ಮೇಮ್‌ಗೆ ಪ್ರಸಿದ್ಧಿಯಾಗಿದ್ದ ಕಬೋಸು ಶ್ವಾನ ಇನ್ನಿಲ್ಲ; ನೋವಿನ ವಿದಾಯಕ್ಕೆ ಅಂತಿಮ ಸಿದ್ಧತೆ!

author-image
admin
Updated On
ಮೇಮ್‌ಗೆ ಪ್ರಸಿದ್ಧಿಯಾಗಿದ್ದ ಕಬೋಸು ಶ್ವಾನ ಇನ್ನಿಲ್ಲ; ನೋವಿನ ವಿದಾಯಕ್ಕೆ ಅಂತಿಮ ಸಿದ್ಧತೆ!
Advertisment
  • ಕಬೋಸು ಅದೆಷ್ಟು ಸ್ಫೂರ್ತಿಯಾಗಿತ್ತು ಅಂದ್ರೆ ಊಹಿಸಲು ಅಸಾಧ್ಯ
  • ಮೇಮ್ ಡಾಗ್ ಸಾವನ್ನಪ್ಪಿದ ಸುದ್ದಿಯನ್ನು ಖಚಿತಪಡಿಸಿದ ಮಾಲೀಕರು
  • ಜಪಾನ್‌ ಸಿಟಿಯಲ್ಲಿ ಕಬೋಸ್‌ಗೆ ಅಂತಿಮ ವಿದಾಯ ಹೇಳಲು ತಯಾರಿ

ಡಾಗ್ ಮೇಮ್‌ಗೆ ಹೆಸರುವಾಸಿಯಾಗಿದ್ದ ಕಬೋಸು ನಾಯಿ ಇನ್ನಿಲ್ಲ. 19 ವರ್ಷದ ಕಬೋಸ್‌ ನಾಯಿ ಇಂದು ಜಪಾನ್‌ನಲ್ಲಿ ಸಾವನ್ನಪ್ಪಿದೆ. ಕಬೋಸು ಅದೆಷ್ಟು ಜನರಿಗೆ ಸ್ಫೂರ್ತಿಯಾಗಿತ್ತು ಅಂದ್ರೆ ಇದರಿಂದಲೇ ಬಹಳಷ್ಟು ಮೇಮ್‌ ಪ್ರಸಿದ್ಧಿಯಾಗಿತ್ತು. ಕಬೋಸು ಮೇಮ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಕಬೋಸು ಮಾಲೀಕರಾದ ಅಟ್ಸುಕೊ ಸಾಟೊ ಅವರು ಮೇಮ್ ಡಾಗ್ ಸಾವನ್ನಪ್ಪಿದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಕಬೋಸು ಸಾವಿನ ಸುದ್ದಿ ತಿಳಿದ ಬಹಳಷ್ಟು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.

ಇದನ್ನೂ ಓದಿ:ಪ್ರಬುದ್ಧ ಆತ್ಮಹತ್ಯೆ ಎಂದು ನಂಬಿಸಲು ಸಖತ್ ಪ್ಲಾನ್.. ಕೊಲೆಯ ಸುಳಿವು ಸಿಕ್ಕಿದ್ದೇ ರೋಚಕ; ಸಾಯಿಸಿದ ಮೇಲೆ ಆಗಿದ್ದೇನು? 

ಕಬೋಸ್ ಸಾವು ಹೇಗಾಯ್ತು?
ಶಿಬಾ ಇನು ತಳಿಯ ಕಬೋಸ್‌ ಅನ್ನು ಅಟ್ಸುಕೊ ಸಾಟೋ ಅವರು 2008ರಲ್ಲಿ ತನ್ನ ವಶಕ್ಕೆ ಪಡೆದುಕೊಂಡಿದ್ದರು. ಸುಮಾರು 19 ವರ್ಷಗಳಿಂದ ತನ್ನ ಜೊತೆಗಿದ್ದ ಕಬೋಸ್ ಇಂದು ಬೆಳಗ್ಗೆ 7.50ರ ಸಮಯಕ್ಕೆ ಚಿರನಿದ್ರೆಗೆ ಜಾರಿದೆ. ಕಬೋಸ್ ರೆಸ್ಟ್ ಇನ್ ಪೀಸ್ ಎಂದು ಪ್ರಕಟ ಮಾಡಲಾಗಿದೆ.


">May 24, 2024

ಕಬೋಸ್ ಸಾವನ್ನಪ್ಪಿದ ಸುದ್ದಿ ಸಾಕಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕಬೋಸ್‌ಗೆ ಅಂತಿಮ ವಿದಾಯ ಹೇಳಲು ಮೇ 26ರಂದು ದಿನಾಂಕ ನಿಗಧಿ ಮಾಡಲಾಗಿದೆ. ಅಂದು ಜಪಾನ್‌ನ ನರಿತಾ ಸಿಟಿಯಲ್ಲಿ ಫೇರ್‌ವೆಲ್ ಪಾರ್ಟಿ ಮಾಡಲು ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment