/newsfirstlive-kannada/media/post_attachments/wp-content/uploads/2024/08/KL_RAHUL.jpg)
ಗೌತಮ್​ ಗಂಭೀರ್​ಗೂ ಮುನ್ನವೇ ಆಸ್ಟ್ರೇಲಿಯಾದ ಲೆಜೆಂಡ್​ ಜಸ್ಟಿನ್​ ಲ್ಯಾಂಗರ್​​ ಟೀಮ್​ ಇಂಡಿಯಾ ಹೆಡ್​ ಕೋಚ್​ ಆಗೋಕೆ ಮುಂದಾಗಿದ್ರು. ಆದ್ರೆ, ಕೆ.ಎಲ್​ ರಾಹುಲ್​ ನೀಡಿದ ಒಂದು ಸಲಹೆಗೆ ಬೆಚ್ಚಿ ಬಿದ್ದ ಲ್ಯಾಂಗರ್​ ರೇಸ್​​ನಿಂದಲೇ ಹಿಂದೆ ಸರಿದು ಬಿಟ್ಟರು. ಅಷ್ಟಕ್ಕೂ ಕೆ.ಎಲ್​ ರಾಹುಲ್ ಹೇಳಿದ್ದೇನು?.
ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!
ರಾಹುಲ್​ ದ್ರಾವಿಡ್​ ಅಧಿಕಾರವಧಿ ಅಂತ್ಯದ ಬೆನ್ನಲ್ಲೇ ಬಿಸಿಸಿಐ, ಟೀಮ್​ ಇಂಡಿಯಾದ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆರಂಭದಲ್ಲಿ ಹಲವು ಲೆಜೆಂಡ್​ಗಳ ಹೆಸರು ಮುಂದಿನ ಕೋಚ್​ ಹುದ್ದೆಗೆ ಕೇಳಿ ಬಂದಿದ್ವು. ಆದ್ರೆ, ಇದ್ದಕ್ಕಿದ್ದಂತೆ ಆ ಲೆಜೆಂಡ್​ಗಳೆಲ್ಲ ರೇಸ್​ನಿಂದ ಹಿಂದೆ ಸರಿದು ಬಿಟ್ರು. ಅದ್ರಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಮಾಜಿ ಕೋಚ್​​ ಜಸ್ಟಿನ್​ ಲ್ಯಾಂಗರ್​ ಕೂಡ ಒಬ್ರು.
ಅಸಲಿಗೆ ಟೀಮ್​ ಇಂಡಿಯಾದ ಕೋಚ್​ ಆಗಬೇಕು ಅನ್ನೋ ಅಪಾರ ಆಸೆ ಹಾಗೂ ಕನಸು ಜಸ್ಟಿನ್​ ಲ್ಯಾಂಗರ್​ಗಿತ್ತಂತೆ. ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧತೆಯನ್ನೂ ಮಾಡಿಕೊಂಡಿದ್ರಂತೆ. ಇದ್ರ ನಡುವೆ ಒಂದು ಬಾರಿ ಟೀಮ್​ ಇಂಡಿಯಾ ಕ್ರಿಕೆಟಿಗ ಕೆ.ಎಲ್​ ರಾಹುಲ್​ ಜೊತೆಗೆ ಮಾತನಾಡಿದ್ರಂತೆ. ಆಗ ರಾಹುಲ್​ ಹೇಳಿದ್ದನ್ನ ಕೇಳಿದ ಜಸ್ಟಿನ್​ ಲ್ಯಾಂಗರ್​, ಕೋಚ್​ ಹುದ್ದೆ ರೇಸ್​ನಿಂದ ಹಿಂದೆ ಸರಿಯೋ ನಿರ್ಧಾರ ಮಾಡಿದ್ರಂತೆ.
ನಾನು 4 ವರ್ಷಗಳ ಕಾಲ ಆಸ್ಟ್ರೇಲಿಯಾದ ಕೋಚ್​ ಆಗಿದ್ದೆ. ಹೀಗಾಗಿ ಟೀಮ್​ ಇಂಡಿಯಾ ಕೋಚ್​ ಆಗಲು ಆಸಕ್ತಿ ಹೊಂದಿದ್ದೆ. ಇದ್ರ ಬಗ್ಗೆ ಕೆ.ಎಲ್​ ರಾಹುಲ್​ ಜೊತೆ ಮಾತನಾಡಿದೆ. ಆಗ ರಾಹುಲ್,​ ಐಪಿಎಲ್​ನಲ್ಲಿ ಇದ್ಯಲ್ವಾ ಪಾಲಿಟಿಕ್ಸ್​ ಹಾಗೂ ಫ್ರೆಶರ್.. ಇದ್ರ ಸಾವಿರ ಪಟ್ಟು ಟೀಮ್​ ಇಂಡಿಯಾದಲ್ಲಿರುತ್ತೆ. ಆ ರಾಜಕೀಯ ಹಾಗೂ ಒತ್ತಡವನ್ನ ನಿಭಾಯಿಸಬೇಕು ಅಂದ್ರು. ಆಗ ನಾನು ಕೋಚ್​ ಆಗೋ ಕನಸನ್ನ ಕೈ ಬಿಟ್ಟೆ ಅಂತಾ ಲ್ಯಾಂಗರ್​​, ಪಾಡ್​ಕಾಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ