newsfirstkannada.com

ಬ್ರಿಜ್ ಭೂಷಣ್​​ಗೆ ಇಲ್ಲ ಟಿಕೆಟ್.. ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ ಪಕ್ಷ

Share :

Published May 3, 2024 at 9:10am

    ಲೈಂಗಿಕ ಕಿರುಕುಳ ಆರೋಪ ಎದುರಿಸ್ತಿರುವ ಬ್ರಿಜ್ ಭೂಷಣ್

    ಮಾಜಿ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್

    ಉತ್ತರ ಪ್ರದೇಶದ ಕೈಸರ್​ಗಂಜ್ ಕ್ಷೇತ್ರದಿಂದ ಕರಣ್ ಸ್ಪರ್ಧೆ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಲಿ ಸಂಸದ ಮತ್ತು ಮಾಜಿ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿದೆ.

ಉತ್ತರ ಪ್ರದೇಶದ ಕೈಸರ್​ಗಂಜ್ ಕ್ಷೇತ್ರದಿಂದ ಅವರ ಪುತ್ರ ಕರಣ್ ಭೂಷಣ್ ಸಿಂಗ್​ರನ್ನ ಬಿಜೆಪಿ ಕಣಕ್ಕಿಳಿಸಿದೆ. ಗೃಹ ಸಚಿವ ಅಮಿತ್​ ಶಾ ಲಕ್ನೋದಲ್ಲಿ ಈ ವಿಚಾರದ ಕುರಿತು ಬ್ರಿಜ್​ ಭೂಷಣ್​ ಅವರ ಬಳಿ ಚರ್ಚಿಸಿದ್ದು ನೀವು ಒಪ್ಪಿದರೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಟಿಕೆಟ್ ನೀಡುವುದಾಗಿ ಹೇಳಿದ್ದರು. ಇದೀಗ ಅದರಂತೆ ಬ್ರಿಜ್ ಭೂಷಣ್ ಅವರ ಮಗನಿಗೆ ಟಿಕೆಟ್​​ ನೀಡಲಾಗಿದೆ.

ಕರಣ್ ಭೂಷಣ್ ಸಿಂಗ್ ಯಾರು?
ಬ್ರಿಜ್ ಭೂಷಣ್ ಸಿಂಗ್​​​ಗೆ ಪ್ರತೀಕ್ ಭೂಷಣ್ ಸಿಂಗ್ ಮತ್ತು ಕರಣ್ ಭೂಷಣ್ ಸಿಂಗ್ ಎಂಬ ಇಬ್ಬರು ಮಕ್ಕಳಿದ್ದಾರೆ. ಪ್ರತೀಕ್ ಗೊಂಡ ಸದರ್ ಕ್ಷೇತ್ರದ ಎರಡು ಬಾರಿ ಶಾಸಕರಾಗಿದ್ದರು. ಕರಣ್ ಸಿಂಗ್ ಇನ್ನೂ ಚುನಾವಣಾ ಅಖಾಡಕ್ಕೆ ಬಂದಿರಲಿಲ್ಲ, ಇದೀಗ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಕರಣ್ ಉತ್ತರ ಪ್ರದೇಶ ಕುಸ್ತಿ ಘಟಕದ ಅಧ್ಯಕ್ಷರಾಗಿದ್ದಾರೆ. ಕರಣ್, 13 ಡಿಸೆಂಬರ್ 1990 ರಂದು ಜನಿಸಿದರು, ಡಬಲ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ರಾಷ್ಟ್ರೀಯ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರಿಜ್ ಭೂಷಣ್​​ಗೆ ಇಲ್ಲ ಟಿಕೆಟ್.. ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ ಪಕ್ಷ

https://newsfirstlive.com/wp-content/uploads/2024/05/brijj-bhushan.jpg

Load More