ಮಳೆಯಿಂದ ಕಬಿನಿ ಡ್ಯಾಂ ಒಳ ಹರಿವು ಹೆಚ್ಚಳ! ಭರ್ತಿಯಾಗಲು ಇನ್ನೆಷ್ಟು ಅಡಿ ಬಾಕಿ?

author-image
AS Harshith
Updated On
ಕಬಿನಿ ಭರ್ತಿಗೆ 1 ಅಡಿ ಬಾಕಿ! ಹೊರ ಹರಿಸಲಾಗುತ್ತಿದೆ 20000 ಕ್ಯೂಸೆಕ್​ ನೀರು
Advertisment
  • ರಾಜ್ಯದ ಹಲವೆಡೆ ಭರ್ಜರಿಯಾಗಿ ಸುರಿಯುತ್ತಿರುವ ಮಳೆ
  • ಮಳೆಯಿಂದ 2470 ಕ್ಯೂಸೆಕ್ಸ್ ನೀರು ಹೊರ ಹರಿಸಲಾಗುತ್ತಿದೆ
  • ಕಬಿನಿ ಡ್ಯಾಂನ ಇಂದಿನ ನೀರಿನ ಮಟ್ಟವೆಷ್ಟು? ಇಲ್ಲಿದೆ ಮಾಹಿತಿ

ಮೈಸೂರು: ರಾಜ್ಯದ ಹಲವೆಡೆ ಭರ್ಜರಿಯಾಗಿ ಮಳೆ ಸುರಿಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಾವೇರಿ ತನ್ನ ಒಡಲು ತುಂಬಿಸುತ್ತಿದ್ದಾಳೆ. ಇತ್ತ ಕಬಿನಿ ಕೂಡ ನೀರು ಸಂಗ್ರಹಿಸುತ್ತಿದ್ದಾಳೆ.

ಮಳೆಯಿಂದಾಗಿ ಕಬಿನಿ ಡ್ಯಾಂನ ನೀರಿನ ಮಟ್ಟ 82.41 ಅಡಿಗಳು ಭರ್ತಿಯಾಗಿವೆ. ಒಳ ಹರಿವು 6640ಕ್ಯೂಸೆಕ್ಸ್​ಗೆ ಹೆಚ್ಚಾಗಿದೆ. ಹೀಗಾಗಿ 2470 ಕ್ಯೂಸೆಕ್ಸ್ ನೀರನ್ನು ಹೊರ ಹರಿಸಲಾಗುತ್ತಿದೆ. ಡ್ಯಾಂ ಭರ್ತಿಯಾಗಲು ಕೇವಲ 2 ಅಡಿಯಷ್ಟು ಮಾತ್ರ ಬಾಕಿ ಇದೆ.

ಇದನ್ನೂ ಓದಿ: ಕರೆಂಟ್​ ಇಲ್ಲ! ಮೊಬೈಲ್​​ ಟಾರ್ಚ್​​ನಲ್ಲೇ ರೋಗಿಗೆ ಚಿಕಿತ್ಸೆ! ಈ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಹೀಗಿದೆ ನೋಡಿ

ಕಬಿನಿ ಡ್ಯಾಂನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ : 84 ಅಡಿಗಳು
ಇಂದಿನ ಮಟ್ಟ : 82.41 ಅಡಿಗಳು
ಇಂದಿನ ಸಾಮರ್ಥ್ಯ: - 18.51TMC
ಒಳ ಹರಿವು : 6640ಕ್ಯೂಸೆಕ್ಸ್
ಹೊರ ಹರಿವು : 2470 ಕ್ಯೂಸೆಕ್ಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment