ಕಬಿನಿ ಭರ್ತಿಗೆ 1 ಅಡಿ ಬಾಕಿ! ಹೊರ ಹರಿಸಲಾಗುತ್ತಿದೆ 20000 ಕ್ಯೂಸೆಕ್​ ನೀರು

author-image
AS Harshith
Updated On
ಕಬಿನಿ ಭರ್ತಿಗೆ 1 ಅಡಿ ಬಾಕಿ! ಹೊರ ಹರಿಸಲಾಗುತ್ತಿದೆ 20000 ಕ್ಯೂಸೆಕ್​ ನೀರು
Advertisment
  • ರಾಜ್ಯದಲ್ಲಿ ಹಲವೆಡೆ ಮುಂಗಾರು ಮಳೆಯಾರ್ಭಟ
  • ಮಳೆಯಿಂದಾಗಿ ತುಂಬುತ್ತಿವೆ ನದಿಗಳು, ಜಲಾಶಯಗಳು
  • ಕಬಿನಿ ಡ್ಯಾಂನ ಗರಿಷ್ಠ ಮಟ್ಟ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಮೈಸೂರು: ರಾಜ್ಯದಲ್ಲಿ ಹಲವೆಡೆ ಮಳೆ ಸುರಿಯುತ್ತಿದೆ. ಇದರಿಂದಾಗಿ ನದಿ, ಅಣೆಕಟ್ಟು, ಜಲಾಶಯಗಳು ತುಂಬುತ್ತಿವೆ. ಕೆಆರ್​ಎಸ್​ ಅಣೆಕಟ್ಟಿನಲ್ಲಿ ಒಳ ಹರಿವು ಹೆಚ್ಚಾಗಿದೆ. ಇತ್ತ ಕಬಿನಿಯಲ್ಲೂ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಿದೆ.

ಕಬಿನಿ ಡ್ಯಾಂನ ಗರಿಷ್ಠ ಮಟ್ಟ 84 ಅಡಿಯಿದ್ದು, 82.65 ಮಟ್ಟದಷ್ಟು ಏರಿಕೆ ಕಂಡಿದೆ. 14,657 ಕ್ಯೂಸೆಕ್​ ಒಳಹರಿವು ಹರಿದು ಬರುತ್ತಿದೆ. 20000 ಕ್ಯೂಸೆಕ್​ ನೀರನ್ನು ಹೊರ ಹರಿಸಲಾಗುತ್ತಿದೆ.

ಇಂದಿನ ಕಬಿನಿ ಡ್ಯಾಂ ನೀರಿನ ಮಟ್ಟ

ಗರಿಷ್ಠ ಮಟ್ಟ - 84 ಅಡಿ
ಇಂದಿನ ಮಟ್ಟ - 82.65
ಗರಿಷ್ಠ ಸಾಮರ್ಥ್ಯ - 19.52 TMC
ಇಂದಿನ ಸಾಮರ್ಥ್ಯ - 18.52 TMC
ಒಳಹರಿವು : 14657
ಹೊರಹರಿವು : 20000

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment