newsfirstkannada.com

ರೇಣುಕಾಸ್ವಾಮಿ ಕೊಲೆ ಆಗಿದ್ದು ಹೇಗೆ? ಕೊನೆಗೂ ಸತ್ಯ ಬಾಯ್ಬಿಟ್ಟ ಆರೋಪಿಗಳು; A1, A2, A3 ಹೇಳಿದ್ದೇನು?

Share :

Published June 14, 2024 at 9:13pm

  ರೇಣುಕಾಸ್ವಾಮಿ ಕೊಲೆ ಕೇಸ್​ ಬಗ್ಗೆ 13 ಆರೋಪಿಗಳ ಹೇಳಿಕೆಗಳೇನು?

  ಕಳೆದ ಮೂರು ದಿನದ ವಿಚಾರಣೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದೇನು?

  ನಟಿ ಪವಿತ್ರಾ ಗೌಡ ಹೇಳಿದ ಕತೆಯೇ ಬೇರೆ.. ಪವನ್ ಬಿಚ್ಚಿಟ್ಟ ಅಸಲಿ ಸತ್ಯ

ಹಿಂದೆಂದು ಕಂಡು ಕೇಳರಿಯದ ಅತ್ಯಂತ ಭೀಭತ್ಸವಾದ ಕೊಲೆ ಆರೋಪದಲ್ಲಿ ದರ್ಶನ್​ ಕಂಬಿ ಹಿಂದೆ ಬಂಧಿಯಾಗಿದ್ದಾರೆ. ಪೊಲೀಸ್​ ಕಸ್ಟಡಿಯಲ್ಲಿರುವ 19 ಆರೋಪಿಗಳು ಒಂದೊಂದೇ ಸತ್ಯವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಕೊಲೆಯ ಅಸಲಿ ರಹಸ್ಯವನ್ನ ಕೇಳಿ ಪೊಲೀಸರು ದಂಗಾಗಿದ್ದಾರೆ. ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಹಿಂದೆಂದೂ ಯಾವ ನಟನ ಮೇಲೂ ಇಂಥಾ ಆರೋಪ ಬಂದಿರಲ್ಲಿಲ್ಲ ಅನ್ಸುತ್ತೆ. ಯಾಕಂದ್ರೆ ದರ್ಶನ್​ ಮೇಲೆ ಬಂದಿರೋದು ಸಾಮಾನ್ಯವಾದ ಆರೋಪ ಅಲ್ಲವೇ ಅಲ್ಲ. ಕೊಲೆ ಆರೋಪ. ಬರೀ ಕೊಲೆ ಅಲ್ಲ. ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿ ಹತ್ಯೆ ಮಾಡಿರೋ ಗಂಭೀರ ಆರೋಪ.

ಇದನ್ನೂ ಓದಿ: ದರ್ಶನ್​ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೊಬ್ಬ ಅಮಾಯಕ

ಇದು ಸ್ಯಾಂಡಲ್​ವುಡ್​ಗೂ ಕಳಂಕವೇ ಸರಿ. ದರ್ಶನ್ ಮಾಡಿದ ಒಂದೇ ಒಂದು ಎಡವಟ್ಟು ಇವತ್ತು ಪೊಲೀಸರ ಮುಂದೆ ಕೈ ಕಟ್ಟಿ ನಿಲ್ಲುವಂತೆ ಮಾಡಿದ್ದು.. ದರ್ಶನ್​ ಮೂರು ದಿನದ ಪೊಲೀಸ್ ಕಸ್ಟಡಿ ಮುಕ್ತಾಯಗೊಂಡಿದೆ.
ಒಬ್ಬ ನಟ ಸಿನಿಮಾದಲ್ಲಿ ಹೇಳುವ ಡೈಲಾಗ್​ಗಳು. ಮತ್ತು ಅವನ ಕ್ಯಾರೆಕ್ಟರ್​ನ್ನ ಸಾಮಾನ್ಯವಾಗಿ ಅವರ ಅಭಿಮಾನಿಗಳು ಫಾಲೋವ್ ಮಾಡ್ತಾರೆ. ಆದ್ರೆ, ದರ್ಶನ್​ ಸಿನಿಮಾದಲ್ಲಿ ಹೇಳಿದ್ದ ಡೈಲಾಗ್​ ಆಗಲಿ, ವ್ಯಕ್ತಿತ್ವವಾಗಲೀ ತಮ್ಮ ರಿಯಲ್ ಲೈಫ್​ನಲ್ಲಿ ಅಳವಡಿಸಿಕೊಳ್ಳಲೇ ಇಲ್ಲ. ಅದೇ ಇವತ್ತು ದರ್ಶನ್​ಗೆ ಈ ಪರಿಸ್ಥಿತಿಗೆ ಕಾರಣ. ಕಳೆದ ಮೂರು ದಿನದಿಂದ ದರ್ಶನ್ ಸೇರಿ 14 ಆರೋಪಿಗಳು ವಿಚಾರಣೆ ಎದುರಿಸ್ತಿದ್ದಾರೆ. ದರ್ಶನ್, ಪವಿತ್ರ ಗೌಡ ಸೇರಿದಂತೆ ಐವರು ಆರೋಪಿಗಳ ಹೇಳಿಕೆ ದಾಖಲು ಮಾಡಲಾಗಿದೆ.

A1 ಪವಿತ್ರಾಗೌಡ ಪೊಲೀಸರ ಮುಂದೆ ಹೇಳಿದ್ದೇನು?

ರೇಣುಕಸ್ವಾಮಿ ಕೊಲೆಯ ಮೂಲ ರೂವಾರಿ. ಇಡೀ ಕೇಸ್​ ಮೇನ್​ ರೀಸನ್ ಅಂದ್ರೆ ಈ ಪವಿತ್ರಾ ಗೌಡ. ಜಸ್ಟ್ ಮೆಸೇಜ್ ಮಾಡಿದ ವಿಚಾರ ಇವತ್ತು ಒಂದು ಜೀವ ಹೋಗುವ ಮಟ್ಟಿಗೆ ಮಾಡಿದ್ದು ಈ ಪವಿತ್ರಾಗೌಡ. ಆದ್ರೆ ಪೊಲೀಸರ ವಿಚಾರಣೆಯಲ್ಲಿ ಪವಿತ್ರ ಗೌಡ ಬೇರೆಯದ್ದೇ ಕಹಾನಿಯನ್ನ ಹೇಳಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಪವಿತ್ರಾಗೌಡ ರೇಣುಕಾಸ್ವಾಮಿ ಕಳಿಸಿದ್ದ ಅಶ್ಲೀಲ ಫೋಟೋ, ಮೆಸೇಜ್ ಪವನ್​ಗೆ ಕಳಿಸಿದ್ದೆ ಎಂದಿದ್ದಾರೆ. ಆದ್ರೆ ದರ್ಶನ್​ಗೆ ಈ ವಿಚಾರ ಗೊತ್ತಾಗಬಾರದು ಅಂತಾ ಕೂಡ ಹೇಳಿದ್ದೆ. ವಿಚಾರ ಗೊತ್ತಾದ್ರೆ ಏನಾದ್ರು ಅನಾಹುತ ಆಗ್ಬೋದು ಅಂತಲೂ ಹೇಳಿದ್ದರಂತೆ. ನನಗೆ ಕೊಲೆ ಮಾಡುತ್ತಾರೆ ಎನ್ನುವ ಒಂದು ಸಣ್ಣ ಕಲ್ಪನೆಯೂ ಇರಲಿಲ್ಲ. ಮೆಸೇಜ್ ಮಾಡಿದ್ದ ಅಂತಾ ಚಪ್ಪಲಿಯಲ್ಲಿ ಹೊಡೆದು ವಾಪಸ್ಸಾಗಿದ್ದೆ. ಕೊಲೆ ಮಾಡ್ತಾರೆ ಅಂದ್ರೆ ನಾನೇ ಕಂಪ್ಲೆಂಟ್ ಕೊಟ್ಟು ಸರಿ ಮಾಡಿಕೊಳ್ತಿದ್ದೆ ಅಂತ ಪವಿತ್ರಾ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾಳೆ.

ನಾನು ಕೊಲೆ ಮಾಡಿಲ್ಲ.. A2 ದರ್ಶನ್ ಹೇಳಿದ್ದೇನು?

ಬಹುಶಃ ಈ ಕೊಲೆಯಲ್ಲಿ ದರ್ಶನ್ ಹೆಸರು ಇಲ್ಲದೇ ಇದ್ದಿದ್ರೆ ಇವತ್ತು ಈ ಮಟ್ಟಿಗೆ ಈ ಸುದ್ದಿ ಸಂಚಲನ ಸೃಷ್ಟಿಸ್ತಾ ಇರಲಿಲ್ಲ. ಆದ್ರೀಗ ಮಾಡಿದ ಸಣ್ಣ ಎಡವಟ್ಟು ಇವತ್ತು ದರ್ಶನ್​ಗೆ ಜೈಲೂಟ ತಿನ್ನುವಂತೆ ಮಾಡಿದೆ. ಇನ್ನು ವಿಚಾರಣೆಯಲ್ಲಿ ಕೊಲೆ ಬಗ್ಗೆ ಹೇಳಿಕೆ ನೀಡಿರುವ ದರ್ಶನ್. ನಾನು ಈ ಕೊಲೆ ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ. ಪೊಲೀಸರು ಎಷ್ಟೆ ಬಾರಿ ಪ್ರಶ್ನೆ ಕೇಳಿದ್ರೂ ದರ್ಶನ್ ಬಾಯಿಂದ ಬಂತ ಉತ್ತರ ಒಂದೆ. ನಾನು ಈ ಕೊಲೆ ಮಾಡಿಲ್ಲ. ವಿಚಾರಣೆಯಲ್ಲಿ ಹೇಳಿಕೆ ನೀಡಿರುವ ದರ್ಶನ್ ಪವನ್​ನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು. ಹೀಗಾಗಿ ರೇಣುಕಾಸ್ವಾಮಿಯನ್ನು ಕರೆತರುವಂತೆ ರಾಘವೇಂದ್ರನಿಗೆ ಸೂಚಿಸಿದ್ದೆ. ಜೂ.8ರ ಶನಿವಾರ ಸಂಜೆ ರೇಣುಕಾಸ್ವಾಮಿಯನ್ನ ಶೆಡ್​ನಲ್ಲಿ ಭೇಟಿಯಾಗಿದ್ದೆ. ಇನ್ನೊಂದು ಸಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಅಂತಾ ವಾರ್ನ್ ಮಾಡಿದ್ದೆ. ದುಡ್ಡು ಕೊಟ್ಟು ಊಟ ಮಾಡ್ಕೊಂಡ್ ಊರು ಸೇರುವಂತೆ ಹೇಳಿ ನಾನು ಅಲ್ಲಿಂದ ಹೊರಟು ಹೋಗಿದ್ದೆ ಅಷ್ಟೆ ಅಂತ ದರ್ಶನ್ ತನಿಖೆಯಲ್ಲಿ ಹೇಳಿದ್ದಾರೆ.

ಕೊಲೆಯ ರೂವಾರಿ A3 ಪವನ್ ಬಾಯ್ಬಿಟ್ಟ ಸತ್ಯವೇನು?

ಹೌದು, ಒಂದರ್ಥದಲ್ಲಿ ನೋಡೋದಾದ್ರೆ ಈ ಕೊಲೆಯ ಇನ್ನೊಬ್ಬ ರೂವಾರಿ ಈ ಪವನ್. ಯಾಕಂದ್ರೆ ಅವತ್ತು ಪವಿತ್ರಾ ಮೆಸೇಜ್ ವಿಚಾರ ಹೇಳಿದಾಗ ಇವನು ದರ್ಶನ್​​ಗೆ ಹೇಳ್ದೆ ಸುಮ್ಮನೆ ಇದ್ದಿದ್ರೆ. ಇವತ್ತು ರೇಣುಕಸ್ವಾಮಿ ಜೀವ ಉಳಿತೀತೇನೂ. ಅಣ್ಣನ ಕೈಯಲ್ಲಿ ಶಹಬ್ಬಾಶ್ ಗಿರಿ ಪಡೀಬೇಕು ಅನ್ನೋ ಕಾರಣಕ್ಕೂ ಅಥವಾ ಬೇರೆ ಯಾವ ಕಾರಣಕ್ಕೆ ಗೊತ್ತಿಲ್ಲ. ಈ ಆಸಾಮಿ ರೇಣುಕಾಸ್ವಾಮಿ ಪವಿತ್ರಾಗೆ ಮೆಸೇಜ್ ಮಾಡಿದ್ದನ್ನ ದರ್ಶನ್ ಬಳಿ ಹೇಳಿದ್ದ. ಮುಂದೆ ನಡೆದಿದ್ದೂ ನಿಮಗೆ ಗೊತ್ತೇ ಇದೆ. ಆದ್ರೀಗ ಈ ಪವನ್ ಪೊಲೀಸರ ವಿಚಾರಣೆಯಲ್ಲಿ ತಾನು ಮಾಡಿದ ತಪ್ಪನ್ನ ಒಪ್ಪಿಕೊಂಡಿದ್ದಾನೆ.
ತನಿಖೆಯಲ್ಲಿ ಹೇಳಿಕೆ ನೀಡಿರುವ ಪವನ್, ರೇಣುಕಾಸ್ವಾಮಿ ಪವಿತ್ರಾ ಅಕ್ಕನಿಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ. ಆಗ ಪವಿತ್ರಾ ಗೌಡ ಇದ್ಯಾರು ಪತ್ತೆ ಮಾಡು ಅಂತಾ ನನಗೆ ಹೇಳಿದ್ರು. ನಾನು ಪವಿತ್ರಾ ಗೌಡ ಹೆಸರಲ್ಲಿ ರೇಣುಕಾ ಜೊತೆ ಚಾಟ್ ಮಾಡ್ತಿದ್ದೆ. ಹೀಗೆ ಚಾಟ್ ಮಾಡ್ತಾ ಮಾಡ್ತಾ ಮೊಬೈಲ್ ನಂಬರ್ ಪಡ್ಕೊಂಡೆ. ಈ ಎಲ್ಲಾ ವಿಚಾರವನ್ನು ನಾನು ದರ್ಶನ್​ ಸರ್​ಗೂ ಹೇಳಿದ್ದೆ. ಬಳಿಕ ರೇಣುಕಾಸ್ವಾಮಿ ಕರೆಸಿ ಎಲ್ಲರೂ ಸೇರಿ ಹಲ್ಲೆ ನಡೆಸಿದ್ವಿ. ರೇಣುಕಾ ಮೂರ್ಚೆ ಹೋಗಿರಬಹುದು ಅನ್ಕೊಂಡ್ವಿ, ಆದ್ರೆ ಸತ್ತೋಗಿದ್ದ. ಅವನಿಗೆ ಭಯ ಹುಟ್ಟಿಸಬೇಕು ಅನ್ನೋದ ಬಿಟ್ರೆ ಸಾಯಿಸುವ ಉದ್ದೇಶ ನಮ್ಮದು ಆಗಿರಲಿಲ್ಲ ಅಂತ ಬಾಯ್ ಬಿಟ್ಟಿದ್ದಾನೆ.

ದರ್ಶನ್ ಸಂಘದ ಅಧ್ಯಕ್ಷ ರಘು ದರ್ಶನ್ ಬಾಯ್ಬಿಟ್ಟ ಸತ್ಯವೇನು?

ಪವನ್​ ರೇಣುಕಸ್ವಾಮಿ ಮೆಸೇಜ್ ವಿಚಾರವನ್ನು ಚಿತ್ರದುರ್ಗದ ರಘು ದರ್ಶನ್​ಗೆ ಹೇಳಿದ್ದ. ಈ ರಘು ಕೂಡ ರೇಣುಕಸ್ವಾಮಿ ಬುದ್ಧಿ ಹೇಳಿ ಮ್ಯಾಟರ್ ಕ್ಲೋಸ್ ಮಾಡಬಹುದಿತ್ತು. ಆದ್ರೆ ಇವನಿಗೂ ಅಣ್ಣನಿಂದ ಭೇಷ್​ ಅನ್ನಿಸಿಕೊಳ್ಳಬೇಕಿತ್ತೇನೋ ದರ್ಶನ್ ಹೇಳಿದ್ದೇ ತಡ ರೇಣುಕಾನನ್ನ ಕಾರ್​ನಲ್ಲಿ ಎತ್ತಾಕೊಂಡು ಬಂದಿದ್ದ. ಈಗ ಪೊಲೀಸರ ತನಿಖೆಯಲ್ಲಿ ರಘು ರೇಣುಕಾನನ್ನ ಕಿಡ್ಯ್ಯಾಪ್ ಮಾಡೋಕೆ ಏನೆಲ್ಲ ಪ್ಲಾನ್ ಮಾಡಿದ್ದ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಕೊಲೆ ಆರೋಪಿ ನಂ 4 ರಘು ಹೇಳಿದ್ದೇನು?

ರಘು ದರ್ಶನ್ ಅಲಿಯಾಸ್ ರಾಘವೇಂದ್ರ ಚಿತ್ರದುರ್ಗದ ದರ್ಶನ್ ಸಂಘದ ಅಧ್ಯಕ್ಷ. ವಿಚಾರಣೆಯಲ್ಲಿ ಘಟನೆ ಬಗ್ಗೆ ಹೇಳಿಕೆ ನೀಡಿರುವ ರಘು, ದರ್ಶನ್ ಸರ್ ಒಂದು ನಂ. ಕೊಟ್ಟು ಈ ವ್ಯಕ್ತಿ ಪತ್ತೆ ಮಾಡುವಂತೆ ಹೇಳಿದ್ರು. ನಂಬರ್ ಸಿಕ್ಕಿದ್ರಿಂದ ರೇಣುಕಾಸ್ವಾಮಿಯನ್ನ ಆರಾಮಾಗಿ ಪತ್ತೆ ಮಾಡಿದ್ದೆ. ರೇಣುಕಾಸ್ವಾಮಿಯನ್ನು ನಿರಂತರವಾಗಿ 2 ದಿನಗಳ ವರೆಗೆ ವಾಚ್ ಮಾಡಿದ್ದೆ. ಫಾರ್ಮಸಿಗೆ ಬರುವ ವೇಳೆ ಮಾತನಾಡಬೇಕು ಅಂತಾ ಕರ್ಕೊಂಡು ಬಂದೆ. ಜೂ.8ರ 3ಗಂಟೆಗೆ ಪಟ್ಟಣಗೆರೆಯ ವಿನಯ್ ಶೆಡ್​ಗೆ ಕರ್ಕೊಂಡು ಹೋದೆ. ಅಷ್ಟರಲ್ಲಿ ರೇಣುಕಾಸ್ವಾಮಿಯನ್ನ ಕಂಡ ಕೂಡಲೇ ಸಾಕಷ್ಟು ಜನ ಹಲ್ಲೆ ಮಾಡಿದ್ರು. ನಮ್ಮ ಬಾಸ್ ಹೆಂಡ್ತಿಗೆ ಮೆಸೇಜ್ ಮಾಡ್ತೀಯೇನೊ ಅಂತಾ ಎಲ್ರೂ ಹೊಡೆದ್ವಿ. ಆದ್ರೆ ರೇಣುಕಾಸ್ವಾಮಿ ಸತ್ತು ಹೋಗ್ತಾನೆ ಅಂತ ಅಂದುಕೊಂಡಿರಲಿಲ್ಲ ಅಂತ ಹೇಳಿದ್ದಾನೆ.

ಕೊಲೆ ಆರೋಪಿ ನಂ 5 ನಂದೀಶ್ ಹೇಳಿದ್ದೇನು?

ಇನ್ನು, A5 ನಂದೀಶ್ ಕೂಡ ವಿಚಾರಣೆಯಲ್ಲಿ ಕೊಲೆ ಹಿಂದಿನ ರಹಸ್ಯವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ರೇಣುಕಾಸ್ವಾಮಿ ಪ್ರಾಣ ಹೋದ ಸಮಯ. ಆ ಮೇಲೆ ನಡೆದ ಬೆಳವಣಿಗೆ ಎಲ್ಲದರ ಬಗ್ಗೆ ಬಾಯ್ಬಿಟ್ಟಿದ್ದಾನೆ. ಪವಿತ್ರಾ ಜೊತೆ ಮೆಸೇಜ್ ಮಾಡ್ತಿದ್ದ ರೇಣುಕಾಸ್ವಾಮಿಯನ್ನ ಪತ್ತೆ ಮಾಡೋಕೆ ದರ್ಶನ್​ ಈ ನಂದೀಶನಿಗೂ ಹೇಳಿದ್ನಂತೆ. ಹೀಗಾಗಿ ನಂದೀಶ್ ರಾಘವೇಂದ್ರನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಇಬ್ಬರು ಸೇರಿ ರೇಣುಕಸ್ವಾಮಿಯನ್ನ ಚಿತ್ರದುರ್ಗದಿಂದ ಶೆಡ್​ಗೆ ಕರೆತಂದಿರೋದಾಗಿ ಹೇಳಿದ್ದಾರೆ. ಬಳಿಕ ಅಲ್ಲಿದ್ದ ಹುಡುಗರು ರೇಣುಕಸ್ವಾಮಿಯನ್ನ ನೋಡ್ತಿದ್ದಂತೆ ಹಲ್ಲೆ ಮಾಡೋದಕ್ಕೆ ಶುರು ಮಾಡಿದ್ರಂತೆ. ಈ ವೇಳೆ ರೇಣುಕಸ್ವಾಮಿ ಕೈ ಬಾಯಿ ಮೈನಲ್ಲಿ ರಕ್ತ ಬರೋಕ್ಕೆ ಶುರುವಾಗಿ, ಸಂಜೆ 6.30 ರ ವೇಳೆಗೆ ರೇಣುಕಸ್ವಾಮಿ ಉಸಿರು ನಿಂತು ಹೋಗಿತ್ತು ಅಂತ ನಂದೀಶ್ ಹೇಳಿದ್ದಾನೆ.

‘ಡಿ’ ಗ್ಯಾಂಗ್ ಕಸ್ಟಡಿ ಅಂತ್ಯಕ್ಕೆ ಇನ್ನು 2 ದಿನ ಮಾತ್ರ ಬಾಕಿಯಿದೆ. ಹೀಗಾಗಿ ಶುಕ್ರವಾರ ವಿಚಾರಣೆ ಮತ್ತಷ್ಟು ತೀವ್ರಗೊಳ್ಳಲಿದೆ. ಅಚ್ಚರಿ ವಿಚಾರ ಏನಂದ್ರೆ ಪೊಲೀಸರು ಕಲೆ ಹಾಕಿರುವ ಸಾಕ್ಷಿಗಳನ್ನ ನೋಡಿ ಕೊಲೆ ಆರೋಪಿಗಳೇ ಕಂಗಾಲಾಗಿದ್ದಾರೆ. CDR, ಟವರ್ ಡಂಪ್, ಮೊಬೈಲ್ ರಿಟ್ರೀವ್ ಆಧರಿಸಿ ತನಿಖೆ, ಇತರೆ ಆರೋಪಿಗಳು ಬಾಯ್ಬಿಟ್ರೂ ದರ್ಶನ್ ಮಾತ್ರ ಸೈಲೆಂಟ್, ಏನೇ ಕೇಳಿದ್ರು ನಾನವನಲ್ಲ, ನನಗೇನು ಗೊತ್ತಿಲ್ಲ ಅಂತ ಉತ್ತರ ನೀಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಆಗಿದ್ದು ಹೇಗೆ? ಕೊನೆಗೂ ಸತ್ಯ ಬಾಯ್ಬಿಟ್ಟ ಆರೋಪಿಗಳು; A1, A2, A3 ಹೇಳಿದ್ದೇನು?

https://newsfirstlive.com/wp-content/uploads/2024/06/accused-arrested2.jpg

Load More