newsfirstkannada.com

ವಿಮಾನದಲ್ಲಿ ಪೈಲೆಟ್​​ ಮೇಲೆ ಹಲ್ಲೆ; ಅಶಿಸ್ತು ತೋರಿದ ಪ್ರಯಾಣಿಕನಿಗೆ ಜ್ಯೋತಿರಾದಿತ್ಯ ಸಿಂಧಿಯಾ ಎಚ್ಚರಿಕೆ

Share :

Published January 15, 2024 at 8:32pm

Update January 16, 2024 at 7:22am

  ವಿಮಾನ ಹಾರಾಟ ವಿಳಂಬಕ್ಕೆ ಕೋಪಗೊಂಡ ಪ್ರಯಾಣಿಕ

  ನೇರವಾಗಿ ಬಂದು ಪೈಲೆಟ್​ಗೆ ಪಂಚ್​ ಕೊಟ್ಟ ಪ್ರಯಾಣಿಕ

  ಕೇಂದ್ರ ನಾಗರಿಕ ಸಚಿವನಿಂದ ಪ್ರಯಾಣಿಕನಿಗೆ ಎಚ್ಚರಿಕೆ ಸಂದೇಶ

ಉತ್ತರ ಭಾರತದ ರಾಜ್ಯಗಳು ದಟ್ಟ ಮಂಜಿನಲ್ಲಿ ಮರೆಯಾಗುತ್ತಿದೆ. ಮುಂದೆ ಹೋಗುವವರು ಕಾಣದಷ್ಟು ದಟ್ಟವಾದ ಮಂಜಿನಿಂದ ಸಾಕಷ್ಟು ಸಮಸ್ಯೆಗಳು ಉಂಟಾಗ್ತಿದೆ. ದಟ್ಟ ಮಂಜಿನಿಂದಾಗಿ ವಿಮಾನ ಹಾರಾಟ ವ್ಯತ್ಯಯವಾಗಿದ್ದು, ಹಲವು ವಿಮಾನಗಳ ಹಾರಾಟ ವಿಳಂಬವಾಗ್ತಿವೆ. ಇದರಿಂದ ಸಹನೆಗೆಟ್ಟ ಪ್ರಯಾಣಿಕನೊಬ್ಬ ಪೈಲಟ್​ ಮೇಲೆ ಹಲ್ಲೆ ನಡೆಸಿ ರಾದ್ಧಾಂತ ಸೃಷ್ಟಿಸಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿತ್ತು. ಆದರೆ ಈ ಘಟನೆ ಬೆಳಕಿಗೆ ಬಂದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಶಿಶ್ತು ತೋರಿದ ಪ್ರಯಾಣಿಕನಿಗೆ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರ ರಾಜಧಾನಿ ಹೊಸ ದೆಹಲ್ಲಿಯಿಂದ ಗೋವಾಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಟ್ಟಹಾಸ ಮೆರೆದಿದ್ದನು. ಈ ವಿಡಿಯೋ ವೈರಲ್​​ ಆದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್​ ಮಾಡಿದ್ದಾರೆ. ‘ಇಂತಹ ಅಶಿಸ್ತಿನ ವರ್ತನೆ ಸ್ವೀಕಾರಾರ್ಹವಲ್ಲ. ಅಶಿಸ್ತಿನ ವರ್ತನೆಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ಕಾನೂನು ಮೂಲಕ ವ್ಯವಹರಿಸಲಾಗುವುದು’ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬಳಿಕ ‘ಮಂಜು ಆವರಿಸಿದ್ದ ಕಾರಣ ಗಡಿಯಾರದ ಸುತ್ತ ಎಲ್ಲರೂ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ವಿಮಾನದಲ್ಲಿ ಆಗಿದ್ದೇನು?

ದೆಹಲಿಯಿಂದ ಗೋವಾ ಹೋಗಬೇಕಿದ್ದ ಏರ್‌ಬಸ್ A20N ವಿಮಾನದ ಹಾರಾಟ, ದಟ್ಟವಾದ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಏರ್‌ಬಸ್ A20N ವಿಮಾನ ಹಾರಾಟ ಆಗಲೇ 4 ಗಂಟೆ ವಿಳಂಬವಾಗಿತ್ತು. ಪ್ರಯಾಣಿಕರು ವಿಮಾನದ ತಮ್ಮ ಸೀಟ್‌ಗಳಲ್ಲೇ ಗಂಟೆಗಟ್ಟಲೆ ಕುಳಿತು ಬೇಸತ್ತು ಹೋಗಿದ್ರು.. ದಟ್ಟ ಮಂಜು ಹಿನ್ನೆಲೆ ಪದೇ ಪದೇ ವಿಮಾನ ಪ್ರಯಾಣ ಮುಂದೂಡಿಕೆ ಬಗ್ಗೆ ಘೋಷಣೆ ಮಾಡಲಾಗ್ತಿತ್ತು. ಇದರಿಂದ ಆಕ್ರೋಶಗೊಂಡ ಕೆಲ ಪ್ರಯಾಣಿಕರು, ವಿಮಾನ ಚಲಾಯಿಸಿ, ಇಲ್ಲ ನಮಗೆ ಕೆಳಗಿಯಲು ಬಿಡಿ ಎಂದು ಆಗ್ರಹಿಸಿದ್ರು. ಈದೇ ಕೋ ಪೈಲೆಟ್ ಅನೂಪ್ ಕುಮಾರ್ ಎಂಬಾತ ವಿಮಾನ ಹಾರಾಟ ವಿಳಂಬದ ಬಗ್ಗೆ ಘೋಷಣೆ ಮಾಡಲು ಬಂದಿದ್ರು. ಈ ವೇಳೆ ಸಾಹಿಲ್​ ಕಟಾರಿಯಾ ಎಂಬ ಪ್ರಯಾಣಿಕ ಏಕಾಏಕಿ ಸಹ ಪೈಲೆಟ್​ತನ್ನ ನುಗ್ಗಿ ಬಂದು ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಇತರೆ ಪ್ರಯಾಣಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಹಲ್ಲೆ ಮಾಡಿದ ಪ್ರಯಾಣಿಕ ಪೊಲೀಸರ ವಶಕ್ಕೆ

ಇನ್ನು ಪ್ರಯಾಣಿಕನ ದುರ್ವರ್ತನೆಯಿಂದ ವಿಮಾನದ ಒಳಗೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಆರೋಪಿಯನ್ನು ಹಿಡಿದು ದಿಲ್ಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ದಿಲ್ಲಿ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಯಾಣಿಕನ ಹಲ್ಲೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಘಟನೆಯನ್ನು ಖಂಡಿಸಿದ್ದಾರೆ.

ಚಳಿಗಾಲದ ಹೊಡೆತಕ್ಕೆ ಇಡೀ ಉತ್ತರ ಭಾರತವೇ ಗಢಗಢ ನಡುಗುತ್ತಿದೆ. ದೆಹಲಿ, ಹಿಮಾಚಲ ಪ್ರದೇಶ, ಗುಜರಾತ್, ಉತ್ತರ ಪ್ರದೇಶ ಸೇರಿ ಎಲ್ಲೆಡೆ ದಟ್ಟ ಮಂಜು ಮತ್ತು ತೀವ್ರ ಚಳಿಗೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕ್ತಿದ್ದಾರೆ. ಇನ್ನು ಮುಂದಿನ ನಾಲ್ಕೈದು ದಿನ ಮತ್ತಷ್ಟು ದಟ್ಟವಾದ ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲೂ ಕೆಲ ವಿಮಾನಗಳ ಹಾರಾಟ ವಿಳಂಬ

ಕೇವಲ ಉತ್ತರ ಭಾರತದ ರಾಜ್ಯಗಳು ಮಾತ್ರವಲ್ಲ.. ಬೆಂಗಳೂರಿನಲ್ಲಿ ಮುಂಜಾನೆ ವೇಳೆ ಮಂಜು ಕವಿದ ವಾತಾವರಣದಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಬೆಂಗಳೂರಿನಲ್ಲೂ ಮಂಜಿನ ವಾತಾವರಣದಿಂದಾಗಿ ಕೆಲ ವಿಮಾನಗಳ ಹಾರಾಟ ವಿಳಂಬವಾಗಿ ಪ್ರಯಾಣಿಕರು ಪರದಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಮಾನದಲ್ಲಿ ಪೈಲೆಟ್​​ ಮೇಲೆ ಹಲ್ಲೆ; ಅಶಿಸ್ತು ತೋರಿದ ಪ್ರಯಾಣಿಕನಿಗೆ ಜ್ಯೋತಿರಾದಿತ್ಯ ಸಿಂಧಿಯಾ ಎಚ್ಚರಿಕೆ

https://newsfirstlive.com/wp-content/uploads/2024/01/Jyotiraditya-Scindia.jpg

Load More