newsfirstkannada.com

ಟೀಮ್​ ಇಂಡಿಯಾದಲ್ಲಿ ರಿಂಕು ಸಿಂಗ್​ಗೂ ಭಾರೀ ಅನ್ಯಾಯ; ಆಕ್ರೋಶ ಹೊರಹಾಕಿದ ಫ್ಯಾನ್ಸ್​

Share :

Published April 30, 2024 at 5:56pm

    ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಐಸಿಸಿ ಟಿ20 ವಿಶ್ವಕಪ್​

    ಚುಟುಕು ಸಮರಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಿದ ಬಿಸಿಸಿಐ!

    ಟೀಮ್​ ಇಂಡಿಯಾದಲ್ಲಿ ಸ್ಟಾರ್​ ರಿಂಕು ಸಿಂಗ್​ಗೆ ಮತ್ತೆ ಭಾರೀ ಅನ್ಯಾಯ

ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಸೀಸನ್​​ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ನಡೆಯಲಿದೆ. ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್‌ 1ರಿಂದ 29ರವರೆಗೆ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ.

ಇಂದು ಅಜಿತ್‌ ಅಗರ್ಕರ್‌ ಸಾರಥ್ಯದಲ್ಲಿ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಮಹತ್ವದ ಸಭೆ ನಡೆಸಿ ಕೊನೆಗೂ ಭಾರತದ ಟಿ20 ವಿಶ್ವಕಪ್‌ ತಂಡ ಪ್ರಕಟಿಸಿದೆ. ತಂಡದ ಕ್ಯಾಪ್ಟನ್​​ ಆಗಿ ರೋಹಿತ್​ ಶರ್ಮಾ ಮತ್ತು ವೈಸ್‌ ಕ್ಯಾಪ್ಟನ್‌ ಆಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಬರೋಬ್ಬರಿ 2 ವರ್ಷಗಳ ಬಳಿಕ ಪಂತ್​ ಕೂಡ ಕಮ್​ಬ್ಯಾಕ್​ ಮಾಡಿದ್ದಾರೆ.

ಸದ್ಯ ರಿಂಕು ಸಿಂಗ್​ ಅವರನ್ನು ತಂಡದ ಬ್ಯಾಕಪ್​ ಪ್ಲೇಯರ್​ ಆಗಿ ಆಯ್ಕೆ ಮಾಡಲಾಗಿದೆ. ಪ್ಲೇಯಿಂಗ್​ ಎಲೆವೆನ್​ನಲ್ಲಿ ಇರಬೇಕಾಗಿದ್ದ ರಿಂಕು ಸಿಂಗ್​ ಅವರನ್ನು ತಂಡದ ಸೀಮಿತ ಆಟಗಾರನಾಗಿ ಆಯ್ಕೆ ಮಾಡಿದ್ದು, ಟೀಮ್​ ಇಂಡಿಯಾದ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ಜಸ್ಟೀಸ್​ ಫಾರ್​ ರಿಂಕು ಸಿಂಗ್​ ಅನ್ನೋ ಹ್ಯಾಶ್​ಟ್ಯಾಗ್​ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗಿದೆ.

ಇದನ್ನೂ ಓದಿ: ದಿನೇಶ್​​ ಕಾರ್ತಿಕ್​ಗೆ ಮತ್ತೆ ಅನ್ಯಾಯ; RCB ಸ್ಟಾರ್​ ಆಟಗಾರನಿಗೆ ಮೋಸ ಮಾಡಿದ ರೋಹಿತ್ ಶರ್ಮಾ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾದಲ್ಲಿ ರಿಂಕು ಸಿಂಗ್​ಗೂ ಭಾರೀ ಅನ್ಯಾಯ; ಆಕ್ರೋಶ ಹೊರಹಾಕಿದ ಫ್ಯಾನ್ಸ್​

https://newsfirstlive.com/wp-content/uploads/2024/04/Rinku-Singh-World-Cup-1.jpg

Load More