/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ
ಇರಲಿದೆ.
ಮೇಷ ರಾಶಿ
- ದಂಪತಿಗಳಲ್ಲಿ ವೈಮನಸ್ಸು ಮೂಡುವ ಸಾಧ್ಯತೆ
- ಮನೆ ಕಟ್ಟುವ, ಖರೀದಿಸುವ ಮಾತುಕತೆಗೆ ಅನುಕೂಲವಾದ ದಿನ
- ಸಂಬಂಧಿಕರ ವಿಚಾರ ಕುರಿತು ದುಃಖವಾಗುತ್ತದೆ
- ಆದರೆ ಹೊರಗಿನವರಿಂದ ಮೋಸ ಹೋಗುತ್ತೀರಿ ಎಚ್ಚರಿಕೆ ಇರಲಿ
- ಪ್ರತ್ಯಂಗೀರಾದೇವಿಯನ್ನು ಆರಾಧಿಸಿ
ವೃಷಭ
- ಇಂದು ಕೆಲಸದ ಒತ್ತಡ ಕಡಿಮೆ, ಆದರೆ ಆಲಸ್ಯ ಬೇಡ
- ನಿಮ್ಮ ಸಂಗಾತಿಯೊಂದಿಗೆ ಕೋಪವಿರುತ್ತದೆ
- ಬೇರೆಯಾಗುವ, ಮನೆಬಿಟ್ಟು ಹೋಗುವ ಸೂಚನೆಗಳು ಕಾಣುತ್ತದೆ
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ಶುಭ ದಿನ
- ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಸ್ವಾಭಿಮಾನಕ್ಕೆ ಧಕ್ಕೆ ಬರುವ ಸನ್ನಿವೇಶ ಒದಗುತ್ತದೆ
- ಹೊಸ ಆಲೋಚನೆಗಳ ಬಗ್ಗೆ ಕುತೂಹಲವಿರುತ್ತದೆ
- ಕೆಲವು ಸವಾಲುಗಳನ್ನು ಎದುರಿಸುತ್ತಿದ್ದರೆ ಅವುಗಳು ಇಂದು ಈಡೇರುತ್ತದೆ
- ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಪ್ರದರ್ಶಿಸಿ ಗೌರವ ಪಡೆಯಿರಿ, ತಾಳ್ಮೆಯಿರಲಿ
- ಸಂಬಂಧಿಕರು ನಿಮ್ಮ ಅಭಿವೃದ್ಧಿಯನ್ನು ಸಹಿಸುವುದಿಲ್ಲ
- ಲಕ್ಷ್ಮೀನಾರಾಯಣರನ್ನು ಆರಾಧಿಸಿ
ಕಟಕ
- ಹಿಂದೆ ಮಾಡಿದ್ದ ಸಾಲದಿಂದ ಇಂದು ಅವಮಾನ ಸಾಧ್ಯತೆ
- ಸಮಯ ಕೇಳದೆ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡಿ
- ಮನೆಯಲ್ಲಿ ಉತ್ತಮ ವಾತಾವರಣ ಇರುವುದಿಲ್ಲ
- ಖರ್ಚು ಹೆಚ್ಚು, ಮನಸ್ಸಿಗೆ ಹೆಚ್ಚು ಅತೃಪ್ತಿ ಇರುತ್ತದೆ
- ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಕಾಳಜಿವಹಿಸಿ
- ಭಗವತಿ ದೇವಿಯ ಆರಾಧನೆ ಮಾಡಿ
ಸಿಂಹ
- ಇದರಿಂದ ನಿಮ್ಮ ಬೇರೆ ಕೆಲಸಗಳಿಗೂ ಹಿನ್ನಡೆಯಾಗುತ್ತದೆ
- ಇಂದು ವ್ಯಾಪಾರದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ
- ಅಕ್ಕಪಕ್ಕದವರಿಂದ ಅವಮಾನ, ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ
- ಇಂದು ಯಾವ ದುಬಾರಿ ವಸ್ತುವನ್ನು ಖರೀದಿಸಬೇಡಿ
- ಮಹಾವಿಷ್ಣು, ಮಹಾಲಕ್ಷ್ನಿಯನ್ನು ಆರಾಧನೆ ಮಾಡಿ
ಕನ್ಯಾ
- ಇಂದು ನಿಮ್ಮ ಕಾರ್ಯಕ್ಷೇತ್ರದಲ್ಲಿ ರಾಜಕೀಯ ನಡೆಯುವ ಸಾಧ್ಯತೆ
- ನಿಮ್ಮ ಮೇಲೆ ಹಣ, ಕಳ್ಳತನದ ಆರೋಪ ಬರಬಹುದು
- ನಿಮ್ಮದಲ್ಲದ ತಪ್ಪಿಗೆ ನೀವು ಶಿಕ್ಷೆಯನ್ನು ಅನುಭವಿಸಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತೀರಿ
- ನೀವು ಇಂದು ಸ್ವಲ್ಪ ಜಾಗ್ರತೆಯಿಂದ ಇರಬೇಕಾದ ದಿನ
- ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ
ತುಲಾ
- ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
- ನಿಮ್ಮ ಕೋಪ ನಿಮ್ಮ ಹಿಡಿತದಲ್ಲಿ ಇರಲಿ
- ಉತ್ತಮವಾದ ಕೆಲಸದ ಕಡೆ ಗಮನ ಕೊಡಿ
- ಬೇರೆಯವರಿಗೆ ದುಃಖ ಉಂಟಾಗದಂತೆ ಗಮನಿಸಿ ಮಾತನಾಡಿ
- ಸಂಬಂಧಿಕರ ಮನೆಯಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆಗಳಿವೆ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ನಿಮ್ಮ ಕೆಲಸವನ್ನು ಕೆಲವರು ಪ್ರಶಂಸೆ ಮಾಡುತ್ತಾರೆ
- ಇಂದು ಎಲ್ಲಾ ಕಡೆಯಿಂದ ಶುಭಸುದ್ದಿ, ಶುಭಾಷಯಗಳು ಬರುತ್ತವೆ
- ಹಿಂದೆ ಮಾಡಿದ್ದ ಒಂದು ಕೆಲಸ ಇಂದು ನಿಮಗೆ ಗೌರವ ಕೊಡುತ್ತದೆ
- ರಾತ್ರಿ ಹೊತ್ತಲ್ಲಿ ಪ್ರಯಾಣ ಮಾಡಬೇಡಿ
- ನಿಮ್ಮ ಸಲಹೆಗಳಿಂದ ಜನರಿಗೆ ಅನುಕೂಲವಾಗುತ್ತದೆ
- ಈಶ್ವರನನ್ನು ಪ್ರಾರ್ಥನೆ ಮಾಡಿ
ಧನಸ್ಸು
- ನಿಮ್ಮ ವಿಚಿತ್ರ ನಡವಳಿಕೆಯಿಂದ ನಿಮ್ಮ ಪ್ರೀತಿಪಾತ್ರರು ದೂರವಾಗುತ್ತಾರೆ
- ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ
- ಆದರೆ, ವೈಯ್ಯಕ್ತಿಕ ಸ್ವಭಾವದಿಂದ ನಿಮಗೆ ಅವಮಾನವೇ ಹೆಚ್ಚು
- ಎಲ್ಲಾದರು ಹೊರಡುವುದಿದ್ದರೆ ರಾತ್ರಿಯ ಒಳಗೆ ತಲುಪಿ, ಇಲ್ಲ ಪ್ರಯಾಣವನ್ನು ನಾಳೆಗೆ ಮುಂದೂಡಿ
- ನವಗ್ರಹ ಪ್ರಾರ್ಥನೆ ಮಾಡಿ
ಮಕರ
- ನಿಮ್ಮ ಹಕ್ಕುಗಳನ್ನು, ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳಿ
- ಉನ್ನತ ಹುದ್ದೆಯಲ್ಲಿರುವವರಿಗೆ ಅವರ ಕೈಕೆಳಗೆ ಕೆಲಸ ಮಾಡುವವರಿಂದ ತೊಂದರೆ ಸಾಧ್ಯತೆ
- ಯಾವುದೇ ಫೋನ್ ಕರೆಗಳು, ಸಂದೇಶಗಳು ಬಂದರೆ ತಾಳ್ಮೆಯಿಂದ ಉತ್ತರ ಕೊಡಿ
- ನಿಮ್ಮ ಮಾತಿನಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರದಂತೆ ಕಾಪಾಡಿಕೊಳ್ಳಿ
- ವಿಷ್ಣುವನ್ನು ಆರಾಧಿಸಿ
ಕುಂಭ
- ಇಂದು ಹಣಕಾಸಿನ ಸಮಸ್ಯೆ ಉಂಟಾಗಬಹುದು
- ಹಿಂದೆ ಸಂಗ್ರಹ ಮಾಡಿಟ್ಟಿದ್ದ ಹಣಕ್ಕೆ ಸಂಚಕಾರ ಬರುವ ಸಾಧ್ಯತೆ
- ಕುಟುಂಬದ ಸದಸ್ಯರೊಂದಿಗೆ ನೀವು ಪ್ರಯಾಣ ಬೆಳೆಸಿ ಆನಂದವಾಗಿರಿ
- ಹೂಡಿಕೆ ಮಾಡಿದ್ದ ಹಣವು ಬೇರೆಯವರ ಪಾಲಾಗುವುದರಿಂದ ಕೋರ್ಟಿನ ಮೆಟ್ಟಿಲೇರಬಹುದು ಎಚ್ಚರ
- ಧಾನ್ಯಲಕ್ಷ್ಮಿ, ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ಗಂಡ-ಹೆಂಡತಿ ಇಬ್ಬರದ್ದೂ ಒಂದೇ ನಕ್ಷತ್ರ ಒಂದೇ ರಾಶಿ ಆಗಿದ್ದರೆ ಪರಸ್ಪರ ಹೊಂದಾಣಿಕೆ ಇರುವುದಿಲ್ಲ
- ಇಂದು ಪ್ರವಾಸಕ್ಕೆ ಯೋಗ್ಯವಾದ ದಿನ
- ನಿಮ್ಮ ಕೈ ಕೆಳಗೆ ಕೆಲಸ ಮಾಡವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಿ
- ತಾವು ಕ್ಷಮೆಯಾಚಿಸುವ ಪ್ರಸಂಗ ಒದಗಿಬರಬಹುದು
- ರಾಹುವನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ