- ನಿಮ್ಮ ಪ್ರತಿಭೆ, ವಿದ್ಯೆ-ಬುದ್ಧಿಯನ್ನು ಸಮಾಜಕ್ಕೆ ತೋರಿಸಬೇಕಾದ ದಿನ
- ನಿಮಗಿರುವ ಆಳವಾದ ಜ್ಞಾನ ಹಾಗೇ ಉಳಿದು ಬಿಡುವ ಸಾಧ್ಯತೆ
- ಇಂದು ಬೇರೆಯವರಿಂದ ಅನುಕೂಲ ಪಡೆಯಬೇಕಾದ ಸಮಯ
- ಸಮಾಜದ ಕೆಲವರಿಂದ ಕಿರಿಕಿರಿ, ತೊಂದರೆಯಾಗುವ ಸಾಧ್ಯತೆ
- ದೇವಿಯನ್ನು ಆರಾಧನೆ ಮಾಡಿ
ಕಟಕ
- ನಿಮಗೆ ಬೆನ್ನುಮೂಳೆಯ ಸಮಸ್ಯೆ ಕಾಡಬಹುದು
- ಇಂದು ಪ್ರಯಾಣಕ್ಕೆ ಯೋಗ್ಯವಲ್ಲದ ದಿನ, ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು
- ಆರೋಗ್ಯದ ಬಗ್ಗೆ ತಾತ್ಸಾರ ಮಾಡಬೇಡಿ, ಅಗತ್ಯ ಬಿದ್ದರೆ ವೈದ್ಯರನ್ನು ಭೇಟಿ ಮಾಡಿ
- ಇಂದು ಶಸ್ತ್ರ ಚಿಕಿತ್ಸೆಯನ್ನು ನಾಳೆ ಬೆಳಗ್ಗೆಗೆ ಮುಂದೂಡುವುದು ಒಳ್ಳೆಯದು
- ಚಂಡಿಕಾ ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ನಿಮ್ಮ ವೃತ್ತಿ ನಿಮಗೆ ಸಮಾಧಾನ ಕೊಡುವ ದಿನ
- ವೈಯ್ಯಕ್ತಿಕ ಕಾರಣಗಳಿಂದ ನಿಮ್ಮ ಮನಸ್ಸು ಕಲುಷಿತಗೊಂಡು ಮಾನಸಿಕ ಅಸಮಾಧಾನ ಸಾಧ್ಯತೆ
- ನಿಮ್ಮಿಂದ ಅವಮಾನಕ್ಕೆ ಒಳಗಾದವರು ನಿಮ್ಮನ್ನ ಅವಹೇಳನ ಮಾಡುವ ಸಾಧ್ಯತೆ
- ನಿಮ್ಮ ವ್ಯಕ್ತಿತ್ವವನ್ನು ಬೇರೆಯವರ ಜೊತೆಗೆ ಹೋಲಿಕೆ ಮಾಡಬೇಡಿ
- ನಿಮ್ಮ ಕೋಪ ನಿಮಗೆ ತೊಂದರೆ ಮಾಡುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ
- ಉಮಾಮಹೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಬೇರೆಯವರ ಕೆಲಸದಲ್ಲಿ ತೊಡಗಿಸಿಕೊಂಡು ಅವಮಾನಕ್ಕೆ ಒಳಗಾಗುವ ಸಾಧ್ಯತೆ ಇದೆ
- ತಮ್ಮ ಭವಿಷ್ಯತ್ತಿನ ವಿದ್ಯೆಗೆ ಬೇಕಾಗಿರುವ ಮಾರ್ಗದರ್ಶನ ಸಿಗುವ ದಿನ
- ತಜ್ಞರಿಂದ ಉತ್ತಮವಾದ ಸಲಹೆ ಪಡೆಯಿರಿ
- ಏನಾದರು ತೀರ್ಮಾನ ಮಾಡುವಾಗ ಸರಿಯಾದ ಆಲೋಚನೆ ಮಾಡಿ
- ಇಲ್ಲದಿದ್ದರೆ ಹಣ ಖರ್ಚಾಗಿ ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆ
- ಸರಸ್ವತಿಯನ್ನು ಆರಾಧನೆ ಮಾಡಿ
ತುಲಾ
- ಇಂದು ದಿಢೀರ್ ಪ್ರಯಾಣ ಏರ್ಪಡುವ ಸಾಧ್ಯತೆ ಇದೆ
- ವಿದ್ಯಾರ್ಥಿಗಳಿಗೆ ಅತಿಮುಖ್ಯವಾದ ದಿನ
- ಬೇರೆಯವರ ಸಹಾಯಕ್ಕಾಗಿ ಪ್ರಯಾಣ ಮಾಡುವಾಗ ಎಚ್ಚರಿಕೆ ಇರಲಿ
- ಮುಂದೆ ಅವರಿಂದಲೇ ಅವಮಾನವಾಗುವ ಸಾಧ್ಯತೆ ಉಂಟು
- ದುರ್ಗಾದೇವಿ ಆರಾಧನೆ ಮಾಡಿ
ವೃಶ್ಚಿಕ
- ನಿಮಗಿರುವ ಅನುಕೂಲ ನೋಡಿ ನಿಮಗೆ ಅಹಂಕಾರ ಬರುವ ದಿನ
- ಅದನ್ನು ಮಾನಸಿಕವಾಗಿ ಕಡಿಮೆ ಮಾಡಿಕೊಳ್ಳಿ
- ಸಾಯಂಕಾಲದ ಹೊತ್ತಿಗೆ ಒಳ್ಳೆಯ ಸುದ್ದಿ ಕೇಳಿ ಮನಸ್ಸಿಗೆ ಸಮಾಧಾನ ಸಿಗುತ್ತದೆ
- ನಿಮ್ಮ ಮಾತಿನಿಂದ ನಿಮ್ಮ ವೈಯ್ಯಕ್ತಿಕ ಜೀವನಕ್ಕೆ ಧಕ್ಕೆ ಬರದಂತೆ ಎಚ್ಚರಿಕೆ ಇರಲಿ
- ಬುಧಗ್ರಹವನ್ನು ಆರಾಧನೆ ಮಾಡಿ
ಧನಸ್ಸು
- ಆರೋಗ್ಯದ ಬಗ್ಗೆ ಗಮನಹರಿಸಿ
- ಸಂಧಿವಾತ ನಿಮಗೆ ಹೆಚ್ಚಾಗಿ ಕಾಡಬಹುದು
- ವಯಸ್ಸಾದವರಿಗೆ ಹಳೆಯ ನೋವಿನಿಂದ ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆ ಇದೆ
- ವೈದ್ಯರ ಸಲಹೆ ಪಡೆದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ
- ಮೃತ್ಯುಂಜಯನನ್ನು ಪ್ರಾರ್ಥಿಸಿ
ಮಕರ
- ಮನೆಯಲ್ಲಿ ನಿಮ್ಮನ್ನು ನಿರ್ಲಕ್ಷಿಸಬಹುದು
- ನಿಮ್ಮ ಸ್ವಭಾವವೂ, ವರ್ತನೆಯೂ ಹಾಗೆಯೇ ಇರುತ್ತದೆ
- ಇಂದು ನಿಮಗೆ ಅಪಖ್ಯಾತಿ ಕೂಡ ಬರುವ ಸಾಧ್ಯತೆ ಇದೆ
- ಮನೆ ಸದಸ್ಯರ ಸಂತೋಷಕ್ಕಾಗಿ ಕೆಲ ವಿಚಾರಗಳಲ್ಲಿ ರಾಜಿ ಒಳ್ಳೆಯದು
- ನಿಮ್ಮ ಕುಲದೇವತೆ ಮತ್ತು ಆಂಜನೇಯನನ್ನು ಪ್ರಾರ್ಥನೆ ಮಾಡಿ
ಕುಂಭ
- ಇಂದು ಹಣದ ವಿಚಾರದಲ್ಲಿ ತುಂಬಾ ಜಾಗ್ರತೆ ಇರಲಿ
- ನೀವು ಬೇರೆಯವರಿಗೆ ಕೊಡಿಸಿದ್ದ ಸಾಲದಿಂದ ತೊಂದರೆಯಾಗಬಹುದು
- ಅದರಿಂದ ನಿಮ್ಮ ಜೊತೆ ಗಲಾಟೆಯಾಗುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ
- ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ, ಜಗಳ ಮಾಡಿಕೊಳ್ಳಬೇಡಿ
- ಈ ದಿನ ತಾಳ್ಮೆಯಿಂದ ವರ್ತಿಸಿ
- ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿದರೆ ಒಳಿತು
- ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಮೀನ
- ಇಂದು ನಿಮ್ಮ ಬುದ್ಧಿವಂತಿಕೆ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುತ್ತದೆ
- ದೂರದ ಊರಿನಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ
- ಇದರಿಂದ ಹಲವಾರು ಜನ ನಿಮ್ಮನ್ನು ಅಭಿನಂದಿಸುತ್ತಾರೆ
- ನಿಮ್ಮ ವೈಯ್ಯಕ್ತಿಕ ವರ್ಚಸ್ಸು ಹೆಚ್ಚಾಗುವ ಸಾಧ್ಯತೆ ಇದೆ
- ಆದಿತ್ಯನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ