ಜಸ್ಟ್​​ 23 ನಿಮಿಷ..! ಆಪರೇಷನ್​​ ಸಿಂಧೂರಗೆ ನಡುಗಿದ ಪಾಕ್.. ಏನೆಲ್ಲ ಆಗೋಯ್ತು..?

author-image
Veena Gangani
Updated On
ಭಾರತದಲ್ಲಿ ‘ಸಿಂಧೂರಿ’ ಜನನ.. ದೇಶಪ್ರೇಮಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಓದಲೇಬೇಕಾದ ಸ್ಟೋರಿ!
Advertisment
  • ಅಮಾಯಕರ ಬಲಿ ಪಡೆದ ಉಗ್ರರ ವಿರುದ್ಧ ಭಾರತದ ಪ್ರತೀಕಾರ
  • ಪಹಲ್ಗಾಮ್​ ದಾಳಿ ನಡೆದ 2 ವಾರಗಳ ಬಳಿಕ ಪ್ರತೀಕಾರದ ಹೆಜ್ಜೆ
  • ಪಾಕ್ ಆಕ್ರಮಿತ ಕಾಶ್ಮೀರದ 5 ಮತ್ತು ಪಾಕ್​ನ 4 ಸ್ಥಳದಲ್ಲಿ ದಾಳಿ

ಜಸ್ಟ್​ 23 ನಿಮಿಷ.. ಅಮಾಯಕರ ಬಲಿ ಪಡೆದ ಉಗ್ರರ ವಿರುದ್ಧ ಭಾರತ ಕೊನೆಗೂ ಸೇಡು ತೀರಿಸಿಕೊಂಡಿದೆ. ಏಪ್ರಿಲ್ 22ರಂದು ಪಹಲ್ಗಾಮ್​ನ ಬೈಸರನ್​​ನಲ್ಲಿ ಅಮಾಯಕ ಹಿಂದೂಗಳ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಪೈಶಾಚಿಕ ದಾಳಿ ನಡೆಸಿ, ಬರೋಬ್ಬರಿ 26 ಮಂದಿಯ ಜೀವವನ್ನು ತೆಗೆದಿದ್ದರು. ಈ ಕೃತ್ಯದ ಬೆನ್ನಲ್ಲೇ ಇಡೀ ದೇಶ ಪಾಕಿಸ್ತಾನದ ಮೇಲೆ ಕೆಂಡ ಕಾರಿತ್ತು.

ಇದನ್ನೂ ಓದಿ: ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?

publive-image

ಒಂದು ಕಡೆ ಪಾಪಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಅಂತ ಆಕ್ರೋಶ ವ್ಯಕ್ತವಾಗುತ್ತಿತ್ತು. ಮತ್ತೊಂದು ಕಡೆ ಉಗ್ರರನ್ನು ಉಡಾಯಿಸಬೇಕೆಂದು ಭಾರತ ಸರ್ಕಾರ ಯುದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿತ್ತು. ಅದರಂತೆ ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ.

publive-image

ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ​’ ಆರಂಭಿಸಿವೆ. ಈ ಆಪರೇಷನ್ ಸಿಂಧೂರಗೆ ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕೇವಲ 23 ನಿಮಿಷದಲ್ಲಿ ಪಾಕ್​ನ 9 ನೆಲೆಯನ್ನು ಉಡೀಸ್​ ಮಾಡಿದೆ. ಜಸ್ಟ್​ 23 ನಿಮಿಷದಲ್ಲೇ 70 ಉಗ್ರರು ಮೃತಪಟ್ಟಿದ್ದಾರೆ. ಭಾರತವು ಪಾಕ್ ಆಕ್ರಮಿತ ಕಾಶ್ಮೀರದ 5 ಸ್ಥಳ ಮತ್ತು ಪಾಕ್​ನ ನಾಲ್ಕು ಸ್ಥಳ ಸೇರಿ ಉಗ್ರರ ನೆಲೆ, ಟ್ರೆನಿಂಗ್ ಕ್ಯಾಂಪ್​ಗಳ ಮೇಲೆ ಏಕಕಾಲದಲ್ಲಿ 9 ಕಡೆಯಲ್ಲಿ ದಾಳಿ ಮಾಡಿ ಹೊಡೆದುರುಳಿಸಿದೆ. ಇದರಲ್ಲಿ‌  ಈ ಮೂಲಕ ಭಾರತ ತನ್ನ ಪ್ರತೀಕಾರವನ್ನು ತೀರಿಸಿಕೊಂಡಿದೆ.

ಏನೆಲ್ಲ ಆಗಿದೆ..?

  • ಭಾರತೀಯ ವಾಯುಪಡೆಯು ರಫೇಲ್​ನ ಸ್ಕಾಲ್ಪ್ ಮಿಸೈಲ್ ಬಳಸಿ ದಾಳಿ
  •  ಜೊತೆಗೆ ಬ್ರಹ್ಮೋಸ್ ಮಿಸೈಲ್ ಮೂಲಕವೂ ಉಗ್ರರ ನೆಲೆಗಳ ಮೇಲೆ ಅಟ್ಯಾಕ್
  •  ಪಾಕ್‌ ಟೆರರ್ ಕಂಟ್ರೋಲ್ ರೂಮುಗಳನ್ನೇ ಧ್ವಂಸ ಮಾಡಿದ ಭಾರತ
  •  ಪಾಕ್ ಐಎಸ್‌ಐ-ಟೆರರ್ ಕಂಟ್ರೋಲ್ ರೂಮ್​ ಕೂಡ ಧ್ವಂಸಗೊಂಡಿದೆ
  •  ಹ್ಯಾಮರ್ ಬಾಂಬ್ ಬಳಸಿ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ
  • ಪಾಕ್​ಗೆ ಚೀನಾ ನೀಡಿದ್ದ JF -17 ಯುದ್ಧ ವಿಮಾನ ಉಡೀಸ್
  • ಸುಮಾರು 70ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರುವ ಶಂಕೆ
  • ಉಗ್ರ ಹಫೀಜ್ ಸಯ್ಯದ್​ ಅಡುಗುತಾಣಗಳು ಧ್ವಂಸ
  • ವಿಮಾನಗಳ ಹಾರಾಟ ರದ್ದು ಮಾಡಿದ ಪಾಕ್, ಆತಂಕದಲ್ಲಿ ಉಗ್ರರಸ್ಥಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment