ಪಾಕ್ ಜೊತೆಗೆ ಲಿಂಕ್.. ದೇಶಕ್ಕೆ ದ್ರೋಹ ಬಗೆದ ಆರೋಪ; ಫೇಮಸ್ ಯೂಟ್ಯೂಬರ್ ಅರೆಸ್ಟ್..!

author-image
Veena Gangani
Updated On
ಪಾಕ್ ಜೊತೆಗೆ ಲಿಂಕ್.. ದೇಶಕ್ಕೆ ದ್ರೋಹ ಬಗೆದ ಆರೋಪ; ಫೇಮಸ್ ಯೂಟ್ಯೂಬರ್ ಅರೆಸ್ಟ್..!
Advertisment
  • ಪಾಕ್ ಗುಪ್ತಚರ ಏಜೆಂಟ್​ಗಳೊಂದಿಗೆ ಜ್ಯೋತಿಗೆ ಸಂಪರ್ಕ
  • ಬೇಹುಗಾರಿಕೆ ಆರೋಪದಡಿ ಜ್ಯೋತಿ ಸೇರಿ 6 ಮಂದಿ ಅರೆಸ್ಟ್
  • ಭಾರತದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಹಂಚಿಕೆ

ಭಾರತದ ಸೂಕ್ಷ್ಮ ಮಾಹಿತಿಯನ್ನು ಪಾಪಿ ಪಾಕಿಸ್ತಾನಕ್ಕೆ ಹಂಚಿಕೆ ಮಾಡಿದ ಆರೋಪದಡಿ ಫೇಮಸ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅರೆಸ್ಟ್​ ಮಾಡಲಾಗಿದೆ. ಭಾರತದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಹಂಚಿಕೆ ಮಾಡುತ್ತಿದ್ದಳಂತೆ.

publive-image

ಅಷ್ಟೇ ಅಲ್ಲದೇ ಪಾಕ್ ಗುಪ್ತಚರ ಏಜೆಂಟ್​ಗಳೊಂದಿಗೆ ಜ್ಯೋತಿಗೆ ಸಂಪರ್ಕ ಹೊಂದಿದ್ದಳಂತೆ. ಜೊತೆಗೆ ಈ ಹಿಂದೆ ಜ್ಯೋತಿ ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದಳಂತೆ. ಹೀಗಾಗಿ ಬೇಹುಗಾರಿಕೆ ಆರೋಪದಡಿ ಜ್ಯೋತಿ ಸೇರಿ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಶಾಕಿಂಗ್​ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್

ಯಾರು ಈ ಜ್ಯೋತಿ ಮಲ್ಹೋತ್ರಾ?

ಜ್ಯೋತಿ ಮಲ್ಹೋತ್ರಾ ಹರಿಯಾಣ ಮೂಲದ ಯೂಟ್ಯೂಬರ್. ಈಕೆ ಒಬ್ಬ ಟ್ರಾವೆಲ್ ಬ್ಲಾಗರ್. ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಜ್ಯೋತಿ ಮಲ್ಲೋತ್ರಾ ಕೂಡ ಒಬ್ಬರು. ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದ ನಂತರ ಅವರು 2023 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿನ ಪಾಕ್​ ಹೈಕಮಿಷನ್ ಕಚೇರಿ ಸಿಬ್ಬಂದಿ ಜೊತೆ ಸ್ನೇಹ ಬೆಳೆಸಿ ರಹೀಮ್ ಅಲಿಯಾಸ್ ಡ್ಯಾನಿಶ್ ಎಂಬಾತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು. ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್​ಗೆ ಭಾರದತ ಸೂಕ್ಷ್ಮ ಮಾಹಿತಿ ರವಾನೆ ಮಾಡುತ್ತಿದ್ದಂತೆ. ಈ ಜ್ಯೋತಿ ಪಾಕ್ ಮಾಹಿತಿದಾರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳಂತೆ. ಸದ್ಯ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಗಳನ್ನು ನೀಡುತ್ತಿದ್ದ ಆರೋಪದಡಿಯಲ್ಲಿ ಜ್ಯೋತಿ ಮಲ್ಹೋತ್ರಾ ಸೇರಿದಂತೆ ಸೇರಿ ಒಟ್ಟು ಆರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment