/newsfirstlive-kannada/media/post_attachments/wp-content/uploads/2025/03/JUNIOR-AMBI1.jpg)
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಜೂನಿಯರ್ ಅಂಬಿ ನಾಮಕರಣ ಶಾಸ್ತ್ರಕ್ಕೆ ರೆಬೆಲ್ ಸ್ಟಾರ್ ಕುಟುಂಬ ಸಾಕ್ಷಿಯಾಗಿದೆ. ಅಭಿಷೇಕ್ ಪುತ್ರನ ನಾಮಕರಣದಲ್ಲಿ ಹಲವು ನಟ - ನಟಿಯರು ಮತ್ತು ರಾಜಕೀಯದ ಗಣ್ಯರು ಭಾಗಿಯಾದ್ರು. ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.. ಆದ್ರೆ, ಮದರ್ ಇಂಡಿಯಾ ಮನೆ ಕಾರ್ಯಕ್ರಮಕ್ಕೆ ದರ್ಶನ್ ಬರಲೇ ಇಲ್ಲ.
ರೆಬೆಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಸಂಭ್ರಮ, ಸಡಗರ. ಮಂಡ್ಯದ ಗಂಡು ಅಂಬಿ ಮನೆಗೆ ಬಂದ ಹೊಸ ಅತಿಥಿ, ಪುಟ್ಟ ಕಂದನಿಗೆ ನಾಮಕರಣ ಶಾಸ್ತ್ರ ನಡೆದಿದೆ.. ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ನಡೆದ ಶುಭ ಸಮಾರಂಭದಲ್ಲಿ ತಾರೆಯರ ಸಂಗಮವೇ ಮೇಳೈಸಿತ್ತು.
ಇದನ್ನೂ ಓದಿ: ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ಅದ್ಧೂರಿ ನಾಮಕರಣ ಶಾಸ್ತ್ರ; ಇಲ್ಲಿವೆ ಟಾಪ್ 10 ಫೋಟೋಸ್!
ಅಂದ್ಹಾಗೆ ರೆಬೆಲ್ ಸ್ಟಾರ್ ಮೊಮ್ಮಗನ ಹೆಸರು ಕೊನೆಗೂ ರಿವೀಲ್ ಆಗಿದೆ. ಅಭಿ ಮುದ್ದಿನ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂಬ ಹೆಸರನಿಟ್ಟು ನಾಮಕರಣ ಮಾಡಲಾಗಿದೆ.. ಈ ಮೂಲಕ ಮೊಮ್ಮಗನಿಗೂ ತಾತನ ನಂಟು ಬೆಸೆಯಲಾಗಿದೆ. ಅಂಬರೀಶ್ ಮೂಲ ಹೆಸರು ಅಮರನಾಥ್ ಹೆಸರಿನ್ನೆ ಶಾರ್ಟ್ ಆಗಿ ಜೋಡಿ ಪದವಾಗಿ ಬೆರೆತಿದೆ. ರಾಣಾ ಅಂದ್ರೆ ಸಂಸ್ಕೃತದಲ್ಲಿ ರಾಜ ಎಂಬ ಅರ್ಥ.
ಇನ್ನು, ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ನಟ ಕಿಚ್ಚ ಸುದೀಪ್ ಆಗಮಿಸಿದ್ದು ಹೈಲೆಟ್ಸ್. ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಜೊತೆಗೆ ಬಂದಿದ್ದು ಮತ್ತೊಂದು ವಿಶೇಷ. ಸುಮಲತಾ ಮೊಮ್ಮನಿಗೆ ತೊಟ್ಟಿಲು ರೀತಿಯ ಬುಟ್ಟಿಯಲ್ಲಿ ಪುಟ್ಟ, ಪುಟ್ಟ ಟೆಡ್ಡಿ ಬೇರ್, ಮೊಲದ ಮರಿಗಳನ್ನ ಗಿಫ್ಟ್ ಆಗಿ ನೀಡಿದ್ದಾರೆ. ಗುರುಕಿರಣ್, ರಾಕ್ಲೈನ್ ವೆಂಕಟೇಶ್, ಕುಟುಂಬದ ಆಪ್ತರು ಬಂದು ಆಶೀರ್ವದಿಸಿದ್ರು.
ಸುಮಲತಾ ಮೊಮ್ಮಗನ ನಾಮಕರಣಕ್ಕೆ ನಟ ದರ್ಶನ್ ಗೈರು
ಸುಮಲತಾ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಹಾಜರಿ ಹಾಕ್ತಿದ್ದ ನಟ ದರ್ಶನ್, ಬೆಂಗಳೂರಿನತ್ತ ಸುಳಿಯಲೇ ಇಲ್ಲ.. ಮದರ್ ಇಂಡಿಯಾ ಮನೆಯ ಕಾರ್ಯಕ್ರಮದ ಆಮಂತ್ರಣವನ್ನು ಸ್ವೀಕರಿಸದ ದರ್ಶನ್ ನಡೆ ಚರ್ಚೆ ಹುಟ್ಟುಹಾಕಿದೆ.. ನಾಮಕರಣಕ್ಕೆ ಬಂದೇ ಬರ್ತಾರೆ ಎಂಬ ಕುತೂಹಲ ನಿರಾಸೆಗೆ ದೂಡಿದೆ.. ಸದ್ಯ ಡೆವಿಲ್ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿರುವ ದರ್ಶನ್, ಫಾರ್ಮ್‌ಹೌಸ್‌ನಲ್ಲೇ ಈ ವೀಕೆಂಡ್ ಕಳೆದಿದ್ದಾರೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್… ಅಪ್ಪು ಸಿನಿಮಾ ಮರುಬಿಡುಗಡೆ.. ಅಭಿಮಾನಿಗಳಿಗೆ ಹಬ್ಬ
ಮೊನ್ನೆಯಷ್ಟೇ ಸುಮಲತಾ ಅಂಬರೀಶ್, ಅಭಿಷೇಕ್, ಅವಿವಾ ಅಭಿಷೇಕ್ರನ್ನ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅನ್‌ಫಾಲೋ ಮಾಡಿದ್ದ ದರ್ಶನ್, ಮುನಿಸು ಹೊರಹಾಕಿದ್ರು.. ಈ ಮುನಿಸು ಮತ್ತಷ್ಟು ವಿಕೋಪಕ್ಕೆ ತಿರುಗ್ತಾ ಅನ್ನೋ ಚರ್ಚೆ ಹುಟ್ಟುಹಾಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ