/newsfirstlive-kannada/media/post_attachments/wp-content/uploads/2024/11/Justice-Sanjeev-Khanna.jpg)
ನ್ಯಾಯಮೂರ್ತಿ ಸಂಜೀವ್ ಖನ್ನಾ ಭಾರತದ ಸುಪ್ರೀಂಕೋರ್ಟ್​ನ 51ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಿವೃತ್ತ ಸಿಜೆಐ ಡಿ.ವೈ.ಚಂದ್ರಚೂಢ ಅವರ ನಿವೃತ್ತಿಯ ಪ್ರಕ್ರಿಯೆಗಳೆಲ್ಲವೂ ಮುಗಿದ ಬಳಿಕ, ದೇಶದ ಸರ್ವೋಚ್ಛ ನ್ಯಾಯಾಲಯದ ನೂತನ ಸಿಜೆಐ ಆಗಿ ಸಂಜೀವ್ ಖನ್ನಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಜೆಐ ಸಂಜೀವ್ ಖನ್ನಾ ಅವರಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಜಸ್ಟಿಸ್ ಸಂಜೀವ್ ಖನ್ನಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಕಿರೆಣ್ ರಿಜಿಜು. ಇಂಧನ ಸಚಿವ ಮನೋಹರ್​ಲಾಲ್ ಕಟ್ಟರ್ ಹಾಗೂ ನಿವೃತ್ತ ನ್ಯಾಯಮೂರ್ತಿಳಾದ ಡಿ.ವೈ.ಚಂದ್ರಚೂಢ ಅವರು ಹಾಜರಿದ್ದರು.
ಇದನ್ನೂ ಓದಿ:VIDEO: ಭಾವುಕ ವಿದಾಯ.. ಸೇವಾ ಅವಧಿ ಮುಗಿಸಿದ ಸುಪ್ರೀಂಕೋರ್ಟ್ CJI ಚಂದ್ರಚೂಢ ಹೇಳಿದ್ದೇನು?
ಜಸ್ಟಿಸ್ ಖನ್ನಾ ಅವರು ಈಗ ನಿವೃತ್ತೊಂಡಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಢ ಅವರಿಂದ ಸಿಜೆಐ ಸ್ಥಾನಕ್ಕೆ ಶಿಫಾರಸ್ಸಗೊಂಡಿದ್ದರು. 65 ವರ್ಷದ ಜಸ್ಟಿಸ್ ಸಂಜೀವ್ ಖನ್ನಾ ಮುಂದಿನ ವರ್ಷ ಮೇ 13ರವರೆಗೂ ಸುಪ್ರೀಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ನೂತನ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಸಂಜೀವ್ ಖನ್ನಾ ಮೇ 14 1960ರಲ್ಲಿ ಜನಿಸಿದ್ದಾರೆ. ಸೆಂಟರ್ ಆಫ್ ದೆಹಲಿ ಯುನಿವರ್ಸಿಟಿಯಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ. ದೆಹಲಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗುವ ಮುನ್ನ ಇವರು ಮೂರನೇ ತಲೆಮಾರಿನ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಈ ಹಿಂದೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಲ್ಲಿಯೂ ಕೂಡ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಸುಪ್ರೀಂಕೋರ್ಟ್ CJI ಚಂದ್ರಚೂಢ ನಿವೃತ್ತಿ ಬಳಿಕ ಏನು ಮಾಡಬೇಕು? ಏನು ಮಾಡಲೇ ಬಾರದು?
ಜಸ್ಟಿಸ್ ಖನ್ನಾ ಅವರನ್ನು 2019 ಜನವರಿಯಲ್ಲಿ ಸುಪ್ರೀಂಕೋರ್ಟ್​ಗೆ ನೇಮಕ ಮಾಡಲಾಗಿತ್ತು. ಸರ್ವೊಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಇವರು ಹಲವು ಸೂಕ್ಷ್ಮ ರಾಜಕೀಯ ಪ್ರಕರಣಗಳನ್ನು ನಿಭಾಯಿಸಿದ್ದಾರೆ. ಆಮ್​ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲರ ಮೇಲೆ ಬಂದಿದ್ದ ಅಬಕಾರಿ ಹಗರಣದ ಪ್ರಕರಣದ ವಿಚಾರಣೆಯನ್ನು ಜಸ್ಟಿಸ್ ಖನ್ನಾ ಅವರು ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us