newsfirstkannada.com

ಲಾಡ್ಲೇ ಮಶಾಕ್ ದರ್ಗಾ vs ಶಿವಲಿಂಗ ವಿವಾದ.. ಶಿವರಾತ್ರಿ ದಿನ ಆಳಂದದಲ್ಲಿ ರಥಯಾತ್ರೆಗೆ ಕೋರ್ಟ್​ ಅನುಮತಿ

Share :

Published March 4, 2024 at 7:43am

  ಮಹಾಶಿವರಾತ್ರಿ ಹಬ್ಬದಂದು ಆಳಂದ ಪಟ್ಟಣದಲ್ಲಿ ರಥಯಾತ್ರೆ

  ಆಳಂದದಲ್ಲಿ ರಾಘವ ಚೈತನ್ಯ ರಥಯಾತ್ರೆಗೆ ಕೋರ್ಟ್ ಅನುಮತಿ

  ಯಾತ್ರೆಗೆ ಹೈಕೋರ್ಟ್ ವಿಧಿಸಿದ 5 ಷರತ್ತುಗಳೇನು? ಅವು ಇಲ್ಲಿವೆ

ಕಲಬುರಗಿಯಲ್ಲಿ ದರ್ಗಾ-ಶಿವಲಿಂಗ ವಿವಾದದ ದಂಗಲ್ ಶುರುವಾಗಿದೆ. ಇದೇ ವಿಚಾರಕ್ಕೆ ಎರಡು ಧರ್ಮೀಯರ ಮಧ್ಯೆ ಸಂಘರ್ಷ ಶುರುವಾಗಿತ್ತು. ದರ್ಗಾದಲ್ಲಿದ್ದ ಶಿವಲಿಂಗಕ್ಕೆ ಅಪಮಾನ ಮಾಡಿದ್ದಕ್ಕೆ ಸಿಡಿದೆದ್ದಿದ್ದ ಹಿಂದೂ ಸಂಘಟನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ಘಟನೆಯನ್ನ ಖಂಡಿಸಿ ಹಿಂದೂಸಂಘಟನೆಗಳು ರಾಘವ ಚೈತನ್ಯ ಯಾತ್ರೆಗೆ ಮುಂದಾಗಿದ್ದರು. ಇದೀಗ ಹಿಂದೂ ಸಂಘಟನೆಗಳ ಯಾತ್ರೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಬಿಸಿಲುನಾಡಿನಲ್ಲಿ ಲಾಡ್ಲೇ ಮಶಾಕ್ ದರ್ಗವೋ? ಮಂದಿರವೋ ಎಂಬ ದಂಗಲ್‌ ಶುರುವಾಗಿದೆ. ದರ್ಗಾದಲ್ಲಿ ಪತ್ತೆಯಾಗಿದ್ದ ಶಿವಲಿಂಗಕ್ಕೆ ಅಪಮಾನ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ಸಿಡಿದೆದ್ದಿದ್ದ ಹಿಂದೂ ಸಂಘಟನೆಗಳು ರಾಘವ ಚೈತನ್ಯ ಯಾತ್ರೆಗೆ ಮುಂದಾಗಿದ್ವು. ಈ ಕೇಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್‌ ಯಾತ್ರೆಗೆ ಅನುಮತಿ ನೀಡಿದೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಮಂದಿರ ಜೀರ್ಣೋದ್ಧಾರಕ್ಕೆ ಪಟ್ಟು ಹಿಡಿದಿವೆ. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ರಾಘವ ಚೈತನ್ಯ ರಥಯಾತ್ರೆಗೆ ಕಲಬುರಗಿ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಈಗಾಗಲೇ ಆಳಂದ ತಾಲೂಕಿನಲ್ಲಿ ರಥಯಾತ್ರೆ ಆರಂಭವಾಗಿದ್ದು, ಮಹಾಶಿವರಾತ್ರಿ ಹಬ್ಬದಂದು ಆಳಂದ ಪಟ್ಟಣದಲ್ಲಿ ರಥಯಾತ್ರೆ ನಡೆಯುವ ಹಿನ್ನಲೆಯಲ್ಲಿ ಯಾತ್ರೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಹೈಕೋರ್ಟ್ ಪೀಠದ ಮೊರೆ ಹೋಗಿದ್ದವು. ಇದೀಗ ಹೈಕೋರ್ಟ್ 5 ಷರತ್ತುಗಳನ್ನ ವಿಧಿಸಿ ರಥಯಾತ್ರೆಗೆ ಅನುಮತಿ ನೀಡಿದೆ.

ಐದು ಷರತ್ತುಗಳೇನು?

 • ಡಿಜೆ ಹಾಗೂ ಟ್ರಾಫಿಕ್ ನಿಯಮ ಉಲ್ಲಂಘಿಸುವಂತಿಲ್ಲ
 • ಅನ್ಯ ಸಮುದಾಯದ ವಿರುದ್ಧ ಘೋಷಣೆ ಕೂಗುವಂತಿಲ್ಲ
 • ವಿವಾದಿತ ಸ್ಥಳ ದರ್ಗಾ ಕಡೆಗೆ ರಥಯಾತ್ರೆ ಹೋಗುವಂತಿಲ್ಲ
 • ಸೂರ್ಯಾಸ್ತದ ನಂತರ ರಥಯಾತ್ರೆಯನ್ನ ಮಾಡುವಂತಿಲ್ಲ

ರಥಯಾತ್ರೆಗೆ ಕಲಬುರಗಿ ಹೈಕೋರ್ಟ್ ಪೀಠ ಅನುಮತಿ ನೀಡುತ್ತಿದ್ದಂತೆ ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.

‘ರಥಯಾತ್ರೆಗೆ ಅನುಮತಿ ಸಿಕ್ಕಿದೆ’

ಕೋರ್ಟ್​​ ಅಲ್ಲಿ ಕೇಸ್ ಇರುವುದರಿಂದ ಮಾಧ್ಯಮದ ಮುಂದೆ ಹೇಗೆ ಹೋದರು ಎಂದು ನ್ಯಾಯಾಂಗ ನಿಂದನೆ ಆಗಿದೆ ಎಂದು ಹೇಳಿದ್ದಾರೆ. ಕೋರ್ಟ್​ ಅಲ್ಲಿ ವಾದ ಮಂಡಿಸಿದಾಗ ಆದೇಶ ನಮ್ಮ ಪರವಾಗಿದೆ.

ಹರ್ಷಾನಂದ ಗುತ್ತೇದಾರ್, ಬಿಜೆಪಿ ಮುಖಂಡ

ಹಿಂದೂ ಜಾಗರಣ ವೇದಿಕೆಯವರು ರಥಯಾತ್ರೆ ನಡೆಸುವುದಕ್ಕೆ ಅನುಮತಿ ಕೇಳಿದ್ದರು. ಕೆಲವು ಷರತ್ತು​ಗಳನ್ನ ಕೋರ್ಟ್​ ವಿಧಿಸಿದೆ. ಆ ಷರತ್ತುಗಳನ್ನ ಪಾಲನೆ ಮಾಡಿಕೊಂಡು ರಥಯಾತ್ರೆ ನಡೆಸುತ್ತೇವೆ.

ಸಿದ್ದಲಿಂಗ ಸ್ವಾಮೀಜಿ, ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ಅಂದ್ಹಾಗೆ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶ್ರೀರಾಘವ ಚೈತನ್ಯ ಶಿವಲಿಂಗವನ್ನ ಅಪವಿತ್ರಗೊಳಿಸಿದ್ದರು. ಹೀಗಾಗಿ 2022ರಲ್ಲಿ ಸ್ವಾಮೀಜಿಗಳು, ರಾಜಕೀಯ ಮುಖಂಡರು ಮಹಾ ಶಿವರಾತ್ರಿಯಂದು ಶಿವಲಿಂಗ ಶುದ್ಧೀಕರಣಕ್ಕೆ ತೆರಳಿದ್ದರು. ಈ ವೇಳೆ ಅನ್ಯ ಸಮುದಾಯದ ಜನ ಶಿವಲಿಂಗ ಶುದ್ಧೀಕರಣ ಮಾಡಿ ಹೊರಬರುತ್ತಿದ್ದರ ಮೇಲೆ ಏಕಾಏಕಿ ಮಾರಕಾಸ್ತ್ರಗಳು, ಬಡಿಗೆ ಹಿಡಿದು ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ದರ್ಗಾದಲ್ಲಿನ ಶಿವಲಿಂಗದ ಸ್ಥಳದ ಜೀರ್ಣೋದ್ಧಾರಕ್ಕೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.

ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ದೇಗುಲ ನಿರ್ಮಿಸಲು ರಥಯಾತ್ರೆ ಹಮ್ಮಿಕೊಂಡಿದ್ರೆ, ಇತ್ತ ಶಿವರಾತ್ರಿಯಂದು ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂ ಸಂಘಟನೆಗಳು ಹೈಕೋರ್ಟ್ ಮೊರೆ ಹೋಗಿವೆ. ಹೀಗಾಗಿ ಅಹಿತಕರ ಘಟನೆಗಳು ನಡೆಯದಂತೆ ಕಲಬುರಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾಡ್ಲೇ ಮಶಾಕ್ ದರ್ಗಾ vs ಶಿವಲಿಂಗ ವಿವಾದ.. ಶಿವರಾತ್ರಿ ದಿನ ಆಳಂದದಲ್ಲಿ ರಥಯಾತ್ರೆಗೆ ಕೋರ್ಟ್​ ಅನುಮತಿ

https://newsfirstlive.com/wp-content/uploads/2024/03/KLB_SHIVALINGA.jpg

Load More