Advertisment

ಹಿಂದಿ ರಾಷ್ಟ್ರ ಭಾಷೆಯಲ್ಲ.. ಆರ್ ಅಶ್ವಿನ್ ಪರ ಬ್ಯಾಟಿಂಗ್ ಮಾಡಿದ ಅಣ್ಣಾಮಲೈ

author-image
Gopal Kulkarni
Updated On
ಹಿಂದಿ ರಾಷ್ಟ್ರ ಭಾಷೆಯಲ್ಲ.. ಆರ್ ಅಶ್ವಿನ್ ಪರ ಬ್ಯಾಟಿಂಗ್ ಮಾಡಿದ ಅಣ್ಣಾಮಲೈ
Advertisment
  • ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಆರ್ ಅಶ್ವಿನ್ ಹೇಳಿಕೆ
  • ಅಶ್ವಿನ್ ಹೇಳಿಕೆ ಸಮರ್ಥಿಸಿದ ಅಣ್ಣಾಮಲೈ ಹೇಳಿದ್ದೇನು?
  • ಹಿಂದಿ ರಾಷ್ಟ್ರ ಭಾಷೆಯಲ್ಲ, ಸಂಪರ್ಕ ಭಾಷೆ ಅಂದಿದ್ದೇಕೆ?

ಇತ್ತೀಚೆಗಷ್ಟೇ ಭಾರತ ತಂಡದ ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಅದು ದೊಡ್ಡ ವಿವಾದವಾಗಿತ್ತು. ಈಗ ಆರ್ ಅಶ್ವಿನ್ ಪರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬ್ಯಾಟಿಂಗ್ ಮಾಡಿದ್ದಾರೆ. ಆರ್ ಅಶ್ವಿನ್ ಹೇಳಿದ್ದು ನಿಜ ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದಿದ್ದಾರೆ ಅಣ್ಣಾ ಮಲೈ.

Advertisment

ಹಿಂದಿ ರಾಷ್ಟ್ರಭಾಷೆಯಲ್ಲ ಎಂದಿರುವ ಅಣ್ಣಾಮಲೈ ಅದರ ಜೊತೆಗೆ ಮತ್ತೊಂದು ಮಾತನ್ನು ಕೂಡ ಹೇಳಿದ್ದಾರೆ. ಇದು ನಿಜಕ್ಕೂ ರಾಷ್ಟ್ರೀಯ ಭಾಷೆಯಲ್ಲ, ನನ್ನ ನೆಚ್ಚಿನ ಗೆಳೆಯ ಅಶ್ವಿನ್ ಹೇಳಿದ್ದು ನಿಜ ಇದು ನ್ಯಾಷನಲ್ ಲ್ಯಾಂಗವೇಜ್ ಅಲ್ಲ ಆದ್ರೆ ಇದು ಲಿಂಕ್ ಲ್ಯಾಂಗವೇಜ್ ಎಂದು ಅಣ್ಣಾ ಮಲೈ ಹೇಳಿದ್ದಾರೆ. ಹಿಂದಿ ಸಂಪರ್ಕಿಸುವ, ಒಪ್ಪಿಸುವಂತಹ ಭಾಷೆ ಆದ್ರೆ ರಾಷ್ಟ್ರ ಭಾಷೆಯಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಬಳಿಕ ಆರ್ ಅಶ್ವಿನ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದರು.

ಇದನ್ನೂ ಓದಿ:ಹಿಂದಿ ಭಾಷೆ ವಿಚಾರದಲ್ಲಿ ಅಶ್ವಿನ್ ವಿವಾದ; ಮಾಜಿ ಕ್ರಿಕೆಟಿಗ ಹೇಳಿದ್ದೇನು? Video

ಇದಾದ ಬಳಿಕ ಕೆಲವು ದಿನಗಳ ಹಿಂದಷ್ಟೇ ಚೆನ್ನೈನ ಖಾಸಗಿ ಕಾಲೇಜ್​ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅಶ್ವಿನ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಹಿಂದಿ, ಇಂಗ್ಲಿಷ್​ ಇಲ್ಲ ತಮಿಳಿನಲ್ಲಿ ಪ್ರಶ್ನೆ ಕೇಳುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಹಿಂದಿ ವಿಷಯ ಬಂದಾಗ ಆರ್ ಅಶ್ವಿನ್ ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಹೇಳಿದರು. ಇವರ ಈ ಒಂದು ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹಲವು ವಿವಾದಗಳಿಗೆ ಕಾರಣವಾಗಿತ್ತು.

Advertisment

ಇದನ್ನೂ ಓದಿ: ಶರಣಾದ ನಕ್ಸಲರು ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ; ಬಚ್ಚಿಟ್ಟಿದ್ದು ಎಲ್ಲಿ?

ಅದರಲ್ಲೂ ತಮಿಳುನಾಡಿನಲ್ಲಿ ಭಾಷಾ ವಿಚಾರವಾಗಿ ಐತಿಹಾಸಿಕ ರಾಜಕೀಯ ಸೂಕ್ಷ್ಮ ವಿಚಾರಗಳು ನಡೆದುಕೊಂಡು ಬಂದಿವೆ. 1930 ರಿಂದ 40ರವರೆಗೆ ಹಿಂದಿ ಭಾಷೆ ಶಾಲೆಯಲ್ಲಿ ಕಲಿಸುವುದು ಕಡ್ಡಾಯ ಅನ್ನೋದನ್ನ ವಿರೋಧಿಸಿ ತಮಿಳುನಾಡಿನಲ್ಲಿ ದೊಡ್ಡ ಹೋರಾಟಗಳೇ ನಡೆದಿವೆ. ಹೀಗಾಗಿ ಅಶ್ವಿನ್ ಹೇಳಿಕೆಯೂ ಕೂಡ ಒಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಈಗ ಆರ್ ಅಶ್ವಿನ್ ಹೇಳಿಕೆಯನ್ನು ಅಣ್ಣಾಮಲೈ ಸಮರ್ಥಿಸಿದರೂ ಕೂಡ ತಮ್ಮದೇ ಆದ ಒಂದು ವಾದವನ್ನು ಕೂಡ ಸೇರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment