/newsfirstlive-kannada/media/post_attachments/wp-content/uploads/2024/07/Almatti-Dam.jpg)
ವಿಜಯಪುರ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿದ್ದು, ವಿಜಯಪುರ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಗಣನೀಯ ಏರಿಕೆಯಾಗಿದೆ.
ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ಇತ್ತ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಒಳ ಹರಿವು 53,901 ಕ್ಯೂಸೆಕ್ಸ್ಗೆ ಏರಿಕೆ ಕಂಡಿದೆ.
ಆಲಮಟ್ಟಿ ಜಲಾಶಯವು 123.081 ಟಿಎಂಸಿ ಸಾಮರ್ಥ್ಯವನ್ನು ಹೊಂದಿದ್ದು, ಸದ್ಯ 48.982 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ:ಬತ್ತಿ ಬರಡಾಗಿದ್ದ ತುಂಗಭದ್ರೆಗೆ ಬಂತು ಜೀವಕಳೆ.. ಏರಿಕೆ ಕಂಡ ಜಲಾಶಯದ ನೀರಿನ ಮಟ್ಟ! ಇಂದು ಎಷ್ಟಿದೆ ಗೊತ್ತಾ?
ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಒಳ ಹರಿವು ಹೆಚ್ಚುತ್ತಿದ್ದು, ಸದ್ಯ ಒಳ ಹರಿವು -53,901 ಕ್ಯೂಸೆಕ್ಸ್ ಇದೆ. ಹೊರ ಹರಿವಿನ ಪ್ರಮಾಣ 430 ಕ್ಯೂಸೆಕ್ಸ್ ಇದೆ.
ಆಲಮಟ್ಟಿ ಜಲಾಶಯದ
- ಸಂಗ್ರಹಣಾ ಸಾಮರ್ಥ್ಯ; 123.081 ಸಾಮರ್ಥ್ಯ
- ಸದ್ಯದ ಸಂಗ್ರಹ: 48.982 ಟಿಎಂಸಿ
- ಒಳ ಹರಿವು -53,901 ಕ್ಯೂಸೆಕ್ಸ್
- ಹೊರ ಹರಿವು- 430 ಕ್ಯೂಸೆಕ್ಸ್
ಮಳೆಯಿಂದಾಗಿ ಕಬಿನಿ ಡ್ಯಾಂನ ನೀರಿನ ಮಟ್ಟವು ಏರಿಕೆ ಕಂಡಿದೆ. 2284 ಅಡಿ ಎತ್ತರಡ ಕಬಿನಿಯಲ್ಲಿ ಈಗಾಗಲೇ 2281 ಅಡಿ ಭರ್ತಿಯಾಗಿದೆ. ಸದ್ಯ ಪೂರ್ತಿಯಾಗಲು 3 ಅಡಿ ಮಾತ್ರ ಬಾಕಿ ಉಳಿದಿದೆ.
[caption id="attachment_72921" align="alignnone" width="800"] ಕಬಿನಿ ಡ್ಯಾಂ[/caption]
ಇದನ್ನೂ ಓದಿ:KRS Dam: ಎರಡು ವಾರದಿಂದ ಒಳ ಹರಿವು ಹೆಚ್ಚಳ.. 100 ಅಡಿ ಭರ್ತಿ! ಸದ್ಯ ಎಷ್ಟಿದೆ ನೀರಿನ ಮಟ್ಟ?
ಕಬಿನಿ ನೀರಿನ ಮಟ್ಟ
- ಗರಿಷ್ಠ ಮಟ್ಟ: 2284 ಅಡಿ
- ಇಂದಿನ ಮಟ್ಟ: 2281 ಅಡಿ
- ಒಳ ಹರಿವು: 8,321 ಕ್ಯುಸೆಕ್
- ಹೊರ ಹರಿವು: 2,917 ಕ್ಯುಸೆಕ್
ತುಂಗಭದ್ರಾ ಜಲಾಶಯ ನೀರಿನ ಮಟ್ಟ
- ಒಳ ಹರಿವು : 19,201 ಕ್ಯೂಸೆಕ್ಸ್
- ಹೊರ ಹರಿವು : 295 ಕ್ಯೂಸೆಕ್ಸ್
- ಗರಿಷ್ಟ ಮಟ್ಟ : 1633 ಅಡಿ
- ಇಂದಿನ ಮಟ್ಟ : 1590.80 ಅಡಿ
- ಒಟ್ಟು ಸಂಗ್ರಹ ಸಾಮರ್ಥ್ಯ : 105 ಟಿಎಂಸಿ
- ಸದ್ಯ ಡ್ಯಾಂನಲ್ಲಿರು ನೀರು : 11.714 ಟಿಎಂಸಿ
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ – 124.80 ಅಡಿ.
- ಇಂದಿನ ಮಟ್ಟ – 100.30 ಅಡಿ.
- ಗರಿಷ್ಠ ಸಾಂದ್ರತೆ – 49.452 ಟಿಎಂಸಿ
- ಇಂದಿನ ಸಾಂದ್ರತೆ – 23.047 ಟಿಎಂಸಿ
- ಒಳ ಹರಿವು – 9,686 ಕ್ಯೂಸೆಕ್
- ಹೊರ ಹರಿವು – 546 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ