ಆಟಿಕೆ ಗನ್ ತೋರಿಸಿ.. ಜಸ್ಟ್​ 18 ಸೆಕೆಂಡ್​ನಲ್ಲೇ ₹18 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್

author-image
Veena Gangani
Updated On
ಆಟಿಕೆ ಗನ್ ತೋರಿಸಿ.. ಜಸ್ಟ್​ 18 ಸೆಕೆಂಡ್​ನಲ್ಲೇ ₹18 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್
Advertisment
  • ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ನಾಲ್ವರಿಂದ ಕೃತ್ಯ
  • ಆಟಿಕೆ ಗನ್ ತೋರಿಸಿ ಚಿನ್ನಾಭರಣ ದರೋಡೆ
  • ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳತನದ ದೃಶ್ಯ

ಬೆಂಗಳೂರು: ರಾಮ್ ಜ್ಯುವೆಲ್ಲರಿ ಶಾಪ್​ಗೆ ಎಂಟ್ರಿ ಕೊಟ್ಟ ಖದೀಮರು 18 ಸೆಕೆಂಡ್​ನಲ್ಲೇ ₹18 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್​ ಆಗಿದ್ದಾರೆ.

ಇದನ್ನೂ ಓದಿ:ವೀಕ್ಷಕರಿಗೆ ಇಷ್ಟವಾದ ಜೋಡಿ.. ಈ ಬಾರಿ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್​ ಇವರೇನಾ?

publive-image

ಹೌದು, ಅಂಗಡಿ ಸಿಬ್ಬಂದಿಗೆ ಗನ್ ತೋರಿಸಿ ಚಿನ್ನಾಭರಣ ದೋಚಿದ ಘಟನೆ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ನಡೆದಿದೆ. ಅಂಗಡಿ ಕ್ಲೋಸ್​ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದೆ. 24ರಂದು 9 ಗಂಟೆ ಸುಮಾರಿಗೆ ಕೈನಲ್ಲಿ ಗನ್ ಹಿಡಿದು ಮುಸುಕುದಾರಿಗಳ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಇದೇ ವೇಳೆ ಕಳ್ಳರ ಕೈಗೆ ಸಿಕ್ಕ ಚಿನ್ನಾಭರಣ ದೋಚಿ ಮೂವರು ಎಸ್ಕೇಪ್ ಆಗಿದ್ದಾರೆ.

publive-image

ಇನ್ನೂ, ಎಂಟ್ರಿಗೂ ಮುನ್ನ ಕಳ್ಳರು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದಾರೆ. ಆ ಕಾರುನ್ನು ರಸ್ತೆ ಬದಿ ನಿಲ್ಲಿಸಿ ಏಕಾಏಕಿ ಅಂಗಡಿ ಒಳಗಡೆ ನುಗ್ಗಿದ್ದಾರೆ. ಆದ್ರೆ, ಇಲ್ಲಿ ಕಳ್ಳರು ಆಟಿಕೆ ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿದ್ದು ಅಚ್ಚರಿಯ ವಿಚಾರವಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಮತ್ತು ಕಾರಿನ ಮಾಹಿತಿ ಆಧರಿಸಿ ಆರೋಪಗಳಿಗೆ ಶೋಧ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment