ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಭಾರೀ ಪ್ರಮಾಣದ ನೀರನ್ನು ಹರಿಬಿಟ್ಟ ಅಧಿಕಾರಿಗಳು; ಯಾಕೆ?

author-image
Bheemappa
Updated On
ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಭಾರೀ ಪ್ರಮಾಣದ ನೀರನ್ನು ಹರಿಬಿಟ್ಟ ಅಧಿಕಾರಿಗಳು; ಯಾಕೆ?
Advertisment
  • ಜನರಿಗೆ ಸಂದೇಶ ನೀಡಲಾಗ್ತಿದ್ದು, ಧ್ವನಿ ವರ್ಧಕ ಮೂಲಕ ಎಚ್ಚರಿಕೆ
  • ಎಷ್ಟು ಸಾವಿರ ಕ್ಯೂಸೆಕ್​ ನೀರನ್ನು ಯಾವ ನದಿಗೆ ಬಿಟ್ಟರು ಗೊತ್ತಾ?
  • ನದಿ ಪಾತ್ರದ ಜನರು ಜಾಗೃತಿಯಾಗಿರುವಂತೆ ಸೂಚನೆ ರವಾನೆ

ಮೈಸೂರು: ಈ ವರ್ಷ ವಾಡಿಕೆಗಿಂತ ಮೊದಲೇ ಕಬಿನಿ ಜಲಾಶಯ ತುಂಬಿ ರಾಜ್ಯದ ಜನರಿಗೆ ಶುಭಸುದ್ದಿ ನೀಡಿತ್ತು. ಜಲಾನಯನ ಪ್ರದೇಶದ ಸುತ್ತ ಹಾಗೂ ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ಭರ್ತಿ ಆಗಿತ್ತು. ಈ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಬಿಡಲಾಗಿದೆ.

ಇದನ್ನೂ ಓದಿ:ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ

ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ಜರಿ ಮಳೆಯಿಂದ ರಾಜ್ಯದ ಎಲ್ಲಾ ನದಿಗಳಿಗಿಂತ ಬೇಗನೇ ಭರ್ತಿಯಾಗಿದೆ. ಅಣೆಕಟ್ಟೆಗೆ ಯಾವುದೇ ತೊಂದರೆ ಆಗದಂತೆ ಕಪಿಲಾ ನದಿಗೆ 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದೆ. ಇದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದ್ದು ಧ್ವನಿ ವರ್ಧಕಗಳ ಮೂಲಕ ಎಚ್ಚರಿಸಲಾಗುತ್ತಿದೆ.

ಇದನ್ನೂ ಓದಿ: ಅನಂತ್-ರಾಧಿಕಾ ದಿ ಗ್ರ್ಯಾಂಡ್ ಮ್ಯಾರೇಜ್; PM ಮೋದಿ, ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗಿ

publive-image

ಗ್ರಾಮ ಪಂಚಾಯತಿ ಸಿಬ್ಬಂದಿ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಹುಲ್ಲಹಳ್ಳಿ ಪಂಚಾಯತಿ ಕಾರ್ಯಾಲಯ ವತಿಯಿಂದ ಈಗಾಗಲೇ ಪ್ರಚಾರ ಮಾಡಲಾಗುತ್ತಿದೆ. ಜನರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ಹೋಗದಂತೆ, ಜನ ಜಾನುವಾರಗಳನ್ನ ನದಿ ಕಡೆಗೆ ಬಿಡದಂತೆ ಆದಷ್ಟು ಸುರಕ್ಷಿತ ಸ್ಥಳದಲ್ಲಿಯೇ ಇರಬೇಕೆಂದು ಆಟೋಗಳ ಮೂಲಕ ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಕಪಿಲಾ ನದಿ ಪ್ರವಾಹಕ್ಕೆ ಹೆಚ್ಚಾಗಿ ಸಿಲುಕುವ ನಂಜನಗೂಡು ತಾಲೂಕಿನ ಹೆಜ್ಜಿಗೆ, ಬೊಕ್ಕಹಳ್ಳಿ, ಸುತ್ತೂರು, ಹೊಸಕೋಟೆ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ಇಂದಿನ ಕಬಿನಿ ಜಲಾಶಯದ ನೀರಿನ ಮಟ್ಟ

  • ಗರಿಷ್ಠ ಮಟ್ಟ: 2,284
  • ಇಂದಿನ ಮಟ್ಟ: 2,283
  • ಒಳಹರಿವು: 19,181 ಕ್ಯೂಸೆಕ್
  • ಹೊರಹರಿವು: 20,000 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment