/newsfirstlive-kannada/media/post_attachments/wp-content/uploads/2025/01/Justin-Trudeau.jpg)
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಭಾರೀ ದೊಡ್ಡ ಜಯ ಸಿಕ್ಕಿದೆ. ಭಾರತ ವಿರೋಧಿ ಹಾಗೂ ಖಲಿಸ್ತಾನಿಗಳ ಬೆಂಬಲಿಗ ಅಂತಾನೇ ತನ್ನನ್ನು ತಾನು ತೋರಿಸಿಕೊಳ್ಳುತ್ತಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ಘೋಷಿಸಿದ್ದಾರೆ. ಇದರ ಜೊತೆಗೆ ಶಾಕಿಂಗ್ ನಿರ್ಧಾರವೊಂದನ್ನ ಕೂಡ ಪ್ರಕಟಿಸಿದ್ದಾರೆ.
ಟ್ರುಡೋ ರಾಜೀನಾಮೆ
ಜಸ್ಟಿನ್ ಟ್ರುಡೊ.. ಕೆನಡಾದ 23ನೇ ಪ್ರಧಾನಿ.. ನವೆಂಬರ್ 04.. 2015 ರಿಂದ ಪ್ರಧಾನಿಯಾಗಿ ಅಧಿಕಾರಿ ಸ್ವೀಕಾರ ಮಾಡಿದ ಟ್ರುಡೋ ಭಾರತದ ವಿರುದ್ಧ ಒಂದಲ್ಲ ಒಂದು ಆರೋಪ ಮಾಡುತ್ತಲೇ ಇದ್ದರು. ಪ್ರತ್ಯೇಕ ದೇಶಕ್ಕಾಗಿ ಆಗಾಗ್ಗೆ ಕ್ಯಾತೆ ತೆಗೆಯುವ ಖಲಿಸ್ತಾನಿ ಉಗ್ರರೊಂದಿಗೆ ಜಸ್ಟಿನ್ ಟ್ರುಡೋಗೆ ಎಲ್ಲಿದಲ್ಲದ ಪ್ರೀತಿ.. ಸದ್ಯ ಇದೇ ಪ್ರೀತಿ-ಸ್ನೇಹ ಇವರ ತಲೆದಂಡಕ್ಕೆ ಕಾರಣವಾಗಿದೆ.
ಇನ್ಮುಂದೆ ಚುನಾವಣೆಗೂ ನಿಲ್ಲಲ್ಲ ಎಂದ ಜಸ್ಟಿನ್ ಟ್ರುಡೊ!
ಖಲಿಸ್ತಾನ ಉಗ್ರ ಸಂಘಟನೆಯ ವಿಚಾರ ಹಿಡಿದುಕೊಂಡು ಭಾರತದೊಂದಿಗೆ ಚೇಷ್ಟೆ ಮಾಡ್ತಾ ತಾಳ್ಮೆ ಪ್ರಶ್ನಿಸುತ್ತಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಖುರ್ಚಿ ಅಲುಗಾಡಿದೆ. ನಿನ್ನೆ ಟ್ರುಡೊ ತಮ್ಮ ಪಕ್ಷವಾದ ಲಿಬರಲ್ ಪಾರ್ಟಿ ಆಫ್ ಕೆನಡಾದ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಜೊತೆಗೆ ತಮ್ಮ ಹುದ್ದೆಗೆ ನಿರಿಕ್ಷೇಯಂತೆ ರಾಜೀನಾಮೆ ಘೋಷಿಸಿದ್ದಾರೆ. ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಕೇಸ್ನಲ್ಲಿ ಭಾರತವನ್ನ ದೂಷಿಸುತ್ತಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನಿನ್ನೆ ರಾಜೀನಾಮೆ ವಿಚಾರವನ್ನ ಪತ್ರಿಕಾಗೋಷ್ಠಿ ಮಾಡಿ ತಿಳಿಸಿದ್ದಾರೆ. ಒಟ್ಟಾವಾದ ರೈಡೋ ಕಾಟೇಜ್‌ನಲ್ಲಿರುವ ತಮ್ಮ ನಿವಾಸದ ಬಳಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ಬಗ್ಗೆ ಮಾಹಿತಿ ನೀಡಿದ್ರು.
ಇದನ್ನೂ ಓದಿ:ಪದೇ ಪದೆ ಲೋಕೋ ಪೈಲಟ್ ಹಾರ್ನ್ ಒತ್ತುತ್ತಿದ್ದಾರೆ ಎಂದರೆ ಅರ್ಥವೇನು? ರೈಲುಗಳ ವಿವಿಧ ಹಾರ್ನ್ಗಳ ಸಂಕೇತವೇನು?
ನಾನು ಪಕ್ಷದ ನಾಯಕತ್ವ ಮತ್ತು ಕೆನಡಾ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಪಕ್ಷವು ತನ್ನ ಮುಂದಿನ ನಾಯಕನನ್ನು ದೃಢವಾದ, ರಾಷ್ಟ್ರವ್ಯಾಪಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿದ ನಂತರ ನಾನು ಪ್ರಧಾನ ಮಂತ್ರಿಯಾಗಿ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ. ಕಳೆದ ರಾತ್ರಿ ರಾಷ್ಟ್ರಪತಿಗಳ ಬಳಿ ಆ ಪ್ರಕ್ರಿಯೆಯನ್ನ ಶುರು ಮಾಡಿ ಎಂದು ಹೇಳಿದ್ದೇನೆ. ಈ ದೇಶವು ಮುಂದಿನ ಚುನಾವಣೆಯಲ್ಲಿ ನಿಜವಾದ ಆಯ್ಕೆಗೆ ಅರ್ಹವಾಗಿದೆ ಮತ್ತು ನಾನು ಆಂತರಿಕ ಕದನಗಳನ್ನು ಎದುರಿಸಬೇಕಾದರೆ, ಆ ಚುನಾವಣೆಯಲ್ಲಿ ನಾನು ಅತ್ಯುತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ ಎಂದು ನನಗೆ ಸ್ಪಷ್ಟವಾಗಿದೆ-ಜಸ್ಟಿನ್ ಟ್ರುಡೊ, ಕೆನಡಾದ ನಿರ್ಗಮಿತ ಪ್ರಧಾನಿ
ಟ್ರುಡೋ ರಾಜೀನಾಮೆಗೆ ಕಾರಣಗಳೇನು?
- ಲಿಬರಲ್ ಪಾರ್ಟಿಯಲ್ಲಿ ನಡೀತಿರೋ ಆಂತರಿಕ ಕಲಹ
- ಟ್ರುಡೋ ನಾಯಕತ್ವಕ್ಕೆ ಬೇಸತ್ತು ಸಚಿವರ ಬಂಡಾಯ
- ಲಿಬರಲ್ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಕಾರಣ
- ಟ್ರುಡೋ ವಿರುದ್ಧ ಪಕ್ಷದ ಸದಸ್ಯರ ಬಹಿರಂಗ ಹೇಳಿಕೆ
- ಖಲಿಸ್ತಾನಿ ಪರ ಬ್ಯಾಟಿಂಗ್, ಸ್ವಪಕ್ಷೀಯರಿಂದ ಟೀಕೆ
ಒಟ್ಟಾರೆ ಇತ್ತೀಚಿನ ವರ್ಷಗಳಲ್ಲಿ ಟ್ರುಡೋ ತಮ್ಮ ವಿರುದ್ಧ ಹೆಚ್ಚಿನ ವಿರೋಧವನ್ನು ಎದುರಿಸುತ್ತಿದ್ದಾರೆ. ಭಾರತ ವಿರೋಧಿ ಹೇಳಿಕೆಗಳಿಂದ ಭಾರತೀಯರಿಂದ ಮಾತ್ರವಲ್ಲದೇ ಖುದ್ದು ಕೆನಡಾದವರಿಂದಲೇ ವಿರೋಧ ಕಟ್ಟಿಕೊಂಡಿದ್ದರು. ಅಲ್ಲದೇ ಅಲ್ಲಿ ಆಹಾರ ಮತ್ತು ವಸತಿ ವೆಚ್ಚಗಳು ಕೂಡ ಗಗನಕ್ಕೇರಿದೆ. ವಲಸೆಯ ತೀವ್ರ ಏರಿಕೆಯಂತಹ ವಿಷಯಗಳ ಬಗ್ಗೆ ವ್ಯಾಪಕವಾದ ಮತದಾರರ ಅಸಮಾಧಾನ ಕೂಡ ಟ್ರೂಡೋ ರಾಜೀನಾಮೆಗೆ ಕಾರಣವಾಗಿದೆ.
ಇದನ್ನೂ ಓದಿ:ಕೆನಡಾ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ; ದಿಢೀರ್ ರಾಜೀನಾಮೆ ನೀಡಿದ ಪ್ರಧಾನಿ ಜಸ್ಟಿನ್ ಟ್ರುಡೊ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ