newsfirstkannada.com

ಕನ್ನಡಿಗರೇ.. ಬರಿದಾಗುತ್ತಿದೆ ರಾಜ್ಯದ 4 ಡ್ಯಾಂಗಳ ನೀರಿನ ಮಟ್ಟ! ಇದು ಅಪಾಯದ ಮುನ್ಸೂಚನೆಯೇ?

Share :

Published August 21, 2023 at 1:18pm

Update August 21, 2023 at 1:34pm

    ಬಾಗಿನ ಅರ್ಪಣೆಗೂ ಮುನ್ನವೇ ಬರಿದಾಗುತ್ತಿದೆ ಕಬಿನಿ ಡ್ಯಾಂ

    ಬೆಂಗಳೂರಿಗರಿಗೆ ಕುಡಿಯುವ ನೀರಿನ ಸಮಸ್ಯೆ ಆಗಲಿದ್ಯಾ?

    84 ಅಡಿಗಳ ಪೈಕಿ 76.60 ಅಡಿಗೆ‌ ಕಬಿನಿ ಡ್ಯಾಂ ನೀರಿನ ಮಟ್ಟ ಕುಸಿದಿದೆ

ಕಳೆದ ತಿಂಗಳು ಸುರಿದ ಮಳೆಗೆ ಕಬಿನಿ ಸಂಪೂರ್ಣ ಭರ್ತಿಯಾಗಿತ್ತು. ಆದರೀಗ ಅದೇ ಕಬಿನಿ ಡ್ಯಾಂ ನೀರು ಖಾಲಿಯಾಗುವ ಹಂತಕ್ಕೆ ಬಂದಿದೆ. ದುರಾದೃಷ್ಟಕರ ಸಂಗತಿ ಎಂದರೆ ಬಾಗಿನ ಅರ್ಪಣೆಗು ಮುನ್ನವೇ ಕಬಿನಿ ಡ್ಯಾಂ ಬರಿದಾಗುತ್ತಿದೆ.

ಈ ಬಾರಿಯ ಮಳೆಗೆ ರಾಜ್ಯದಲ್ಲಿ ಮೈಸೂರಿನ ಹೆಚ್​​.ಡಿ.ಕೋಟೆಯ ಬೀಚನಹಳ್ಳಿಯ ಕಪಿಲಾ ಜಲಾಶಯ ಮೊದಲು ಭರ್ತಿಯಾಗಿತ್ತು. ಆದರೀಗ ನಿಧಾನವಾಗಿ ಖಾಲಿಯಾಗುತ್ತಿದೆ. 84 ಅಡಿಗಳ ಪೈಕಿ 76.60 ಅಡಿಗೆ‌ ಕಬಿನಿ ಡ್ಯಾಂ ನೀರಿನ ಮಟ್ಟ ಕುಸಿದಿದೆ.

ಕಬಿನಿ ಜಲಾಶಯ ಹಲವು ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುತ್ತಾ ಬಂದಿದೆ. ಆದರೀಗ ಮಳೆಯಿಲ್ಲದೆ ಬರಿದಾಗುತ್ತಿದೆ. ಇನ್ನು ಈ ಡ್ಯಾಂ ಗರಿಷ್ಠ 19.52 ಟಿಎಂಸಿ ಪೈಕಿ 15.14 ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯದಿಂದ ನಿತ್ಯ 7,325 ಕ್ಯೂಸೆಕ್ ಹೊರಹರಿಯುತ್ತಿತ್ತು. ಆದರೀಗ ಡ್ಯಾಂ ಖಾಲಿಯಾದ್ರೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಲಿದೆ. ಬೆಂಗಳೂರಿನ ಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಕಬಿನಿ ಮಾತ್ರವಲ್ಲದೆ, ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್ ಗಳಲ್ಲಿ ‌ನೀರಿನ ಮಟ್ಟ ತೀರಾ ಕುಸಿದಿದೆ. KRS, ಹಾರಂಗಿ, ಹೇಮಾವತಿ ಡ್ಯಾಮ್ ಗಳಲ್ಲಿ ‌ನೀರಿನ ಪ್ರಮಾಣ ಇಳಿಕೆಯಾಗಿದೆ. ಇಂದು ನಾಲ್ಕು ಡ್ಯಾಮ್ ಗಳಲ್ಲಿ 79.8 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. KRS ಡ್ಯಾಮ್ ನಲ್ಲಿ ಇಂದು 27.6 ಟಿಎಂಸಿ ನೀರು ಸಂಗ್ರಹ. ಹೇಮಾವತಿ ಡ್ಯಾಮ್ ನಲ್ಲಿ 28.6 ಟಿಎಂಸಿ ಸಂಗ್ರಹ. ಹಾರಂಗಿ ಡ್ಯಾಮ್ ನಲ್ಲಿ 8.4 ಟಿಎಂಸಿ, ಕಬಿನಿ ಡ್ಯಾಮ್ ನಲ್ಲಿ 15.15 ಟಿಎಂಸಿ ನೀರು ಸಂಗ್ರಹವಾಗಿದೆ.

ಇನ್ನು ಇಂದು ನಾಲ್ಕು ಡ್ಯಾಮ್ ಗಳಿಂದ 27,552 ಕ್ಯೂಸೆಕ್ ನೀರು ಹೊರ ಹರಿದರೆ, 10,193 ಕ್ಯೂಸೆಕ್ ಒಳ ಹರಿದಿದೆ. ಒಳ ಹರಿವಿಗಿಂತ ಎರಡು ಪಟ್ಟು ಹೊರ ಹರಿವು ಹೆಚ್ಚಾಗಿದೆ. ಅದರಲ್ಲಿ ಕೆಆರ್​​​ಎಸ್ ಡ್ಯಾಮ್ ನಿಂದ 15,247 ಕ್ಯೂಸೆಕ್ ನೀರು ಹೊರ ಹರಿದರೆ, ಹೇಮಾವತಿ ಡ್ಯಾಮ್ ನಿಂದ 6,580 ಕ್ಯೂಸೆಕ್ ನೀರು, ಕಬಿನಿ ಡ್ಯಾಮ್ ನಿಂದ 7,325 ಕ್ಯೂಸೆಕ್  ನೀರು ಹೊರ ಹರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗರೇ.. ಬರಿದಾಗುತ್ತಿದೆ ರಾಜ್ಯದ 4 ಡ್ಯಾಂಗಳ ನೀರಿನ ಮಟ್ಟ! ಇದು ಅಪಾಯದ ಮುನ್ಸೂಚನೆಯೇ?

https://newsfirstlive.com/wp-content/uploads/2023/07/Kabini-River.jpg

Load More