RCB ಟಾರ್ಗೆಟ್ ದಕ್ಷಿಣ ಆಫ್ರಿಕಾದ ಈ ಸೂಪರ್ ಸ್ಟಾರ್​​.. ಬೌಲಿಂಗ್​ಗಾಗಿ ಕೋಟಿ ಕೋಟಿ ಸುರಿಯಲು ರೆಡಿ..!

author-image
Ganesh
Updated On
RCB ಟಾರ್ಗೆಟ್ ದಕ್ಷಿಣ ಆಫ್ರಿಕಾದ ಈ ಸೂಪರ್ ಸ್ಟಾರ್​​.. ಬೌಲಿಂಗ್​ಗಾಗಿ ಕೋಟಿ ಕೋಟಿ ಸುರಿಯಲು ರೆಡಿ..!
Advertisment
  • ಸಿರಾಜ್, ವೈಶಾಕ್ ವಿಜಯಕುಮಾರ್ ಯಾರೂ ಟಾರ್ಗೆಟ್ ಅಲ್ಲ
  • ಬೌಲಿಂಗ್ ವಿಭಾಗ ಸ್ಟ್ರಾಂಗ್ ಮಾಡಲು ಆರ್​ಸಿಬಿ ಪ್ಲಾನ್
  • ಪ್ರತಿ ಬಾರಿ ಬೌಲಿಂಗ್​​ನಲ್ಲಿ ಹಿನ್ನಡೆ ಕಾಣ್ತಿರುವ ನಮ್ಮ ಆರ್​ಸಿಬಿ

ಐಪಿಎಲ್​​ ಮೆಗಾ ಹರಾಜಿಗೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈ ನಡುವೆ ಫ್ರಾಂಚೈಸಿಗಳ ನಡುವೆ ಸ್ಟಾರ್​ಗಳ ಖರೀದಿ ಸಂಬಂಧ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.

ಆಟಗಾರರ ಖರೀದಿಸುವ ಲೆಕ್ಕಾಚಾರದ ವಿಚಾರದಲ್ಲಿ ನಮ್ಮ ಆರ್​ಸಿಬಿ ಕೂಡ ಹಿಂದೆ ಬಿದ್ದಿಲ್ಲ. ಈಗಾಗಲೇ ಮೂವರು ಆಟಗಾರರನ್ನು ಉಳಿಸಿಕೊಂಡಿರುವ ಆರ್​ಸಿಬಿ, ಆರ್​ಟಿಎಂ ಕಾರ್ಡ್​ ಮೂಲಕ ಮತ್ತೆ ಮೂವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿದೆ. ಅದರ ಹೊರತಾಗಿ ತಂಡಕ್ಕೆ ಹೊಸ ಮುಖಗಳನ್ನು ಪರಿಚಯ ಮಾಡಿಸಲಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಯುವ​ ವೇಗಿ ಖರೀದಿಸಲು ಆರ್​ಸಿಬಿ ಪ್ಲಾನ್; ಜಿದ್ದಿಗೆ ಬಿದ್ದ LSG

ಅದರಲ್ಲೂ ಕೆ.ಎಲ್.ರಾಹುಲ್ ಹಾಗೂ ಯಜುವೇಂದ್ರ ಚಹಾಲ್​​ರನ್ನು ಟಾರ್ಗೆಟ್ ಮಾಡಿದೆ. ಇವರಿಬ್ಬರು ಒಂದು ಕಾಲದಲ್ಲಿ ಆರ್​​ಸಿಬಿ ಸ್ಟಾರ್​ಗಳಾಗಿದ್ದರು. ಮತ್ತೆ ಇಬ್ಬರನ್ನು ತಂಡಕ್ಕೆ ಮರಳಿ ತರುವ ಪ್ರಯತ್ನದಲ್ಲಿದೆ. ಜೊತೆಗೆ ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ರಬಾಡ ಮೇಲೆ ಆರ್​​ಸಿಬಿ ಕಣ್ಣಿಟ್ಟಿದೆ ಎಂದು ವರದಿಯಾಗಿದೆ.

ಕಗಿಸೋ ರಬಾಡ..
ಹೌದು ವರದಿಗಳ ಪ್ರಕಾರ ಸಿರಾಜ್, ವಿಜಯಕುಮಾರ್ ವೈಶಾಕ್ ಇವಱರೂ ಆರ್​ಸಿಬಿ ಟಾರ್ಗೆಟ್ ಅಲ್ಲ. ರಬಾಡ ಅವರನ್ನು ತಂಡಕ್ಕೆ ಕರೆದುಕೊಂಡು ಬರಲು ಮ್ಯಾನೇಜ್ಮೆಂಟ್ ತಯಾರಿ ನಡೆಸಿದೆಯಂತೆ. ಅನುಭವ ಇರುವ ಈ ವೇಗಿ ತಂಡದಲ್ಲಿದ್ದರೆ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಬಹುದು ಅನ್ನೋದು ಆರ್​​ಸಿಬಿ ಲೆಕ್ಕ. ಪ್ರತಿ ಐಪಿಎಲ್​ನಲ್ಲೂ ಆರ್​ಸಿಬಿ ಫೇಲ್ ಆಗ್ತಿರೋದೇ ಬೌಲಿಂಗ್ ವಿಭಾಗದಲ್ಲಿ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಅನುಭವಿ ಬೌಲರ್​ಗಳನ್ನು ಕರ್ಕೊಂಡು ಬಂದು ಸ್ಟ್ರಾಂಗ್ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಅಂದು ತುತ್ತು ಊಟಕ್ಕೂ ಪರದಾಟ.. ಇಂದು 13 ಕೋಟಿ ಒಡೆಯ.. ರಿಂಕು ಸಿಂಗ್ ಐಷಾರಾಮಿ ಬಂಗಲೆ ಹೆಂಗಿದೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment