ಜನಿವಾರ ತೆಗೆಸಿದ ಗೊಂದಲದಲ್ಲಿ ರಿಜಿಸ್ಟರ್ ನಂಬರ್ ತಪ್ಪಾಗಿ ಬರೆದೆ.. ನೀಟ್ ವಿದ್ಯಾರ್ಥಿ ಮನವಿ ಏನು..?

author-image
Ganesh
Updated On
ಜನಿವಾರ ತೆಗೆಸಿದ ಗೊಂದಲದಲ್ಲಿ ರಿಜಿಸ್ಟರ್ ನಂಬರ್ ತಪ್ಪಾಗಿ ಬರೆದೆ.. ನೀಟ್ ವಿದ್ಯಾರ್ಥಿ ಮನವಿ ಏನು..?
Advertisment
  • ‘ನೀಟ್’ ಆಗಿ ನಡೆದೋಯ್ತು ಮತ್ತೊಂದು ಯಡವಟ್!
  • ಸಿಇಟಿ ಆಯ್ತು.. ಈಗ ನೀಟ್ ಪರೀಕ್ಷೆಯಲ್ಲಿ ಜನಿ‘ವಾರ್’!
  • ಜನಿವಾರ ತೆಗೆಸಿದ್ದಕ್ಕೆ ಸಿಡಿದೆದ್ದ ಬ್ರಾಹ್ಮಣ ಸಮುದಾಯ

ಬೀದರ್​, ಶಿವಮೊಗ್ಗದಲ್ಲಿ ಸಿಇಟಿ ಬರೆಯಲು ಜನಿವಾರ ತೆಗೆಸಿದ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೆ ಜನಿವಾರ ವಿವಾದ ಭುಗಿಲೆದ್ದಿದೆ. ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆದು ಬಾ ಅಂತ ಹೇಳಿದ್ದು ಮತ್ತೇ ಬ್ರಾಹ್ಮಣ ಸಮಾಜ ಕೆರಳಿಸುವಂತೆ ಮಾಡಿದೆ. ಸಮುದಾಯದ ಪ್ರತಿಭಟನೆ ಬಳಿಕ ಪೊಲೀಸರು ಇಬ್ಬರು ನೀಟ್ ಸಿಬ್ಬಂದಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಜನಿ‘ವಾರ್’!

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ್ದ ಪ್ರಕರಣ ಮಾಸುವ ಮುನ್ನವೇ ನಿನ್ನೆ ನಡೆದ ನೀಟ್​ ಪರೀಕ್ಷೆಯಲ್ಲೂ ಯಡವಟ್ಟಾಗಿದೆ. ಕಲಬುರಗಿ ನಗರದ ಸೈಂಟ್ ಮೇರಿ ಶಾಲೆಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ಬೀದರ್ ಜಿಲ್ಲೆ ಬಸವಕಲ್ಯಾಣ ಮೂಲದ ಶ್ರೀಪಾದ್ ಪಾಟೀಲ್ ಎಂಬ ವಿದ್ಯಾರ್ಥಿಯ ಜನಿವಾರ ತೆಗೆಯಲು ಸಿಬ್ಬಂದಿ ಹೇಳಿದ್ದಾರೆ.. ಆದ್ರೆ ವಿದ್ಯಾರ್ಥಿಯ ತಂದೆ, ವರ್ಷದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದೀಯ.. ಹೋಗಿ ಪರೀಕ್ಷೆ ಬರೀ ಎಂದ್ರಂತೆ.. ಬಳಿಕ ಆತ ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾನೆ.

ಇದನ್ನೂ ಓದಿ: ಸೋನು ನಿಗಮ್‌ಗೆ FIR ಸಂಕಷ್ಟ.. ಬಂಧನಕ್ಕೆ ಇಂದು ಕರವೇ ನಾರಾಯಣ ಗೌಡ ಬೃಹತ್ ಹೋರಾಟ!

publive-image

ಪರೀಕ್ಷೆಗೆ ಹೋಗುವಾಗ ದಾರ ತೆಗೆದಿಟ್ಟು ಬಾ ಎಂದಾಗ ನಾನು ಜನಿವಾರ ತೆಗೆದು ಅಪ್ಪನ ಕೈಗೆ ಕೊಟ್ಟುಬಂದೆ. ಇದರಿಂದ ನಾನು ಮಾನಸಿಕ ಗೊಂದಲಕ್ಕೆ ಒಳಗಾದೆ. ಓಎಂಆರ್​ ಸೀಟ್​ನಲ್ಲಿ ನೋಂದಣಿ ಸಂಖ್ಯೆಯೂ ತಪ್ಪಾಗಿ ಬರೆದಿದ್ದೇನೆ, ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಹೀಗಾಗಿ ನನಗೆ ಪುನಃ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ನೀಟ್ ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ಹೇಳಿದ್ದಾರೆ.

ಜನಿವಾರ ತೆಗೆಸಿದ್ದಕ್ಕೆ ಸಿಡಿದೆದ್ದ ಬ್ರಾಹ್ಮಣ ಸಮದಾಯ

ವಿಷಯ ತಿಳೀತಿದ್ದಂತೆ ಬ್ರಾಹ್ಮಣ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದೆ. ಇಂಥವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಬ್ರಾಹ್ಮಣ ಸಮುದಾಯ ಪ್ರತಿಭಟನೆ ಬಳಿಕ ಎಚ್ಚೆತ್ತ ಸರ್ಕಾರ ಇಬ್ಬರು ನೀಟ್ ಸಿಬ್ಬಂದಿ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದೆ.

ಒಂದು ವಾರದ ಹಿಂದಷ್ಟೇ ರಾಜ್ಯ ಹೈಕೋರ್ಟ್ ಕೂಡ ಸರ್ಕಾರಕ್ಕೆ ಹಾಗೂ ಕೆಇಎಗೆ ನೋಟಿಸ್ ನೀಡಿತ್ತು. ಸಿಇಟಿ ಪರೀಕ್ಷೆಯಲ್ಲಿಯೂ ಇದೇ ರೀತಿ ಆಗಿದೆಯೆಂದು ದೂರುಗಳು ಬಂದಿದ್ದವು. ಈ ನಡುವೆ ಮತ್ತೆ ಜನಿವಾರ ಜ್ವಾಲೆ ಸ್ಫೋಟಿಸಿದೆ. ಇನ್ಮುಂದಾದ್ರೂ ಸರ್ಕಾರ ಕಟ್ಟುನಿಟ್ಟಿನ ಆದೇಶದ ಮೂಲಕ ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕಿದೆ.

ಇದನ್ನೂ ಓದಿ: ಲೈಟ್ ಹಾಕಬೇಡಿ, ದೀರ್ಘಕಾಲಿಕ ರಜೆ ಇಲ್ಲ -ಗಡಿಯಿಂದ ಮತ್ತೊಂದು ಬಿಗ್​ಅಪ್​ಡೇಟ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment