newsfirstkannada.com

ಕೆಲಸ ಹುಡುಕುವವರೇ ಎಚ್ಚರ.. ಆನ್‌ಲೈನ್‌ನಲ್ಲಿ ಈ ತಪ್ಪು ಮಾಡಿದ್ರೆ ನಿಮಗೆ ಪಂಗನಾಮ ಫಿಕ್ಸ್! ಏನದು?

Share :

Published February 27, 2024 at 3:44pm

  ಹೊಸ ಅವತಾರ ತಾಳುವ ಮೂಲಕ ಅಮಾಯಕರಿಗೆ ಪಂಗನಾಮ

  ಇತ್ತೀಚಿನ ದಿನಗಳಲ್ಲಿ ಬಹಳ ಚಾಲಾಕಿಗಳಾಗಿದ್ದಾರೆ ಸೈಬರ್ ಖದೀಮರು

  ಅಪರಿಚಿತರು ಕಳಿಸೋ ವಾಟ್ಸಾಪ್ ಮೆಸೇಜ್​ನ ಕ್ಲಿಕ್​ ಮಾಡಲೇಬೇಡಿ

ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರು ಬಹಳ ಚಾಲಾಕಿಗಳಾಗಿದ್ದಾರೆ. ಸೈಬರ್ ಖದೀಮರು ಕೂಡ ಸಂದರ್ಭಕ್ಕೆ ತಕ್ಕಂತೆ ಹೊಸ ಹೊಸ ಅವತಾರಗಳನ್ನ ತಾಳೋ ಮೂಲಕ ಅಮಾಯಕರಿಗೆ ಪಂಗನಾಮ ಹಾಕುತ್ತಿದ್ದಾರೆ. ಇವತ್ತು ಎಲ್ಲಾದರೂ ಪಾರ್ಟ್ ಟೈಂ ಜಾಬ್ ಅಥವಾ ಫುಲ್ ಟೈಮ್ ಜಾಬ್ ಸಿಗಬಹುದಾ ಅಂತ ಹಲವರು ಗೂಗಲ್​ನಲ್ಲಿ ಹುಡುಕಾಡುತ್ತಲೇ ಇರ್ತಾರೆ. ನೀವು ಕೆಲಸ ಹುಡುಕೋ ಭರದಲ್ಲಿ ನಿಮ್ಮ ಕಣ್ಣಿಗೆ ಯಾವುದೋ ವೆಬ್​ಸೈಟ್ ಕಾಣಿಸುತ್ತೆ.

ಹೀಗೆ ಸರ್ಚ್ ಮಾಡುವಾಗ ಎಲ್ಲೋ ಒಂದು ಕಡೆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೆಲಸ ನಾವು ಕೊಡುಸ್ತೀವಿ ಅನ್ನೋದು ಕಣ್ಣಿಗೆ ಬಿಳುತ್ತೇ. ಆಮೇಲೆ ನಿಮಗೆ ಗೊತ್ತಿಲ್ಲದಂಗೆ ನಿಮ್ಮ ಹಣೆ ಮೇಲೆ ಸರಿಯಾಗಿ ಪಂಗನಾಮ ಬಿದ್ದು ಬಿಟ್ಟಿರುತ್ತೇ. ಅಲ್ಲಿ ಒಂದು ಲಿಂಕ್ ಇರುತ್ತೆ. ಅಲ್ಲಿ ನೀವು ನಿಮ್ಮ ಎಲ್ಲಾ ಡಿಟೇಲ್ಸ್​ನ ಅಪ್​ಲೋಡ್​ ಮಾಡುತ್ತೀರಾ ನೋಡಿ ಇಲ್ಲೆ ಇರೋದು ಮ್ಯಾಟರ್​​. ಇಷ್ಟೆಲ್ಲಾ ವಿವರ ಹಾಕಿ ಅಪ್​ಲೋಡ್ ಮಾಡಿದ ಮೇಲೆ ನಿಮಗೊಂಡು ಮೆಸೇಜ್​ ಬರುತ್ತೇ. ಅದು ನಾರ್ಮಲ್ ಮೆಸೇಜ್​ ಅಲ್ಲಾ ಕಣ್ರಿ ನಿಮ್ಮ ಮೊಬೈಲ್ ನಂಬರ್​ನಲ್ಲಿರೋ ವಾಟ್ಸಾಪ್​ಗೆ​​.

“ಪಾರ್ಟ್ ಟೈಂಗೆ ರೆಕ್ರ್ಯೂಟ್ ಮಾಡುತ್ತಿದ್ದೇವೆ. ಪ್ರತಿ ದಿನ ನಿಮಗೆ 2 ಸಾವಿರ ರೂಪಾಯಿಯಂತೆ ಕಮಿಷನ್ ಸಿಗುತ್ತೆ. ನಮ್ಮನ್ನ ಫಾಲೋ ಮಾಡಿ ಹಾಗೂ 100 ರೂಪಾಯಿ ಪಡೆಯಿರಿ ನಮ್ಮ ವಾಟ್ಸಾಪ್​ನ ಜಾಯ್ನ್ ಆಗಿ ಅಂತ ಒಂದು ಲಿಂಕ್ ಹಾಕ್ತಾರೆ (wa.me/6282184429878) ಈ ರೀತಿ ಲಿಂಕ್ ಹಾಕುತ್ತಾರೆ. ನೀವು ಲಿಂಕ್ ಕ್ಲಿಕ್ ಮಾಡ್ತಾಲೇ ನಿಮ್ಮನ್ನ ನೇರವಾಗಿ ವಾಟ್ಸಾಪ್ ಚಾಟ್​ಗೆ ಕರೆದೊಯ್ಯುತ್ತಾರೆ. ಅದರಲ್ಲೂ ವಿಚಿತ್ರ ನಂಬರ್ ನಿಮಗೆ ಡಿಸ್​​​ಪ್ಲೈ ಆಗುತ್ತೆ. ಒಂಥರಾ ವಿಚಿತ್ರ ನಂಬರ್ (+6282184429878) ಈ ನಂಬರ್ ನ ನೇರವಾಗಿ ತೋರಿಸುತ್ತೆ, ನೀವು ಏನಾದರೂ ಹೆಲೋ ಎಂದು ಮೆಸೇಜ್ ಹಾಕಿದ್ರೆ ಯಾವುದೋ ಫಾರ್ವರ್ಡ್ ಮೆಸೇಜ್​ನ ನಿಮಗೂ ಫಾರ್ವರ್ಡ್ ಮಾಡಿ ಅಫೀಶಿಯಲ್ ಪೇಜ್ ಇರಬಹುದು ಅನ್ನೋ ರೀತಿಯೇ ನಿಮಗೆ ಮೋಸ ಮಾಡುತ್ತಾರೆ. ನಮ್ಮ ಸಾಫ್ಟ್​​​ ವೇರ್ ಕಂಪನಿಯ ಟೆಸ್ಟಿಂಗ್ ಪ್ರೊಸೆಸ್​​ಗಾಗಿ ಪಾರ್ಟ್ ಟೈಂ ಜಾಬ್ ಮಾಡುವವರನ್ನ ಹೈಯರ್ ಮಾಡುತ್ತಿದ್ದೇವೆ. ದಿನದ ಸಂಬಳದಂತೆ ನಿಮಗೆ 100 ರಿಂದ 2 ಸಾವಿರ ರೂಪಾಯಿ ಕೊಡುತ್ತೇವೆ. ಇದಕ್ಕಿಂತ ನೀವು ಯಾವುದೇ ಅಪ್ಲಿಕೇಶನ್ ಅಥವಾ ಯಾವುದೇ ಹಣ ಕಟ್ಟಬೇಕಾಗಿಲ್ಲ, ಆದ್ರೆ ಕೇವಲ ನಾವು ಕಳಿಸುವ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು ಹಾಗೂ ನಮ್ಮ ಸಾಫ್ಟ್ ವೇರ್ ಕಂಪ್ಲೀಟ್ ಮಾಡಬೇಕು ಇದಕ್ಕೆ ಅಂತ 100 ರೂಪಾಯಿ ಹಣ ಕೊಡುತ್ತೇವೆ. ನಾವು ಕಳಿಸುವ ಲಿಂಕ್​ನ ಕ್ಲಿಕ್ ಮಾಡಿ ನೀವು ಡೌನ್ಲೋಡ್ ಮಾಡಿಕೊಂಡು ಓಪನ್ ಮಾಡಿದ ಪೇಜ್ ಸ್ಕ್ರೀನ್ ಶಾಟ್ ಕಳಿಸಿ.

ಇದನ್ನು ಓದಿ: ಸಿಕ್ಕ ಸಿಕ್ಕಲ್ಲಿ ನೆಟ್ ಬ್ಯಾಂಕಿಂಗ್ ಮಾಡೋ ಮುನ್ನ ಎಚ್ಚರ; ಸೈಬರ್​ ಖದೀಮರ ಕ್ರಿಮಿನಲ್ ಐಡಿಯಾ ಬಯಲಿಗೆ!

ಇಷ್ಟೆಲ್ಲಾ ಮಾಡೋದಕ್ಕಿಂತ ಮೊದಲು ಗಮನಿಸಬೇಕಾದದ್ದು ಆ ಆ್ಯಪ್ ಯಾವುದು, ಚೀಟ್ ಆ್ಯಪ್ ಎಂದು ಪಿಡಿಎಫ್​ನಲ್ಲಿ ಕಳಿಸಿ, ಸ್ಕ್ರೀನ್ ಶಾಟ್ ಕಳಿಸಲು ಹೇಳ್ತಾರೆ ಅನ್ನೋದನ್ನ. ಇದರ ಬಗ್ಗೆ ಗಮನ ವಹಿಸದೆ ಕ್ಲಿಕ್ ಮಾಡಿ ಸ್ಕ್ರೀನ್ ಶಾಟ್ ಕಳಿಸಿದ್ರೆ, ಇದು ನಿಮಗೆ ಲಾಸ್ಟ್ ಪ್ರೊಸೆಸ್, ನಮ್ಮ ಕಂಪನಿ ಬಗ್ಗೆ 2 ನಿಮಿಷ ಓದಿ ಅಂತ ಮೆಸೇಜ್ ಕಳಿಸಿ ಸಕ್ಸಸ್ ಅಂತಾರೆ. ವೇಯ್ಟ್​ ಮಾಡಿ.. ಆ ಮೆಸೇಜ್​ ಹೇಗಿರುತ್ತೇ ಅನ್ನೋದನ್ನು ನಿಮಗೆ ತಿಳಿಸುತ್ತೇವೆ. “ನಮ್ಮ ಟೆಕ್ನಾಲಜಿ ಸಾಫ್ಟ್​​ವೇರ್ ಇದೊಂದು ಟೂಲ್ ಇದು ಗೇಮ್ ಪ್ಲಾಟ್​​ಫಾರ್ಮ್ ಮೂಲಕ ಪ್ರಾಫಿಟ್ ಅರ್ನ್ ಮಾಡುವ ಸಾಫ್ಟ್ ವೇರ್. ಇದು ಸೇಫ್ ಹಾಗೂ ರಿಲಿಯಬಲ್ ರಿಸ್ಕ್ ಇರೋದಿಲ್ಲ ಫೀಲ್ ಫ್ರೀ ಟು ಯ್ಯೂಸ್, ಡಾಟಾನ ಸ್ಟಡಿ ಮಾಡಿ ಡಿಸ್ಕ್ ಇರುವುದಿಲ್ಲ.” ಆಮೇಲೆ ನೀವು ಕಳುಹಿಸಿದ ಸ್ಕ್ರೀನ್ ಶಾಟ್ ಮೂಲಕ ಸಾಫ್ಟ್ ವೇರ್​ನ ಅಳವಡಿಸಿಕೊಂಡು ಆ ಆ್ಯಪ್ ಮೂಲಕ ನಿಮ್ಮ ಎಲ್ಲಾ ಕಾಂಟ್ಯಾಕ್ಟ್ಸ್, ನಿಮ್ಮ ಎಲ್ಲಾ ಮಾಹಿತಿಯನ್ನ ಪಡೆಯುತ್ತಾರೆ. ನೀವು ಫ್ರೀ ಎಂದು ನಂಬಿ ಯಾವ ಕೆಲಸಕ್ಕೆ ಮುಂದಾಗಿದ್ರೋ ಅದೇ ಆ್ಯಪ್ ನಿಂದ ನಿಮ್ಮ ಅಕೌಂಟ್​ನಲ್ಲಿರುವ ಅಷ್ಟೂ ಹಣವನ್ನ ಹಂತ ಹಂತವಾಗಿ ದೋಚುತ್ತಾರೆ. ಈಗ ಆಲೋಚನೆ ಮಾಡಿ. ನಿಮಗೆ ಚೀಟಿಂಗ್ ಆಗೋದು ಬೇಕಾ.. ಅವರು ಕಳುಹಿಸೋ ಮೆಸೇಜ್​ನಲ್ಲೇ ಇರುತ್ತೇ ಚೀಟ್ ಆಪ್​​ ಅಂತಾ.. ಅದರಲ್ಲೇ ಇದೆ ಚೀಟ್ ಅನ್ನೋದು. ಇಷ್ಟು ದಿನ ಯಾಮಾರಿದ್ರೆ ಮೊದಲು ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ. ಇನ್ನುಳಿದವರು ಇನ್ನು ಮುಂದೆ ಹೀಗೆ ಯಾಮಾರದೆ ಎಚ್ಚರ ವಹಿಸಿ.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲಸ ಹುಡುಕುವವರೇ ಎಚ್ಚರ.. ಆನ್‌ಲೈನ್‌ನಲ್ಲಿ ಈ ತಪ್ಪು ಮಾಡಿದ್ರೆ ನಿಮಗೆ ಪಂಗನಾಮ ಫಿಕ್ಸ್! ಏನದು?

https://newsfirstlive.com/wp-content/uploads/2024/02/cyber-8.jpg

Load More