/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಕುಟುಂಬದ ಸದಸ್ಯರಿಂದ ನಿಮಗೆ ಸಹಕಾರ ಸಿಗುವುದಿಲ್ಲ
- ಮನಸ್ಸಿನ ಶಾಂತಿ ಕದಡುತ್ತೆ ಸ್ವಲ್ಪ ಜಾಗ್ರತೆವಹಿಸಿ
- ನಿಮ್ಮನ್ನ ಸೋಲಿಸಲು ಪ್ರತಿಸ್ಪರ್ಧಿಗಳು ಕಾಯ್ತಾ ಇರ್ತಾರೆ ಜಾಗ್ರತೆ
- ಬೇರೆಯವರ ಆಶ್ರಯದಿಂದ ತಮ್ಮ ಕೆಲಸಗಳನ್ನ ಮಾಡಿಕೊಳ್ಳುತ್ತೇನೆ ಅನ್ನೋ ಸಂಕಲ್ಪ ಬೇಡ
- ಮನೆಯಿಂದ ಹೊರಗೆ ಹೋದಾಗ ನಿಮಗೆ ಬೆಲೆ, ಗೌರವ ಸಿಗುತ್ತದೆ
- ಆಂಜನೇಯ ಸ್ವಾಮಿಗೆ ಗಂಧದ ಸೇವೆ ಮಾಡಿಸಿ
ವೃಷಭ
- ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಡಿ
- ಐಷಾರಾಮಿ ಜೀವನಕ್ಕೆ ಅವಕಾಶವಿದೆ ಅದನ್ನ ಸದುಪಯೋಗ ಪಡಿಸಿಕೊಳ್ಳಿ
- ದಾಖಲಾತಿಗಳಲ್ಲಿ ವ್ಯತ್ಯಯಗಳಾಗಿ ಗ್ರಾಹಕರಿಂದ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ
- ಪೂಜೆ,ಜಪ,ಹೋಮ ಮಾಡುವುದರಿಂದ ಉತ್ತಮ ಫಲ ದೊರೆಯುತ್ತದೆ
- ಭೂ ವ್ಯವಹಾರದಲ್ಲಿರುವ ದೋಷವು ನಿವಾರಣೆಯಾಗುತ್ತದೆ
- ಕುಲದೇವತಾ ಪ್ರಾರ್ಥನೆ ಮಾಡಿ
ಮಿಥುನ
- ನಿಮ್ಮಿಬ್ಬರಲ್ಲಿ ಪರಸ್ಪರ ಹೊಂದಾಣಿಕೆ ಇರಲಿ
- ನೀವು ಸರಿಯಾದ ಮಾಹಿತಿಯನ್ನು ದಾಖಲಾತಿಗಳನ್ನ ಇಟ್ಟುಕೊಂಡು ಗ್ರಾಹಕರೊಂದಿಗೆ ವ್ಯವಹರಿಸಿ
- ಖರೀದಿಗೆ ಬಂದ ಗ್ರಾಹಕರು ವ್ಯವಹಾರವನ್ನು ಮಾಡದೆ ಹಿಂದಿರುಗಬಹುದು
- ಈ ದಿನ ತಕ್ಷಣ ನಿರ್ಧಾರ ಮಾಡಬೇಡಿ
- ಮಕ್ಕಳ ವಿಚಾರದಲ್ಲಿ ಸ್ವಲ್ಪ ಬೇಸರವಾಗುವ ಸಾಧ್ಯತೆ ಹೆಚ್ಚು
- ಮಾತಿನ ಬಗ್ಗೆ ಗಮನ ವಿರಲಿ
- ಭೂ ಸಂಬಂಧಿ ವ್ಯವಹಾರಿಗಳಿಗೆ ,ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಅಷ್ಟೊಂದು ಒಳ್ಳೆಯ ದಿನವಲ್ಲ
- ಮಕ್ಕಳು ಕೂಡ ಶಿಕ್ಷಕರಿಗೆ ವಿರುದ್ಧ ರೀತಿಯಲ್ಲಿ ನಡ್ಕೊಬೇಡಿ
- ಲಕ್ಷ್ಮೀ ಸರಸ್ವತಿಯರಿಬ್ಬರನ್ನು ಆರಾಧಿಸಬೇಕು
ಕಟಕ
- ಸಾಧನೆ ಮಾಡಬೇಕೆಂದು ಬೇರೆಯವರ ಸಹಾಯದ ನಿರೀಕ್ಷೆಯಲ್ಲಿರೋದಿಂದ್ರ ಆ ನಿರೀಕ್ಷೆ ಹುಸಿಯಾಗುತ್ತೆ
- ಸಹೋದರರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಗಮನ ಹರಿಸಿ
- ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯದಲ್ಲಿ ಅಸಮಾಧಾನ ಉಂಟಾಗುವ ಪರಿಸ್ಥಿತಿ
- ಶಿಕ್ಷಕರು ಮಕ್ಕಳನ್ನ ನಿಂದಿಸುವುದು, ಹೊಡೆಯುವುದು ಮಾಡಬೇಡಿ
- ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಬೇರೆಯವರಿಗೆ ಹೋಲಿಕೆ ಮಾಡಿ ಒತ್ತಡ ಹೇರಬೇಡಿ
- ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬ ಮಾತನ್ನ ಕುಟುಂಬದ ಸದಸ್ಯರು ನಿಮಗೆ ಹೇಳ್ತಾರೆ
- ಗುರು-ಶಿಷ್ಯರು ತಾಯಿ ಶಾರದೆಯನ್ನು ಪ್ರಾರ್ಥಿಸಿ
ಸಿಂಹ
- ಈ ದಿನ ಓದುವುದರಿಂದ ಭವಿಷ್ಯದಲ್ಲಿ ಅನುಕೂಲವಾಗುತ್ತದೆ
- ಪದಾರ್ಥಗಳನ್ನ ಆಮದು ರಫ್ತು ಮಾಡುತ್ತಿರುವವರಿಗೆ ಇಂದು ಶುಭದಿನ
- ಹೊಸ ವಾಹನ ಖರೀದಿಯ ಯೋಗವಿದೆ
- ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ
- ನಿಮ್ಮ ಮನೆದೇವರ ದರ್ಶನ ಮಾಡಿ
ಕನ್ಯಾ
- ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ
- ವಿದ್ಯಾರ್ಥಿಗಳು ಓದು - ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ
- ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವುದಾಗಿರತ್ತೆ
- ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು
- ಪವಮಾನ ಹೋಮ ಮಾಡಿಸುವುದು ಸೂಕ್ತ ಪರಿಹಾರ
ತುಲಾ
- ತುಲಾ ರಾಶಿಯ ಕ್ರೀಡಾಪಟುಗಳಿಗೆ ಹಿಂದೆ ಮಾಡಿದ ತಪ್ಪುಗಳಿಂದ ಇಂದು ಹಿನ್ನಡೆಯಾಗುತ್ತೆ
- ಅವಕಾಶದಿಂದ ವಂಚಿತರಾಗುತ್ತೀರಿ ಎಚ್ಚರಿಕೆ
- ಪ್ರಾಮಾಣಿಕವಾದ ಸ್ಪರ್ಧಾಳುಗಳಿಗೆ ಸದಾಕಾಲ ಜಯ
- ನಿಮ್ಮ ಹೆತ್ತವರ ಆರ್ಶೀವಾದ ಪಡೆಯಿರಿ
- ಕುಟುಂಬದಲ್ಲಿ ಸಂತೋಷ ನಿಮ್ಮದಾಗಲಿದೆ
- ದಿನೇ ದಿನೇ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆ ಇರಲಿ
- ರಾಜರಾಜೇಶ್ವರಿಯನ್ನು ಉಪಾಸನೆ ಮಾಡಿ
ವೃಶ್ಚಿಕ
- ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹರಸಾಹಸ ಪಡಬೇಕಾಗುತ್ತದೆ
- ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಬಹುದು
- ಮನೆಯನ್ನ ನವೀಕರಿಸುವ ಯೋಗವಿದೆ
- ಶತ್ರುಗಳ ಮೇಲೆ ನಿಮ್ಮ ಹಿಡಿತ ಹೆಚ್ಚಾಗಲಿದೆ
- ಮಧ್ಯಾಹ್ನದ ಹೊತ್ತಿಗೆ ಒಂದು ಕಹಿಸುದ್ದಿ ನಿಮಗೆ ಆಘಾತವನ್ನುಂಟು ಮಾಡುತ್ತೆ
- ಯಾವುದೇ ಒಪ್ಪಂದಗಳಿಗೆ ಸಹಿ ಹಾಕಬೇಡಿ
- ಯಾವುದೇ ವ್ಯವಹಾರದಲ್ಲಿ ಇಂದು ಮಧ್ಯಸ್ಥಿಕೆಯನ್ನ ವಹಿಸಬೇಡಿ.
- ಹನುಮಾನ್ ಚಾಲೀಸ್ ಪಠಿಸಿ
ಧನಸ್ಸು
- ಉದ್ಯೋಗದಲ್ಲಿ ನಿಮಗೆ ಬೋನಸ್ ಸಿಗಬಹುದು
- ವ್ಯವಹಾರದಲ್ಲಿ ಉತ್ತಮ ವ್ಯಕ್ತಿಗಳ ಸಂರ್ಪಕ ದೊರೆಯಬಹುದು
- ನಿಮ್ಮ ಪ್ರತಿಭೆ ಬೇರೆಯವರಿಗೆ ಮಾದರಿಯಾಗುತ್ತೆ
- ಕಷ್ಟಕ್ಕೆ ಸಿಲುಕುತ್ತೀರಿ ಜಾಗ್ರತೆ ವಹಿಸಿ
- ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಿಮ್ಮ ತೀರ್ಮಾನವನ್ನ ಕೈಗೊಳ್ಳಿ
- ಗಣಪತಿಯ ಆರಾಧನೆ ಮಾಡಿ
ಮಕರ
- ಕಬ್ಬಿಣದ ವಸ್ತುವನ್ನು ಉಪಯೋಗಿಸಬೇಡಿ
- ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ
- ಅವಿವಾಹಿತರು ಇಂದು ವಿವಾಹ ಮಂಗಳ ಕಾರ್ಯಕ್ಕೆ ಪ್ರಯತ್ನ ಪಡುತ್ತೀರಿ
- ನಿಮ್ಮ ಕೆಲಸದಲ್ಲಿ ತೃಪ್ತಿ ಹೊಂದುತ್ತೀರಿ
- ಶ್ರೀನಿವಾಸ ಕಲ್ಯಾಣ ಮಾಡಿಸಿ
ಕುಂಭ
- ಸಂಬಂಧಿಕರು ಮಧ್ಯ ಮಾತಾಡಿ ಸಂಬಂಧ ಮುರಿದುಬೀಳುವ ಸಾಧ್ಯತೆ ಇದೆ ಎಚ್ಚರಿಕೆ
- ಸಂಜೆಯ ವೇಳೆ ಮದುವೆಯ ವಿಚಾರದಲ್ಲಿ ಬೇಸರ ಪಡುತ್ತೀರಿ
- ಇಂದು ಕೈ ಅಥವಾ ಕೈ ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆ ವಹಿಸಿ
- ಜನಬಲ ಹಣಬಲ ಎರಡೂ ನಿಮ್ಮದಾಗುತ್ತೆ
- ವಕೀಲರಿಗೆ ಇಂದು ಶುಭದಿನ
- ವಾದ-ವಿವಾದಗಳ ವಿಷಯ ಇತ್ಯರ್ಥಗೊಳ್ಳುವ ದಿನ
- ನಿಮ್ಮ ಪ್ರತಿಭೆಗೆ ಸದಾ ಕಾಲ ಬೆಲೆ ಇರುತ್ತದೆ
- ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಿ
- ದುರ್ಗಾದೇವಿಯನ್ನು ಪ್ರಾರ್ಥಿಸಿ
ಮೀನ
- ನಿಮಗೆ ಶತೃಗಳು ಹೆಚ್ಚಾಗುತ್ತಾರೆ ಜಾಗ್ರತೆವಹಿಸಿ
- ನೀವು ಮಾಡಿದ ಕೆಲಸದಿಂದ ಬೇರೆಯವರು ಅನುಕೂಲವನ್ನು ಪಡೆಯುತ್ತಾರೆ
- ಪುಣ್ಯಕ್ಷೇತ್ರದಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಸಫಲತೆ ಕಾಣುತ್ತೀರಿ
- ಕುಟುಂಬದವರಿಂದ ಮನಸಿಗೆ ಬೇಸರ ಉಂಟಾಗಬಹುದು
- ಹೊರಗಿನಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತದೆ
- ನಿಮಗೆ ಮೋಸ ಮಾಡಿದವರ ಜೊತೆ ಬಾಂಧವ್ಯ ದೂರ ಆಗಬಹುದು
- ಗೌರಿ ದೇವಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ