newsfirstkannada.com

ಕೊಯಮತ್ತೂರು ಕುರುಕ್ಷೇತ್ರ.. ಅಣ್ಣಾಮಲೈಯನ್ನ ಬಿಜೆಪಿ ಕಣಕ್ಕಿಳಿಸಿದ್ದು ಯಾಕೆ? ಕಾರಣ ರಣರೋಚಕ!

Share :

Published March 22, 2024 at 3:36pm

  ಈ ಬಾರಿ ತಮಿಳುನಾಡು ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ ಬಿಜೆಪಿ

  ಲೋಕಸಭಾ ಚುನಾವಣೆಗೆ ಪಾದಾರ್ಪಣೆ ಮಾಡುತ್ತಿರುವ ಕೆ.ಅಣ್ಣಾಮಲೈ

  ಕೊಯಮತ್ತೂರಿನಲ್ಲಿ ಭಯೋತ್ಪಾದಕರು 11 ಬಾಂಬ್​ಗಳನ್ನ ಸ್ಫೋಟಿಸಿದ್ರು

ಚೆನ್ನೈ: 2024ರಲ್ಲೂ ಹ್ಯಾಟ್ರಿಕ್ ಗೆಲುವು ಪಡೆದು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಹುದ್ದೆಗೇರಲು ಕಾತರದಲ್ಲಿದ್ದಾರೆ. ಈಗಾಗಲೇ 2 ಚುನಾವಣೆಯಲ್ಲಿ ಗೆದ್ದು 10 ವರ್ಷ ಪೂರೈಸಿರುವ ಬಿಜೆಪಿಗೆ 3ನೇ ‘ಲೋಕ’ ಸಮರ ಅತ್ಯಂತ ಪ್ರಮುಖವಾಗಿದ್ದರಿಂದ ತಮಿಳುನಾಡು ಲೋಕಸಭಾ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿದೆ. ಹೀಗಾಗಿಯೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸ್ಪರ್ಧಿಸುವ ಕೊಯಮತ್ತೂರು ಬಿಜೆಪಿಗೆ ಅತ್ಯಂತ ಮಹತ್ವದ ಕ್ಷೇತ್ರವಾಗಿದೆ.

ಕೊಯಮತ್ತೂರು ಹಲವು ಐತಿಹಾಸಿಕ ಘಟನೆಗೆ ಕಾರಣ

ಇಡೀ ತಮಿಳುನಾಡಿನ ಕ್ಷೇತ್ರಗಳಲ್ಲೇ ಬಿಜೆಪಿ ಪಾಲಿಗೆ ಕೊಯಮತ್ತೂರು ಮಾತ್ರ ವಿಶೇಷವಾದ ಲೋಕಸಭಾ ಕಣವಾಗಿದೆ. ಇದೇ ಕ್ಷೇತ್ರದಿಂದ ಅಣ್ಣಾಮಲೈ ಲೋಕಸಭೆಗೆ ಪಾದಾರ್ಪಣೆ ಮಾಡುತ್ತಿದ್ದು ದೊಡ್ಡ ಮಟ್ಟದಲ್ಲಿ ಗೆಲುವು ತಂದುಕೊಡುವ ನಿರೀಕ್ಷೆ ಇದ್ದು ಹೆಚ್ಚಿನ ಮಹತ್ವದ ಪಡೆದಿದೆ. ಕೊಯಮತ್ತೂರು ಹಲವು ಐತಿಹಾಸಿಕ ಘಟನೆಗೆ ಕಾರಣವಾಗಿದೆ. ಹೀಗಾಗಿ ಅಲ್ಲಿ ಬಿಜೆಪಿ ಬೇರು ಮೊದಲಿಂದಲೂ ಸದೃಢವಾಗಿದೆ. ಬಿಜೆಪಿ-ಕೊಯಮತ್ತೂರಿಗೆ ಇರುವ ಐತಿಹಾಸಿಕ ಸಂಬಂಧಗಳೆಂದರೆ.

ಇಡೀ ತಮಿಳುನಾಡು ಲೋಕಸಭಾ ಕ್ಷೇತ್ರಗಳಲ್ಲೇ ಬಿಜೆಪಿಗೆ ಮೊಟ್ಟ ಮೊದಲ ಗೆಲುವು ಕೊಟ್ಟಿದ್ದೇ ಈ ಕೊಯಮತ್ತೂರು ಕ್ಷೇತ್ರ. 1992 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿಯವರ ಪಾತ್ರ ಪ್ರಮುಖವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ಅಲ್ ಉಮ್ಮಾದ ಇಸ್ಲಾಮಿಕ್ ಭಯೋತ್ಪಾದಕರು ಅಡ್ವಾಣಿರನ್ನು ಗುರಿಯಾಗಿಸಿದ್ದರು.

11 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದ ಉಗ್ರರು

ಮಾಜಿ ಉಪ ಪ್ರಧಾನಿಯಾಗಿದ್ದ ಅಡ್ವಾಣಿಯವರನ್ನು ಹತ್ಯೆ ಮಾಡಲು ಅಂದು ಸಂಚು ರೂಪಿಸಲಾಗಿತ್ತು. ಇದೇ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಅತ್ಯಂತ ನೋವಿನ ಅಧ್ಯಾಯ ಆಗಿದೆ. ಯೋಜನೆಯಂತೆ ಭಯೋತ್ಪಾದಕರು ಫೆ.14, 1998 ರಂದು ಕೊಯಮತ್ತೂರಿನ 11 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದರು. ಬಿಜೆಪಿ ಮುಖಂಡರನ್ನು ಗುರಿಯಾಗಿಸಿಕೊಂಡು ಈ ಬಾಂಬ್​ಗಳನ್ನು ಇಟ್ಟಿದ್ದರು. ಈ ಭೀಕರ ದುರಂತದಲ್ಲಿ ಸುಮಾರು 58ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜೊತೆಗೆ ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಅಡ್ವಾಣಿಯವರಿಗೆ ಉನ್ನತ ಸೆಕ್ಯೂರಿಟಿ ಇದ್ದಿದ್ದರಿಂದ ಅವರಿಗೆ ಏನು ಆಗಿರಲಿಲ್ಲ.

ಕೊಯಮತ್ತೂರು ಕ್ಷೇತ್ರ ಎಂಡ ಪಂಥಿಯ ಭದ್ರಕೋಟೆಯಾಗಿದ್ದು ಈ ಸಲ ಡಿಎಂಕೆಯಿಂದ ಗಣಪತಿ ಪಿ ರಾಜಕುಮಾರ್ ಸ್ಪರ್ಧೆ ಮಾಡುತ್ತಿದ್ದಾರೆ. ಹಿಂದಿನ ಎಲೆಕ್ಷನ್​​ಗಳ ಗಣನೆಗೆ ತೆಗೆದುಕೊಂಡರೆ ಇಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಸಿಗಬಹುದು ಎನ್ನುವ ನಂಬಿಕೆ ಇದೆ. ಹೀಗಾಗಿಯೇ ಕೆ.ಅಣ್ಣಾಮಲೈ ಹೆಸರನ್ನು ಘೋಷಣೆ ಮಾಡಿದ್ದು ದೊಡ್ಡ ಮಟ್ಟದ ಗೆಲುವನ್ನು ಬಿಜೆಪಿ ನಿರೀಕ್ಷೆ ಮಾಡಿದೆ.

ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮೋದಿ ಭಾಗಿ

ಲೋಕಸಭಾ ಎಲೆಕ್ಷನ್​ ಹಿನ್ನೆಲೆಯಲ್ಲಿ ಅಣ್ಣಾಮಲೈಯವರು ಎನ್​ ಮಣ್ಣ್, ಎನ್ ಮಕ್ಕಳ್ ಎನ್ನುವ ಹೆಸರಲ್ಲಿ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದರು. ಇದಕ್ಕೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಚಾಲನೆ ಕೊಟ್ಟಿದ್ದರು. ಈ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಿರುವುದು ವಿಶೇಷವಾಗಿತ್ತು. ಈ ವೇಳೆ ಪ್ರಧಾನಿಯವರು 26 ವರ್ಷಗಳ ಹಿಂದೆ ಬಾಂಬ್ ಸ್ಫೋಟದಲ್ಲಿ ಮಡಿದ 58 ಜನರನ್ನು ನೆನಪಿಸಿಕೊಂಡಿದ್ದರು. ಈ ಘಟನೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ರಾಜಕೀಯ ಧರ್ಮಕ್ಕೆ ಹೆಚ್ಚಿನ ಒಲವಿಲ್ಲದ ಕೊಯಮತ್ತೂರಿನಲ್ಲಿ 26 ವರ್ಷಗಳ ಹಿಂದೆ ಬಾಂಬ್ ಸ್ಫೋಟದ ಬಗ್ಗೆ ಖಂಡನೆ ಹಾಗೂ ಈ ಕ್ಷೇತ್ರದಲ್ಲಿನ ಹೆಚ್ಚಿನ ಸಂಖ್ಯೆಯ ಉತ್ತರ ಭಾರತದ ವಲಸಿಗರ ಆಧಾರದ ಚುನಾವಣೆ ಗೆಲ್ಲಲು ಬಿಜೆಪಿ ಮುಂದಾಗಿದೆ. ಇನ್ನು ತಮಿಳುನಾಡಿನಲ್ಲಿ 39 ಸೀಟ್ ಹಂಚಿಕೆಗಳು ಫೈನಲ್ ಆಗಿದ್ದು ಎನ್​ಡಿಎ ಪಕ್ಷಗಳು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ ಎಂದು ಬಿಜೆಪಿ ಅಭ್ಯರ್ಥಿ ಕೆ.ಅಣ್ಣಾಮಲೈ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಯಮತ್ತೂರು ಕುರುಕ್ಷೇತ್ರ.. ಅಣ್ಣಾಮಲೈಯನ್ನ ಬಿಜೆಪಿ ಕಣಕ್ಕಿಳಿಸಿದ್ದು ಯಾಕೆ? ಕಾರಣ ರಣರೋಚಕ!

https://newsfirstlive.com/wp-content/uploads/2024/03/ANNAMALAI_MODI_3.jpg

Load More