ಹಣದ ಕಂತೆ ಪತ್ತೆಯಾಗಿದ್ದು ನಮ್ಮ ಮನೆಯಲ್ಲಲ್ಲ.. ತಮ್ಮ ವಿರುದ್ಧದ ಆರೋಪ ನಿರಾಕರಿಸಿದ ಜಸ್ಟಿಸ್​ ಯಶವಂತ್ ವರ್ಮಾ!

author-image
Gopal Kulkarni
Updated On
ಹಣದ ಕಂತೆ ಪತ್ತೆಯಾಗಿದ್ದು ನಮ್ಮ ಮನೆಯಲ್ಲಲ್ಲ.. ತಮ್ಮ ವಿರುದ್ಧದ ಆರೋಪ ನಿರಾಕರಿಸಿದ ಜಸ್ಟಿಸ್​ ಯಶವಂತ್ ವರ್ಮಾ!
Advertisment
  • ಹೈಕೋರ್ಟ್ ಜಸ್ಟಿಸ್​ ಮನೆಯಲ್ಲಿ ಪತ್ತೆಯಾಗಿದ್ದ ಕಂತೆ ಕಂತೆ ನೋಟು
  • ಕರೆನ್ಸಿ ನೋಟು ಪತ್ತೆಯಾಗಿದ್ದು ಔಟ್ ಹೌಸನಲ್ಲಿ ಎನ್ನುತ್ತಿರುವ ಜಸ್ಟಿಸ್​
  • ನಾನಾಗಲೀ, ನನ್ನ ಕುಟುಂಬದವರಾಗಲೀ ಔಟ್ ಹೌಸ್ ನಲ್ಲಿ ಹಣ ಇಟ್ಟಿಲ್ಲ

ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ದೆಹಲಿ ಹೈಕೋರ್ಟ್​ನ ಜಸ್ಟಿಸ್ ವರ್ಮಾ ಅವರ ಮನೆಯಲ್ಲಿ ಸಿಕ್ಕಿದ್ದ ಕಂತೆ ಕಂತೆ ನೋಟುಗಳ ವಿಚಾರ ಈಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ತಮ್ಮ ಮೇಲೆ ಬಂದಿರುವ ಆರೋಪವನ್ನು ಯಶವಂತ್ ವರ್ಮಾ ಅಲ್ಲಗಳೆದಿದ್ದಾರೆ. ಕರೆನ್ಸಿ ನೋಟು ಪತ್ತೆಯಾಗಿದ್ದು ಔಟ್​ಹೌಸ್​ನಲ್ಲಿ ನಾನಾಗಲಿ, ನನ್ನ ಕುಟುಂಬದವರಗಾಲೀ ಔಟ್​​ಹೌಸ್​ನಲ್ಲಿ ಹಣ ಇಟ್ಟಿರಲಿಲ್ಲ. ನಾವು ವಾಸ ಇರುವ ಮನೆಯಲ್ಲಿ ಹಣ ಪತ್ತೆಯಾಗಿಲ್ಲ. ಔಟ್​ಹೌಸ್ ಮತ್ತು ನಮ್ಮ ಮನೆಯ ನಡುವೆ ಕಂಪೌಂಡ್ ಇದೆ.ಹೀಗಾಗಿ ನನ್ನ ಮೇಲೆ ಮಾಡುತ್ತಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ದೆಹಲಿ ಹೈಕೋರ್ಟ್​ ಜಡ್ಜ್​ ಮನೆಯಲ್ಲಿ ಭಾರೀ ಪ್ರಮಾಣದ ಹಣ ವಶಕ್ಕೆ; ವರ್ಗಾವಣೆಗೊಂಡ ನ್ಯಾಯಮೂರ್ತಿ

ಹೈಕೋರ್ಟ್​ನ ಜಸ್ಟಿಸ್​ ಯಶವಂತ್ ವರ್ಮಾ ಅವರ ಮನೆಗೆ ಬಿದ್ದಾಗ, ಅದನ್ನು ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕಂತೆ ಕಂತೆ ನೋಟುಗಳು ಇರುವ ದೃಶ್ಯ ಕಂಡು ಬಂದಿತ್ತು. ಹಣ ಇಟ್ಟಿದ್ದ ಕೊಠಡಿಗೆ ಬೆಂಕಿ ಬಿದ್ದು ಕೋಟಿಗಟ್ಟಲೇ ಕರೆನ್ಸಿ ನೋಟು ಸುಟ್ಟು ಭಸ್ಮವಾಗಿದ್ದವು. ಅಲ್ಲಿದ್ದ ಬಹುತೇಕ ಕರೆನ್ಸಿ ನೋಟುಗಳು ಸುಟ್ಟು ಭಸ್ಮವಾಗಿದ್ದವು.


">March 22, 2025

ಈಗ ಮನೆಯೊಳಗೆ ಪತ್ತೆಯಾದ ಕರೆನ್ಸಿ ನೋಟುಗಳನ್ನು ಕ್ಲೀನ್ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ.. ಹೈಕೋರ್ಟ್​​​​ನಲ್ಲಿ ಹಾಲಿ ನ್ಯಾಯಮೂರ್ತಿಗಳ ಮನೆಯಲ್ಲಿ ಇಷ್ಟೊಂದು ನೋಟುಗಳ ರಾಶಿ ಹೇಗೆ ಬಂತು ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಈ ಪ್ರಶ್ನೆಗಳು ಮೂಡಿವೆ. ಹೀಗಾಗಿ ದೆಹಲಿ ಪೊಲೀಸ್ ಕಮೀಷನರ್​ ಮೂಲಕ ಕೇಂದ್ರ ಗೃಹ ಇಲಾಖೆಗೆ ವರದಿ ರವಾನೆಯಾಗಿದೆ. ಗೃಹ ಇಲಾಖೆಗೆ ಸುಪ್ರೀಂಕೋರ್ಟ್ ಸಿಜೆಐ ವರದಿ ರವಾನೆ ಮಾಡಿದ್ದಾರೆ. ಸಿಜೆಐಯಿಂದ ಮೂವರು ಜಡ್ಜ್​​ಗಳಿಂದ ತನಿಖೆ ಮಾಡುವಂತೆ ಆದೇಶ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment