Advertisment

ಅಣ್ಣಾಮಲೈಗೆ ಬಿಗ್ ಶಾಕ್‌! ತಮಿಳುನಾಡು BJP ಅಧ್ಯಕ್ಷ ಸ್ಥಾನದಿಂದ ದಿಢೀರ್‌ ಕೊಕ್‌? ಕಾರಣ ಯಾರು?

author-image
admin
Updated On
ಅಣ್ಣಾಮಲೈ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌; ಮೋದಿ ಕ್ಯಾಬಿನೆಟ್‌ನಲ್ಲಿ ಚಾನ್ಸ್‌ ಮಿಸ್‌? ಕಾರಣವೇನು?
Advertisment
  • ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿಡುವಂತೆ ಸೂಚಿಸಿದ ಹೈಕಮಾಂಡ್‌!
  • 2026ರ ವಿಧಾನಸಭಾ ಚುನಾವಣೆಗೂ ಮುನ್ನ ದಿಢೀರ್ ಬೆಳವಣಿಗೆ
  • ಬೇರೆ ರಾಜ್ಯದ ಉಸ್ತುವಾರಿಯಾಗುವ ಜವಾಬ್ದಾರಿ ನೀಡುವ ಸಾಧ್ಯತೆ

ನವದೆಹಲಿ: 2026ರ ವಿಧಾನಸಭಾ ಚುನಾವಣೆಗೂ ಮುನ್ನ ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಶೀಘ್ರದಲ್ಲೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆ.ಅಣ್ಣಾಮಲೈ ಅವರ ಬದಲಾವಣೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೆ.ಅಣ್ಣಾಮಲೈ ನಡುವೆ ಮಹತ್ವದ ಮಾತುಕತೆ ನಡೆದಿದೆ.

Advertisment

ಅಣ್ಣಾಮಲೈ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅಮಿತ್ ಶಾ ಅವರು ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿಡುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಇಳಿಯೋ ಸಾಧ್ಯತೆ ಇದೆ. ಈ ದಿಢೀರ್ ಬೆಳವಣಿಗೆಗೆ ಕಾರಣ ಬಿಜೆಪಿ, AIDMK ಮರು ಮೈತ್ರಿಯ ಲೆಕ್ಕಾಚಾರ ಎನ್ನಲಾಗಿದೆ.

publive-image

ಇತ್ತೀಚೆಗೆ ಬಿಜೆಪಿ ಹೈಕಮಾಂಡ್‌ ನಾಯಕರನ್ನು AIDMK ನಾಯಕ, ಮಾಜಿ ಸಿಎಂ ಪಳನಿಸ್ವಾಮಿ ಅವರು ಭೇಟಿಯಾಗಿದ್ದರು. ಈ ವೇಳೆ ಪಳನಿಸ್ವಾಮಿ ಅವರು ತಮಿಳುನಾಡಿನಲ್ಲಿ AIDMK ಮತ್ತು ಬಿಜೆಪಿ ಮೈತ್ರಿಯಾಗಬೇಕಂದ್ರೆ ಅಣ್ಣಾಮಲೈ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯಬೇಕು. ಇಲ್ಲವಾದರೆ ಮೈತ್ರಿ ಸಾಧ್ಯವಿಲ್ಲ ಎಂದಿದ್ದರು.

ಇದನ್ನೂ ಓದಿ: VIDEO: 8 ಬಾರಿ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ ಶಪಥ; ಕಾರಣ ಡಿಎಂಕೆ ಸರ್ಕಾರ! 

Advertisment

ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗೆ ತಮಿಳುನಾಡಿನಲ್ಲಿ ಮೈತ್ರಿ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅಣ್ಣಾಮಲೈಗೆ ಕೊಕ್ ನೀಡುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಣ್ಣಾಮಲೈಗೆ ಬೇರೆ ರಾಜ್ಯದ ಉಸ್ತುವಾರಿಯಾಗುವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

publive-image

2023ರಲ್ಲಿ AIDMK ಮತ್ತು ಬಿಜೆಪಿಯ ನಡುವಿನ ಮೈತ್ರಿ ಅಂತ್ಯವಾಗಿತ್ತು. 2026ಕ್ಕೆ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಬರುವ ಹಿನ್ನೆಲೆಯಲ್ಲಿ ಮತ್ತೆ ಮೈತ್ರಿಯ ಲೆಕ್ಕಾಚಾರ ಜೋರಾಗಿದೆ. ಈ ಮೈತ್ರಿಯ ತಂತ್ರಗಾರಿಕೆಯಲ್ಲಿ ಮೊದಲಿಗೆ ಅಣ್ಣಾಮಲೈ ಅವರಿಗೆ ಬಿಗ್ ಶಾಕ್ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment