/newsfirstlive-kannada/media/post_attachments/wp-content/uploads/2024/06/KOHLI-JAISWAL.jpg)
ಟೀಮ್ ಇಂಡಿಯಾದ ಯುವ ಬ್ಯಾಟರ್ ತಿಲಕ್ ವರ್ಮಾ. ಇವರು ಎದುರಾಳಿ ಬೌಲರ್ಗಳಿಗೆ ನಡುಕ ಹುಟ್ಟಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಟಿ20 ಮಾತ್ರವಲ್ಲ ಭಾರತ ಏಕದಿನ ತಂಡದಲ್ಲೂ ಖಾಯಂ ಸ್ಥಾನ ಪಡೆಯಲು ಅರ್ಹರು ಕೂಡ. ಹೀಗಾಗಿ ಈ ಬ್ಯಾಟರ್ನಿಂದ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಕುತ್ತು ತಂದಿದೆ.
ಇಂಗ್ಲೆಂಡ್ ವಿರುದ್ಧ ತಿಲಕ್ ವರ್ಮಾ ಆರ್ಭಟ
ಇತ್ತೀಚೆಗೆ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಅಬ್ಬರದ ಬ್ಯಾಟಿಂಗ್ ಮಾಡಿದ್ರು. ಇವರ ಬ್ಯಾಟಿಂಗ್ಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ನಂತರ ಮತ್ತೊಬ್ಬ ಜವಾಬ್ದಾರಿಯುವ ಬ್ಯಾಟರ್ ಸಿಕ್ಕಿದ್ದಾರೆ ಎನ್ನಬಹುದು. ಇವರನ್ನು ಜೂನಿಯರ್ ಕೊಹ್ಲಿ ಎಂದರೂ ತಪ್ಪಾಗಲಾರದು.
ತಿಲಕ್ ವರ್ಮಾ ಬ್ಯಾಟಿಂಗ್ನಿಂದ ಭಾರತಕ್ಕೆ ಜಯ
ಇನ್ನು, ತಿಲಕ್ ವರ್ಮಾ ಅಜೇಯ 72 ರನ್‌ಗಳ ಇನ್ನಿಂಗ್ಸ್ ಆಡಿದ್ರು. ಇದರ ಪರಿಣಾಮ ಇಂಗ್ಲೆಂಡ್ ತಂಡ ಭಾರತದ ವಿರುದ್ಧ 2 ವಿಕೆಟ್ಗಳಿಂದ ಗೆದ್ದು ಬೀಗಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ತಿಲಕ್ ವರ್ಮಾ 55 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 72 ರನ್ ಗಳಿಸಿದರು. ಇವರು ಕಳೆದ 4 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಮವಾಗಿ 107*, 120*, 19* ಮತ್ತು 72* ರನ್ ಗಳಿಸಿದ್ದಾರೆ. ಹೀಗಾಗಿ ಇವರನ್ನು ಭಾರತದ ಏಕದಿನ ತಂಡದಲ್ಲಿ ಶ್ರೇಯಸ್ ಅಯ್ಯರ್ ಬದಲಿಗೆ 4ನೇ ಕ್ರಮಾಂಕದಲ್ಲಿ ಖಾಯಂ ಆಗಿ ಆಡಿಸಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ.
ಶ್ರೇಯಸ್ ಅಯ್ಯರ್ಗೆ ಶಾಕ್
ಭಾರತ ತಂಡದ ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್. ಇವರು ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿದಂತೆ ದೇಶಿಯ ಕ್ರಿಕೆಟ್ನಲ್ಲಿ ಮುಂಬೈ ರಣಜಿ ತಂಡದ ಕ್ಯಾಪ್ಟನ್ ಆಗಿ ಅಬ್ಬರಿಸಿದ್ದರು. ಇಷ್ಟೇ ಅಲ್ಲ, ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಅಮೋಘ ಪ್ರದರ್ಶನ ನೀಡಿ ಬಿಸಿಸಿಐ ಗಮನ ಸೆಳೆದಿದ್ರು. ಹೀಗಾಗಿ ಶ್ರೇಯಸ್ ಅಯ್ಯರ್ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಭಾರತದ ಪರ ಮಿಂಚದೆ ಹೋದಲ್ಲಿ ತಿಲಕ್ ವರ್ಮಾಗೆ ಬಿಸಿಸಿಐ ಮಣೆ ಹಾಕಬಹುದು.
ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಮಹತ್ವದ ಸರಣಿ; ಟೀಮ್ ಇಂಡಿಯಾದಿಂದ ಶ್ರೇಯಸ್ ಅಯ್ಯರ್ಗೆ ಕೊಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ