/newsfirstlive-kannada/media/post_attachments/wp-content/uploads/2025/07/KLB-DEATH.jpg)
ಕಲಬುರಗಿ: ಕುಚಿಕು ಸ್ನೇಹಿತನಿಗೇ ಮೂಹರ್ತ ಇಟ್ಟ ಪ್ರಕರಣ ಜಿಲ್ಲೆಯ ಕಮಲಾಪುರ ತಾಲೂಕಿನ ಮುರುಡಿ ಗ್ರಾಮದಲ್ಲಿ ನಡೆದಿದೆ. ಅಂಬರೀಶ್ ಗವನಹಳ್ಳಿ (20) ಸ್ನೇಹಿತನಿಂದ ಬಲಿಯಾದ ಯುವಕ. ಅಜಯ್ ಧನ್ನೂರೆ ಪ್ರಕರಣದ ಪ್ರಮುಖ ಆರೋಪಿ..
ಆಪ್ತ ಮಿತ್ರರಲ್ಲಿ ಆಗಿದ್ದೇನು..?
ಅಂಬರೀಶ್ ಮತ್ತು ಅಜಯ್ ಸುಮಾರು 7-8 ವರ್ಷಗಳಿಂದ ಆಪ್ತ ಸ್ನೇಹಿತರು. ಈ ಮೊದಲು ಕಲಬುರಗಿ ನಗರದಲ್ಲೇ ಅಂಬರೀಶ್ ಹಾಗೂ ಅಜಯ್ ವಾಸವಾಗಿದ್ದರು. ಅಜಯ್ ಆಟೋ ಚಾಲಕನಾಗಿದ್ದರೆ, ಅಂಬರೀಶ್ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ. ಇನ್ನು ಅಜಯ್ಗೆ ಇಬ್ಬರು ಮಕ್ಕಳಿದ್ದರು. ಅಜಯ್ ಆಗಾಗ ಪತ್ನಿ ಹಾಗೂ ಮಕ್ಕಳೊಂದಿಗೆ ಅಂಬರೀಶ್ ಮನೆಗೆ ಹೋಗಿ ಬರುತ್ತಿದ್ದರು. ಹಬ್ಬ, ಹುಣ್ಣಿಮೆ ದಿನಗಳಲ್ಲಿ ಕುಟುಂಬದೊಂದಿಗೆ ಅಜಯ್ ಹೋಗಿ ಬರುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಗುಡ್ ಮಾರ್ನಿಂಗ್ ಅಮ್ಮ ಎಂದಿದ್ದಳು.. ಬೆಂಗಳೂರಿನ ಯುವತಿ ಓಡಿಶಾದಲ್ಲಿ ನಿಧನ, ಭಾರೀ ಅನುಮಾನ
ಅಜಯ್ ಯಾಕೆ ಹಾಗೆ ಮಾಡಿದ..?
ಅಜಯ್ ಜೊತೆಗಿನ ಆಪ್ತ ಗೆಳತನವೇ, ಕೃತ್ಯಕ್ಕೆ ಕಾರಣವಾಗಿದೆ. ಆಗಾಗ ಪತ್ನಿ ಜೊತೆ ಅಜಯ್ ಅಂಬರೀಶ್ ಮನೆಗೆ ಹೋಗ್ತಿದ್ದ. ಇತ್ತೀಚೆಗೆ ಅಜಯ್ ಪತ್ನಿ ಜೊತೆ ಅಂಬರೀಶ್ಗೆ ಸಲುಗೆ ಬೆಳೆದಿದೆ. ಈ ಸಲುಗೆ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿದೆ. ಕೊನೆಗೆ ಒಂದು ದಿನ ಅಜಯ್ಗೆ ಈ ವಿಚಾರ ಗೊತ್ತಾಗಿದೆ.
ಮುಹೂರ್ತದ ಪ್ಲಾನ್ ಹೇಗಿತ್ತು..?
ಪತ್ನಿ ಜೊತೆ ಅಕ್ರಮ ಸಂಬಂಧ ಇರೋದು ಗೊತ್ತಾಗುತ್ತಿದ್ದಂತೆಯೇ ಸ್ನೇಹಿತನ ಮುಗಿಸಲು ಶಪಥ ಮಾಡಿದ್ದಾನೆ. ಇದರ ಮಧ್ಯೆ ಅಂಬರೀಶ್, ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಸಿಲಿಕಾನ್ ಸಿಟಿಯ ಪಿಜಿ ಒಂದರಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಿಂದ ಅಂಬರೀಶ್ನನ್ನು ಕರೆಸಿಕೊಂಡಿದ್ದಾನೆ. ನಂತರ ಸ್ನೇಹಿತರ ಜೊತೆಗೂಡಿ ಮುರುಡಿ ಗ್ರಾಮಕ್ಕೆ ಕರೆದೊಯ್ದು ಜೀವ ತೆಗೆದಿದ್ದಾನೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಲಿಯಾ ಭಟ್ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ