/newsfirstlive-kannada/media/post_attachments/wp-content/uploads/2025/05/BR_Gavai.jpg)
ಸುಪ್ರೀಂಕೋರ್ಟ್​ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾ.ಭೂಷಣ ರಾಮಕೃಷ್ಣ ಗವಾಯಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
/newsfirstlive-kannada/media/post_attachments/wp-content/uploads/2025/05/BR_Gavai_2.jpg)
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ನ್ಯಾಯಮೂರ್ತಿ ಬಿಆರ್ ಗವಾಯಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು. ಈ ಉನ್ನತ ಹುದ್ದೆಯನ್ನು ಪಡೆದ ಮೊಟ್ಟ ಮೊದಲ ಬೌದ್ಧ ಧರ್ಮಿಯರಾಗಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಕೇಂದ್ರ ಸಚಿವ ಸಂಪುಟದ ಇತರೆ ಸಚಿವ ಸದಸ್ಯರು ಹಾಜರಿದ್ದರು. ಇನ್ನು ನೂತನ ನ್ಯಾಯಮೂರ್ತಿಗಳಿಗೆ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಶುಭ ಕೋರಿದರು.
ಇದಕ್ಕೂ ಮೊದಲು ಸುಪ್ರೀಂಕೋರ್ಟ್​ನ 51ನೇ ಮುಖ್ಯ ನ್ಯಾಯಮೂರ್ತಿ ಆಗಿ ಸಂಜೀವ್ ಖನ್ನಾ ಅವರು ಕರ್ತವ್ಯ ನಿರ್ವಹಿಸಿದ್ದರು. ಇವರ ಅವಧಿ 11 ನವೆಂಬರ್ 2024 ರಿಂದ 13 ಮೇ 2025ರ ವರೆಗೆ ಮಾತ್ರ ಇತ್ತು. ಖಾಲಿಯಾಗಿದ್ದ ಈ ಅತ್ಯುನ್ನತ ಹುದ್ದೆಗೆ ಮುಖ್ಯ ನ್ಯಾಯಮೂರ್ತಿ ಆಗಿ ನ್ಯಾ.ಭೂಷಣ ರಾಮಕೃಷ್ಣ ಗವಾಯಿ ಅವರು ಆಯ್ಕೆ ಆಗಿದ್ದರು. ಅದರಂತೆ ಇಂದು ಅಧಿಕಾರ ತೆಗೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/BR_Gavai_1.jpg)
ನ್ಯಾಯಮೂರ್ತಿ ಬಿಆರ್ ಗವಾಯಿ ಅವರು ಕೇವಲ 6 ತಿಂಗಳು ಮಾತ್ರ ಈ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಅಂದರೆ 2025ರ ನವೆಂಬರ್​ನಲ್ಲಿ ವೃತ್ತಿಯಿಂದ ಗವಾಯಿ ಅವರು ನಿವೃತ್ತರಾಗುತ್ತಾರೆ. ನಂತರ ಈ ಸ್ಥಾನಕ್ಕೆ ಮತ್ತೊಬ್ಬರು ಆಯ್ಕೆ ಆಗುತ್ತಾರೆ. ಮುಂಬೈ ಹೈಕೋರ್ಟ್​ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಗವಾಯಿ ಅವರು 1985ರಲ್ಲಿ ಸೀನಿಯರ್ ಜೂರಿಸ್ಟ್ ಬಾರ್​ಗೆ ಸೇರಿಕೊಂಡರು. ನಂತರ ಮುಂಬೈ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ 2003ರಲ್ಲಿ ಆಯ್ಕೆ ಆಗಿದ್ದರು. ಬಳಿಕದ 2005ರಲ್ಲಿ ಖಾಯಂ ನ್ಯಾಯಾಧೀಶರಾದರು. ಗವಾಯಿ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ 2019 ರಲ್ಲಿ ಬಡ್ತಿ ನೀಡಲಾಗಿತ್ತು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us