/newsfirstlive-kannada/media/post_attachments/wp-content/uploads/2024/11/POST-OFFICE.jpg)
ಜೀವನದಲ್ಲಿ ಯಾವಾಗ ಏನು ಬೇಕಾದ್ರೂ ಸಮಸ್ಯೆ ಆಗಬಹುದು. ಎಂಥಾ ಸಮಸ್ಯೆ ಎದುರಾಗಲಿದೆ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಸರಿಯಾದ ಆರ್ಥಿಕ ಯೋಜನೆ ಅನ್ನೋದು ಇರಲೇಬೇಕು. ಆಗ ಮಾತ್ರ ನಾವು ಕಷ್ಟಗಳ ವಿರುದ್ಧ ಈಜಲು ಸಾಧ್ಯ. ಅದಕ್ಕಾಗಿ ನಾವು ರಿಯಲ್​ ಎಸ್ಟೇಟ್​​​ ಆಗಲಿ, ಸ್ಟಾಕ್​​ ಮಾರ್ಕೆಟ್​ ಆಗಲಿ, ಕ್ರಿಪ್ಟೋ ಕರೆನ್ಸಿ, ಗೋಲ್ಡ್​​ ಹೀಗೆ ಯಾವುದಾದ್ರೂ ಒಂದರ ಮೇಲೆ ಹೂಡಿಕೆ ಮಾಡಬೇಕು. ಇಷ್ಟೇ ಅಲ್ಲದೇ ಸೇವಿಂಗ್ಸ್​ ಮಾಡಲು ಎಫ್​ಡಿ ಅನ್ನೋ ಮತ್ತೊಂದು ಆಪ್ಷನ್​​ ಇದೆ.
ಎಫ್​​ಡಿ ಎಂದರೆ ಫಿಕ್ಸೆಡ್​​ ಡೆಪಾಸಿಟ್​​. ಫಿಕ್ಸೆಡ್​​ ಡೆಪಾಸಿಟ್​ ಎಂದರೆ ಥಟ್​ ಅಂತಾ ನೆನಪಾಗೋದು ಪೋಸ್ಟ್​ ಆಫೀಸ್​​. ಪೋಸ್ಟ್​ ಆಫೀಸ್​ ಹಲವು ರೀತಿಯ ಸೇವಿಂಗ್ಸ್​ ಸ್ಕೀಮ್​​ಗಳು ಪರಿಚಯಿಸಿದೆ. ಕೋಟ್ಯಾಂತರ ಜನ ಪೋಸ್ಟ್​ ಆಫೀಸ್​ನಲ್ಲಿ ಹೂಡಿಕೆ ಮಾಡಿ ಡಬಲ್​ ರಿಟರ್ನ್ಸ್​ ಗಳಿಸುತ್ತಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಸ್ಯ ನಟ ಮಂಜು ಪಾವಗಡ; ಗಣ್ಯರಿಂದ ಶುಭ ಹಾರೈಕೆ
ಏನಿದು ಸ್ಕೀಮ್​​?
ಇದು ಗ್ರಾಮ ಸುರಕ್ಷಾ ಯೋಜನೆ. ಪೋಸ್ಟ್ ಆಫೀಸ್ ಸ್ಕೀಮ್‌ಗಳಲ್ಲಿ ಅತ್ಯಂತ ಲಾಭದಾಯಕ ಎನಿಸಿಕೊಂಡಿರುವ ಯೋಜನೆ. ಪ್ರತಿದಿನ 50 ರೂ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಮೆಚ್ಯೂರಿಟಿ ವೇಳೆಗೆ ಬರೋಬ್ಬರಿ 35 ಲಕ್ಷ ರೂ. ಪಡೆಯಬಹುದು.
/newsfirstlive-kannada/media/post_attachments/wp-content/uploads/2023/10/POST-OFFICE.jpg)
ಇದು ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ. 19 ವರ್ಷದಿಂದ 55 ವರ್ಷದೊಳಗಿನ ಜನರು ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು ವಾರ್ಷಿಕವಾಗಿ 10 ಸಾವಿರದಿಂದ 10 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಪ್ರತೀ ತಿಂಗಳು 1,515 ರೂ. ಎಂದರೆ ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡಬೇಕು. ಉದಾಹರಣೆಗೆ 19ನೇ ವರ್ಷಕ್ಕೆ ಪಾಲಿಸಿ ತೆಗೆದುಕೊಂಡರೆ 55 ವರ್ಷ ಇದ್ದಾಗ 35 ಲಕ್ಷದವರೆಗೆ ಹಣ ಸಿಗಲಿದೆ.
ಪಾಲಿಸಿ ಮಾಡಿಸೋದು ಹೇಗೆ?
ನೀವು ಈ ಪಾಲಿಸಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಖರೀದಿ ಮಾಡಬಹುದು. ಹತ್ತಿರದ ಅಂಚೆ ಕಚೇರಿ ಶಾಖೆಗೆ ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ರೆ ಆಫ್​​ಲೈನ್​ನಲ್ಲೇ ಪಾಲಿಸಿ ಮಾಡಿಸಬಹುದು. ಆನ್‌ಲೈನ್‌ನಲ್ಲಿ ಖರೀದಿಸಲು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್​ಗೆ ಭೇಟಿ ನೀಡಬೇಕು.
ಇದನ್ನೂ ಓದಿ: ಜನರಿಗೆ ಬಿಗ್ ಶಾಕ್; ಗ್ರೀನ್ ಸೆಸ್ ವಿಧಿಸಲು ರಾಜ್ಯ ಸರ್ಕಾರ ಪ್ಲಾನ್.. ಏನದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us