Justice for Swati: ಅಪರಿಚಿತ ಶವ ಪತ್ತೆ ಕೇಸ್​ಗೆ ಟ್ವಿಸ್ಟ್; ಕರ್ನಾಟಕದಲ್ಲಿ ಭಾರೀ ಸಂಚಲನ.. ಏನಿದು ಕೇಸ್​​..?

author-image
Ganesh
Updated On
Justice for Swati: ಅಪರಿಚಿತ ಶವ ಪತ್ತೆ ಕೇಸ್​ಗೆ ಟ್ವಿಸ್ಟ್; ಕರ್ನಾಟಕದಲ್ಲಿ ಭಾರೀ ಸಂಚಲನ.. ಏನಿದು ಕೇಸ್​​..?
Advertisment
  • ಸ್ವಾತಿ ರಮೇಶ್ ಬ್ಯಾಡಗಿ ಕೊಲೆ ಆಗಿರೋದು ದೃಢ ಎಂದ ಎಸ್​ಪಿ
  • ಆರೋಪಿ ನಯಾಜ್​ನನ್ನು ಬಂಧಿಸಿದ ಪೊಲೀಸರು, ಏನಿದು ಪ್ರಕರಣ?
  • ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ನ್ಯಾಯಕ್ಕಾಗಿ ಆಗ್ರಹ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಅಪರಿಚಿತ ಯುವತಿಯ ಶವ ಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹಿಂದೂ ಯುವತಿ ಹತ್ಯೆ, #Justiceforswati ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಏನಿದು ಪ್ರಕರಣ..?

ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಮಾರ್ಚ್ 6ರಂದು ಯುವತಿಯ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರ ಮೂಲಕ ಮಾಹಿತಿ ಪಡೆದ ಹಲಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಮೊದಲು ಅಪರಿಚಿತ ಯುವತಿ ಶವ ಎಂದು ಘೋಷಣೆ ಮಾಡಿದರು. ಕೊನೆಗೆ ವಾರಸುದಾರರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಒಂದು ದಿನ ಮೃತದೇಹವನ್ನ ಇಟ್ಟುಕೊಂಡಿದ್ದರು. ಮಾರನೇಯ ದಿನ ಕಾನೂನು ಪ್ರಕಾರ ಮೃತದೇಹವನ್ನು ಹೂತು ಹಾಕಿದ್ದರು.

ಇದನ್ನೂ ಓದಿ:ದುಬೈನಿಂದ ನೀವು ಎಷ್ಟು ಕೆಜಿ ಚಿನ್ನ ತರಬಹುದು? ಪುರುಷರಿಗೆ, ಮಹಿಳೆಯರಿಗೆ ಬೇರೆ ಬೇರೆ ರೂಲ್ಸ್..!

[caption id="attachment_115084" align="alignnone" width="800"]ಸ್ವಾತಿ ಅಮ್ಮ, ಶಿಶಿರೇಖಾಸ್ವಾತಿ ಅಮ್ಮ, ಶಿಶಿರೇಖಾ[/caption]

ಮಾರ್ಚ್​ 7ರಂದು ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗುತ್ತದೆ. ಸ್ವಾತಿ ಬ್ಯಾಡಗಿ ಎಂಬ ಯುವತಿ ಮಿಸ್ಸಿಂಗ್ ಆಗಿದ್ದಾಳೆ ಎಂದು ಆಕೆಯ ಪೋಷಕರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರೇಕೇರೂರು ಪೊಲೀಸರು ಸ್ವಾತಿಗಾಗಿ ತೀವ್ರ ಹುಡುಕಾಟ ನಡೆಸುತ್ತಾರೆ.

ಮೃತ ಸ್ವಾತಿಯ ಸಂಬಂಧಿ ಹೇಳುವ ಪ್ರಕಾರ.. ಮಾರ್ಚ್​ 3ರಂದು ಸ್ವಾತಿ ಮನೆಯಿಂದ ನರ್ಸಿಂಗ್ ಕೆಲಸಕ್ಕೆ ಅಂತಾ ಹೋಗಿದ್ದಳು. ಅಂದು ಮನೆಗೆ ಬರಲಿಲ್ಲ. ಫೋನ್ ಸ್ವಿಚ್ಡ್ ಆಫ್ ಬಂದಿತ್ತು. ಯಾರೋ ಸ್ನೇಹಿತರ ಮನೆಗೆ ಹೋಗಿದ್ದಾಳೆ ಅಂದುಕೊಂಡ್ವಿ. ಕೊನೆಗೆ ಸಂಬಂಧಿಕರಿಗೆ ತಿಳಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ವಿ. ನಮಗೆ ಸ್ವಾತಿ ಸಿಗಲಿಲ್ಲ. ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರ ಮಾರ್ಚ್​ 7ರಂದು ಪೊಲೀಸ್ ಠಾಣೆಗೆ ದೂರು ನೀಡಲು ಹಿರೇಕೇರೂರು ಠಾಣೆಗೆ ಬಂದ್ವಿ. ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ವಿ. ಅಂತೆಯೇ ಪೊಲೀಸರು ತನಿಖೆ ನಡೆಸಿದ್ರು. ಮೊಬೈಲ್ ಸಿಡಿಆರ್​ ತೆಗೆದು ಎಲ್ಲರಿಗೂ ಕಾಲ್ ಮಾಡಿದ್ರು. ಬಹುತೇಕ ನಂಬರ್​ಗಳಿಗೆ ಕಾಲ್ ಮಾಡಿದಾಗ ನಮ್ಮ ಸಂಬಂಧಿಕರಿಗೆ ಹೋಗಿತ್ತು. ಅಷ್ಟರಲ್ಲೇ ರಾತ್ರಿ ಆಗಿದ್ದರಿಂದ ಪೊಲೀಸರು ನಮ್ಮನ್ನು ಕಳುಹಿಸಿಕೊಟ್ಟರು.

ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆ ಇಂದ ಖಾಲಿ ಹುದ್ದೆಗಳ ಅಧಿಸೂಚನೆ ರಿಲೀಸ್.. ಇಂದಿನಿಂದ ಅರ್ಜಿ ಸಲ್ಲಿಸಬಹುದು

publive-image

ಇತ್ತ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದರು. ಒಂದೆರಡು ದಿನ ಬಿಟ್ಟು ಪೊಲೀಸರಿಂದ ನಮಗೆ ಕರೆ ಬಂತು. ನೀವು ಮಿಸ್ಸಿಂಗ್ ಕೇಸ್ ದಾಖಲಿಸಿದ್ದೀರಿ. ಇದೀಗ ಮೃತದೇಹ ಒಂದು ಸಿಕ್ಕಿದೆ. ಆದರೆ ಅದು ಇಲ್ಲಿ ಅಲ್ಲ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಮೃತದೇಹಕ್ಕೆ ಯಾರೂ ವಾರಸುದಾರರು ಸಿಗದ ಹಿನ್ನೆಲೆಯಲ್ಲಿ ಅವರು ಮೃತದೇಹವನ್ನು ಕಾನೂನು ಪ್ರಕಾರ ಹೂತು ಹಾಕಿದ್ದಾರೆ ಎಂದರು. ನಾವು ಹೋಗಿ ನೋಡಿದಾಗ ಪೊಲೀಸರು ತೋರಿಸಿದ ಬಟ್ಟೆ ಆಕೆಯದ್ದೇ ಆಗಿತ್ತು. ಫೋಟೋದಲ್ಲಿರುವ ಮೃತದೇಹ ಸ್ವಾತಿಯದ್ದೇ ಆಗಿತ್ತು. ಮಾರ್ಚ್​ 11 ರಂದು ಅಧಿಕೃತವಾಗಿ ಆ ಮೃತದೇಹ ಸ್ವಾತಿಯದ್ದು ಅಂತಾ ತಿಳಿಯಿತು ಎಂದಿದ್ದಾರೆ.

ಸ್ವಾತಿ ಯಾರು..?

ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಯುವತಿ ಸ್ವಾತಿ. ರಾಣೆಬೆನ್ನೂರಿನ ಆಸ್ಪತ್ರೆ ಒಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ತಂದೆ ತೀರಿಕೊಂಡಿದ್ದು, ತಾಯಿ ಜೊತೆ ವಾಸವಿದ್ದಳು. ಮಾರ್ಚ್​ 3 ರಂದು ಕಾಣೆಯಾಗಿದ್ದ ಸ್ವಾತಿಗಾಗಿ ಆಕೆಯ ಅಮ್ಮ ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ದಾರೆ. ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಠಾಣೆಗೆ ಬಂದು ದೂರು ನೀಡಿದ್ದರು.

ಇದನ್ನೂ ಓದಿ: ಭಾರತದ ರಾಷ್ಟ್ರೀಯ ಆಹಾರ ಯಾವುದು ಗೊತ್ತಾ? ಈ ಭೋಜನವನ್ನೇ ಆಯ್ಕೆ ಮಾಡಲು ಕಾರಣವೇನು?

[caption id="attachment_115082" align="aligncenter" width="800"]ಬಂಧಿತ ಆರೋಪಿ ನಯಾಜ್ಬಂಧಿತ ಆರೋಪಿ ನಯಾಜ್[/caption]

ಅನುಮಾನ ಏನು..?

ಹಲಗೇರಿ ಪೊಲೀಸರು ಕಾನೂನು ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿರುವ ಮೃತದೇಹ ಸ್ವಾತಿ ರಮೇಶ್ ಬ್ಯಾಡಗಿ ಅನ್ನೋದು ದೃಢವಾಗಿದೆ. ನನ್ನ ಮಗಳದ್ದು ಸಹಜ ಸಾವಲ್ಲ. ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತ ಯುವತಿಯ ಅಮ್ಮ ಶಶಿರೇಖಾ ಆರೋಪಿಸಿದ್ದಾರೆ. ಪ್ರಕರಣದಲ್ಲಿ ಸಂಬಂಧಿಕರು ಮೂವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಾತಿ ಕುಟುಂಬಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ನೀಡಬೇಕು. ‘ಹಿಂದೂ ಯುವತಿ ಹತ್ಯೆ, #Justiceforswati ಎಂಬ ಅಭಿಯಾನ ಆರಂಭಿಸಿದ್ದಾರೆ. ಅಲ್ಲದೇ ಸ್ವಾತಿ ಕುಟುಂಬಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದ್ದು, ಪ್ರತಿಭಟನೆ ನಡೆಸಿದ್ದಾರೆ.

ಓರ್ವನ ಬಂಧನ..

ತನಿಖೆ ತೀವ್ರಗೊಳಿಸಿರುವ ಪೊಲೀಸರು ಓರ್ವ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ನಯಾಜ್ ಬಂಧಿತ ಆರೋಪಿ. ಇನ್ನುಳಿದ ಆರೋಪಿಗಳಾದ ದುರ್ಗಾಚಾರಿ, ವಿನಾಯಕ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ನಯಾಜ್​ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಮನಕಲಕುವ ಘಟನೆ.. ಪ್ರೀತಿ, ಪ್ರೇಮದ ಮಾಯ ಬಜಾರ್​ನಲ್ಲಿ ತಾಯಿ ಮಗಳು ಸಾವು

publive-image

ಕೊಲೆ ಆಗಿರೋದು ಸತ್ಯ ಎಂದ ಎಸ್​ಪಿ

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಹಾವೇರಿ ಎಸ್ಪಿ ಅಂಶುಕುಮಾರ್, ಮಾರ್ಚ್ 6 ರಂದು ನಮಗೆ ಅಪರಿಚಿತ ಶವ ಸಿಕ್ಕಿತ್ತು. ಮಾರ್ಚ್​ 11 ರಂದು ಅದು ಸ್ವಾತಿ ರಮೇಶ್ ಬ್ಯಾಡಗಿ ಎಂಬುವವರ ಮೃತದೇಹ ಆಗಿತ್ತು. ತನಿಖೆ ನಡೆಸಿದಾಗ ಮೂವರು ಆರೋಪಿಗಳ ಸುಳಿವು ತಿಳಿಯಿತು. ನಯಾಜ್, ವಿನಾಯಕ, ದುರ್ಗಾಚಾರಿ ಎಂಬ ಆರೋಪಿಗಳು ಇದರಲ್ಲಿದ್ದಾರೆ. ಸ್ವಾತಿಗೆ ಮೂವರ ಪರಿಚಯ ಇತ್ತು. ಕೊಲೆಗೂ ಮುನ್ನ ರಾಣೆಬೆನ್ನೂರು ಬಳಿ ಸ್ವಾತಿ ಹತ್ತಿರ ಮಾತನ್ನಾಡಿದ್ದಾರೆ. ಕೆಲ ವಿಚಾರದಲ್ಲಿ ಇವರ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಬಳಿಕ ಸ್ವಾತಿಯನ್ನು ಕೊಲೆ ಮಾಡಿ ಗಾಡಿಯಲ್ಲಿ ಶವಸಾಗಿಸಿ ತುಂಗಭದ್ರಾ ನದಿಯಲ್ಲಿ ಬಿಸಾಡಿದ್ದಾರೆ. ನಯಾಜ್​ನನ್ನು ಅರೆಸ್ಟ್ ಮಾಡಿದ್ದೀವಿ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಪತ್ತೆ ಮಾಡಿ ಬಂಧಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಈ ದೇಶದಲ್ಲಿ ಸಮೋಸಾ ತಿನ್ನೋದು ಕಾನೂನು ಬಾಹಿರ.. ಅಪ್ಪಿ ತಪ್ಪಿ ತಯಾರಿಸಿದರೆ, ಸೇವಿಸಿದರೆ ಶಿಕ್ಷೆ ಫಿಕ್ಸ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment