newsfirstkannada.com

ಆತ ಜನ ಪ್ರತಿನಿಧಿಯಾಗೋದಕ್ಕೆ ನಾಲಾಯಕ್.. ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದ ಸಚಿವ ಕೆ.ಎನ್. ರಾಜಣ್ಣ

Share :

Published January 16, 2024 at 7:08pm

Update January 16, 2024 at 9:11pm

    ಮಗನೇ ಅಂತಾ ಕರೀತಾನಲ್ಲ ಅವನಿಗೆ ಎಷ್ಟು ಧೈರ್ಯ ಇರಬೇಕು

    ಸಿಎಂ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದ ಅನಂತ್​ ಕುಮಾರ್​ ಹೆಗಡೆ

    ಇವನು ಬ್ರಾಹ್ಮಣ ಅಂತಾ ಹೇಳಿಕೊಳ್ತಾನೆ ಎಂದ ಸಚಿವ ಕೆ. ಎನ್.ರಾಜಣ್ಣ

ತುಮಕೂರು: ಉತ್ತರ ಕನ್ನಡದ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸಹಕಾರ ಸಚಿವ ಕೆ. ಎನ್.ರಾಜಣ್ಣ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಅವನ್ಯಾವನೋ ದುರಹಂಕಾರಿನೋ, ಅಹಂಕಾರಿನೋ, ಮನುಷ್ಯನೋ, ಮೃಗನೋ ಗೊತ್ತಿಲ್ಲ. ಮಗನೇ ಅಂತಾ ಕರೀತಾನಲ್ಲ ಅವನಿಗೆ ಎಷ್ಟು ಧೈರ್ಯ ಇರಬೇಕು. ಹೇಳ್ರಿ ಯಾರಾದ್ರೂ ಸಹಿಸೋಕಾಗುತ್ತಾ?. ಈ ರಾಜ್ಯದಲ್ಲಿರೋ ಎಲ್ಲಾ ಸಾತ್ವಿಕರು ಕೂಡ ಇದನ್ನ ಖಂಡನೆ ಮಾಡಬೇಕು ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆ. ಎನ್.ರಾಜಣ್ಣ, ಈ ಬಗ್ಗೆ ನಮ್ಮಲ್ಲೂ ಕೂಡ ಬಹಳಷ್ಟು ಜನ ಟೀಕೆ ಮಾಡಿದ್ದಾರೆ. ನಮ್ಮೂರಿನಲ್ಲಿಯೂ ಮೆರವಣಿಗೆ ಮಾಡಿ, ಪ್ರತಿಕೃತಿ ಸುಟ್ಟು ಪ್ರತಿಭಟನೆ ಮಾಡಿದ್ದಾರೆ ಅದು ಬೇರೆ ವಿಚಾರ. ಆದರೆ ಆರು- ಏಳು ಬಾರಿ ಲೋಕಸಭಾ ಸದಸ್ಯನಾದವನು ಹೀಗೆ ಜನರ ಭಾವನೆಗಳನ್ನ ಕೆರಳಿಸುವುದು, ಜನರ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡಾಗ ಆತ ಜನ ಪ್ರತಿನಿಧಿಯಾಗೋದಕ್ಕೆ ನಾಲಾಯಕ್ ಅನ್ನೋದು ನನ್ನ ಅಭಿಪ್ರಾಯ ಎಂದು ರಾಜಣ್ಣ ಹೇಳಿದ್ದಾರೆ.

ಬಳಿಕ ಮಾತನಾಡಿದ ಸಚಿವ ಕೆ. ಎನ್.ರಾಜಣ್ಣ, ಸಾಮಾನ್ಯವಾಗಿ ಬ್ರಾಹ್ಮಣ ಸಮುದಾಯದವರು ಯಾರೂ ಬೇರೆಯವರಿಗೆ ತೊಂದರೆ ಕೊಡೋದು, ಅವರನ್ನ ಹೀಯಾಳಿಸೋ ಕೆಲಸವನ್ನ ಮಾಡೋದಿಲ್ಲ. ಇವನು ಬ್ರಾಹ್ಮಣ ಅಂತಾ ಹೇಳಿಕೊಳ್ತಾನೆ. ಆದರೆ ಸಮಾಜದ ಯಾವ ನಿಕೃಷ್ಟ ಮನುಷ್ಯನೂ ಮಾಡದಂತಹ ನಡವಳಿಕೆಗಳನ್ನ ತೋರಿಸ್ತಾನೆ. ನಾಲ್ಕೂವರೇ ವರ್ಷ ಎಲ್ಲೋ ಮಲಗಿರ್ತಾನೆ, ಅದೆಲ್ಲಿರ್ತಾನೋ ಗೊತ್ತಿಲ್ಲ. ಕಡೆಯ 6 ತಿಂಗಳು ಇರುವಾಗ ಬಂದು ಹಿಂಗೆ ಮಾತನಾಡಿಬಿಡೋದು. ಹಿಂದುತ್ವ, ಹಿಂದುತ್ವ ಅಂತಾ ಮತ್ತೆ ಚುನಾವಣೆ ಮುಗಿದ ಮೇಲೆ ಹೊರಟೋದ್ರೆ ಪತ್ತೇನೆ ಇರಲ್ಲ. ಈ ಹಿಂದುತ್ವದ ಬಗ್ಗೆ ನನ್ನದೊಂದು ವ್ಯಾಖ್ಯಾನ ಇದೆ. ಸಿದ್ದರಾಮಯ್ಯ, ಕಾಂಗ್ರೆಸ್ ಇವರೆಲ್ಲಾ ಹಿಂದೂ ವಿರೋಧಿಗಳು ಅಂತಾರೆ. ನಾವೆಲ್ಲ ಇಲ್ಲಿ ಕೂತಿರೋರು ಹಿಂದೂಗಳೇ. ನಾವು ಗಾಂಧಿಯವರು ಪ್ರತಿಪಾದಿಸಿದ ಹಿಂದೂವಾದಿಗಳು. ಅವರು ಗಾಂಧಿಯನ್ನ ಕೊಂದ ಗೋಡ್ಸೆ ಪ್ರತಿಪಾದಿಸಿದ ಹಿಂದೂಗಳು. ಗಾಂಧಿ ದೇಶವನ್ನ ದಾಸ್ಯದ ಸಂಕೋಲೆಯಿಂದ ಬಿಡಿಸಬೇಕು ಎಂದು ಹೋರಾಡಿದ ಮಹಾನ್ ಪುರುಷ. ಅಂಥವರನ್ನ ಕೊಂದವರ ಅನುಯಾಯಿಗಳನ್ನ ನಾವು ಏನೆಂದು ಕರೆಯಬೇಕು ನೀವೇ ಹೇಳಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆತ ಜನ ಪ್ರತಿನಿಧಿಯಾಗೋದಕ್ಕೆ ನಾಲಾಯಕ್.. ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದ ಸಚಿವ ಕೆ.ಎನ್. ರಾಜಣ್ಣ

https://newsfirstlive.com/wp-content/uploads/2024/01/KN-Rajanna-1.jpg

Load More