ಕಬಾಲಿ ಸಿನಿಮಾ ನಿರ್ಮಾಪಕ ಕೆ.ಪಿ ಚೌದರಿ ಇನ್ನಿಲ್ಲ; ಜೀವ ಕಳೆದುಕೊಂಡ ಕಾರಣ ರಿವೀಲ್

author-image
Gopal Kulkarni
Updated On
ಸೂಪರ್ ಸ್ಟಾರ್ ‘ಕಬಾಲಿ’ ಸಿನಿಮಾ ನಿರ್ಮಾಪಕ ಕೆ.ಪಿ ಚೌಧರಿ ದುರಂತ ಅಂತ್ಯ; ಅಸಲಿ ಕಾರಣ ಇಲ್ಲಿದೆ!
Advertisment
  • ಕಬಾಲಿʼ ಚಲನಚಿತ್ರದ ನಿರ್ಮಾಪಕ ಕೆಪಿ ಚೌಧರಿ ಆತ್ಮಹತ್ಯೆ
  • ಗೋವಾದಲ್ಲಿ ಸಾವಿಗೆ ಶರಣಾದ ತೆಲುಗು ಯುವ ನಿರ್ಮಾಪಕ!
  • ಅವರ ಈ ನಿರ್ಧಾರಕ್ಕೆ ಡ್ರಗ್ಸ್ ಮಾಯಾಜಾಲ ಕಾರಣ ಎಂಬ ಶಂಕೆ

ಸೋಲು, ನಿರಾಶೆ, ಕಷ್ಟ, ನಷ್ಟ ಎಂಥವರನ್ನೂ ಜರ್ಜರಿತನಾಗಿಸುತ್ತೆ. ಮನಸ್ಸು ದುರ್ಬಲವಾಗಿದ್ದವರೂ ಬದುಕೇ ಬೇಡ ಅನ್ನೋವಷ್ಟರ ಮಟ್ಟಿಗೆ ಹೋಗಿಬಿಡ್ತಾರೆ.. ಬದುಕಿಗಿಂತ ಸತ್ತರೆ ಚೆಂದ ಅನ್ನೋ ಅಷ್ಟು ಮನಸ್ಸು ಬದಲಾಗಿ ಬಿಡುತ್ತೆ. ಇದಕ್ಕೆ ಕೆಪಿ ಚೌಧರಿ ಅವರ ದುರಂತ ಸಾವು ಮತ್ತೊಂದು ಸಾಕ್ಷಿ.
ಕೆಪಿ ಚೌಧರಿ.. ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕ.. 44 ವರ್ಷದ ವಿತರಕ.. ಬಾಳಿ ಬದುಕಬೇಕಿದ್ದ ಚೌಧರಿ ಈಗ ತಪ್ಪು ಹಾದಿ ತುಳಿದಿದ್ದಾರೆ. ಸೂಪರ್​ ಸ್ಟಾರ್ ರಜಿನಿಕಾಂತ್​ ನಟಿಸಿದ್ದ ಬ್ಲಾಕ್​ ಬ್ಲಸ್ಟರ್​ ಹಿಟ್ ಆಗಿದ್ದ ಕಬಾಲಿ ಸಿನಿಮಾ ಇವರ ಕರಿಯರ್​ನ ಲಾಭದಾಯಕ ಸಿನಿಮಾ. ಇಂತಹ ಕೆಪಿ ಚೌಧರಿ ಇಹಲೋಕದ ಯಾತ್ರೆ ಸಾಕಪ್ಪ ಅಂತೆನಿಸಿ ಹೊರಟು ಹೋಗಿದ್ದಾರೆ.

2016ರಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯಿಸಿದ್ದ ಕಬಾಲಿ ಚಿತ್ರದ ತೆಲುಗು ಅವತರಣಿಕೆಯ ಬಿಡುಗಡೆಯ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿ, ಕೆಪಿ ಚೌಧರಿ ಎಲ್ಲರನ್ನ ನಿಬ್ಬೇರಗಾಗಿಸಿದ್ದರು. ಇಷ್ಟೇ ಅಲ್ಲ ಪವನ್ ಕಲ್ಯಾಣ್ ಅಭಿನಯದ ಸರ್ದಾರ್ ಗಬ್ಬರ್ ಸಿಂಗ್ ಮತ್ತು ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಚಿತ್ರಗಳನ್ನು ವಿತರಣೆ ಮಾಡಿದ ಹೆಗ್ಗಳಿಕೆ ಕೂಡ ಇವರಿಗಿದೆ. ಇಂತಹ ಕೆ.ಪಿ.ಚೌಧರಿ ನಿನ್ನೆ ಉತ್ತರ ಗೋವಾದ ಸಿಯೋಲಿಮ್ ಗ್ರಾಮದ ತಮ್ಮ ಬಾಡಿಗೆ ಮನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಕೆ.ಪಿ.ಚೌಧರಿ ಅವರು ಜೀವಕಳೆದುಕೊಂಡ ವಿಚಾರವನ್ನ ಧೃಡ ಪಡಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:VIDEO: ಲೈವ್‌ ಶೋ ಮಧ್ಯೆ ವೇದಿಕೆಯಿಂದ ದಿಢೀರ್‌ ಹೊರ ಬಂದ ಗಾಯಕ ಸೋನು ನಿಗಮ್; ಏನಾಯ್ತು?

ಇನ್ನು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ತನಿಖೆ ಬಳಿಕ ಸತ್ಯ ಹೊರಬರಬೇಕಿದೆಯಾದರೂ ಅವರ ಈ ನಿರ್ಧಾರಕ್ಕೆ ಡ್ರಗ್ಸ್ ಮಾಯಾಜಾಲ ಕಾರಣ ಇರಬಹುದು ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಈ ಹಿಂದೆ ಮಾದಕ ಮಾಯಾಜಾಲದಲ್ಲಿ ಇವರ ಹೆಸರು ಕೇಳಿ ಬಂದಿತ್ತು.

ಡ್ರಗ್ಸ್ ಪ್ರಕರಣದಲ್ಲಿ 2023ರಲ್ಲಿ ಇವರನ್ನ ಬಂಧಿಸಲಾಗಿತ್ತು. 87.75 ಗ್ರಾಂ ಕೊಕೇನ್‌ ಇವರ ಬಳಿ ಪತ್ತೆಯಾಗಿತ್ತು. ಇನ್ನೂ ಇವರ ಮೇಲೆ ಅನೇಕ ಅನೈತಿಕ ವ್ಯವಹಾರ ಮಾಡ್ತಿದ್ರು. ಈ ನಡುವೆ ಆರ್ಥಿಕವಾಗಿ ಸಂಕಷ್ಟಕ್ಕೆ ಕೂಡ ಸಿಲುಕಿ ಸಾಲ ಮಾಡಿಕೊಂಡಿದ್ರು. ಚಿತ್ರರಂಗ ಕೈ ಹಿಡಿಯದೇ ಇದ್ದಾಗ ಗೋವಾದಲ್ಲಿ ಪಬ್ ಶುರು ಮಾಡಿದ್ರು. ಆ ನಂತರ ಈ ಪವ್‌ಗಳಲ್ಲಿ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ರು ಎನ್ನುವ ಆರೋಪ ಕೂಡ ಇವರ ಮೇಲೆ ಕೇಳಿ ಬಂದಿತ್ತು. ಕೆ.ಪಿ.ಚೌಧರಿ ಅಸುನೀಗಿದ್ದರ ಹಿಂದೆ ಯಾವ ಕಾರಣ ಇದೆ ಎಂಬುದು ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment